ಉನ್ನತ ಶಿಕ್ಷಣಕ್ಕಾಗಿ ವಿದ್ಯಾರ್ಥಿಗಳಿಗೆ ಸಾಲದ ಅಗತ್ಯ ಹೆಚ್ಚಿರುತ್ತದೆ. ಒಳ್ಳೆಯ ಅಂಕಗಳನ್ನ ಪಡೆದ ವಿದ್ಯಾರ್ಥಿಗಳು ಹೆಚ್ಚಿನ ಓದಿಗಾಗಿ ಸಾಲದ ಮೊರೆ ಹೋಗುತ್ತಾರೆ. ಅಲ್ಲದೆ ಭಾರತದಲ್ಲಿರುವ ಹೆಚ್ಚಿನ ಭಾಗದ ವಿದ್ಯಾರ್ಥಿಗಳು ಹಣದ ಕೊರತೆಯಿಂದ ಉನ್ನತ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇಂತಹ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ಮಾಡುವ ಸಲುವಾಗಿ ಸರ್ಕಾರ ಒಂದು ಹೆಜ್ಜೆ ಮುಂದೆ ಇದೆ. ಈ ಮೂಲಕ ಉತ್ತಮ ಯೋಜನೆಗಳನ್ನ ತಂದಿದೆ. ಉನ್ನತ ಶಿಕ್ಷಣವನ್ನ ಪಡೆಯಲು ಬಯಸುವವರು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.
ಕೇಂದ್ರ ಸಂಪುಟ ನವೆಂಬರ್ 2024ರಲ್ಲಿ ಅನುಮೋದಿಸಿದ ಪ್ರಧಾನ ಮಂಂತ್ರಿ ವಿದ್ಯಾಲಕ್ಷ್ಮಿ ಯೋಜನೆಯು ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಸಹಾಯ ಮಾಡಲಿದೆ. ಪ್ರತಿಭಾವಣತ ವಿದ್ಯಾರ್ಥಿಗಳಿಗೆ ಸಹಾಯ ವಾಗುವ ನಿಟ್ಟಿನಲ್ಲಿ ಈ ಯೋಜನೆಯನ್ನ ಜಾರಿ ಮಾಡಲಾಗಿದೆ. ಇನ್ನು ಈ ಯೋಜನೆಯ ಮೂಲಕ 860 ಪತಿಷ್ಟಿತ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವನ್ನ ಮಾಡುತ್ತದೆ. ಈ ಯೋಜೆನಯ ಮೂಲಕ ಪ್ರತಿ ವರ್ಷ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಯೋಜನವನ್ನು ನೀಡುತ್ತದೆ.

PM ವಿದ್ಯಾಲಕ್ಷ್ಮಿ ಯೋಜನೆಯ ವೈಶಿಷ್ಟ್ಯಗಳು
-ಈ ಯೋಜನೆಯು ವಿದ್ಯಾರ್ಥಿಗಳಿಗೆ ಭಾರತ ಮತ್ತು ವಿದೇಶಗಳಲ್ಲಿ ಉನ್ನತ ವ್ಯಾಸಂಗಕ್ಕಾಗಿ ಶೈಕ್ಷಣಿಕ ಸಾಲಗಳಿಗೆ ಅರ್ಜಿ ಸಲ್ಲಿಸಲು ಆನ್‌ಲೈನ್ ವೇದಿಕೆಯನ್ನು ಒದಗಿಸುತ್ತದೆ.
-ಇದು ಭಾರತದಲ್ಲಿನ ಅಧ್ಯಯನಕ್ಕಾಗಿ 50,000 ರೂಗಳಿಂದ 10 ಲಕ್ಷ ರೂಗಳವರೆಗೆ ಮತ್ತು ವಿದೇಶದಲ್ಲಿ ಅಧ್ಯಯನಕ್ಕಾಗಿ ₹ 20 ಲಕ್ಷದವರೆಗಿನ ಸಾಲಗಳನ್ನು ನೀಡುತ್ತದೆ.
