ಗಮನಿಸಿ, ಆಧಾರ್ ಗೆ ಸಂಬಂಧಿತ ಹೊಸ ಆ್ಯಪ್ ಸರ್ಕಾರ ಬಿಡುಗಡೆ ಮಾಡಿದೆ. ಇನ್ಮುಂದೆ ಬಳಕೆದಾರರು ತಮ್ಮ ಆಧಾರ್ ಸಂಬಂಧಿತ ಮಾಹಿತಿಯನ್ನು ಪರಿಶೀಲಿಸಲು ಹೋದಲೆಲ್ಲಾ ಆಧಾರ್ ಕಾರ್ಡ್ ಕೊಂಡೊಯ್ಯಬೇಕು ಎನ್ನುವ ಅಗತ್ಯವಿಲ್ಲ ಅಂದರೆ ಯಾವುದೇ ಭೌತಿಕ ಕಾರ್ಡ್ ಅಥವಾ ಫೋಟೋ ಪ್ರತಿಯನ್ನು ಹೊಂದುವ ಅಗತ್ಯವಿಲ್ಲ. ಈ ಕುರಿತಂತೆ ಮಾಹಿತಿ ಮತ್ತು ತಂತ್ರಜ್ಞಾನ ಸಚಿವೆ ಅಶ್ವಿನಿ ವೈಷ್ಣವ್ ಅವರೇ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ ನಲ್ಲಿ ಈ ಬಗ್ಗೆ ಮಾಹಿತಿ ನೀಡುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಈ ಮೂಲಕ ಕೇಂದ್ರ ಸರ್ಕಾರ ಡಿಜಿಟಲ್ ಅನುಕೂಲತೆ ಮತ್ತು ಗೌಪ್ಯತೆಯತ್ತ ಒಂದು ಪ್ರಮುಖ ಹೆಜ್ಜೆ ಇಟ್ಟಿದ್ದು,ಇದು ಬಳಕೆದಾರರು ತಮ್ಮ ಆಧಾರ್ ವಿವರಗಳನ್ನು ಡಿಜಿಟಲ್ ರೂಪದಲ್ಲಿ ಪರಿಶೀಲಿಸಲು ಮತ್ತು ಹಂಚಿಕೊಳ್ಳಲು ಸಹಾಯ ಮಾಡಲಿದ್ದು ಇದರಿಂದ ಭೌತಿಕ ಕಾರ್ಡ್‌ಗಳನ್ನು ಕೊಂಡೊಯ್ಯುವ ಅಥವಾ ಜೆರಾಕ್ಸ್ ಪ್ರತಿಗಳನ್ನು ಸಲ್ಲಿಸುವ ಅಗತ್ಯವಿರುವುದಿಲ್ಲ.

ಆಪ್ ಬಿಡುಗಡೆ ವೇಳೆ ತಂತ್ರಜ್ಞಾನದ ಪ್ರಗತಿಯ ಮಹತ್ವವನ್ನು ವಿವರಿಸಿದ ಸಚಿವ ಅಶ್ವಿನ್ , ಈ ಅಪ್ಲಿಕೇಶನ್ ಆಧಾರ್ ಪರಿಶೀಲನೆಯನ್ನು ಇನ್ನಷ್ಟು ಸುಲಭ, ಕ್ಷಿಪ್ರ ಮತ್ತು ಸುರಕ್ಷಿತಗೊಳಿಸುವ ನಿಟ್ಟಿನಲ್ಲಿ ಒಂದು ಮಹತ್ವದ ಹೆಜ್ಜೆಯಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆಧಾರ್ ಪರಿಶೀಲನೆಯನ್ನು ಸುಲಭ, ವೇಗ ಮತ್ತು ಹೆಚ್ಚು ಸುರಕ್ಷಿತವಾಗಿಸುವ ಕ್ರಮವಾಗಿ ಈ ಅಪ್ಲಿಕೇಶನ್ ಬುಡಿಗಡೆಯಾಗಿ ಎಂದು ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಬಿಡುಗಡೆಯಾದ ವೀಡಿಯೊ ಈ ಅಪ್ಲಿಕೇಶನ್ ಮೂಲಕ ಫೇಸ್ ಐಡಿ ದೃಢೀಕರಣ ಸಾಧ್ಯವಾಗುತ್ತದೆ ಮತ್ತು ಬಳಕೆದಾರರ ಒಪ್ಪಿಗೆಯೊಂದಿಗೆ ಡೇಟಾವನ್ನು ಸುರಕ್ಷಿತ ರೀತಿಯಲ್ಲಿ ಹಂಚಿಕೊಳ್ಳಲಾಗುತ್ತದೆ ಎಂದು ತೋರಿಸುತ್ತದೆ. ಪ್ರಸ್ತುತ ಈ ಅಪ್ಲಿಕೇಶನ್ ಬೀಟಾ ಪರೀಕ್ಷಾ ಹಂತದಲ್ಲಿದ್ದು, ಆಧಾರ್ ಪರಿಶೀಲನೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದು ಬಳಕೆದಾರರ ಗೌಪ್ಯತೆಯನ್ನು ಹೆಚ್ಚಿಸುತ್ತದೆ ಮತ್ತು ಆಧಾರ್ ದುರುಪಯೋಗವನ್ನು ತಡೆಯುತ್ತದೆ.
