New Rules: ನವೆಂಬರ್‌ 1 ರಿಂದ ಹೊಸ ನಿಯಮ! ಮತ್ತೆ ಏರಿಕೆಯಾಗುತ್ತಾ LPG ಬೆಲೆ?

ನವೆಂಬರ್‌ 1 ರಿಂದ ಹಲವು ನಿಯಮಗಳಲ್ಲಿ (November 1 Rules) ಹೊಸ ಬದಲಾವಣೆ ಬರಲಿದೆ. ಆಧಾರ್‌ಕಾರ್ಡ್‌, ಸೆಬಿ, ಮ್ಯೂಚುವಲ್‌ ಫಂಡ್‌, ಎಲ್‌ಪಿಜಿ ಸೇರಿದಂತೆ ಹಲವು ಕ್ಷೇತ್ರಗಳ ಮೇಲೆ ಹೊಸ ನಿಯಮ, ದರ ಪರಿಷ್ಕರಣೆ ಪರಿಣಾಮ ಬೀಳಲಿದೆ. ಈ ಮೂಲಕ ಮತ್ತೊಮ್ಮೆ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳೋದು ಪಕ್ಕಾ. ಹಾಗಿದ್ರೆ ನವೆಂಬರ್‌ 1 ರಿಂದ ಬದಲಾಗುತ್ತಿರುವ ಆ 5 ನಿಯಮಗಳು ಏನೆಲ್ಲಾ ಎಂಬುದರ ಮಾಹಿತಿ ಇಲ್ಲಿದೆ ಓದಿ.

ನವೆಂಬರ್‌ 1 ರಿಂದ ಹೊಸ ನಿಯಮ! ಮತ್ತೆ ಏರಿಕೆಯಾಗುತ್ತಾ LPG ಬೆಲೆ?

ಹೌದು, ನವೆಂಬರ್ 1ರಿಂದ ಜಾರಿಗೆ ಬರಲಿರುವ ಹೊಸ ನಿಯಮಗಳು ಬ್ಯಾಂಕಿಂಗ್, ಡಿಜಿಟಲ್ ಪಾವತಿ, ಆಧಾರ್ ಅಪ್‌ಡೇಟ್‌, LPG ಹಾಗೂ ಮ್ಯೂಚುವಲ್ ಫಂಡ್‌ ಇನ್ವೆಸ್ಟ್‌ಮೆಂಟ್‌ ಮೇಲೆ ಪರಿಣಾಮ ಬೀರಲಿವೆ. ಇದೆಲ್ಲಾ ಅಗತ್ಯ ವಹಿವಾಟು ಆಗಿರುವ ಕಾರಣ ಪ್ರತಿಯೊಬ್ಬರು ನಿಯಮ ಬದಲಾವಣೆ ಬಗ್ಗೆ ತಿಳಿದುಕೊಳ್ಳಲೇಬೇಕು.

1. ಆಧಾರ್‌ಕಾರ್ಡ್‌ ಅಪ್ಡೇಟ್‌ ಮತ್ತಷ್ಟು ಸುಲಭ:
ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಆಧಾರ್‌ ಕಾರ್ಡ್‌ ಅಪ್‌ಡೇಟ್ ಪ್ರಕ್ರಿಯೆಯನ್ನು ಇದೀಗ ಮತ್ತಷ್ಟು ಸರಳವಾಗಿಸಿದೆ. ನವೆಂಬರ್ 1 ರಿಂದ, ಸಾರ್ವಜನಿಕರು ಯಾವುದೇ ದಾಖಲೆಗಳನ್ನು ನೀಡದೆ, ಕೇವಲ ಮೊಬೈಲ್‌ ನಂಬರ್‌ ಮೂಲಕ ಆನ್‌ಲೈನ್‌ನಲ್ಲೇ ಆಧಾರ್‌ ಅಪ್ಡೇಟ್‌ ಮಾಡಬಹುದು. ಕೇವಲ ಬಯೋಮೆಟ್ರಿಕ್ ಅಪ್‌ಡೇಟ್‌ಗಳಿಗೆ (ಬೆರಳಚ್ಚು ಮತ್ತು ಕಣ್ಣಿನ ಸ್ಕ್ಯಾನ್) ಮಾತ್ರ ಸೇವಾಕೇಂದ್ರಗಳಿಗೆ ಭೇಟಿ ನೀಡಬಹುದು.

