ವಾಹನ ಚಾಲಕ ಹಾಗೂ ಮಾಲಕರೇ ಗಮನಿಸಿ ಇಂದಿನಿಂದ ಹೊಸ ಫಾಸ್ಟ್ ಟ್ಯಾಗ್ ನಿಯಮಗಳು ಜಾರಿಗೆ ಬರಲಿದೆ. ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಫೆಬ್ರವರಿ 17ರಿಂದ ಹೊಸ ಫಾಸ್ಟ್ಟ್ಯಾಗ್ ನಿಯಮಗಳನ್ನು ಪರಿಚಯಿಸಲಿದ್ದು ಈ ಬದಲಾವಣೆಗಳು ದೇಶದಾದ್ಯಂತ ಟೋಲ್ ಪಾವತಿಯ ದಕ್ಷತೆಯನ್ನು ಸುಧಾರಿಸುವ ಮತ್ತು ವಂಚನೆಯನ್ನು ಕಡಿಮೆ ಮಾಡುವ ಮೂಲಕ ವಹಿವಾಟು ಸುಗಮಗೊಳಿಸ್ವ ಗುರಿಯನ್ನು ಹೊಂದಿವೆ.
ಟೋಲ್ ವಹಿವಾಟುಗಳನ್ನು ಸುಗಮಗೊಳಿಸುವ ಗುರಿಯನ್ನು ಹೊಂದಿರುವ ಫಾಸ್ಟ್ ಟ್ಯಾಗ್ ಗಾಗಿ ಹಲವಾರು ಹೊಸ ನಿಯಮಗಳನ್ನು ಜಾರಿಗೆ ತಂದಿದ್ದು ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

FASTag ನಿಯಮಗಳಲ್ಲಿನ ಪ್ರಮುಖ ಬದಲಾವಣೆ
ಬ್ಲಾಕ್ ಲಿಸ್ಟ್ FASTags
ಬ್ಲಾಕ್ ಲಿಸ್ಟ್(Blacklisted) ಗೆ ಸೇರಿಸಲಾದ FASTagಗಳಿದ್ದರೆ ಟೋಲ್ ಪಾವತಿಗಳು ತಿರಸ್ಕರಿಸಲ್ಪಡುತ್ತವೆ. ಅಂದರೆ FASTag ಅನ್ನು ಸ್ಕ್ಯಾನ್ ಮಾಡುವಾಗ ಅದು ಕಪ್ಪುಪಟ್ಟಿಯಲ್ಲಿದ್ದರೆ ಪಾವತಿ ಆಗುವುದಿಲ್ಲ. ಅಲ್ಲದೆ, ಟೋಲ್ ತಲುಪುವ ಕನಿಷ್ಠ 10 ನಿಮಿಷಗಳ ಮೊದಲು FASTag ಕಪ್ಪುಪಟ್ಟಿಗೆ ಸೇರಿಸಲ್ಪಟ್ಟಿದ್ದರೂ ಸಹ ಪಾವತಿಯನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ.
ಗ್ರೇಸ್ ಅವಧಿ: ಟೋಲ್ ಬೂತ್ಗಳನ್ನು ದಾಟುವ ಮೊದಲು ಬಳಕೆದಾರರು ತಮ್ಮ ಫಾಸ್ಟ್ಟ್ಯಾಗ್ ಸ್ಥಿತಿಯನ್ನು ಸರಿಪಡಿಸಿಕೊಳ್ಳಲು ಈಗ 70 ನಿಮಿಷಗಳ ಗ್ರೇಸ್ ಅವಧಿಯನ್ನು ಪಡೆಯುತ್ತಾರೆ. ಅಂದರೆ ಟೋಲ್ ದಾಟುವ 70 ನಿಮಿಷ ಮೊದಲು ಫಾಸ್ಟ್ ಟ್ಯಾಗ್ ಸಕ್ರಿಯ ಮಾಡಲು ಸಮಯಾವಕಾಶ ನೀಡಲಾಗಿದೆ.
ಬ್ಲಾಕ್ ಲಿಸ್ಟ್ ಸೇರ್ಪಡೆಯ ಪರಿಣಾಮ: ಟೋಲ್ ತಲುಪಿದ ನಂತರ FASTag ಕಪ್ಪುಪಟ್ಟಿಗೆ ಸೇರಿಸಲ್ಪಟ್ಟರೆ, ಬಳಕೆದಾರರು ಈಗ ಟೋಲ್ ಶುಲ್ಕದ ದುಪ್ಪಟ್ಟು ಪಾವತಿಸಬೇಕಾಗುತ್ತದೆ. ಆದರೆ ಟ್ಯಾಗ್ ಸ್ಕ್ಯಾನಿಂಗ್ ಮಾಡಿದ 10 ನಿಮಿಷಗಳಲ್ಲಿ ರೀಚಾರ್ಜ್ ಮಾಡಿದರೆ, ದಂಡ ಮರುಪಾವತಿಯನ್ನು ಕೋರಬಹುದು.
ಹಣ ಪಾವತಿಯಲ್ಲಿ ವಿಳಂಬ: ಟೋಲ್ ರೀಡರ್ ನಲ್ಲಿ ವಾಹನ ಹಾದುಹೋದ ಮೇಲೆ, ಟೋಲ್ ನಲ್ಲಿ ಹಣ ಪಾವತಿ 15 ನಿಮಿಷಕ್ಕಿಂತ ವಿಳಂಬ ಆದರೆ ಫಾಸ್ಟ್ ಟ್ಯಾಗ್ ಬಳಕೆದಾರ ಹೆಚ್ಚುವರಿ ಶುಲ್ಕ ಪಾವತಿಸಬೇಕಾಗಬಹುದು.
