Metro-Bus Stop: ಯೆಲ್ಲೋ ಲೈನ್‌ ಮೆಟ್ರೋ ಬಳಿ ಹೊಸ ಬಸ್‌ ನಿಲ್ದಾಣ! ಪ್ರಯಾಣಿಕರಿಗೆ ಗುಡ್‌ ನ್ಯೂಸ್

ಬೆಂಗಳೂರು: ನಮ್ಮ ಮೆಟ್ರೋ ಬೆಂಗಳೂರಿನ (Bengaluru) ಪ್ರಮುಖ ಸಾರಿಗೆ ವ್ಯವಸ್ಥೆಗಳಲ್ಲಿ ಒಂದಾಗಿದೆ. ಅತ್ತ ಯಾವುದೇ ಸ್ಥಳವನ್ನು ವೇಗದಲ್ಲಿ ತಲುಪಲು ಸಹಕಾರಿಯಾಗುವ ಸೇವೆಗಳಲ್ಲಿ ಮೆಟ್ರೋ ಸೇವೆ ಕೂಡಾ ಒಂದು. ಈಗಾಗಲೇ ಬೆಂಗಳೂರಿನ ಬಹುತೇಕ ನಗರಗಳಲ್ಲಿ ವಿಸ್ತರಿಸುವ ಮೆಟ್ರೋ ಸೇವೆ, ಈ ವರ್ಷ ಹಳದಿ ಮೆಟ್ರೋ ಲೈನ್‌ (Yellow Line Metro) ಕೂಡಾ ಆರಂಭವಾಗಿದೆ. ಆಗಸ್ಟ್‌ನಲ್ಲಿ ಆರಂಭವಾದ ಯೆಲ್ಲೋ ಮೆಟ್ರೋ ಲೈನ್‌, ಪ್ರಸ್ತುತ 5 ಮೆಟ್ರೋ ರೈಲುಗಳು ಸೇವೆ ಸಲ್ಲಿಸುತ್ತಿದೆ. ಬೆಂಗಳೂರು ಮೆಟ್ರೋ ಪ್ರಯಾಣಿಕರಿಗೆ ಬಿಎಂಆರ್‌ಸಿಎಲ್‌ (BMRCL) ಗುಡ್‌ ನ್ಯೂಸ್‌ ಕೊಟ್ಟಿದೆ. ಅದೇನೆಂದು ಇಲ್ಲಿದೆ ಓದಿ.

ಯೆಲ್ಲೋ ಲೈನ್‌ ಮೆಟ್ರೋ ಬಳಿ ಹೊಸ ಬಸ್‌ ನಿಲ್ದಾಣ! ಎಲ್ಲೆಲ್ಲಿ?

ಮೆಟ್ರೋ ನಿಲ್ದಾಣಕ್ಕೆ ಹೊಸ ಬಸ್‌ ಸ್ಟ್ಯಾಂಡ್‌!
ಬೆಂಗಳೂರಿನ ಹಳದಿ ಮೆಟ್ರೋ ಮಾರ್ಗದಲ್ಲಿ (ಆರ್‌ವಿ ರಸ್ತೆ-ಬೊಮ್ಮಸಂದ್ರ ಡೆಲ್ಟಾ ಎಲೆಕ್ಟ್ರಾನಿಕ್ಸ್‌ವರೆಗೆ) ಕೊನೆಯ ಮೈಲಿ ಸಂಪರ್ಕವನ್ನು ಸುಧಾರಿಸಲು, ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಸಹಯೋಗದಲ್ಲಿ ಮಹತ್ವದ ನಿರ್ಧಾರಕ್ಕೆ ಮುಂದಾಗಿದೆ. ಇದೀಗ ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಬಸ್ ನಿಲ್ದಾಣಗಳನ್ನು ಆರಂಭಿಸಿವೆ. ಬಯೋಕಾನ್ ಹೆಬ್ಬಗೋಡಿ, ಬೆರೆಟೇನ ಅಗ್ರಹಾರ, ಸಿಂಗಸಂದ್ರ, ಹಾಂಗಸಂದ್ರ, ಸೆಂಟ್ರಲ್ ಸಿಲ್ಕ್ ಬೋರ್ಡ್ ಹಾಗೂ ಆರ್‌ವಿ ರಸ್ತೆ ನಿಲ್ದಾಣಗಳಲ್ಲಿ ಹೊಸ ಬಸ್ ನಿಲ್ದಾಣಗಳು ಕಾರ್ಯಾರಂಭ ಮಾಡಿವೆ. ಇದು ಮೆಟ್ರೋ ಹಾಗೂ ಬಸ್ ಸೇವೆಗಳ ನಡುವೆ ಸುಗಮ ಸೇವೆಗೆ ಸಹಕಾರಿಯಾಗಲಿದೆ ಎಂದು BMRCL ತಿಳಿಸಿದೆ.

