ಅವಿವಾಹಿತನಾಗಿದ್ದ ಮಹೇಶ್ ಕಳೆದ ಎರಡು ವರ್ಷದಿಂದ ಸಾಲದ ಬಲೆಗೆ ಸಿಲುಕಿಕೊಂಡಿದ್ದ. ಕೈ ಸಾಲ, ಕ್ರೆಡಿಟ್ ಕಾರ್ಡ್ ಬಿಲ್, ಪರ್ಸನಲ್ ಲೋನ್ ಹೀಗೆ ಸಾಲ ಎನ್ನುವ ಸುಳಿಯೊಳಗೆ ಬಿದ್ದು ಒದ್ದಾಡುತ್ತಿದ್ದ. ಓರ್ವ ಸ್ನೇಹಿತನ ಬಳಿ ಮಾಡಿಕೊಂಡಿದ್ದ ಸಾಲ ತೀರಿಸಲು ಮತ್ತೋರ್ವನ ಬಳಿ ಸಾಲ ಪಡೆಯುವುದು. ಸಾಲಗಾರರು ಬೆಂಬಿಡದಂತೆ ಕರೆ ಮಾಡಿದಾಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಒಡಾಡುವುದು, ನೆಪ ಹೇಳಿ ತಪ್ಪಿಸಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಾಗೆ ನೋಡಿದರೆ ಗೃಹಸಾಲದಂತಹ ತೀರ ಅಗತ್ಯ ಸಾಲವನ್ನು ಮಹೇಶ್ ಮಾಡಿಕೊಂಡಿರಲಿಲ್ಲ. ಬೇಕಾಬಿಟ್ಟಿ ಖರ್ಚುಗಳು, ಅನಗತ್ಯವಾದ ಖರೀದಿಗಳು, ಮತ್ತು ಯೋಜನೆ ಇಲ್ಲದ ಹಣ ವಿನಿಯೋಗದಿಂದ ಮಹೇಶ್ ನನ್ನು ಈ ಪರಿಸ್ಥಿತಿಗೆ ತಳ್ಳಿತ್ತು.
ಮಹೇಶ್ ವಯಸ್ಸಿನ್ನು 27ರ ಆಸುಪಾಸಿನಲ್ಲಿತ್ತು. ತನ್ನ ಪರಿಸ್ಥಿತಿ ನೆನೆದು ಮಹೇಶ್ ಗೆ ಆತಂಕವಾಗುತ್ತಿತ್ತು. ಉದ್ಯೋಗದಲ್ಲಿದ್ದರೂ ತಿಂಗಳ ವೇತನಕ್ಕಿಂತ ಹೆಚ್ಚು ಹಣ ಖರ್ಚಿಗೆ ಬೇಕಾಗಿತ್ತು. ಕೆಟ್ಟ ಯೋಚನೆ ಆಗ್ಗಾಗ್ಗೆ ಕಾಡತೊಡಗಿತ್ತು. ಭವಿಷ್ಯದ ಬಗ್ಗೆ ಯೋಚಿಸಿದರೆ ಚಿಂತೆ ಕಾಡುತ್ತಿತ್ತು. ಉದ್ಯೋಗದಲ್ಲಿ ಏನಾದರೂ ತೊಂದರೆ ಉಂಟಾದರೆ, ಅಥವಾ ಆರೋಗ್ಯದಲ್ಲಿ ಏನಾದರೂ ತೊಂದರೆ ಉಂಟಾದರೆ ಏನು ಮಾಡಬೇಕು ಎಂಬ ಭಯವು ಕಾಡಲಾರಂಭಿಸಿತ್ತು. ಇದು ಕೇವಲ ಮಹೇಶ್ ಒಬ್ಬನ ಕಥೆಯಲ್ಲ. ಇಂತಹ ನೂರಾರು ಮಹೇಶ್ ನಮ್ಮ ನಡುವೆ ಇದ್ದಾರೆ. ಪರಿಸ್ಥಿತಿಯ ಅನಾನುಕೂಲತೆಗೆ ಸಿಲುಕಿಯೋ ಅಥವಾ ಹಣಕಾಸಿನ ವ್ಯವಸ್ಥಿತ ನಿರ್ವಹಣೆ ತಿಳಿಯದೆ ಸಾಲವೆಂಬ ಕೂಪಕ್ಕೆ ಬಿದ್ದು ಹಪಹಪಿಸುವಂತಾಗಿತ್ತು.

