ದಸರಾದಲ್ಲಿ ಗರ್ಬಾ ರಾಸ್ ಮತ್ತು ದಾಂಡಿಯಾ ನೃತ್ಯಕ್ಕೆ ವಿಶೇಷ ಮಹತ್ವವಿದೆ. ಗುಜರಾತ್‌ನ ಸಾಂಪ್ರದಾಯಿಕ ಜಾನಪದ ನೃತ್ಯ ದಾಂಡಿಯಾ ಜನರ ಬದುಕು ಹಾಗೂ ಸಂಭ್ರಮವನ್ನು ಪ್ರತಿಬಿಂಬಿಸುವ ಭಾವೈಕ್ಯತೆಯನ್ನು ಬೆಸೆಯುವ ಸಾಮರಸ್ಯದ ಸಂಕೇತವಾಗಿದೆ. ದಾಂಡಿಯಾವನ್ನು ಕರ್ನಾಟಕದಲ್ಲಿ ಕೋಲಾಟ ಎಂದು ಕರೆಯಲಾಗುತ್ತದೆ. ದಾಂಡಿಯಾದಲ್ಲಿ ತಾಯಿ ದೇವಿಯ ಖಡ್ಗವನ್ನು ಸಂಕೇತಿಸುವ ಎರಡು ಮರದ ಕೋಲುಗಳನ್ನು ಬಳಸಿ ನೃತ್ಯವನ್ನು ಮಾಡಲಾಗುತ್ತದೆ ಅಥವಾ ಕೋಲಾಟ ಆಡಲಾಗುತ್ತದೆ.
ಅಂದಹಾಗೇ ನವರಾತ್ರಿ ಹಬ್ಬ ಮುಕ್ತಾಯವಾಗಿದೆ.. ಮತ್ತೆ ಈ ಪೀಠಿಕೆ ಯಾಕೆ ಎಂಬ ಪ್ರಶ್ನೆ ನಿಮ್ಮ ಮನದಲ್ಲಿ ಕಾಡತೊಡಗಿದರೆ ಇದಕ್ಕೆ ಕಾರಣವಿದೆ. ಈ ಬಾರಿಯ ನವರಾತ್ರಿಯಲ್ಲಿ ಕ್ವಿಕ್ ಕಾಮರ್ಸ್ ಸಂಸ್ಥೆ Zepto ಬರೋಬ್ಬರಿ ಒಂದು ಲಕ್ಷಕ್ಕೂ ಹೆಚ್ಚು ದಾಂಡಿಯಾ ಸ್ಟಿಕ್ ಗಳನ್ನು ಮಾರಾಟ ಮಾಡಿ ದಾಖಲೆ ಬರೆದಿದೆ.

ಈ ಬಗ್ಗೆ ಲಿಂಕ್ಡ್ ಇನ್‌ನಲ್ಲಿ ಮೂಲಕ ಮಾಹಿತಿ ಹಂಚಿಕೊಂಡಿರುವ ಸಂಸ್ಥೆಯ ಸಹ ಸಂಸ್ಥಾಪಕ ಹಾಗೂ ಸಿಇಒ ಆದಿತ್ ಪಲಿಚ್ ಅವರು, ದಾಂಡಿಯಾ ಕೋಲುಗಳ ಮಾರಾಟದ ದಾಖಲೆ ಮಾರಾಟ ಕಂಡಿದೆ ಎಂದು ಹೇಳಿದ್ದಾರೆ
ಏನಿದು ದಾಂಡಿಯಾ ಕೋಲುಗಳು?