ಇದಲ್ಲದೆ, ಎಲೆಕ್ಟ್ರಾನಿಕ್ಸ್ ಸಿಟಿ, ಹೊಸ ರಸ್ತೆ ಮತ್ತು ರಾಗಿಗುಡ್ಡ ಮೆಟ್ರೋ ನಿಲ್ದಾಣಗಳ ಬಳಿಯಿದ್ದ ಬಸ್ ನಿಲ್ದಾಣಗಳನ್ನು ನಿಗಮವು ಆಯಾ ಮೆಟ್ರೋ ನಿಲ್ದಾಣಗಳಿಗೆ ಇನ್ನಷ್ಟು ಹತ್ತಿರಕ್ಕೆ ಸ್ಥಳಾಂತರಿಸಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಈ ಕ್ರಮವು ಪ್ರಯಾಣಿಕರ ನಡೆದಾಡುವ ದೂರವನ್ನು ಕಡಿಮೆ ಮಾಡಿ, ಮೆಟ್ರೋ ನಿಲ್ದಾಣಗಳಿಗೆ ಮತ್ತಷ್ಟು ಹತ್ತಿರವಾಗಲಿದೆ.

100 ಮೀಟರ್‌ ಅಂತರದಲ್ಲಿ ಬಸ್‌ ನಿಲ್ದಾಣಗಳು
ಈಗಾಗಲೇ ಜಯದೇವ ಆಸ್ಪತ್ರೆ, ಬಿಟಿಎಂ ಲೇಔಟ್‌, ಬೊಮ್ಮನಹಳ್ಳಿ, ಕೂಡ್ಲುಗೇಟ್‌ ಹಾಗೂ ಇನ್ಫೋಸಿಸ್‌ ಫೌಂಡೇಶನ್‌, ಕೊನ್ನಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಗಳ ಪಕ್ಕದೇ ಬಸ್‌ ನಿಲ್ದಾಣಗಳು ಲಭ್ಯವಿದೆ.

ಯೆಲ್ಲೋ ಲೈನ್‌ಗೆ ಬಂತು 6ನೇ ರೈಲು
ಈಗಾಗಲೇ ಯೆಲ್ಲೋ ಮೆಟ್ರೋ ಲೈನ್‌ನಲ್ಲಿ 5 ರೈಲುಗಳು ಕಾರ್ಯ ನಿರ್ವಹಿಸುತ್ತಿದೆ. ಇದೀಗ ಆರನೇ ರೈಲಿನ ಆಗಮನವಾಗಿದ್ದು, ಡಿಸೆಂಬರ್‌ 22 ರಿಂದ ಕಾರ್ಯಾಚರಣೆ ಆರಂಭಿಸಲಿದೆ ಎಂದು ವರದಿಯಾಗಿದೆ, ಸದ್ಯ 15 ನಿಮಿಷಕ್ಕೊಮ್ಮೆ ಕಾರ್ಯ ನಿರ್ವಹಿಸುತ್ತಿರುವ ಯೆಲ್ಲೋ ಲೈನ್‌ ಮೆಟ್ರೋ, ಆರನೇ ರೈಲು ಬಂದ ನಂತರ 12 ನಿಮಿಷಕ್ಕೊಮ್ಮೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ವರದಿಯಾಗಿದೆ.

ಇನ್ನು ಹೊಸ ರೈಲಿನ ಕೋಚ್‌ಗಳನ್ನು ಕೊಲ್ಕತ್ತಾ ಬಳಿ ಇರುವ ಟಿಟಾಗರ್‌ ರೈಲ್‌ ಸಿಸ್ಟಮ್ಸ್‌ ಲಿಮಿಟೆಡ್‌ ತಯಾರಿಸಿದೆ. ಚೀನಾದ ಸಿಆರ್‌ಆರ್‌ಸಿ ನಾನ್‌ಜಿಂಗ್‌ ಪೂಝೆನ್‌ ಸಂಸ್ಥೆಯು 36 ರೈಲು ಸೆಟ್‌ಗಳನ್ನು 1,578 ಕೋಟಿ ವೆಚ್ಚದಲ್ಲಿ ಸಿದ್ದವಾಗುತ್ತಿದೆ. ಸದ್ಯ ಈ ರೈಲುಗಳನ್ನು ಕಾರ್ಯಾಚರಣೆ ನಡೆಸಲಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ರೈಲುಗಳ ಆಗಮನವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+