ಬೆಂಗಳೂರು ಟ್ರಾಫಿಕ್ ಸಮಸ್ಯೆ (Bengaluru Traffic) ಬಗ್ಗೆ ಹೇಳೋದೆ ಬೇಡ. ಇನ್ನು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆಯೇ ಜನರಿಗೆ ದೊಡ್ಡ ತಲೆನೋವಾಗಿಬಿಟ್ಟಿದೆ. ಇನ್ನು ಗಂಟೆಗೆ 10 ರಂತೆ ಟ್ರಾಫಿಕ್ ಸಿಗ್ನಲ್‌ಗಳು ಬೀಳುತ್ತಲೇ ಇರುತ್ತದೆ. ಆದ್ರೆ ಇದೀಗ ಬೆಂಗಳೂರು ಈ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ ದೃಷ್ಟಿಯಿಂದ ಹೊಸ ತಂತ್ರಜ್ಞಾನವೊಂದನ್ನು (New Technology) ತಂದಿದೆ.

ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಹೊಸ ತಂತ್ರಜ್ಞಾನವೊಂದು ಬಿಡುಗಡೆ ಮಾಡಲಾಗಿದೆ. ಹೌದು, ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವ ದೃಷ್ಟಿಯಿಂದ, Mappls ಎಂಬ ಹೊಸ ಆ್ಯಪ್‌ವೊಂದನ್ನು ಪರಿಚಯಿಸಿದೆ. ಈ ಆ್ಯಪ್‌ನಲ್ಲಿ ಟ್ರಾಫಿಕ್ ಸಿಗ್ನಲ್ ಕೌಂಟ್‌ಡೌನ್ ವೈಶಿಷ್ಟ್ಯವನ್ನು ಪ್ರಾರಂಭಿಸಲಾಗಿದೆ.
ಭಾರತದಲ್ಲೇ ಮೊದಲು
ಇನ್ನು ಈ ಹೊಸ ಆ್ಯಪ್ ಅನ್ನು ಭಾರತದಲ್ಲಿಯೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆರಂಭಿಸಲಾಗಿದೆ. ಈ ಫೀಚರ್ ಮೂಲಕ ಚಾಲಕರು ಇನ್ಮೇಲೆ ಸಿಗ್ನಲ್ ಬದಲಾಗಲು ಎಷ್ಟು ಸಮಯವಿದೆ ಎಂಬುದನ್ನು ಲೈವ್ ಆಗಿ ತೋರಿಸುತ್ತದೆ, ಇದು ಪ್ರಯಾಣಿಕರಿಗೆ ಬಹಳ ಸಹಾಯಕವಾಗಲಿದೆ.
ಅಕ್ಟೋಬರ್ 12, 2025 ರಂದು ಬೆಂಗಳೂರಿನಲ್ಲಿ ಈ ಆ್ಯಪ್ ಅನ್ನು ಲಾಂಚ್ ಮಾಡಲಾಗಿದೆ. ಇದು ಬೆಂಗಳೂರಿನಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಈ ಮೂಲಕ ಇನ್ಮೇಲೆ ನಗರದ ಸಂಚಾರ ನಿರ್ವಹಣೆ ಮತ್ತು ಚಾಲಕರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಗಮನಾರ್ಹವಾಗಿ ಸುಧಾರಿಸುವ ಗುರಿ ಹೊಂದಿದೆ. ಸ್ಥಳೀಯ ಅಧಿಕಾರಿಗಳ ಸಹಾಯದಿಂದ, ಟ್ರಾಫಿಕ್ ಪೊಲೀಸರ ಸಹಕಾರದೊಂದಿಗೆ ಸದ್ಯ ಬೆಂಗಳೂರಿನಲ್ಲಿ ಮಾತ್ರ ಈ ತಂತ್ರಜ್ಞಾನವನ್ನು ಅಳವಡಿಸಿದ್ದು, ಇದು ಯಶಸ್ವಿಯಾದ್ರೆ, ಮುಂದಿನ ದಿನಗಳಲ್ಲಿ ಬೇರೆ ನಗರಗಳಲ್ಲೂ ವಿಸ್ತರಿಸಲಾಗುತ್ತದೆ ಎಂದು ಹೇಳಲಾಗಿದೆ.