2. ಎಸ್‌ಬಿಐ ಕ್ರೆಡಿಟ್ ಕಾರ್ಡ್ ಶುಲ್ಕ ಹೆಚ್ಚಳ:
ಅದೇ ರೀತಿ ನವೆಂಬರ್ 1ರಿಂದ ಎಸ್‌ಬಿಐ ಕಾರ್ಡ್‌ ಬಳಕೆದಾರರಿಗೆ ಶುಲ್ಕ ಪಾವತಿ ಹೆಚ್ಚಾಗಲಿದೆ. ಎಸ್‌ಬಿಐ ಗ್ರಾಹಕರು ಅದಕ್ಕಾಗಿ ಹೆಚ್ಚಿನ ಶುಲ್ಕಗಳನ್ನು ಪಾವತಿಸಬೇಕಾಗುತ್ತದೆ. ಅಸುರಕ್ಷಿತ ಕ್ರೆಡಿಟ್ ಕಾರ್ಡ್ ವಹಿವಾಟುಗಳಿಗೆ ಶೇ 3.75ರಷ್ಟು ಶುಲ್ಕ ವಿಧಿಸಲಾಗುತ್ತದೆ. ಅಷ್ಟೇ ಅಲ್ಲದೇ CRED, CheQ ಅಥವಾ Mobikwik ನಂತಹ ಥರ್ಡ್-ಪಾರ್ಟಿನಂತರ ಅಪ್ಲಿಕೇಶನ್‌ ಮೂಲಕ ಸ್ಕೂಲ್‌ ಅಥವಾ ಕಾಲೇಜು ಶುಲ್ಕ ಪಾವತಿಸಿದರೆ, ಶೇ 1ರಷ್ಟು ಹೆಚ್ಚುವರಿ ಶುಲ್ಕವನ್ನು ಪಾವತಿ ಮಾಡಬೇಕು. ಆದರೆ, ಶಾಲೆಯ ಅಧಿಕೃತ ವೆಬ್‌ಸೈಟ್ ಅಥವಾ ಪಾಯಿಂಟ್-ಆಫ್-ಸೇಲ್ (POS) ವ್ಯವಸ್ಥೆಗಳ ಮೂಲಕ ಡೈರೆಕ್ಟ್‌ ಪೇಮೆಂಟ್‌ ಮಾಡಿದ್ರೆ ಈ ಶುಲ್ಕ ಅನ್ವಯಿಸುವುದಿಲ್ಲ. ₹1,000 ಕ್ಕಿಂತ ಹೆಚ್ಚಿನ ಮೊತ್ತದ ವ್ಯಾಲೆಟ್ ರೀಚಾರ್ಜ್‌ಗಳಿಗೆ ಸಹ ಶೇ 1ರಷ್ಟು ಶುಲ್ಕ ವಿಧಿಸಲಾಗುತ್ತದೆ. ಆದ್ದರಿಂದ ಕ್ರೆಡಿಟ್‌ ಕಾರ್ಡ್‌ ಬಳಕೆದಾರರಿಗೆ ನವೆಂಬರ್‌ 1 ರಿಂದ ಮತ್ತಷ್ಟು ಹೊರೆ ಬೀಳಲಿದೆ.

3. ಗ್ಯಾಸ್ ಸಿಲಿಂಡರ್, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆ ಬದಲಾವಣೆ:
ಹಿಂದಿನ ಬೆಲೆಗಳಿಗೆ ಹೋಲಿಸಿದ್ರೆ, ಇತ್ತೀಚೆಗೆ ಸಿಲಿಂಡರ್‌ ಕಡಿಮೆ ಬೆಲೆಗೆ ಸಿಗುತ್ತಿದೆ. ಆದ್ರೆ ನವೆಂಬರ್ 1 ರಿಂದ ಎಲ್‌ಪಿಜಿ, ಸಿಎನ್‌ಜಿ ಮತ್ತು ಪಿಎನ್‌ಜಿ ಬೆಲೆ ಮತ್ತೆ ಪರಿಷ್ಕರಿಸುವ ಸಾಧ್ಯತೆ ಇದೆ. ಜಾಗತಿಕ ಕಚ್ಚಾ ತೈಲ ಬೆಲೆಗಳು ಮತ್ತು ದೇಶೀಯ ಸಬ್ಸಿಡಿಗಳನ್ನು ಹೊಂದಾಣಿಕೆ ಮಾಡಿ, ಬೆಲೆ ಪರಿಷ್ಕರಿಸಬಹುದು. ಈ ಪರಿಣಾಮ ಮುಂದಿನ ದಿನಗಳಲ್ಲಿ ಎಲ್‌ಪಿಜಿ ಬೆಲೆ ಹೆಚ್ಚೂ ಆಗಬಹುದು ಅಥವಾ ಕಡಿಮೆಯೂ ಆಗಬಹುದು. .

