ಬೆಂಗಳೂರು, ಏಪ್ರಿಲ್ 19: ಮಕ್ಕಳ ಆಹಾರ ಉತ್ಪನ್ನದಲ್ಲಿ ಪ್ರಮುಖ ಜಾಗತಿಕ ಕಂಪನಿಯಾಗಿರುವ ಸ್ವಿಜರ್ಲೆಂಡ್ ಮೂಲದ ನೆಸ್ಲೆ, ಭಾರತದಲ್ಲಿ ಮಾರಾಟ ಮಾಡುತ್ತಿರುವ ಉತ್ಪನ್ನ ಸೆರೆಲ್ಯಾಕ್ ನಲ್ಲಿ ಭಾರೀ ಪ್ರಮಾಣದ ಸಕ್ಕರೆ ಪತ್ತೆಯಾಗಿದೆ ಎಂಬ ವರದಿ ಬಹಿರಂಗವಾಗಿದೆ. ಈ ಹಿನ್ನಲೆಯಲ್ಲಿ ನೆಸ್ಲೆ ಇಂಡಿಯಾ ಗುರುವಾರ ತನ್ನ ಸೆರೆಲಾಕ್ ಬೇಬಿ ಫುಡ್ ಉತ್ಪನ್ನಗಳಲ್ಲಿ ಸಕ್ಕರೆ ಅಂಶದ ಸುತ್ತಲಿನ ಇತ್ತೀಚಿನ ವಿವಾದಕ್ಕೆ ಸ್ಪಷ್ಟೀಕರಣದೊಂದಿಗೆ ಪ್ರತಿಕ್ರಿಯಿಸಿದೆ.
"ನಾವು ಎಂದಿಗೂ ಉತ್ಪನ್ನದ ಗುಣಮಟ್ಟದಲ್ಲಿಯಾಗಲಿ ಅಥವಾ ಉತ್ಪನ್ನಗಳ ಪೌಷ್ಟಿಕಾಂಶದ ಗುಣಮಟ್ಟದಲ್ಲಿಯಾಗಲಿ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ದೇಶದಲ್ಲಿ ಮಗುವಿನ ಆಹಾರ ಉತ್ಪ ನ್ನ ಗಳಲ್ಲಿ ಸೇರಿಸಿದ ಸಕ್ಕರೆಯ ಅಂಶವನ್ನು ಶೇಕಡಾ 30 ಕ್ಕಿಂತ ಹೆಚ್ಚು ಕಡಿಮೆ ಮಾಡಿದೆ" ಎಂದು ತನ್ನ ಪ್ರಕಟನೆಯಲ್ಲಿ ಹೇಳಿದೆ.

"ಶಿಶುಗಳಿಗೆಂದು ತಯಾರಾದ ಧಾನ್ಯ ಉತ್ಪನ್ನಗಳಲ್ಲಿ ಮಕ್ಕಳಿಗೆ ಬಾಲ್ಯದಲ್ಲಿಯೇ ಪ್ರೋಟೀನ್, ಕಾರ್ಬೋಹೈಡ್ರೇಟ್‌ಗಳು, ವಿಟಮಿನ್‌ಗಳು, ಖನಿಜಗಳು, ಕಬ್ಬಿಣದಂತಹ ಪೌಷ್ಟಿಕಾಂಶದ ಅಗತ್ಯತೆಗಳ ಸರಿಯಾದ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ತಯಾರಿಸಲಾಗುತ್ತದೆ ಎಂದು ನಾವು ನಿಮಗೆ ಭರವಸೆ ನೀಡಲು ಬಯಸುತ್ತೇವೆ. ನಮ್ಮ ಉತ್ಪನ್ನಗಳ ಪೌಷ್ಟಿಕಾಂಶದ ಪ್ರೊಫೈಲ್ ಮತ್ತಷ್ಟು ಹೆಚ್ಚಿಸಲು ನಾವು, ನಮ್ಮ ಜಾಗತಿಕ ಸಂಶೋಧನೆ ಮತ್ತು ಅಭಿವೃದ್ಧಿ ನೆಟ್‌ವರ್ಕ್ ಅನ್ನು ನಿರಂತರವಾಗಿ ಬಳಸಿಕೊಳ್ಳುತ್ತೇವೆ ಎಂದು ಹೇಳಿದೆ.
