New Year’s Eve: ಡಿಸೆಂಬರ್ 31 ರಂದು ಏನೆಲ್ಲಾ ತೆರೆದಿರುತ್ತದೆ ಮತ್ತು ಮುಚ್ಚಿರುತ್ತದೆ? ತಿಳಿಯಿರಿ

ಎಲ್ಲರೂ ಹೊಸ ವರ್ಷದ ಆಗಮನದಲ್ಲಿದ್ದಾರೆ. ಹೊಸ ವರ್ಷವನ್ನ ಸ್ವಾಗತ ಮಾಡಲು ಒಂದು ರೀತಿಯ ತಯಾರಿಗಳನ್ನ ಕೂಡ ಖಂಡಿತ ಮಾಡುತ್ತಿದ್ದಾರೆ. ಇದರ ಜೊತೆಗೆ 2024ಕ್ಕೆ ಸಂತೋಷದಿಂದ ವಿಧಾಯ ಹೆಳಲು ಎಲ್ಲರೂ ಕಾತುರರಾಗಿದ್ದಾರೆ. ಇನ್ನು ಈ ಹೊಸ ವರ್ಷದ ಹಿಂದಿನ ದಿನ ಅಂದರೆ ಡಿಸೆಂಬರ್ 31 ರಂದು ವರ್ಷದ ಕೊನೆ ದಿನವನ್ನ ಜನರು ಆಚರಣೆ ಮಾಡುತ್ತಾರೆ. ಆ ದಿನ ಎಲ್ಲರೂ ಸಂಭ್ರಮಾಚರಣೆ ಮಾಡುವುದು, ಪಾರ್ಟಿಗಳನ್ನ ಮಾಡುವುದು, ಹಾಗೆ ಉತ್ಸಾಹದಿಂದ ಕುಣಿಯುವುದು ಸಹಜ. ಹಾಗೆ ಹಿಂದಿನ ವರ್ಷದ ನೋವು ನಲಿವುಗಳನ್ನ ಮೆಲುಕು ಹಾಕುತ್ತಾ ಜನರು ಮುಂಬರುವ ವರ್ಷದಲ್ಲಿ ಸಾಕಷ್ಟು ಸಂತಸ ಉತ್ಸಹದ ನೀರಿಕ್ಷೆಯೊಂದಿಗೆ ಸಂಬ್ರಮಾಚರಣೆ ಮಾಡುತ್ತಾರೆ.

ಡಿಸೆಂಬರ್ 31 ರಂದು ಏನೆಲ್ಲಾ ತೆರೆದಿರುತ್ತದೆ? ತಿಳಿಯಿರಿ

ರೆಸ್ಟೋರೆಂಟ್‌ಗಳು, ಬಾರ್‌ಗಳು ಮತ್ತು ಕ್ಲಬ್‌ಗಳು: ಸಿಲಿಕಾನ್‌ ಸಿಟಿ ಬೆಂಗಳೂರು, ರಾಷ್ಟ್ರ ರಾಜಧಾನಿ ದೆಹಲಿ, ಮುಂಬೈ, ಮತ್ತು ಗೋವಾದಂತಹ ಪ್ರಮುಖ ನಗರಗಳಲ್ಲಿ ಹೆಚ್ಚಿನ ರೆಸ್ಟೋರೆಂಟ್‌ಗಳು, ಬಾರ್‌ಗಳು ಹಾಗೆ ಕ್ಲಬ್‌ಗಳು ತೆರೆದಿರುತ್ತವೆ. ವಿಶೇಷವಾಗಿ ಹೊಸ ವರ್ಷದ ಹಿಂದಿನ ದಿನದಂದು ದೊಡ್ಡ ಆಚರಣೆ ಅಲ್ಲಿ ದೊಡ್ಡ ಆಚರಣೆಗಳನ್ನ ಮಾಡುತ್ತಾರೆ. ಅನೇಕರು ವಿಶೇಷ ಕಾರ್ಯಕ್ರಮಗಳು, ಊಟ ಉಪಾಹಾರದ ಯೋಜನೆಗಳನ್ನ ಆಯೋಜನೆ ಮಾಡಿರುತ್ತಾರೆ.

ಡಿಸೆಂಬರ್ 31 ರಂದು ಏನೆಲ್ಲಾ ತೆರೆದಿರುತ್ತದೆ ಮತ್ತು ಮುಚ್ಚಿರುತ್ತದೆ?