ಎಲ್ಲರಿಗೂ ತಿಳಿದಿರುವಂತೆ ನವರಾತ್ರಿ ಸಮಯದಲ್ಲಿ ದಾಂಡಿಯಾ, ಗರ್ಭಾ ಮುಂತಾದ ಸಂಪ್ರದಾಯದ ನೃತ್ಯಗಳನ್ನು ಮಾಡಲಾಗುತ್ತದೆ. ಗುಜರಾತ್‌ನಲ್ಲಿ ಇವುಗಳ ಆಚರಣೆ ಇದ್ದರೂ ಸದ್ಯದ ಜಾಗತಿಕ ಯುಗದಲ್ಲಿ ಭಾರತದೆಲ್ಲೆಡೆ ನೃತ್ಯ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ. ಅದರಲ್ಲೂ ದಾಂಡಿಯಾ ನೃತ್ಯ ಪ್ರಕಾರದಲ್ಲಿ ಕೋಲುಗಳನ್ನು ಪರಸ್ಪರ ಬಡಿದುಕೊಳ್ಳುವ ಮೂಲಕ ನೃತ್ಯ ನಡೆಸಲಾಗುತ್ತದೆ. ಈ ಕೋಲುಗಳು ವಿಶೇಷವಾದ ಬಣ್ಣ ಹಾಗೂ ಡಿಸೈನ್ ಗಳಿಂದ ಕೂಡಿದ್ದು, ನೋಡಲು ಆಕರ್ಷಕವಾಗಿರುತ್ತದೆ. ಈ ರೀತಿಯ ಕೋಲುಗಳನ್ನು ಸದ್ಯ ಝೆಪ್ಟೊ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುವ ಮೂಲಕ ಗಮನ ಸೆಳೆದಿದೆ.
ಲಿಂಕ್ಡ್ ಇನ್‌ನಲ್ಲಿ ಸಂತಸ ಹಂಚಿಕೊಂಡ ಆದಿತ್
"ಎಂಥಹ ದಿನ..!, ಈ ಬಾರಿಯ ನವರಾತ್ರಿಯನ್ನು ನಮ್ಮ ಬಳಕೆದಾರರು, ಮಾರಾಟಗಾರರು, ಬ್ರ್ಯಾಂಡ್‌ಗಳ ಮೂಲಕ ಕೃತಜ್ಞತಾಪೂರ್ವಕ ಹೃದಯದಿಂದ ಕೊನೆಗೊಳಿಸುತ್ತಿದ್ದೇವೆ. ಅಗತ್ಯ ವಸ್ತುಗಳಿಂದ ಹಿಡಿದು ಹಬ್ಬದ ಆಯ್ಕೆಗಳವರೆಗೆ ಭಾರತದ ವೈವಿಧ್ಯತೆಯ ಸೌಂದರ್ಯವನ್ನು ನೋಡುತ್ತಿದ್ದೇವೆ. ಒಂಬತ್ತು ನಂಬಲಾಗದ ದಿನಗಳಲ್ಲಿ ನಮ್ಮನ್ನು ಭಾರತದ ಆಚರಣೆಗಳ ಭಾಗವಾಗಿಸಿರುವುದಕ್ಕೆ ಧನ್ಯವಾದಗಳು" ಎಂದು ಅವರು ಲಿಂಕ್ಡ್‌ಇನ್‌ನಲ್ಲಿ ಬರೆದಿದ್ದಾರೆ.
ಮುಂಬೈ ಪ್ರಧಾನ ಕಛೇರಿಯನ್ನು ಹೊಂದಿರುವ ಸಂಸ್ಥೆಯು ಈ ನವರಾತ್ರಿಯ ಋತುವಿನಲ್ಲಿ 1,00,000 ಪ್ಲಸ್ ದಾಂಡಿಯಾ ಸ್ಟಿಕ್‌ಗಳನ್ನು ಮಾರಾಟ ಮಾಡಿದೆ ಎಂದು ಅವರು ಗ್ರಾಫಿಕ್ಸ್ ಮೂಲಕ ಹಂಚಿಕೊಂಡಿದ್ದಾರೆ.
ಇನ್ನು ಕಳೆದ ವರ್ಷದ ನವರಾತ್ರಿ ಮಾರಾಟಕ್ಕೆ ಹೋಲಿಸಿದರೆ ಈ ಬಾರಿ ಝೆಪ್ಟೊ ಭಾರೀ ಪ್ರಮಾಣದಲ್ಲಿ ವಸ್ತುಗಳ ಮಾರಾಟ ಮಾಡಿರುವುದು ಅಂಕಿ ಅಂಶಗಳು ತೋರಿಸಿದೆ. ಉಪವಾಸ ಸ್ನೇಹಿ ಚಿಪ್ಸ್ ಪ್ಯಾಕೇಟ್ ಮತ್ತು ರಾಜಗಿರಾ ಹಿಟ್ಟು ಮಾರಾಟವು ಕಳೆದ ವರ್ಷದ ನವರಾತ್ರಿ ಮಾರಾಟಕ್ಕೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಬೆಳೆದಿರುವುದು ಕಂಡುಬಂದಿದೆ.
