2020-21 ರ ಹಣಕಾಸು ವರ್ಷದ (ಮಾರ್ಚ್ 2021 ರ ಅಂತ್ಯಕ್ಕೆ) ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ ಡಿಸೆಂಬರ್ 31 ಆಗಿತ್ತು. ಈ ಡಿಸೆಂಬರ್ 31 ರ ಗಡುವಿನವರೆಗೆ ಸುಮಾರು 5.89 ಕೋಟಿ ಆದಾಯ ತೆರಿಗೆ ರಿಟರ್ನ್ಸ್‌ಗಳನ್ನು ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ ಸಲ್ಲಿಸಲಾಗಿದೆ ಎಂದು ಐ-ಟಿ ಇಲಾಖೆ ಶನಿವಾರ ತಿಳಿಸಿದೆ. ಇನ್ನು ಈ ಪೈಕಿ 46.11 ಲಕ್ಷಕ್ಕೂ ಹೆಚ್ಚು ಐಟಿಆರ್‌ಗಳನ್ನು ಕೊನೆಯ ದಿನಾಂಕ ಅಥವಾ ಡಿಸೆಂಬರ್ 31 ರಂದೇ ಸಲ್ಲಿಸಲಾಗಿದೆ.
"ಆದಾಯ ತೆರಿಗೆ ಇಲಾಖೆಯ ಹೊಸ ಇ-ಫೈಲಿಂಗ್ ಪೋರ್ಟಲ್‌ನಲ್ಲಿ 2021 ರ ಡಿಸೆಂಬರ್ 31 ರ ವಿಸ್ತೃತ ಗಡುವು ದಿನಾಂಕದವರೆಗೆ ಸುಮಾರು 5.89 ಕೋಟಿ ಆದಾಯ ತೆರಿಗೆ ರಿಟರ್ನ್ಸ್ (ಐಟಿಆರ್) ಸಲ್ಲಿಸಲಾಗಿದೆ," ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಮಾಹಿತಿ ನೀಡಿದೆ. ಜನವರಿ 10, 2021 ಕ್ಕೆ (ಹಣಕಾಸು ವರ್ಷ 2020-21ರ ಐಟಿಆರ್ ಸಲ್ಲಿಕೆಗೆ ಕೊನೆಯ ದಿನಾಂಕ) ಹೋಲಿಕೆ ಮಾಡಿದಾಗ, ಒಟ್ಟು ಐಟಿಆರ್‌ಗಳ ಸಂಖ್ಯೆ 5.95 ಕೋಟಿ ರೂಪಾಯಿ ಆಗಿದೆ. ಕೊನೆಯ ದಿನ ಅಥವಾ ಜನವರಿ 10, 2021 ರಂದು 31.05 ಲಕ್ಷ ಐಟಿಆರ್‌ಗಳನ್ನು ಸಲ್ಲಿಸಲಾಗಿದೆ.
ಹಣಕಾಸು ವರ್ಷ 2021-22 ಕ್ಕೆ ಸಲ್ಲಿಸಿದ 5.89 ಕೋಟಿ ಐಟಿಆರ್‌ಗಳಲ್ಲಿ ಶೇಕಡ 49.6 ಐಟಿಆರ್1 ಅಂದರೆ 2.92 ಕೋಟಿ ರೂ, ಶೇಕಡ 9.3 ಐಟಿಆರ್2 (54.8 ಲಕ್ಷ ರೂ), ಐಟಿಆರ್3 ಶೇಕಡ 12.1 (71.05 ಲಕ್ಷ ರೂ), ಐಟಿಆರ್4 ಶೇಕಡ 27.2 (1.60 ಕೋಟಿ ರೂ), ಐಟಿಆರ್5 ಶೇಕಡ 1.3 (7.66 ಲಕ್ಷ ರೂ) ಆಗಿದೆ. ಅಲ್ಲದೆ, 2.58 ಲಕ್ಷ ಐಟಿಆರ್6 ಮತ್ತು ಐಟಿಆರ್ 0.67 ಲಕ್ಷ ಐಟಿಆರ್ ಸಲ್ಲಿಕೆ ಆಗಿದೆ.