ಶಾಪಿಂಗ್ ಮಾಲ್‌ಗಳು ಮತ್ತು ಮಾರುಕಟ್ಟೆಗಳು: ಹೊಸ ವರ್ಷದ ಹಿಂದಿನ ದಿನ ಶಾಪಿಂಗ್ ಮಾಲ್‌ಗಳು ಮತ್ತು ಪ್ರಮುಖ ಚಿಲ್ಲರೆ ಅಂಗಡಿಗಳು ತೆರೆದಿರುತ್ತವೆ. ಹೊಸ ವರ್ಷದ ಆಚರಣೆ ಹಿನ್ನೆಲೆ ವ್ಯಾಪಾರದ ಉದ್ದೇಶದಿಂದ ಅನೇಕ ಮಾಲ್‌ಗಳು ತುಂಬಾ ಸಮಯದವರೆಗೆ ತೆರೆದಿರುತ್ತವೆ.

ಸಾರ್ವಜನಿಕ ಸಾರಿಗೆ: ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ, ಬಸ್ಸುಗಳು, ಮೆಟ್ರೋ ಸೇವೆಗಳು ಮತ್ತು ಟ್ಯಾಕ್ಸಿಗಳು ಹಾಗೆ ಓಲಾ ಮತ್ತು ಉಬರ್‌ನಂತಹ ಸೇವೆಗಳು ಕಾರ್ಯನಿರ್ವಹಿಸುತ್ತವೆ. ಅಲ್ಲದೆ, ವಿಶೇಷವಾಗಿ ಸಂಜೆ ವೇಳೆಯಲ್ಲಿ ಕೆಲವು ಸೇವೆಗಳನ್ನು ಕಡಿಮೆ ಮಾಡಬಹುದು ಅಥವಾ ಅವುಗಳ ಸಮಯವನ್ನು ಬದಲಾಯಿಸಬಹುದು.

ಹೋಟೆಲ್‌ಗಳು ಮತ್ತು ರೆಸಾರ್ಟ್‌ಗಳು: ಹೊಸ ವರ್ಷದ ಹಿಂದಿನ ದಿನ ವಿಶೇಷವಾಗಿ ಪ್ರವಾಸಿ ತಾಣಗಳಲ್ಲಿ ಪ್ಯಾಕೇಜ್‌ಗಳನ್ನು ನೀಡುವ ಹೋಟೆಲ್‌ಗಳು ಜನರ ಸೇವೆಗೆ ತೆರೆದಿರುತ್ತವೆ.

ಏನೆಲ್ಲಾ ಮುಚ್ಚಿರುತ್ತದೆ? ತಿಳಿಯಿರಿ

ಸರ್ಕಾರಿ ಕಚೇರಿಗಳು ಮತ್ತು ಬ್ಯಾಂಕ್‌ಗಳು: ಡಿಸೆಂಬರ್ 31 ರಾಷ್ಟ್ರೀಯ ರಜಾದಿನವಲ್ಲ, ಆದ್ರೂ ಕೂಡ ಸರ್ಕಾರಿ ಕಚೇರಿಗಳು ಮತ್ತು ಹೆಚ್ಚಿನ ಬ್ಯಾಂಕ್‌ಗಳು ಮುಚ್ಚಿರುತ್ತವೆ. ಆದ್ರೆ ಕೆಲವು ಖಾಸಗಿ ಬ್ಯಾಂಕುಗಳು ತೆರೆದಿರುತ್ತವೆ. ಆದರೆ ಕಡಿಮೆ ಸಮಯ ಕಾರ್ಯನಿರ್ವಹಿಸಬಹುದು ಎಂದು ನಿರೀಕ್ಷಿಸಲಾಗಿದೆ.

ಶಿಕ್ಷಣ ಸಂಸ್ಥೆಗಳು: ಸಾಮಾನ್ಯವಾಗಿ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ಡಿಸೆಂಬರ್ 31 ರಂದು ಮುಚ್ಚಿರುತ್ತವೆ. ಏಕೆಂದರೆ ಅಂದು ಸಾಮಾನ್ಯವಾಗಿ ರಜೆ ಇರುತ್ತದೆ.

ಅಂಚೆ ಕಛೇರಿಗಳು: ಸಾಮಾನ್ಯವಾಗಿ ಸಾರ್ವಜನಿಕ ರಜಾದಿನಗಳಲ್ಲಿ ಅಂಚೆ ಕಚೇರಿಗಳು ಮುಚ್ಚಿರುತ್ತವೆ. ಹಾಗೆ ಡಿಸೆಂಬರ್ 31 ರಂದು ಕೂಡ ಅಂಚೆ ಕಛೇರಿಗಳಿಗೆ ರಜೆ ಇರಲಿದೆ. ಅಂದು ಅವುಗಳು ತೆರೆದಿರುವ ಸಾಧ್ಯತೆಯಿಲ್ಲ.