ನೆಸ್ಲೆ ಇಂಡಿಯಾದ ವಕ್ತಾರು, "ಸೇರಿರುವ ಸಕ್ಕರೆಯನ್ನು ಕಡಿಮೆ ಮಾಡುವುದು ನೆಸ್ಲೆ ಇಂಡಿಯಾದ ಪ್ರಮುಖ ಗಮನವಾಗಿದೆ. ಕಳೆದ ಐದು ವರ್ಷಗಳಲ್ಲಿ ,ನಾವು ಈಗಾಗಲೇ ಉತ್ಪನ್ನ ರೂಪಾಂತರಗಳಲ್ಲಿ ಶೇಕಡಾ 30 ರಷ್ಟು ಸಕ್ಕರೆ ಕಡಿತವನ್ನು ಸಾಧಿಸಿದ್ದೇವೆ ಮತ್ತು ರುಚಿಯಲ್ಲಿ ರಾಜಿಮಾಡಿಕೊಳ್ಳದೆ ಸೇರಿಸಲಾದ ಸಕ್ಕರೆ ಮಟ್ಟವನ್ನು ಮತ್ತಷ್ಟು ಕಡಿಮೆ ಮಾಡಲು ನಮ್ಮ ಉತ್ಪನ್ನಗಳ ನಾವೀನ್ಯ ತೆಯನ್ನು ಮತ್ತು ಮರುರೂಪಿಸುವುದನ್ನು ಮುಂದುವರಿಸುತ್ತೇವೆ. ನಾವು ಸ್ರಕ್ಷತೆ ಮತ್ತು ಗುಣಮಟ್ಟದಲ್ಲಿ ಎಂದಿಗೂ ರಾಜಿಮಾಡಿಕೊಳ್ಳುವುದಿಲ್ಲ.
ಭಾರತದಲ್ಲಿ ತಯಾರಿಸಲಾದ ನಮ್ಮ ಉತ್ಪನ್ನಗಳು ಕೋಡೆಕ್ಸ್ ಮಾನದಂಡಗಳಿಗೆ (WHO ಮತ್ತು FAOಸ್ಥಾಪಿಸಿದಆಯೋಗ) ಮತ್ತು ಸ್ಥಳೀಯ ನಿಯಮಗಳನ್ನು ಸಂಪೂರ್ಣ ಮತ್ತು ಕಟ್ಟುನಿಟ್ಟಾಗಿ ಅನುಸರಣೆ ಮಾಡುತ್ತೇವೆ. ನಮ್ಮ ಗ್ರಾಹಕರಿಗೆ ಉತ್ತಮ ಪೋಷಣೆಯನ್ನು ತಲುಪಿಸಲು ನೆಸ್ಲೆ ಇಂಡಿಯಾ ಬದ್ಧವಾಗಿದೆ . ನಮ್ಮ ಉತ್ಪನ್ನಗಳನ್ನು ಸುಧಾರಿಸಲು ಪ್ರಯತ್ನವನ್ನು ಕಳೆದ 100 ವರ್ಷಗಳಿಂದ ಮಾಡಲಾಗುತ್ತಿದೆ ಮತ್ತು ಯಾವಾಗಲೂ ನಮ್ಮ ಉತ್ಪನ್ನಗಳು ಪೌಷ್ಟಿಕಾಂಶ, ಗುಣಮಟ್ಟ ಮತ್ತು ಸುರಕ್ಷತೆಯ ಉನ್ನತ ಗುಣಮಟ್ಟವನ್ನು ನಿರ್ವಹಿಸುತ್ತದೆ" ಎಂದು ಹೇಳಿದ್ದಾರೆ.