ಹೆಚ್ಚುವರಿ ಶುಲ್ಕ ವಾಪಸಾತಿ: ಫಾಸ್ಟ್ ಟ್ಯಾಕ್ ಬ್ಲಾಕ್ ಲಿಸ್ಟ್ ನಲ್ಲಿದ್ದು, ಅಥವಾ ಕಡಿಮೆ ಬ್ಯಾಲೆನ್ಸ್ ಹೊಂದಿದ್ದು FASTagಗಳಿಂದಾಗಿ ಒಂದು ವೇಳೆ ತಪ್ಪಾಗಿ ಹಣ ಕಡಿತಗೊಂಡಿದ್ದರೆ, ಬ್ಯಾಂಕುಗಳೆಗೆ 15 ದಿನಗಳ ಬಳಿಕ ಮಾತ್ರ ಹೆಚ್ಚುವರಿ ಶುಲ್ಕ ವಾಪಸಾತಿ ವಿನಂತಿಯನ್ನು ಸಲ್ಲಿಸಬಹುದು.
ನಷ್ಟಕ್ಕೆ ಟೋಲ್ ಆಪರೇಟರ್ ಜವಾಬ್ದಾರ: ಸಾಕಷ್ಟು ಬ್ಯಾಲೆನ್ಸ್ ಇಲ್ಲದ ಕಾರಣ ವಹಿವಾಟು ವಿಳಂಬವಾದರೆ ಮತ್ತು ಪಾವತಿಸದಿದ್ದರೆ, ಬಳಕೆದಾರರಲ್ಲ, ಟೋಲ್ ಆಪರೇಟರ್ ನಷ್ಟಕ್ಕೆ ಜವಾಬ್ದಾರರಾಗಿರುತ್ತಾರೆ.
ಫಾಸ್ಟ್ ಟ್ಯಾಗ್ ಹೊಸ ನಿಯಮ: ದಂಡದಿಂದ ಪಾರಾಗುವುದು ಹೇಗೆ
* ಹೊಸ FASTag ನಿಯಮಗಳ ಸಮಸ್ಯೆಗಳನ್ನು ತಪ್ಪಿಸಲು, ಬಳಕೆದಾರರು ನಿಮ್ಮ FASTag ವ್ಯಾಲೆಟ್ನಲ್ಲಿ ಸಾಕಷ್ಟು ಬ್ಯಾಲೆನ್ಸ್ ಅನ್ನು ಕಾಪಾಡಿಕೊಳ್ಳಿ.
* ನಿಮ್ಮ FASTag ಸಕ್ರಿಯವಾಗಿದೆಯೇ ಮತ್ತು ಕಪ್ಪುಪಟ್ಟಿಗೆ ಸೇರಿಸಲಾಗಿಲ್ಲವೇ ಎಂದು ಪರಿಶೀಲಿಸಿ.
* ಟೋಲ್ ಕಡಿತಗಳಲ್ಲಿ ಯಾವುದೇ ವಿಳಂಬವನ್ನು ಗುರುತಿಸಲು ವಹಿವಾಟಿನ ಸಮಯವನ್ನು ಮೇಲ್ವಿಚಾರಣೆ ಮಾಡಿ
ಏನಿದು ಫಾಸ್ಟ್ ಟ್ಯಾಗ್?
ಟೋಲ್ ಪ್ಲಾಜಾಗಳಲ್ಲಿ ಉಂಟಾಗುವ ಟ್ರಾಫಿಕ್ ಜಾಮ್ ಸಮಸ್ಯೆ ತಡೆಗಟ್ಟಲು ಕೇಂದ್ರ ಸರ್ಕಾರ ಫಾಸ್ಟ್ ಟ್ಯಾಗ್ ಸೌಲಭ್ಯ ಜಾರಿಗೆ ತಂದಿದೆ. ಇದು ಪ್ರಿಪೇಯ್ಡ್ ಟ್ಯಾಗ್ ಸೌಲಭ್ಯವಾಗಿದ್ದು, ಈ ಟ್ಯಾಗ್ ಅನ್ನು ಮುಂದಿನ ಗಾಜಿಗೆ ಅಂಟಿಸಲಾಗುತ್ತದೆ. ಇದರಿಂದ ಟೋಲ್ ಶುಲ್ಕವನ್ನು ನಗದು ರಹಿತವಾಗಿ ಹಾಗೂ ತ್ವರಿತವಾಗಿ ಪಾವತಿಸಬಹುದು. ಟ್ಯಾಗ ರೀಡ್ ಆಗುವ ಮೂಲಕ ಟೋಲ್ ಶುಲ್ಕ ಸ್ವಯಂಚಾಲಿತವಾಗಿ ಕಡಿತವಾಗುತ್ತದೆ. ಫಾಸ್ಟ್ ಟ್ಯಾಗನ್ನು ವಾಹನದ ನೋಂದಣಿ ಸಂಖ್ಯೆಗೆ ಜೋಡಿಸಲಾಗಿರುತ್ತದೆ.


Click it and Unblock the Notifications