ಬೆಂಗಳೂರಿನಲ್ಲಿ ಸಂಚಾರ ನಿರ್ಬಂಧ

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆ ಡಿಸೆಂಬರ್‌ 31ರ ರಾತ್ರಿ ಸಂಚಾರ ದಟ್ಟಣೆಯನ್ನ ತಡೆಯಲು ಬೆಂಗಳೂರು ಸಂಚಾರ ಪೊಲೀಸರು ನಗರದಾದ್ಯಂತ ಹಲವು ನಿರ್ಬಂಧನೆಗಳನ್ನ ಜಾರಿ ಮಾಡಿದ್ದಾರೆ.

ಸಮಾನ್ಯವಾಗಿ ಬೆಂಗಳೂರಿನಲ್ಲಿ ಹೊಸ ವರ್ಷದ ಹಿಂದಿನ ದಿನ ಹಾಗು ಹೊಸ ವರ್ಷದ ದಿನದಂದು ಸಂಚಾರ ದಟ್ಟಣೆಯಾಗುವುದು ಸಹಜ. ಅದರಲ್ಲೂ ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕೋರಮಂಗಲ, ಚರ್ಚ್ ಸ್ಟ್ರೀಟ್ ಮತ್ತು ಇಂದಿರಾನಗರದಂತಹ ಪ್ರದೇಶಗಳು ಹೆಚ್ಚಿನ ಜನಸಂದಣಿ ಇರುವ ಸಾಧ್ಯತೆ ಇದೆ. ಹೀಗಾಗಿ ಸುಗಮ ಸಂಚಾರವನ್ನ ಸಾರ್ವಜನಿಕರಿಗೆ ಖಚಿತಪಡಿಸಿಕೊಳ್ಳಲು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಸರ್ಕಾರ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸುವಂತೆ ಬೆಂಗಳೂರು ಪೊಲೀಸರಿಗೆ ತಿಳಿಸಿದೆ.

ರಾಷ್ಟ್ರ ರಾಜಧಾನಿಯಲ್ಲಿ ಸಂಚಾರ ನಿಯಮಗಳು ಹೇಗಿರಲಿವೆ?

ಹೊಸ ವರ್ಷದ ಹಿಂದಿನ ದಿನ ರಾಷ್ಟ್ರ ರಾಜಧಾನಿ ಇಂಡಿಯಾ ಗೇಟ್ ಸುತ್ತಲೂ ಸಾರ್ವಜನಿಕರ ಸಂಚಾರ ಮತ್ತು ಸಂಚಾರ ದಟ್ಟಣೆಯನ್ನ ತಡೆಯಲು ವ್ಯಾಪಕವಾದ ವ್ಯವಸ್ಥೆಗಳನ್ನು ಮಾಡಲಾಗಿದೆ. ಭಾರೀ ಕಾಲ್ನಡಿಗೆಯ ಸಂದರ್ಭದಲ್ಲಿ, ಇಂಡಿಯಾ ಗೇಟ್ ಬಳಿಯ ಸಿ-ಹೆಕ್ಸಾಗಾನ್‌ ಪ್ರದೇಶವನ್ನು ವಾಹನಗಳು ಪ್ರವೇಶಿಸದಂತೆ ನಿರ್ಬಂಧಿಸಬಹುದು.

ಕ್ಯೂ-ಪಾಯಿಂಟ್, ಸುನ್ಹೇರಿ ಮಸೀದಿಯ ವೃತ್ತ, ರಾಜ್‌ಪಥ್, ರಫಿ ಮಾರ್ಗ, ವಿಂಡ್ಸರ್ ಪ್ಲೇಸ್ ವೃತ್ತ, ರಾಜೇಂದ್ರ ಪ್ರಸಾದ್ ರಸ್ತೆ-ಜನಪಥ್, ಕೆಜಿ ಮಾರ್ಗ-ಫಿರೋಜ್‌ಶಾ ರಸ್ತೆ, ಮಂಡಿ ಹೌಸ್‌ನ ವೃತ್ತ ಮತ್ತು ಮಥುರಾ ರಸ್ತೆ-ಪುರಾಣ ಕಿಲಾ ರಸ್ತೆ ಸೇರಿದಂತೆ ವಿವಿಧ ಪ್ರದೇಶಗಳಲ್ಲಿನ ಪರ್ಯಾಯ ಮಾರ್ಗಗಳ ಮೂಲಕ ಸಂಚಾರ ಮಾಡುವಂತೆ ತಿಳಿಸಿದೆ. ಈ ಕ್ರಮಗಳ ಮೂಲಕ ಸಾರ್ವಜನಿಕರು ಸುಲಭವಾಗಿ ಸಂಚಾರವನ್ನ ಮಾಡಬಹುದು. ಹಾಗೆ ಈ ಆಚರಣೆಯ ಸಮಯದಲ್ಲಿ ಪಾದಚಾರಿ ಸುರಕ್ಷತೆಗೆ ಆದ್ಯತೆ ನೀಡುವ ಗುರಿಯನ್ನ ಕೂಡ ಹೊಂದಿವೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+