ಆದರೆ ಋಣಭಾರದಿಂದ ಹೊರಬರಬೇಕೆಂಬ ದೃಢಮನಸ್ಸು ಹೊಂದಿದ್ದ ಮಹೇಶ್ ಪರಿಸ್ಥಿತಿ ಕೇವಲ ಒಂದೇ ವರ್ಷದಲ್ಲಿ ಬದಲಾಗಿತ್ತು. ಸಾಲದ ಚಕ್ರವ್ಯೂಹದಿಂದ ಹೊರಬರಬೇಕೆನ್ನುವ ಕಾರಣದಿಂದ ತನ್ನ ಹಣಕಾಸು ಸಲಹೆಗಾರನಾಗಿದ್ದ ಸ್ನೇಹಿತ ನೀಡಿದ್ದ ಸಲಹೆಯನ್ನು ಆತ ಚಾಚುತಪ್ಪದೇ ಪಾಲಿಸಿದ್ದ. ಆತನ ಆದಾಯ ಮತ್ತು ಖರ್ಚುಗಳನ್ನು ವಿಶ್ಲೇಷಿಸಿ ಖರ್ಚುಗಳನ್ನು ಕಡಿಮೆ ಮಾಡಲು, ಬಜೆಟ್ ಮಿತಿ ಪಾಲಿಸಲು ಮತ್ತು ಹೆಚ್ಚುವರಿ ಆದಾಯವನ್ನು ಗಳಿಸಲು ಸಲಹೆ ನೀಡಿದರು. ಒಂದೇ ವರ್ಷದಲ್ಲಿ ಬದಲಾವಣೆಗಳು ಕಂಡುಬಂದಿತ್ತು. ಸಾಲ ಮುಕ್ತನಾಗಿರದಿದ್ದರೂ, ಸಾಲಗಾರರಿಂದ ಮುಖಮುಚ್ಚಿಕೊಂಡು ಹೊರಹೋಗೋ ಪರಿಸ್ಥಿತಿ ಇರಲಿಲ್ಲ. ಮಹೇಶ್ ತನ್ನ ಆತ್ಮವಿಶ್ವಾಸವನ್ನು ಮತ್ತೆ ಗಳಿಸಿಕೊಂಡಿದ್ದ. ಹಾಗಿದ್ರೆ ಮಹೇಶ್ ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದ ಸೂತ್ರಗಳು ಯಾವುವು ಎಂದು ನೋಡೋಣ
ಸಾಲದ ಲೆಕ್ಕಾಚಾರ:
ಮೊತ್ತಮೊದಲು ಸಾಲದ ಲೆಕ್ಕಾಚಾರ ಕ್ರೆಡಿಟ್ ಕಾರ್ಡ್‌ಗಳು, ವೈಯಕ್ತಿಕ ಸಾಲಗಳು, ಕೈಸಾಲ , ಬಿಲ್‌ಗಳು ಇತ್ಯಾದಿಗಳನ್ನು ಸೇರಿಸಿ. ಅದರಲ್ಲಿ ಇನ್ನು ಬಾಕಿಯಿರುವ ಮೊತ್ತ, ಬಡ್ಡಿ ದರಗಳು ಮತ್ತು ಪ್ರತಿಯೊಂದಕ್ಕೂ ಕನಿಷ್ಠ ಮಾಸಿಕ ಪಾವತಿಗಳನ್ನು ಎಷ್ಟು ಹಾಕಬೇಕು ಎನ್ನುವುದರ ಜೊತೆಗೆ ನಿಮ್ಮ ಒಟ್ಟು ಸಾಲವನ್ನು ಲೆಕ್ಕ ಹಾಕಿ.
ಬಜೆಟ್ ರಚಿಸಿ
ಗಳಿಸಬಹುದಾದ ಎಲ್ಲಾ ಆದಾಯ , ತಿಂಗಳ ಖರ್ಚು ವೆಚ್ಚ ಎಲ್ಲವನ್ನು ಟ್ರ್ಯಾಕ್ ಮಾಡಿ. ಎಲ್ಲಿ ಉಳಿಸಬಹುದು, ಎಲ್ಲಿ ಕಡಿವಾಣ ಹಾಕಬಹುದು ಎಂಬುವುದನ್ನು ಗುರುತಿಸಿ. ಸಿನಿಮಾ ವೆಚ್ಚ, ಹೊಟೇಲ್ ನ ಪ್ಯಾನ್ಸಿ ಊಟ, ಮನರಂಜನೆ, ಚಂದಾದಾರಿಕೆಗಳು ಇತ್ಯಾದಿಗಳ ಮೇಲೆ ಹಿಡಿತ ಸಾಧಿಸಿ. ದಿನಸಿಯಿಂದ ಹಿಡಿದು ಕರೆಂಟ್ ಬಿಲ್ ವರೆಗೆ ಎಲ್ಲವೂ ಉಳಿತಾಯದ ಹಾದಿಯಲ್ಲಿರಲಿ.
ಸಾಲ ಮರುಪಾವತಿ ತಂತ್ರವನ್ನು ಆಯ್ಕೆಮಾಡಿ
ನೀವು ಮಾಡಿಕೊಂಡ ಸಾಲಕ್ಕೆ ತಕ್ಕಂತೆ ಈ ಕೆಳಗಿನ ಮರುಪಾವತಿಯ ವಿಧಾನವನ್ನು ಬಳಸಿಕೊಳ್ಳಬಹುದು