ಹೊಸ ಆಧಾರ್ ಆಪ್ಲಿಕೇಶನ್ ವೈಶಿಷ್ಟ್ಯಗಳೇನು?
- ತಮ್ಮ ವೈಯಕ್ತಿಕ ಮಾಹಿತಿಯ ಮೇಲೆ ನಿಯಂತ್ರಣ ಸಾಧಿಸುವ ಅವಕಾಶವನ್ನು ಬಳಕೆದಾರರಿಗೆ ನೀಡಲಾಗಿದ್ದು, ಅವರು ಹಂಚಿಕೊಳ್ಳಲು ಬಯಸುವ ಡೇಟಾವನ್ನು ಮಾತ್ರ ಆಯ್ಕೆ ಮಾಡಬಹುದು. ಹೀಗಾಗಿ ಬಳಕೆದಾರರ ವೈಯಕ್ತಿಕ ಮಾಹಿತಿಯು ಸುರಕ್ಷಿತವಾಗಿ ಉಳಿಯುತ್ತದೆ.
- ಯುಪಿಐ ಪಾವತಿಯಲ್ಲಿ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದಂತೆಯೇ, ಆಧಾರ್ ಪರಿಶೀಲನೆಯ ಪ್ರಕ್ರಿಯೆಯೂ ಈಗ ಅಷ್ಟೇ ಸರಳವಾಗಲಿದೆ.
- ಇನ್ಮುಂದೆ ಆಧಾರ್‌ನ ಫೋಟೋಕಾಪಿ, ಜೆರಾಕ್ಸ್ ಪ್ರತಿ ಅಥವಾ ಸ್ಕ್ಯಾನ್ ಮಾಡುವ ಅಗತ್ಯವಿಲ್ಲ, ಎಲ್ಲವನ್ನೂ ಅಪ್ಲಿಕೇಶನ್ ಮೂಲಕವೇ ಮಾಡಲಾಗುತ್ತದೆ.
- ಭದ್ರತೆಯನ್ನು ಇನ್ನಷ್ಟು ಉತ್ತಮಗೊಳಿಸಲು, ಹೊಸ ಮೊಬೈಲ್ ಅಪ್ಲಿಕೇಶನ್ ಫೇಸ್ ರೆಕಗ್ನಿಷನ್ ಮೂಲಕ ಲಾಗಿನ್ ಆಗಲು ಮತ್ತು ಗುರುತನ್ನು ಖಚಿತಪಡಿಸಿಕೊಳ್ಳುವ ಹೊಸ ವೈಶಿಷ್ಟ್ಯವನ್ನು ಇದು ಹೊಂದಿದೆ.
- ಆಧಾರ್ ಮಾಹಿತಿಯನ್ನು ತಿರುಚುವುದು ಅಥವಾ ಯಾವುದೇ ರೀತಿಯ ವಂಚನೆ ಈಗ ಸಾಧ್ಯವಾಗುವುದಿಲ್ಲ.
- ಈ ಅಪ್ಲಿಕೇಶನ್ ಆಧಾರ್ ಸಂಬಂಧಿತ ದತ್ತಾಂಶಗಳ ದುರುಪಯೋಗ ಮತ್ತು ಸೋರಿಕೆಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದ್ದು, ಅಪಾಯವನ್ನು ಕಡಿಮೆ ಮಾಡುತ್ತದೆ
- ಈಗ ಹೋಟೆಲ್‌ಗಳು, ಪ್ರಯಾಣ ಚೆಕ್‌ಪೋಸ್ಟ್‌ಗಳಲ್ಲಿಇತ್ಯಾದಿಗಳನ್ನು ಆಧಾರ್ ಪ್ರತಿಯನ್ನು ಒದಗಿಸುವ ಅಗತ್ಯವಿಲ್ಲ.
- ಶೇ 100ರಷ್ಟು ಡಿಜಿಟಲ್ ವ್ಯವಸ್ಥೆಯಾಗಿರುವುದರಿಂದ ನಿಮ್ಮ ಗುರುತಿನ ಯಾವುದೇ ಮಾಹಿತಿಯು ಸೋರಿಕೆಯಾಗದಂತೆ ಅತ್ಯಂತ ಸುರಕ್ಷಿತವಾಗಿ ಕಾಪಾಡಲಾಗುತ್ತದೆ.
- ಪ್ರಸ್ತುತ ಬೀಟಾ ಪರೀಕ್ಷಾ ಹಂತದಲ್ಲಿರುವ ಈ ಅಪ್ಲಿಕೇಶನ್ ಅನ್ನು ಬಲವಾದ ಗೌಪ್ಯತೆ ಸುರಕ್ಷತೆಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.


Click it and Unblock the Notifications