ಬರೋಬ್ಬರಿ ಒಂದು ಎಕ್ರೆಯಲ್ಲಿ ಹೊಸೂರು ರಸ್ತೆಯಲ್ಲಿ ತಲೆ ಎತ್ತಲಿದೆ ರಾಮೇಶ್ವರಂ ಕೆಫೆ: ಹೊಟೇಲ್ ಅಷ್ಟೇ ಅಲ್ಲ.!

ದಕ್ಷಿಣ ಭಾರತದ ಪ್ರಮುಖ ಹೋಟೆಲ್‌ಗಳಲ್ಲಿ ಒಂದಾಗಿರುವ ರಾಮೇಶ್ವರಂ ಕೆಫೆ ಹೊಸ ಹೆಜ್ಜೆ ಇರಿಸಿದೆ. ತನ್ನ ರುಚಿಕರ, ವೈವಿಧ್ಯಮಯ ತಿಂಡಿ ತಿನಿಸುಗಳಿಂದ ಆಹಾರ ಪ್ರಿಯರನ್ನು ತನ್ನತ್ತ ಸೆಳೆಯುತ್ತಿರುವ ರಾಮೇಶ್ವರಂ ಕೆಫೆ ಹೆದ್ದಾರಿ ಬಳಿ ತನ್ನ ಶಾಖೆಯೊಂದು ತೆರೆಯಲಿದೆ. ಹಾಗೆಂದು ಇದು ಈ ಹಿಂದಿನ ರಾಮೇಶ್ವರಂ ಕೆಫೆಯಂತೆ ಇರುವುದಿಲ್ಲ. ಹೊಸೂರು ರಸ್ತೆಯ ಬಳಿ ತೆರೆಯಲಿರುವ ಈ ಕೆಫೆಯು ತನ್ನದೇ ಆದ ಬೃಹತ್ ಯೋಜನೆಯನ್ನು ಹೊಂದಿದೆ.

ಇನ್ನು ರಾಮೇಶ್ವರಂ ಕೆಫೆ ಜನಪ್ರಿಯತೆಯು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇನ್ನು ಕೆಲವರು ಇದನ್ನು "ಅತಿಯಾದ ಪ್ರಚಾರ" ಮತ್ತು "ಅತಿಯಾದ ತುಪ್ಪದ ಆಹಾರ" ಎಂದು ಟ್ರೋಲ್ ಮಾಡುವವರು ಇದ್ದಾರೆ . ಅದರೂ ಇದರ ಗ್ರಾಹಕರ ಸಂಖ್ಯೆ ಹೆಚ್ಚುತ್ತಲೇ ಇದೆ. ಕಳೆದ ಕೆಲ ತಿಂಗಳ ಹಿಂದೆ ರಾಮೇಶ್ವರಂ ಕೆಫೆ ರಾಷ್ಟ್ರಮಟ್ಟದಲ್ಲಿ ಪ್ರಚಾರ ಪಡೆದಿದ್ದು ಇದಕ್ಕೆ ಕಾರಣ ಬಾಂಬ್ ಸ್ಪೋಟ.

ಹೊಸೂರು ರಸ್ತೆಯ ರಾಮೇಶ್ವರಂ ಕೆಫೆಯಲ್ಲಿ ಹತ್ತು ಹಲವು ವಿಶೇಷ.!

ಮೆಕ್ಯಾನಿಕಲ್ ಇಂಜಿನಿಯರ್ ರಾಘವೇಂದ್ರ ರಾವ್ ಮತ್ತು ಐಐಎಂ-ಅಹಮದಾಬಾದ್ ಪದವೀಧರೆ ದಿವ್ಯಾ ರಾವ್ ದಂಪತಿಗಳ ಮಾಲೀಕತ್ವದ ಬೆಂಗಳೂರಿನ ಕುಂದಲಹಳ್ಳಿಯ ರಾಮೇಶ್ವರಂ ಕೆಫೆಯಲ್ಲಿ ಉಗ್ರರು ಸ್ಪೋಟ ನಡೆಸಿದ್ದರು. ಈ ಘಟನೆಯಲ್ಲಿ ಒಂಬತ್ತು ಜನ ಗಾಯಗೊಂಡಿದ್ದರು. ತೀವ್ರಶೋಧದ ಬಳಿಕ ಎನ್‌ಐಎ ಉಗ್ರರನ್ನು ಬಂಧಿಸಿತ್ತು. ಆ ಸ್ಫೋಟದ ಭಯಾನಕ ಘಟನೆ ನಮಗೆ ಬಹುದೊಡ್ಡ ಅಘಾತ ಮತ್ತು ಹೊಡೆತ ನೀಡಿದ್ದರೂ ನಾವು ಅದರಿಂದ ಎಚ್ಚೆತ್ತುಕೊಂಡು ಮುಂದೆ ಸಾಗಿದ್ದೇವೆ.. ನಮ್ಮ ಭದ್ರತಾ ವ್ಯವಸ್ಥೆಯನ್ನು ನವೀಕರಿಸಿದ್ದೇವೆ ಎನ್ನುತ್ತಾರೆ ರಾಘವೇಂದ್ರ ರಾವ್.