ಹಿಮಪಾತ ವಿಧಾನ(Avalanche Method): ಈ ವಿಧಾನದಲ್ಲಿ, ಮೊದಲು ಹೆಚ್ಚಿನ ಬಡ್ಡಿ ದರವಿರುವ ಸಾಲಗಳಿಗೆ ಆದ್ಯತೆ ನೀಡಿ, ಅವುಗಳ ಮೇಲೆ ಹೆಚ್ಚುವರಿ ಹಣವನ್ನು ಕಟ್ಟುತ್ತಾ ಹೋಗುವುದು. ಇದರಿಂದ ಒಟ್ಟಾರೆ ಬಡ್ಡಿ ಹೊರೆ ಕಡಿಮೆಯಾಗುತ್ತದೆ ಮತ್ತು ಸಾಲ ತೀರಿಸುವ ಅವಧಿ ಕಡಿಮೆಯಾಗುತ್ತದೆ.
ಸ್ನೋಬಾಲ್ ವಿಧಾನ(Snowball Method): ಈ ವಿಧಾನದಲ್ಲಿ, ಮೊದಲು ಅತ್ಯಂತ ಕಡಿಮೆ ಮೊತ್ತದ ಸಾಲವನ್ನು ಆರಿಸಿಕೊಂಡು ಅದನ್ನು ಸಂಪೂರ್ಣವಾಗಿ ತೀರಿಸುವವರೆಗೂ ಹೆಚ್ಚುವರಿ ಹಣವನ್ನು ಅದರ ಮೇಲೆ ಕಟ್ಟುತ್ತಾ ಹೋಗುವುದು. ಇದರಿಂದ ಸಣ್ಣ ಸಾಲಗಳು ಬೇಗನೆ ತೀರಿಸಲ್ಪಟ್ಟು, ಮಾನಸಿಕವಾಗಿ ಒಂದು ರೀತಿಯ ಗೆಲುವಿನ ಅನುಭವ ಸಿಗುತ್ತದೆ. ಇದು ಮನೋಬಲ ಹೆಚ್ಚಿಸಿ, ಸಾಲ ತೀರಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ಪ್ರೇರೇಪಿಸುತ್ತದೆ.
ಆದಾಯ ಹೆಚ್ಚಿಸಿಕೊಳ್ಳುವುದು
ಮೊತ್ತ ಮೊದಲನೆಯದಾಗಿ ಒಂದು ಸಾಲವನ್ನು ತೀರಿಸಲು ಹೊಸ ಸಾಲವನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಬೇಕು. ಜೊತೆಗೆ ಪ್ರಮುಖವಾಗಿ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು. ಮಹೇಶ್ ಅನುಸರಿಸಿದ್ದು ಇದೇ ತಂತ್ರ. ಪಾರ್ಟ್ ಟೈಂ ಕೆಲಸಕ್ಕೆ ಸೇರಿ ಅಲ್ಪಮಟ್ಟದಲ್ಲಿಯಾದರೂ ಸರಿ ಸಂಪಾದಿಸಲು ತೊಡಗಿಸಿಕೊಂಡಿದ್ದು. ಈಗ ಪಾರ್ಟ್ ಟೈಂ ಡೆಲಿವರಿ ಬಾಯ್ ಆಗಿ ಬೇಕಾದಷ್ಟು ದುಡಿಯಲು ಅವಕಾಶವಿರುವುದರಿಂದ ಆದಾಯವನ್ನು ಹೆಚ್ಚಿಸಿಕೊಳ್ಳುವುದು ಪ್ರಮುಖ ಆದ್ಯತೆಯಾಗಿರಬೇಕು.
ಪ್ರಮುಖ ಮಾತು
ಸಾಲ/ಎರವಲು/ಋಣಭಾರವೆಂಬುವುದು ಒಂದು ಸಾಧನವಾಗಿದೆಯೇ ಹೊರತು ಪರಿಹಾರವಲ್ಲ.! ಯಾವುದೇ ಸಾಲದಾತರನ್ನು ಆಯ್ಕೆ ಮಾಡಿದ್ರು ಅವರ ನಿಯಮಗಳನ್ನು ಅರ್ಥಮಾಡಿಕೊಳ್ಳಿ. ನಿಮ್ಮ ಮರುಪಾವತಿ ಸಾಮರ್ಥ್ಯವನ್ನು ಹೋಲಿಸಿ. ಆ ಬಳಿಕವೇ ಧೃಡತೆಯೊಂದಿಗೆ ತೀರ್ಮಾನ ತೆಗೆದುಕೊಳ್ಳಿ.
More From GoodReturns