ಇನ್ನು ದೇಶದ ಹಲವು ನಗರಗಳಲ್ಲಿ ಝೆಪ್ಟೊ ಸಂಗ್ರಹ ಸ್ಟೋರ್‌ಗಳಲ್ಲಿ ನವರಾತ್ರಿ ಆಚರಣೆಯನ್ನು ಭರ್ಜರಿಯಾಗಿ ಆಚರಣೆ ಮಾಡಲಾಗಿರುವುದನ್ನು ಆದಿತ್ ಅವರು ತಿಳಿಸಿದ್ದಾರೆ. ಕೊಯಮತ್ತೂರು, ಕೊಚ್ಚಿ, ಚೆನ್ನೈ ಮತ್ತು ಬೆಂಗಳೂರಿನ ಮಳಿಗೆಗಳು ಆಯುಧಪೂಜೆಯನ್ನು ಆಚರಿಸಿ, ಉಪಕರಣಗಳು ಮತ್ತು ಸಲಕರಣೆಗಳ ಪೂಜೆ ಮಾಡಲಾಯಿತು. ಕೋಲ್ಕತ್ತಾದ ಭವಾನಿಪೋರ್ ಸ್ಟೋರ್ ದುರ್ಗಾ ಅಷ್ಟಮಿಯ ಉತ್ಸಾಹಭರಿತ ಸಾರವನ್ನು ತಿಳಿಸಿದರೆ, ಅಹಮದಾಬಾದ್‌ನ ಗೋಟಾ ಸ್ಟೋರ್ ಉತ್ಸಾಹಭರಿತ ಗರ್ಬಾ ಕಾರ್ಯಕ್ರಮದೊಂದಿಗೆ ಹಬ್ಬದ ಉತ್ಸಾಹವನ್ನು ಜೀವಂತವಾಗಿರಿಸಿತು ಎಂದು ಅವರು ಮಾಹಿತಿ ನೀಡಿದ್ದಾರೆ.
ಅತ್ಯಲ್ಪ ಅವಧಿಯಲ್ಲಿ ಭಾರೀ ಮುನ್ನಡೆ ಸಾಧಿಸಿದ ಝೆಪ್ಟೊ
ಉಳಿದ ಇ ಕಾರ್ಟ್‌ಗಳಿಗೆ ಹೋಲಿಕೆ ಮಾಡಿದರೆ ಝೆಪ್ಟೊ ಅತ್ಯಲ್ಪ ಅವಧಿಯಲ್ಲಿ ಬಹಳ ವೇಗದ ಪ್ರಗತಿ ಸಾಧಿಸಿದೆ. ಅದರಲ್ಲೂ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಬಾರಿಯ ಹಬ್ಬದಲ್ಲಿ ಬಹುದೊಡ್ಡ ಲಾಭ ಗಳಿಸಿದೆ.
ದೀಪಾವಳಿಯಲ್ಲಿ ಕೂಡ ಪ್ರಗತಿ ಮುನ್ನಡೆಯುವ ನಿರೀಕ್ಷೆ
ಇನ್ನು ನವರಾತ್ರಿಯಲ್ಲಿ ಝೆಪ್ಟೊ ನಿರೀಕ್ಷೆಗೂ ಮೀರಿ ಪ್ರಗತಿ ಸಾಧಿಸಿದ್ದು, ಮುಂದಿನ ದೀಪಾವಳಿಯಲ್ಲೂ ಈ ಟ್ರೆಂಡ್ ಮುಂದುವರೆಯುವ ವಿಶ್ವಾಸವಿದೆ. ಹಾಗಾಗಿ ಝೆಪ್ಟೊ ಈ ನಿಟ್ಟಿನಲ್ಲಿ ಹೆಚ್ಚಿನ ನಿರೀಕ್ಷೆ ಕೂಡ ಹೊಂದಿದೆ.


Click it and Unblock the Notifications