National Tourism Day 2025: 523 ಬಿಲಿಯನ್ ಡಾಲರ್‌ಗೆ ಏರಿಕೆಯಾಗಲಿದೆ ಭಾರತದ ಪ್ರವಾಸೋದ್ಯಮ ಕ್ಷೇತ್ರ

"ಭಾರತ"ಅದು ಕೇವಲ ಒಂದು ದೇಶವಲ್ಲ, ಇಲ್ಲಿ ಒಂದು ಅನುಭವವಿದೆ. ಈ ದೇಶದ ಪ್ರತಿಯೊಂದು ಮೂಲೆಯಲ್ಲಿಯೂ ಸೌಂದರ್ಯವಿದೆ. ಹಿಮಾಲಯದ ಶಿಖರಗಳಿಂದ ಕನ್ಯಾಕುಮಾರಿಯ ಕಡಲತೀರದವರೆಗೆ, ಭಾರತವು ಪ್ರಕೃತಿಯ ಅದ್ಭುತಗಳನ್ನು ಕಾಣಬಹುದು. ಹಸಿರು ಹೊದಿಕೆಯ ಬೆಟ್ಟಗಳು, ಘರ್ಜಿಸುವ ಜಲಪಾತಗಳು, ಶಾಂತ ನದಿಗಳು ಮತ್ತು ಸರೋವರಗಳು, ಹಾಗೂ ವಿಶಾಲವಾದ ಸಮುದ್ರತೀರಗಳು , ನಿಸರ್ಗ ರಮಣೀಯ ತಾಣ, ಇಲ್ಲಿನ ವೈವಿಧ್ಯಮಯ ಪಾಕಶಾಸ್ತ್ರ ಹೀಗೆ ಹೇಳುತ್ತಾ ಹೋದರೆ ಸಮಯ ಸಾಲದು. ಇಂತಹ ಸೌಂದರ್ಯದ ಘಣಿ ನಮ್ಮ ದೇಶಕ್ಕೆ ಅನೇಕ ದೇಶಗಳಿಂದ ಪ್ರವಾಸಿಗರು ಬಂದುಈ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಇಷ್ಟಪಡುತ್ತಾರೆ.

ಆಧ್ಯಾತ್ಮಿಕತೆ ಮತ್ತು ಸಂಸ್ಕೃತಿಯ ಕೇಂದ್ರವಾಗಿರುವ ಭಾರತದಲ್ಲಿ, ಪ್ರತಿಯೊಬ್ಬರೂ ತಮ್ಮ ಮನಶಾಂತಿಯನ್ನು ಕಂಡುಕೊಳ್ಳಬಹುದು. ಆಧ್ಯಾತ್ಮಿಕತೆಯ ಪ್ರಮುಖ ತಾಣ ಭಾರತದಲ್ಲಿ, ಪ್ರತಿ ಮೂಲೆಯಲ್ಲಿಯೂ ಒಂದು ಶ್ರೇಷ್ಟ ಸಂಸ್ಕೃತಿಯ, ದೇವಾಲಯದ ಅಥವಾ ಒಂದು ಆಧ್ಯಾತ್ಮಿಕ ಅನುಭವ ಸಿಗುತ್ತದೆ. ಈ ಅದ್ಭುತ ದೇಶವನ್ನು ಸ್ಮರಿಸಲು ನಾವು ಪ್ರತಿ ವರ್ಷ ಇಂದು( ಜ. 25) ನಾವು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸುತ್ತೇವೆ.

 ಮುಂದಿನ 10 ವರ್ಷದಲ್ಲಿ ಭಾರತದ ಪ್ರವಾಸೋದ್ಯಮ ಕ್ಷೇತ್ರ ದ್ವಿಗುಣ

ಜನವರಿ 25 ರಂದು ಏಕೆ ಆಚರಿಸಲಾಗುತ್ತದೆ?