ತಮ್ಮ ಮುಂದಿನ ಪ್ರಾಜೆಕ್ಟ್ ಗಳ ಬಗ್ಗೆ ದಿ ಫೆಡೆರಲ್ ನ್ಯೂಸ್ ಜೊತೆ ಮಾತನಾಡಿರುವ ರಾಘವೇಂದ್ರ ರಾವ್ ಮುಂದಿನ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ.

" ದಕ್ಷಿಣದ ಸವಿಯಾದ ಭಕ್ಷ್ಯಗಳ ಸಾಮ್ರಾಜ್ಯವನ್ನು ನಿರ್ಮಿಸುವ ಕನಸು ನಮ್ಮದು. ಪ್ರತಿಯೊಂದು ರಾಜ್ಯದ ಅನನ್ಯ ರುಚಿಗಳನ್ನು ಒಂದೇ ಸೂರಿನಡಿ ತರುವ ಮಹತ್ವದ ಕನಸು ಹೊಂದಿದ್ದೇವೆ. ರಾಮೇಶ್ವರಂ ಕೆಫೆಯಲ್ಲಿ ಅಂಬಾನಿ ಕುಟುಂಬದ ಮದುವೆಯಲ್ಲಿ(ರಾಮೇಶ್ವರಂ ಕೆಫೆ ಸೌತ್ ಫುಡ್ ಕೌಂಟರ್) ನಮ್ಮ ಆಹಾರಕ್ಕೆ ದೊರೆತ ಅಪಾರ ಪ್ರತಿಕ್ರಿಯೆ ನಮಗೆ ಹೊಸ ಬಲ ತಂದಿದೆ.

ನಾವು ಈಗಾಗಲೇ ಅನ್ನಲಕ್ಷ್ಮಿ ಥಾಲಿ ದಕ್ಷಿಣ ಭಾರತದ ವಿವಿಧ ರಾಜ್ಯಗಳ ಅನನ್ಯ ರುಚಿಗಳನ್ನು ಒಂದೇ ಸೂರಿನಡಿ ತಂದು ನಿಮ್ಮ ಮುಂದೆ ಇಡುತ್ತದೆ. ತಮಿಳುನಾಡಿನ ಸಾಂಬಾರ್‌ನ ಸೊಗಸು ಮತ್ತು ಕರ್ನಾಟಕದ ಚಟ್ನಿಯ ಖಾರವು ದೋಸೆಯ ರುಚಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ. ಕೇರಳದ ಕಪ್ಪು ಕಡಲೆ ಕರಿ ಖಾಲಿ ದೋಸೆಗೆ ಅದ್ಭುತವಾದ ಜೋಡಿಯಾಗಿದೆ. ಆಂಧ್ರದ ಸಿಹಿತಿಂಡಿ ಪೂತರೇಕುಲು ಮತ್ತು ಕರ್ನಾಟಕದ ಮಲೆನಾಡು ತಂಬುಳಿ ನಮ್ಮ ಥಾಲಿಯ ವಿಶಿಷ್ಟತೆಯನ್ನು ಹೆಚ್ಚಿಸುತ್ತವೆ.