ಚಾಲಕರ ಅನುಕೂಲಕ್ಕೆ ಹೊಸ ಆ್ಯಪ್
ಬೆಂಗಳೂರು ನಗರ ಸಂಚಾರ ಪೊಲೀಸ್, ಆರ್ಕಾಡಿಸ್ ಇಂಡಿಯಾ, ಮತ್ತು Mappls (MapmyIndia ನಿಂದ ನಡೆಸಲ್ಪಡುವ) ತಾಂತ್ರಿಕ ತಂಡಗಳ ಸಹಯೋಗದೊಂದಿಗೆ ಈ ಆ್ಯಪ್ ಅನ್ನು ಲಾಂಚ್ ಮಾಡಲಾಗಿದೆ. ಆದ್ರೆ ಮುಂದಿನ ದಿನಗಳಲ್ಲಿ ಈ ಎಲ್ಲಾ ನಗರಗಳಲ್ಲಿ ಅಳವಡಿಸುವ ನಿರೀಕ್ಷೆಯಿದೆ. ಇನ್ನು ಈ ಆ್ಯಪ್ ಬಳಸಿಕೊಂಡು ಬಳಕೆದಾರರು ಟ್ರಾಫಿಕ್ ಸಿಗ್ನಲ್ ಹತ್ತಿರ ಬಂದಾಗ, ಇನ್ನೆಷ್ಟು ಸೆಕೆಂಡುಗಳಲ್ಲಿ ಸಿಗ್ನಲ್ ಚೇಂಜ್ ಆಗುತ್ತದೆ ಎಂದು ಕ್ಷಣಮಾತ್ರದಲ್ಲಿ ತಿಳಿಯಬಹುದು.
ಬೆಂಗಳೂರಿನ ಸಮಸ್ಯೆಗೆ ಹೊಸ ಪರಿಹಾರ
ಬೆಂಗಳೂರು ಅಂದ್ರೆ ಸಾಕು ಹೆಚ್ಚಿನವರು ಯೋಚಿಸೋದೆ ಅಲ್ಲಿನ ಟ್ರಾಫಿಕ್ ಸಮಸ್ಯೆ. ಇದೇ ಕಾರಣದಿಂದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಹೊಸ ಟೆಕ್ನಾಲಜಿಯನ್ನು ಜಾರಿಗೆ ತಂದಿದೆ. ಒಂದು ವೇಳೆ ಇದು ಯಶಸ್ವಿಯಾದರೆ, ಮುಂಬರುವ ತಿಂಗಳುಗಳಲ್ಲಿ ಇತರ ಮೆಟ್ರೋ ನಗರಗಳಲ್ಲಿಯೂ ಈ ಆಪ್ ಲಾಂಚ್ ಆಗಲಿದೆ.
ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆ
ಇನ್ನು ಆಪ್ ಲಾಂಚ್ ಬಗ್ಗೆ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಸೋಷಿಯಲ್ ಮೀಡಿಯಾ ಬಳಕೆದಾರರು ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಅದರಲ್ಲೊಬ್ಬರಿ ಇದು ಹೇಗೆ ವರ್ಕ್ ಆಗುತ್ತೆ ಎಂದು ಕೇಳಿದ್ದಾರೆ. ಅದಕ್ಕೊಬ್ಬರು, "ನೀವು 500 ಮೀಟರ್ ದೂರದಲ್ಲಿರುವಾಗ, ಟ್ರಾಫಿಕ್ ಲೈಟ್ ಚೇಂಜ್ ಆಗಲು ಎಷ್ಟು ಸಮಯವಿದೆ ಎಂದು ನಿಮಗೆ ತಿಳಿಯುತ್ತದೆ." ಎಂದು ಹೇಳಿದ್ದಾರೆ.


Click it and Unblock the Notifications