ಭಾರತ ಸರ್ಕಾರವು ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ 1949 ರಲ್ಲಿ ಪ್ರವಾಸೋದ್ಯಮ ಇಲಾಖೆಯನ್ನು ಸ್ಥಾಪಿಸಿತು. ಈ ಇಲಾಖೆಯನ್ನು ಸ್ಥಾಪಿಸಿದ ದಿನವನ್ನು ಗೌರವಿಸುವ ಸಲುವಾಗಿ ಪ್ರತಿ ವರ್ಷ ಜನವರಿ 25 ರಂದು ರಾಷ್ಟ್ರೀಯ ಪ್ರವಾಸೋದ್ಯಮ ದಿನವನ್ನು ಆಚರಿಸಲಾಗುತ್ತದೆ. ಪ್ರವಾಸೋದ್ಯಮ ಕ್ಷೇತ್ರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಈ ಕ್ಷೇತ್ರದ ಬೆಳವಣಿಗೆಗೆ ಪ್ರೋತ್ಸಾಹ ನೀಡುವುದು ರಾಷ್ಟ್ರೀಯ ಪ್ರವಾಸೋದ್ಯಮ ದಿನದ ಮುಖ್ಯ ಉದ್ದೇಶ.

ರಾಷ್ಟ್ರೀಯ ಪ್ರವಾಸೋದ್ಯಮ ದಿನ 2025ರ ಥೀಮ್

ಸ್ಥಳೀಯ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ಮತ್ತು ಸ್ಥಳೀಯ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಮೂಲಕ ಪ್ರವಾಸೋದ್ಯಮದ ಮೂಲಕ ಅಂತರ್ಗತ ಬೆಳವಣಿಗೆಯನ್ನು ಸಾಧಿಸುವುದು 2025ರ ಥೀಮ್ ಆಗಿದೆ. ʼಅಂತರ್ಗತ ಬೆಳವಣಿಗೆಗಾಗಿ ಪ್ರವಾಸೋದ್ಯಮ' ಎನ್ನುವ ವಿಷಯ ನೀಡಲಾಗಿದೆ.

ಭಾರತದ ಆರ್ಥಿಕ ಬೆಳವಣಿಗೆಯಲ್ಲಿ ಪ್ರವಾಸೋದ್ಯಮದ ಪಾತ್ರ

ಭಾರತದ ಆರ್ಥಿಕತೆಗೆ ಪ್ರವಾಸೋದ್ಯಮ ಕ್ಷೇತ್ರ ಅತ್ಯಂತ ಮಹತ್ವದ ಕೊಡುಗೆ ನೀಡುತ್ತದೆ. ಇದು ಲಕ್ಷಾಂತರ ಜನರಿಗೆ ಉದ್ಯೋಗವನ್ನು ಒದಗಿಸುತ್ತದೆ ಮತ್ತು ದೇಶದ ಆರ್ಥಿಕತೆಯನ್ನು ಬಲಪಡಿಸುತ್ತದೆ. ನಮ್ಮ ದೇಶದ ಸಂಸ್ಕೃತಿ, ಪರಂಪರೆ ಮತ್ತು ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವಲ್ಲಿ ಪ್ರವಾಸೋದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. ಈಗಿನ ಬೆಳವಣಿಗೆಗಳು ಅಲ್ಲದೇ ಪ್ರವಾಸೋದ್ಯಮ ಅಭಿವೃದ್ದಿಗೆ ದೇಶದಲ್ಲಿ ಇನ್ನಷ್ಟು ವಿಪುಲ ಅವಕಾಶಗಳಿವೆ. ವಿಹಾರ, ವ್ಯಾಪಾರ, ಕ್ರೀಡೆ, ಗ್ರಾಮೀಣ, ಶಿಕ್ಷಣ ಮತ್ತು ವೈದ್ಯಕೀಯ ಹೀಗೆ ಪ್ರತಿಯೊಂದು ವಲಯದಲ್ಲಿಯೂ ದೇಶದತ್ತ ಪ್ರವಾಸಿಗರನ್ನು ಸೆಳೆಯಲು ಸಾಧ್ಯವಿದೆ. ಇಷ್ಟೆಲ್ಲ ಅವಕಾಶಗಳಿದ್ದರೂ ಪ್ರವಾಸೋದ್ಯಮದಲ್ಲಿ ಮುಂಚೂಣಿಯಲ್ಲಿರುವ ವಿಶ್ವದ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರವಾಸೋದ್ಯಮ ಅಂದುಕೊಂಷ್ಟು ಸಾಧಿಸಿಲ್ಲ. ಸ್ಥಳೀಯವಾಗಿ ಮತ್ತು ರಾಷ್ಟ್ರೀಯವಾಗಿ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುವ ಪ್ರವಾಸೋದ್ಯಮಕ್ಕೆ ಎಲ್ಲ ರೀತಿಯಲ್ಲೂ ಉತ್ತೇಜನವನ್ನು ಸರ್ಕಾರ ನೀಡಬೇಕಿದೆ. ಇನ್ನು ಭಾರತವು, ಪ್ರಯಾಣ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸೂಚ್ಯಂಕದಲ್ಲಿ 39ನೇ ಸ್ಥಾನವನ್ನು ಪಡೆದಿದೆ ಎಂದರೆ ನಮ್ಮ ದೇಶವು ಪ್ರವಾಸೋದ್ಯಮದಲ್ಲಿ ಬಹಳ ಮುಂದುವರಿದಿದೆ ಎಂದರ್ಥ. ಮುಂದಿನ ದಿನಗಳಲ್ಲಿ ಭಾರತದ ಪ್ರವಾಸೋದ್ಯಮ ಇನ್ನಷ್ಟು ಬೆಳೆಯುವ ನಿರೀಕ್ಷೆಯಿದೆ. 2030ರ ವೇಳೆಗೆ ಭಾರತವು ಪ್ರವಾಸೋದ್ಯಮದಲ್ಲಿ ನಾಲ್ಕನೇ ಅತಿದೊಡ್ಡ ದೇಶವಾಗುವ ನಿರೀಕ್ಷೆಯಿದೆ.