ನಮ್ಮ ಥಾಲಿಯಲ್ಲಿ 20ಕ್ಕೂ ಹೆಚ್ಚು ವಿಧದ ಭಕ್ಷ್ಯಗಳು ಇವೆ. ಕರ್ನಾಟಕದ ಉಪ್ಪಿಟ್ಟು ಮತ್ತು ಖಾರಾ ಬಾತ್, ತಮಿಳುನಾಡಿನ ಪೊಂಗಲ್, ಕರ್ನಾಟಕ ಶೈಲಿಯ ತರಿ ಇಡ್ಲಿ ಇತ್ಯಾದಿ ವಿವಿಧ ರೀತಿಯ ರುಚಿಗಳನ್ನು ನೀವು ಇಲ್ಲಿ ಅನುಭವಿಸಬಹುದು. ಜನರು ಬೆಳಗ್ಗೆ ತರಿ ಇಡ್ಲಿ ಮತ್ತು ರಾತ್ರಿ ಸಾಮಾನ್ಯ ಇಡ್ಲಿಯನ್ನು ಇಷ್ಟಪಡುತ್ತಾರೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ನಾವು ನಮ್ಮ ಮೆನುವನ್ನು ವಿನ್ಯಾಸಗೊಳಿಸಿದ್ದೇವೆ.

ಯಾವುದೇ ಹೊಸ ಖಾದ್ಯವನ್ನು ನಮ್ಮ ಮೆನುವಿನಲ್ಲಿ ಸೇರಿಸುವ ಮೊದಲು, ನಮ್ಮ 500ಕ್ಕೂ ಹೆಚ್ಚು ಸದಸ್ಯರ ತಂಡ ಅದರ ಬಗ್ಗೆ ವಿಸ್ತೃತವಾಗಿ ಚರ್ಚಿಸುತ್ತದೆ. ಇದರಿಂದ ನಮ್ಮ ಗ್ರಾಹಕರಿಗೆ ಅತ್ಯುತ್ತಮವಾದ ರುಚಿ ಅನುಭವ ಸಿಗುತ್ತದೆ" ಎಂಬ ವಿಶ್ವಾಸ ನಮಗಿದೆ.

ಶೀಘ್ರದಲ್ಲೇ ಗುಜರಾತ್‌ನ ಅಹಮದಾಬಾದ್ ಮತ್ತು ಸೂರತ್‌ನಲ್ಲಿ ನಮ್ಮ ಪಯಣ ಆರಂಭಿಸಲಿದ್ದೇವೆ. ಮುಂಬೈ ಮತ್ತು ಪುಣೆ ನಮ್ಮ ಮುಂದಿನ ಗುರಿಗಳು. ಅಷ್ಟೇ ಅಲ್ಲ, ದೂರದ ದುಬೈ ಕೂಡಾ ನಮ್ಮ ಯೋಜನೆಯಲ್ಲಿದೆಅ. ಬೆಂಗಳೂರಿನಲ್ಲಿ ನಮ್ಮ ವಿಸ್ತರಣೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಮತ್ತು ಹೆಣ್ಣೂರು, ಹೊಸೂರು ರಸ್ತೆಗಳಲ್ಲಿ ನಮ್ಮ ಹೊಸ ಶಾಖೆಗಳು ಶೀಘ್ರದಲ್ಲೇ ತೆರೆಯಲಿವೆ.

ವಿಶೇಷವಾಗಿ ಹೊಸೂರು ರಸ್ತೆಯ ಶಾಖೆ ನಮ್ಮ ಅತಿದೊಡ್ಡ ಯೋಜನೆ. ಒಂದು ಎಕರೆಯಲ್ಲಿ ಹಬ್ಬುವ ಈ ಶಾಖೆಯಲ್ಲಿ ಒಂದೇ ಸಮಯದಲ್ಲಿ 10,000 ಜನರು ಊಟ ಮಾಡಬಹುದು. ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಊಟ ಮಾಡುವಂತಹ ಸಾಂಪ್ರದಾಯಿಕ ಅನುಭವವನ್ನು ನಾವು ಇಲ್ಲಿ ನೀಡಲು ಬಯಸುತ್ತೇವೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಇಲ್ಲಿ ಅವಕಾಶವಿರುತ್ತದೆ.

ಇದು ನಮ್ಮ ಹಿಂದಿನ ಎಲ್ಲಾ ಯೋಜನೆಗಳಿಗಿಂತ ದೊಡ್ಡ ಮತ್ತು ವಿಭಿನ್ನವಾದ ಯೋಜನೆ. ಇದು ನಮ್ಮ ಒಂದು ಹೊಸ ಪ್ರಯೋಗ. ಈ ಯೋಜನೆ ಯಶಸ್ವಿಯಾಗಲಿ ಎಂದು ನಾವು ಶ್ರಮಿಸುತ್ತೇವೆ ಎನ್ನುತ್ತಾರೆ ರಾಘವೇಂದ್ರ ರಾವ್.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+