4. SEBI, ಮ್ಯೂಚುವಲ್ ಫಂಡ್ ನಿಯಮದಲ್ಲಿ ಬದಲಾವಣೆ: ಮ್ಯೂಚುವಲ್‌ ಫಂಡ್‌ ಹೂಡಿಕೆದಾರರಿಗಾಗಿ, ಭಾರತೀಯ ಭದ್ರತೆಗಳು ಮತ್ತು ವಿನಿಮಯ ಮಂಡಳಿ (SEBI) ಹೊಸ ನಿಯಮಗಳನ್ನು ಜಾರಿಗೆ ತರಲು ಸಜ್ಜಾಗಿದೆ. ಇದು ಹೂಡಿಕೆದಾರರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ. ಹೊಸ ನಿಯಮದ ಪ್ರಕಾರ, ಯಾವುದೇ ಅಧಿಕಾರಿ, ಉದ್ಯೋಗಿ ಅಥವಾ ಅವರ ಸಂಬಂಧಿಕರು ₹15 ಲಕ್ಷಕ್ಕಿಂತ ಹೆಚ್ಚಿನ ಮ್ಯೂಚುವಲ್ ಫಂಡ್ ವಹಿವಾಟು ನಡೆಸಿದರೆ, ಆಸ್ತಿ ನಿರ್ವಹಣಾ ಕಂಪನಿ (AMC) ಈ ಬಗ್ಗೆ Compliance Officerಗೆ ತಿಳಿಸಬೇಕು. ಇದು ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಹೆಚ್ಚಿನ ನಂಬಿಕೆ ಮತ್ತು ಭರವಸೆಯನ್ನು ಮೂಡುವಂತೆ ಮಾಡುತ್ತದೆ.

5. ಬ್ಯಾಂಕ್‌ ನಾಮಿನಿಗಳಲ್ಲಿ ಬದಲಾವಣೆ:
ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಕಾಯಿದೆ 2025 ರ ಅಡಿಯಲ್ಲಿ ಒಂದು ಪ್ರಮುಖ ನಿಯಮ ಜಾರಿಗೆ ಬಂದಿದೆ. ಇನ್ಮೇಲೆ ಬ್ಯಾಂಕ್‌ ಗ್ರಾಹಕರು ತಮ್ಮ ಒಂದೇ ಬ್ಯಾಂಕ್ ಖಾತೆಗೆ, ಲಾಕರ್ ಅಥವಾ ಸುರಕ್ಷಿತ ಕಸ್ಟಡಿಗೆ ನಾಲ್ಕು ಜನರನ್ನು ನಾಮಿನಿಯಾಗಿ ಆಯ್ಕೆ ಮಾಡಬಹುದು. ಅಲ್ಲದೇ ಅವರೇ ನಾಮಿನಿದಾರರಿಗೆ ಎಷ್ಟು ಪಾಲು ಸೇರಬೇಕೆಂದು ನಿರ್ಧರಿಸಬೇಕು. ಆ ಪ್ರಕಾರ, ಮೊದಲ ನಾಮಿನಿ ವ್ಯಕ್ತಿ ಲಭ್ಯವಿಲ್ಲದಿದ್ದರೆ, ಅವರ ಪಾಲು ಸ್ವಯಂಚಾಲಿತವಾಗಿ ಎರಡನೇ ವ್ಯಕ್ತಿಗೆ ವರ್ಗಾಯಿಸಲಾಗುತ್ತದೆ. ಈ ಬದಲಾವಣೆಯಿಂದ ಕುಟುಂಬ ವಿವಾದಗಳು, ಹಣ ವಿಥ್‌ಡ್ರಾ ಪ್ರಕ್ರಿಯೆ ಸುಲಭವಾಗಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+