ಮುಂದಿನ 10 ವರ್ಷಗಳಲ್ಲಿ ದ್ವಿಗುಣ

ವಿಶ್ವ ಪ್ರವಾಸೋದ್ಯಮ ಮಂಡಳಿಯ ಪ್ರಕಾರ, ಭಾರತದ ಪ್ರವಾಸೋದ್ಯಮ ಕ್ಷೇತ್ರವು ಮುಂದಿನ 10 ವರ್ಷಗಳಲ್ಲಿ ದ್ವಿಗುಣಗೊಳ್ಳಲಿದೆ. ವಿಶ್ವ ಪ್ರವಾಸ ಮತ್ತು ಪ್ರವಾಸೋದ್ಯಮ ಮಂಡಳಿ (WTTC) ಅಧ್ಯಕ್ಷೆ ಮತ್ತು ಸಿಇಒ ಜೂಲಿಯಾ ಸಿಂಪ್ಸನ್ ಅವರ ಪ್ರಕಾರ "ಭಾರತದ ಪ್ರವಾಸೋದ್ಯಮ ಕ್ಷೇತ್ರವು ಮುಂದಿನ ಹತ್ತು ವರ್ಷಗಳಲ್ಲಿ ಗಣನೀಯ ಬೆಳವಣಿಗೆಯನ್ನು ಕಾಣಲಿದೆ. ಈಗಾಗಲೇ 45 ಮಿಲಿಯನ್ ಜನರಿಗೆ ಉದ್ಯೋಗ ನೀಡುತ್ತಿರುವ ಈ ಕ್ಷೇತ್ರವು ಮುಂದಿನ ದಶಕದಲ್ಲಿ 63 ಮಿಲಿಯನ್ ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ. ಪ್ರಸ್ತುತ 256 ಶತಕೋಟಿ ಡಾಲರ್ ಮೌಲ್ಯದ ಭಾರತೀಯ ಪ್ರವಾಸೋದ್ಯಮ ಕ್ಷೇತ್ರವು ಮುಂದಿನ ಹತ್ತು ವರ್ಷಗಳಲ್ಲಿ 523 ಶತಕೋಟಿ ಡಾಲರ್‌ಗೆ ಏರಿಕೆಯಾಗಲಿದೆ" ಎಂದು ಇತ್ತೀಚೆಗೆ ನೀಡಿದ್ದ ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದಾರೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+