-ಪದವಿಪೂರ್ವ, ಸ್ನಾತಕೋತ್ತರ ಅಥವಾ ಡಾಕ್ಟರೇಟ್ ಕೋರ್ಸ್‌ಗಳಿಗೆ ಮಾನ್ಯತೆ ಪಡೆದ ಸಂಸ್ಥೆಗಳಿಗೆ ಪ್ರವೇಶ ಪಡೆದ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರು.
-ಈ ಯೋಜನೆಯು ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳಿಗೆ ಸಾಲದ ಮೇಲಿನ ಬಡ್ಡಿ ಸಬ್ಸಿಡಿಗಳನ್ನು ಒಳಗೊಂಡಿರಬಹುದು.
-ಈ ಯೋಜನೆಯು ಶೈಕ್ಷಣಿಕ ಸಾಲಗಳನ್ನು ನೀಡುವ ಅನೇಕ ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳೊಂದಿಗೆ ವಿದ್ಯಾರ್ಥಿಗಳನ್ನು ಸಂಪರ್ಕಿಸುತ್ತದೆ.
-4 ಲಕ್ಷದವರೆಗಿನ ಸಾಲಗಳಿಗೆ ಮೇಲಾಧಾರ ಅಥವಾ ಮೂರನೇ ವ್ಯಕ್ತಿಯ ಖಾತರಿ ಅಗತ್ಯವಿಲ್ಲ.
-ಇದು ಬೋಧನಾ ಶುಲ್ಕಗಳು, ಹಾಸ್ಟೆಲ್ ಶುಲ್ಕಗಳು, ಪುಸ್ತಕಗಳು ಮತ್ತು ಇತರ ಶೈಕ್ಷಣಿಕ-ಸಂಬಂಧಿತ ವೆಚ್ಚಗಳನ್ನು ಒಳಗೊಂಡಂತೆ ಎಲ್ಲಾ ರೀತಿಯಲ್ಲಿ ಸಹಾಯ ಮಾಡುವ ಉದ್ದೇಶವನ್ನು ಹೊಂದಿದೆ.
ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಹತೆ
-ಈ ಯೋಜನೆಗೆ ಅರ್ಜಿ ಸಲ್ಲಿಸಲು ಭಾರತೀಯ ವಿದ್ಯಾರ್ಥಿಗಳು ಮಾತ್ರ ಅರ್ಹರು.
-ಅರ್ಜಿ ಸಲ್ಲಿಸುವ ಸಮಯದಲ್ಲಿ ವಿದ್ಯಾರ್ಥಿಯು ಸಾಮಾನ್ಯವಾಗಿ 18 ರಿಂದ 35 ವರ್ಷಗಳ ನಡುವಿನ ವಯಸ್ಸಿನವರಾಗಿರಬೇಕು.
-ಅರ್ಜಿದಾರರು ಉನ್ನತ ಅಧ್ಯಯನಕ್ಕಾಗಿ ಮಾನ್ಯತೆ ಪಡೆದ ಸಂಸ್ಥೆಗೆ ಪ್ರವೇಶ ಪಡೆದಿರಬೇಕು. ಜೊತೆಗೆ ಪದವಿಪೂರ್ವ , ಸ್ನಾತಕೋತ್ತರ (PG), ಡಾಕ್ಟರೇಟ್ ಕೋರ್ಸ್‌ಗಳು (ಪಿಎಚ್‌ಡಿ)ಒಳಗೊಂಡಿರಬಹುದು.
-ಈ ಯೋಜನೆಯು ಮುಖ್ಯವಾಗಿ ಆರ್ಥಿಕವಾಗಿ ದುರ್ಬಲ ವರ್ಗಗಳ ವಿದ್ಯಾರ್ಥಿಗಳನ್ನು ಗುರಿಯಾಗಿಸುತ್ತದೆ. ಅರ್ಜಿ ಪ್ರಕ್ರಿಯೆಯಲ್ಲಿ ಹಣಕಾಸಿನ ಅಗತ್ಯತೆ ಮತ್ತು ಸಾಲವನ್ನು ಮರುಪಾವತಿ ಮಾಡುವ ಸಾಮರ್ಥ್ಯವನ್ನು ಪರಿಗಣಿಸಲಾಗುತ್ತದೆ.