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಷೇರು ಮಾರುಕಟ್ಟೆ ಏರಿಳಿತ: ಇಂದಿನ ಹೂಡಿಕೆದಾರರ ಆತಂಕವೇನು?

ಷೇರು ಮಾರುಕಟ್ಟೆ ಇಂದು ಭರ್ಜರಿ ಏರಿಕೆ: ಹೂಡಿಕೆದಾರರಿಗೆ ಬಂಪರ್ ಲಾಭ?

ಆರ್ಬಿಐ ರೆಪೋ ದರ: ನಿಮ್ಮ ಇಎಂಐ ಹೊರೆ ಹೆಚ್ಚಾಗುತ್ತಾ?

ಷೇರು ಮಾರುಕಟ್ಟೆ ಇಂದು: ಟಿಸಿಎಸ್ ಫಲಿತಾಂಶದ ಅನಿರೀಕ್ಷಿತ ತಿರುವು!

ಆರ್ಬಿಐ ನಿರ್ಧಾರದ ಮುನ್ನ ನಿಮ್ಮ ಹಣ ಸುರಕ್ಷಿತವೇ?

ಚಿನ್ನದ ಬೆಲೆ ಏರಿಕೆ: ನಿಮ್ಮ ಹೂಡಿಕೆ ಸುರಕ್ಷಿತವಾಗಿಡಲು ಈ ತಂತ್ರ ಬಳಸಿ

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?



Click it and Unblock the Notifications