"ಈ ಐಟಿಆರ್‌ಗಳಲ್ಲಿ ಶೇಕಡಾ 45.7 ಕ್ಕಿಂತ ಹೆಚ್ಚು ಪೋರ್ಟಲ್‌ನಲ್ಲಿ ಆನ್‌ಲೈನ್ ಐಟಿಆರ್ ಫಾರ್ಮ್ ಅನ್ನು ಬಳಸಿಕೊಂಡು ಸಲ್ಲಿಸಲಾಗಿದೆ. ಬಾಕಿಯನ್ನು ಆಫ್‌ಲೈನ್ ಸಾಫ್ಟ್‌ವೇರ್ ಮೂಲಕ ಐಟಿಆರ್ ಬಳಸಿ ಅಪ್‌ಲೋಡ್ ಮಾಡಲಾಗಿದೆ," ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಹೇಳಿದೆ.
ಐಟಿಆರ್ ಫಾರ್ಮ್ 1 (ಸಹಜ್) ಮತ್ತು ಐಟಿಆರ್ ಫಾರ್ಮ್ 4 (ಸುಗಮ್) ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಮಧ್ಯಮ ತೆರಿಗೆದಾರರಿಗೆ ಸಹಾಯಕವಾದ ಸರಳ ರೂಪಗಳಾಗಿವೆ. 50 ಲಕ್ಷದವರೆಗೆ ಆದಾಯ ಹೊಂದಿರುವ ಮತ್ತು ಸಂಬಳ, ಒಂದು ಮನೆ ಆಸ್ತಿ/ಇತರ ಮೂಲಗಳಿಂದ (ಬಡ್ಡಿ ಇತ್ಯಾದಿ) ಆದಾಯವನ್ನು ಪಡೆಯುವ ವ್ಯಕ್ತಿಯಿಂದ ಸಹಜ್ ಅನ್ನು ಸಲ್ಲಿಸಬಹುದು.
ಕೊಂಚ ರಿಲೀಫ್ ನೀಡಿದ್ದ ಇಲಾಖೆ
ಆದಾಯ ತೆರಿಗೆ ರಿಟರ್ನ್ (ITR) ಫೈಲಿಂಗ್ ಕೊನೆಯ ದಿನಾಂಕ ಡಿಸೆಂಬರ್ 31, 2021 ಕ್ಕೂ ಮುನ್ನ ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಸಿಹಿ ಸುದ್ದಿಯನ್ನು ನೀಡಿತ್ತು. 2019-20ರ ಹಣಕಾಸು ವರ್ಷದಲ್ಲಿ ಆದಾಯ ತೆರಿಗೆಯನ್ನು ಪಾವತಿಯ ಇ ಪರಿಶೀಲನೆ ನಡೆಸದ ತೆರಿಗೆದಾರರು ಪರಿಶೀಲನಾ ಪ್ರಕ್ರಿಯೆಯನ್ನು 2022ರ ಫೆಬ್ರವರಿ 28ರ ವೇಳೆಗೆ ಪೂರ್ಣಗೊಳಿಸಬಹುದು ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿತ್ತು. ಪೋರ್ಟಲ್ ಸಮಸ್ಯೆಯ ನಡುವೆಯೂ ತೆರಿಗೆದಾರರು ಐಟಿ ರಿಟರ್ನ್ ಸಲ್ಲಿಕೆ ಮಾಡಲು ಪರದಾಡುತ್ತಿದ್ದಾಗ ಈ ಮೂಲಕ ತೆರಿಗೆದಾರರಿಗೆ ಕೊಂಚ ರಿಲೀಫ್ ಅನ್ನು ನೀಡಿತ್ತು. ಈ ನಿಟ್ಟಿನಲ್ಲಿ ಸಿಬಿಡಿಟಿ ಹೇಳಿಕೆ ಬಿಡುಗಡೆ ಮಾಡಿದೆ. "ಹಲವಾರು ಮಂದಿಯ ಇ ಪರಿಶೀಲನೆ ನಡೆಸಿಲ್ಲ. ಆದ್ದರಿಂದಾಗಿ ಪರಿಶೀಲನಾ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕೊನೆಯ ದಿನಾಂಕವನ್ನು ಫೆಬ್ರವರಿವರೆಗೆ ವಿಸ್ತರಣೆ ಮಾಡಲಾಗುತ್ತದೆ," ಎಂದು ಹೇಳಿತ್ತು.


Click it and Unblock the Notifications