ಆಧಾರ್ ಕಾರ್ಡ್ (Aadhaar Card) ಇಂದು ಪ್ರತಿಯೊಂದು ವಿಷಯಕ್ಕೂ ಅಗತ್ಯ ದಾಖಲೆಯಾಗಿದೆ. ಯಾವುದೇ ಕೆಲಸಕ್ಕೆ, ಯೋಜನೆಗಳ ಸೌಲಭ್ಯ ಪಡೆಯಬೇಕೆಂದರೂ ಆಧಾರ್ ಇರಲೇಬೇಕು. ಇದೀಗ ಆಧಾರ್ ಕಾರ್ಡ್ ಹೊಂದಿರುವವರಿಗೆ ಮಹತ್ವದ ಮಾಹಿತಿಯೊಂದಿದೆ. ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (UIDAI) ಇದೀಗ ಆಧಾರ್ ಕಾರ್ಡ್ ಸಂಬಂಧಿಸಿ ಹೊಸ ನಿಯಮ ಜಾರಿಗೆ ತಂದಿದೆ.

ಹೌದು, ಇದೀಗ UIDAI ಆಧಾರ್ ಅಪ್ಡೇಟ್ ಮತ್ತು ಬಯೋಮೆಟ್ರಿಕ್ ಅಪ್ಡೇಟ್‌ಗಳಿಗೆ ಸಂಬಂಧಿಸಿ ಹೊಸ ನಿಯಮ ಜಾರಿಗೆ ತಂದಿದೆ. ಇನ್ನು ಈ ನಿಯಮಗಳು ನವೆಂಬರ್ 1, 2025ರಿಂದ ಜಾರಿಗೆ ಬರಲಿದೆ.
ನವೆಂಬರ್ 1 ರಿಂದ ಹೊಸ ನಿಯಮ!
ನವೆಂಬರ್ 1, 2025ರಿಂದ ಆಧಾರ್ ಕಾರ್ಡ್ ಹೊಂದಿರುವವರು ಸೇವಾ ಕೇಂದ್ರಗಳಿಗೆ ಭೇಟಿ ನೀಡದೆಯೇ, ಆನ್‌ಲೈನ್ ಮೂಲಕವೇ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ, ಲಿಂಗ ಮತ್ತು ಮೊಬೈಲ್ ನಂಬರ್‌ಗಳನ್ನು ಅಪ್ಡೇಟ್ ಮಾಡಬಹುದು. ಇದು ಬಳಕೆದಾರರಿಗೆ ಅನುಕೂಲ ಮತ್ತು ಅಪ್ಡೇಟ್ ಪ್ರಕ್ರಿಯೆಯ ವೇಗವನ್ನು ಹೆಚ್ಚಿಸಲಿದೆ.
ಆಧಾರ್ ಕಾರ್ಡ್ ಇಂದು ಪಾಸ್‌ಪೋರ್ಟ್ ಮಾಡುವುದರಿಂದ ಹಿಡಿದು ಶಾಲಾ ಶುಲ್ಕ ಪಾವತಿ ಮಾಡುವವರೆಗೂ ಭಾರೀ ಅಗತ್ಯ ದಾಖಲೆಯಾಗಿದೆ. ಆದರೆ ಇದೀಗ ಆಧಾರ್ ಅಪ್ಡೇಟ್ ಶುಲ್ಕ ಹೆಚ್ಚಳ, ಹೊಸ ಆನ್‌ಲೈನ್ ಅಪ್ಡೇಟ್ ಸೌಲಭ್ಯ, ಮಕ್ಕಳಿಗೆ ಬಯೋಮೆಟ್ರಿಕ್ ಅಪ್‌ಡೇಟ್ ಫ್ರೀ, ಹೀಗೆ ಹಲವು ನಿರ್ಧಾರಗಳನ್ನು ಕೈಗೊಂಡಿದೆ.