ವರದಿಯಲ್ಲಿ ಏನಿತ್ತು:
ಸ್ವಿಜರ್ಲೆಂಡ್ ಮೂಲದ "ಪಬ್ಲಿಕ್ ಐ ಆಂಡ್ ಇಂಟರ್ ನ್ಯಾಷನಲ್ ಬೇಬಿ ಫುಡ್ ಆಕ್ಷನ್ ನೆಟ್ ವರ್ಕ್" ಎಂಬ ಸರ್ಕಾರೇತ ಸಂಸ್ಥೆ ವಿವಿಧ ದೇಶಗಳಲ್ಲಿ ನೆಸ್ಲೆ ಸೆರ್ಲ್ಯಾಕ್ ಸೇರಿ ೧೫೦ ಮಕ್ಕಳ ಬಳಕೆಯ ಆಹಾರ ಉತ್ಪನ್ನ ಪರಿಶೀಲಿಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಆಹಾರ ಸುರಕ್ಷಾ ಕ್ರಮ ಕಟ್ಟುನಿಟ್ಟಾಗಿ ಪಾಲಿಸಿವ ಜರ್ಮನ್ , ಬ್ರಿಟನ್ ನಲ್ಲಿ ಮಾರಾಟ ಮಾಡಲಾಗುತ್ತಿರುವ ಗೋಧಿಯಿಂದ ತಯಾರಿಸಿದ ಸೆರಿಲ್ಯಾಕ್ ನಲ್ಲಿ ಸಕ್ಕರೆ ಅಂಶವಿಲ್ಲ ಆದರೆ ಭಾರತದಲ್ಲಿ ಪ್ರತಿ ಒಂದು ಬಾರಿ ಬಳಕೆಯಲ್ಲಿ 3 ಗ್ರಾಂ ನಷ್ಟು ಸಕ್ಕರೆ ಪತ್ತೆಯಾಗಿದೆ. ಇದು ಅಂತರಾಷ್ಟ್ರೀಯ ಮಾರ್ಗ ಸೂಚಿ ಪ್ರಮಾಣಕ್ಕಿಂತಲೂ ಅಧಿಕವಾಗಿದೆ. ಈ ಉಲ್ಲಂಘನೆ ಏಷ್ಯನ್, ಆಫ್ರಿಕನ್ ಮತ್ತು ಲ್ಯಾಟಿನ್ ಅಮೇರಿಕನ್ ದೇಶಗಳಲ್ಲಿಯೂ ಕಂಡುಬಂದಿದೆ.
ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು
ನೆಸ್ಲೆ ಇಂಡಿಯಾ ಮಕ್ಕಳ ಉತ್ಪನ್ನದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಸೇರಿಸುತ್ತಿರುವ ವರದಿ ಬಹಿರಂಗವಾಗುತ್ತಿದ್ದಂತೆ ಗುರುವಾರ ನೆಸ್ಲೆ ಇಂಡಿಯಾ ಷೇರುಗಳ ಮೌಲ್ಯ ಧೀಡಿರ್ ಕುಸಿತ ಕಂಡಿದೆ. ಷೇರುಗಳು ಶೇ. 5.4ರಷ್ಟು ಇಳಿಕೆ ಕಂಡು 2,409.55 ರೂ.ಗೆ ತಲುಪಿದ್ದು ಕಳೆದ 3 ವರ್ಷಗಳಲ್ಲೇ ಅತ್ಯಂತ ಗರಿಷ್ಠ ಇಳಿಕೆಯಾಗಿದೆ.
ಸ್ವಯಂಪ್ರೇರಿತವಾಗಿ ಕ್ರಮಕ್ಕೆ ಮುಂದಾದ ಸರ್ಕಾರ
ಭಾರತದಲ್ಲಿ ಮಾರಾಟವಾಗುವ ಶಿಶುಗಳ ಹಾಲಿಗೆ ನೆಸ್ಲೆ ಸಕ್ಕರೆಯನ್ನು ಸೇರಿಸಿದೆ ಎಂಬ ವರದಿಗಳ ಬಗ್ಗೆ ಭಾರತ ಸರ್ಕಾರವು ಸ್ವಯಂಪ್ರೇರಿತವಾಗಿ ಕ್ರಮ ಕೈಗೊಳ್ಳಲು ಮುಂದಾಗಿದೆ. "ನಾವು ನೆಸ್ಲೆಗೆ ಸಂಬಂಧಿಸಿದ ವರದಿಯನ್ನು ಗಮನಕ್ಕೆ ತೆಗೆದುಕೊಂಡಿದ್ದೇವೆ ಮತ್ತು ಸರಿಯಾಗಿ ಪರಿಶೀಲಿಸನೆ ಮಾಡಲಿದ್ದು ಈ ಬಗ್ಗೆ ತನಿಖೆ ಮಾಡುತ್ತೇವೆ" ಎಂದು ಉನ್ನತ ಸರ್ಕಾರಿ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.


Click it and Unblock the Notifications