-ವಿದ್ಯಾರ್ಥಿಯು ಭಾರತದಲ್ಲಿ ಅಥವಾ ವಿದೇಶದಲ್ಲಿ ಪೂರ್ಣ ಸಮಯದ ನಿಯಮಿತ ಕೋರ್ಸ್‌ಗಳನ್ನು ಅನುಸರಿಸುತ್ತಿರಬೇಕು.
ಪ್ರಧಾನಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ
-ಪ್ರಧಾನ ಮಂತ್ರಿ ವಿದ್ಯಾಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಮೊದಲು ಈ ಯೋಜನೆಯ ಅಧಿಕೃತ ವಿದ್ಯಾಲಕ್ಷ್ಮಿ ಪೋರ್ಟಲ್ https ://www .vidyalakshmi .co .inಗೆ ಭೇಟಿ ನೀಡಿ.
-ನೀವು ಈ ಯೋಜನೆಯ ಖಾತೆಯನ್ನು ಹೊಂದಿಲ್ಲದಿದ್ದರೆ, ನೋಂದಾಯಿಸಲು "ಹೊಸ ಬಳಕೆದಾರ" ಆಯ್ಕೆಯನ್ನು ಕ್ಲಿಕ್ ಮಾಡಿ.
-ನಿಮ್ಮ ಹೆಸರು, ಇಮೇಲ್, ಮೊಬೈಲ್ ಸಂಖ್ಯೆಯಂತಹ ವಿವರಗಳನ್ನು ಹಾಕಿ ಮತ್ತು ಪಾಸ್‌ವರ್ಡ್ ರಚಿಸಬೇಕು.
-ನೋಂದಣಿಯ ನಂತರ, ನಿಮ್ಮ ವೈಯಕ್ತಿಕ, ಶೈಕ್ಷಣಿಕ ಮತ್ತು ಹಣಕಾಸಿನ ವಿವರಗಳನ್ನು ನಮೂದಿಸುವ ಮೂಲಕ ನಿಮ್ಮ ಪ್ರೊಫೈಲ್ ಅನ್ನು ಪೂರ್ಣಗೊಳಿಸಿ.
-ಕೋರ್ಸ್, ಸಂಸ್ಥೆ ಮತ್ತು ನೀವು ಬಯಸುತ್ತಿರುವ ಸಾಲದ ಮೊತ್ತದ ಬಗ್ಗೆ ಮಾಹಿತಿಯನ್ನು ಒದಗಿಸಿ.
-ನಿಮ್ಮ ಪ್ರೊಫೈಲ್ ಪೂರ್ಣಗೊಂಡ ನಂತರ, ನಿಮ್ಮ ಆದ್ಯತೆಯ ಬ್ಯಾಂಕ್‌ಗಳನ್ನು ಆಯ್ಕೆ ಮಾಡುವ ಮೂಲಕ ಲಭ್ಯವಿರುವ ಲೋನ್ ಸ್ಕೀಮ್‌ಗಳಿಗಾಗಿ ನೀವು ಹುಡುಕಬಹುದು.
-ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಪ್ರವೇಶ ಪುರಾವೆ, ಶೈಕ್ಷಣಿಕ ದಾಖಲೆಗಳು, ಆದಾಯ ಪ್ರಮಾಣಪತ್ರಗಳು ಮುಂತಾದ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
-ಒಮ್ಮೆ ಬ್ಯಾಂಕ್ ನಿಮ್ಮ ಅರ್ಜಿಯನ್ನು ಅನುಮೋದಿಸಿದರೆ, ನಿರ್ದಿಷ್ಟಪಡಿಸಿದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಸಾಲದ ಮೊತ್ತವನ್ನು ವಿತರಿಸಲಾಗುತ್ತದೆ.
-ವಿದ್ಯಾ ಲಕ್ಷ್ಮಿ ಪೋರ್ಟಲ್‌ನಲ್ಲಿ ನಿಮ್ಮ ಸಾಲದ ಅರ್ಜಿಯ ಸ್ಥಿತಿಯನ್ನು ನೀವು ನೇರವಾಗಿ ಟ್ರ್ಯಾಕ್ ಮಾಡಬಹುದು.


Click it and Unblock the Notifications