ನವೆಂಬರ್ 1 ರಿಂದ ಎಲ್ಲಾ ದುಬಾರಿ
ನವೆಂಬರ್ 1 ರಿಂದ ಆಧಾರ್‌ನಲ್ಲಿ ಎಲ್ಲಾ ದುಬಾರಿಯಾಗಲಿದೆ. UIDAI ನವೆಂಬರ್ 1, 2025ರಿಂದ ಆಧಾರ್ ಅಪ್ಡೇಟ್‌ನಲ್ಲಿ ಶುಲ್ಕ ಪರಿಷ್ಕರಣೆಯನ್ನು ನಡೆಸಿದೆ. ಈ ಮೂಲಕ ನವೆಂಬರ್ 1 ರಿಂದ ಹೆಸರು, ವಿಳಾಸ, ಜನ್ಮ ದಿನಾಂಕ ಅಥವಾ ಮೊಬೈಲ್ ಸಂಖ್ಯೆಯನ್ನು ಬದಲಾಯಿಸುವಂತಹ 'ಡೆಮೋಗ್ರಾಫಿಕ್ ಅಪ್‌ಡೇಟ್'ಗೆ ₹50 ಬದಲಿಗೆ ₹75 ರೂ. ಪಾವತಿ ಮಾಡಬೇಕಾಗುತ್ತದೆ. ಅದೇ ರೀತಿ, ಬಯೋಮೆಟ್ರಿಕ್ ಅಪ್‌ಡೇಟ್‌ಗಳ ಶುಲ್ಕವನ್ನೂ ₹100 ರಿಂದ ₹125ಕ್ಕೆ ಏರಿಕೆ ಮಾಡಲಾಗಿದೆ.
ಇನ್ನು ಈ ನಿಯಮದಿಂದ ಬದಲಾದ ಶುಲ್ಕಗಳು 2028ರವರೆಗೆ ಜಾರಿಯಲ್ಲಿರುತ್ತವೆ. ಗ್ರಾಹಕರಿಗೆ ಸೇವಾ ಗುಣಮಟ್ಟ ಮತ್ತು ತಂತ್ರಜ್ಞಾನದಲ್ಲಿ ಹೊಸ ಸುಧಾರಣೆ ತರುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು UIDAI ತಿಳಿಸಿದೆ. ಆದರೆ ಈ ಶುಲ್ಕ ಏರಿಕೆಯಿಂದಾಗಿ ಸಾಮಾನ್ಯ ಜನರ ಜೇಬಿಗೆ ಕತ್ತರಿ ಬೀಳಲಿದೆ.
ಮಕ್ಕಳಿಗೆ ಎಲ್ಲಾ ಉಚಿತ:
ಹೌದು, ಆಧಾರ್ ಕಾರ್ಡ್‌ನ ಬಯೋಮೆಟ್ರಿಕ್ ಅಪ್ಡೇಟ್ ಮಾಡುವಲ್ಲಿ ಮಕ್ಕಳಿಗೆ ಉಚಿತ ಸೇವೆಯನ್ನು ನೀಡುವುದಾಗಿ ಹೇಳಲಾಗಿದೆ. 7 ರಿಂದ 15 ವರ್ಷ ವಯಸ್ಸಿನ ಮಕ್ಕಳ ಬಯೋಮೆಟ್ರಿಕ್ ಅಪ್ಡೇಟ್‌ಗಳನ್ನು ಉಚಿತವಾಗಿ ನಡೆಸಲಾಗುತ್ತದೆ ಎನ್ನಲಾಗಿದೆ.
ವಯಸ್ಸಾದಂತೆ ಮಕ್ಕಳ ಮುಖ ಮತ್ತು ಬೆರಳಚ್ಚುಗಳು ಬದಲಾಗುವುದರಿಂದ, ಕಾಲ ಕಾಲಕ್ಕೆ ಅಪ್ಡೇಟ್ ಮಾಡುತ್ತಿರುವುದಾಗಿ ಯುಐಡಿಎಐ ಹೇಳಿದೆ. ಆದ್ದರಿಂದ ಯಾವುದೇ ಮಕ್ಕಳ ಆಧಾರ್ ಅಪ್ಡೇಟ್ ಮಾಡುತ್ತಿರಿ ಎನ್ನಲಾಗಿದೆ.
ಇನ್ಮೇಲೆ ಉಚಿತ ಅಲ್ಲ, ಶುಲ್ಕ ಕಡ್ಡಾಯ:
ಜೂನ್ 14, 2025ರವರೆಗೆ ಆಧಾರ್ ಕಾರ್ಡ್ ಅನ್ನು ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶ ನೀಡಿತ್ತು. ಆದ್ರೆ ಇದೀಗ ಈ ಗಡುವು ಮುಕ್ತಾಯವಾಗಿದ್ದು, ಇನ್ಮೇಲೆ ಯಾವುದೇ ಅಪ್ಡೇಟ್‌ಗಳಿಗೂ ಹಣ ಪಾವತಿ ಮಾಡಲೇಬೇಕು.


Click it and Unblock the Notifications