2024 ಕಾಲಗರ್ಭಕ್ಕೆ ಸರಿದು ಹೋಗಿ ನೂತನ ವರ್ಷಕ್ಕೆ ಕಾಲಿಟ್ಟಿದ್ದೇವೆ. ಹೊಸ ಚೈತನ್ಯ ಹೊಸ ಉತ್ಸಾಹ, ಹೊಸ ಗುರಿಯೊಂದಿಗೆ ನಾವೆಲ್ಲರೂ ಹೆಜ್ಜೆ ಹಾಕಲಿದ್ದೇವೆ. ಜನವರಿ 1 ಬರೀ ಹೊಸ ವರ್ಷದ ಆರಂಭವಲ್ಲ, ಕ್ಯಾಲೆಂಡರ್ ತಿರುವಿ ಹಾಕುವ ದಿನವೂ ಅಲ್ಲ. ಯಾಕೆಂದರೆ ತಿಳಿದೋ ತಿಳಿಯದೆಯೀ ಅನೇಕ ಹೊಸ ಹೊಸ ಬದಲಾವಣೆಗೆ ಕಾಲಿಟ್ಟಿರುತ್ತೇವೆ. ಜನವರಿ 1ರಿಂದ ದೇಶದಲ್ಲಿ ಹೊಸ ಬದಲಾವಣೆ ಜಾರಿಗೆ ಬಂದಿದ್ದು ಈ ಬದಲಾವಣೆಗಳು ಎಲ್‌ಪಿಜಿ ಬೆಲೆಗಳಿಂದ ಹಿಡಿದು ಇಪಿಎಫ್‌ಒ ನಿಯಮಗಳವರೆಗೆ ವಿವಿಧ ಕ್ಷೇತ್ರಗಳನ್ನು ವ್ಯಾಪಿಸಿಕೊಂಡಿದೆ. ಹಾಗಿದ್ರೆ ಇಂದಿನಿಂದ ಏನಾಗುತ್ತದೆ ?ನಮ್ಮ ಜೀವನದ ಮೇಲೆ ಪ್ರಭಾವ ಬೀರುವ ಪ್ರಮುಖ ಸಂಗತಿಗಳು ಯಾವುದು ಎಂಬುವುದನ್ನು ನೋಡೋಣ.
ರೈತರ ಸಾಲ ಮಿತಿ ಹೆಚ್ಚಳ
ಹೊಸ ವರ್ಷದಲ್ಲಿ ದೇಶದ ರೈತರಿಗೆ ಅನಾಕೂಲವಾಗುವಂತೆ ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಗುಡ್ ನ್ಯೂಸ್ ಕೊಟ್ಟಿದ್ದು ಜನವರಿ 1ರಿಂದ ಅಡಮಾನರಹಿತ ಕೃಷಿ ಸಾಲ ಮಿತಿಯನ್ನು 2 ಲಕ್ಷ ರೂ.ಗೆ ಏರಿಕೆ ಮಾಡಿದೆ. ಈ ಹಿಂದೆ ಇದು 1.60 ಲಕ್ಷ ರೂ. ಇತ್ತು.

ಹೊಸ ಕಾರುಗಳು ದುಬಾರಿ
ಹೊಸ ವರ್ಷದಲ್ಲಿ ಹೊಸ ಕಾರು ಖರೀದಿ ಮಾಡಬೇಕು ಎಂಬ ಅಲೋಚನೆಯಲ್ಲಿದ್ದವರಿಗೆ ಕಾರು ಕಂಪನಿಗಳು ಹುಳಿ ಹಿಂಡಿದೆ. ಮಾರುತಿ ಸುಜುಕಿ, ಕಿಯಾ, ಹುಂಡೈ ಮಹೀಂದ್ರಾ, ಟಾಟಾ, ಎಂಜಿ ಸೇರಿದಂತೆ ಹಲವು ಕಾರು ಕಂಪನಿಗಳು ತಮ್ಮ ಹಾರಿನ ಬೆಲೆಯನ್ನು ಶೇ. 2 ರಿಂದ 4ರಷ್ಟು ಏರಿಕೆ ಮಾಡಿದೆ.
ಎಟಿಎಂನಲ್ಲಿ ಪಿಎಫ್ ಹಣ
ಭವಿಷ್ಯ ನಿಧಿ ಚಂದಾದಾರರಿಗೆ ಅನುಕೂಲವಾಗುವಂತೆ ಕೇಂದ್ರ ಸರ್ಕಾರವು ಹೊಸ ವರ್ಷದ ಕೊಡುಗೆಯಾಗಿ ಹೊಸ ಫೀಚರ್ಗಳನ್ನು ಜಾರಿಗೆ ತರಲಿದೆ. ಅವುಗಳಲ್ಲಿ ಪ್ರಮುಖವಾಗಿರುವುದು ಎಟಿಎಂಗಳಿಂದ ಹಣವನ್ನು ಹಿಂಪಡೆಯುವ ಸಾಮರ್ಥ್ಯ. ಕಾರ್ಮಿಕ ಸಚಿವಾಲಯವು ಐಟಿ ಸಿಸ್ಟಮ್ ಅಪ್‌ಗ್ರೇಡ್‌ನ ಭಾಗವಾಗಿ ಈ ವೈಶಿಷ್ಟ್ಯವನ್ನು ಅಭಿವೃದ್ಧಿಪಡಿಸುತ್ತಿದೆ. ಈ ಫೀಚರ್ ಜಾರಿಗೆ ಬಂದ ನಂತರ ಇಪಿಎಫ್ ಅಕೌಂಟ್ನಲ್ಲಿರುವ ಹಣವನ್ನು ನೇರವಾಗಿ ಎಟಿಎಂಗಳಲ್ಲಿ ವಿತ್ಡ್ರಾ ಮಾಡುವ ಅವಕಾಶ ಕಲ್ಪಿಸಲಾಗುತ್ತದೆ. ನೀವು ಕ್ಲೇಮ್ಗೆ ಅರ್ಜಿ ಹಾಕುವ ಅವಶ್ಯಕತೆ ಇರುವುದಿಲ್ಲ
ಕಡ್ಡಾಯ ಎಂಎಫ್ ಎ
ಸರ್ಕಾರವು GST ಫೈಲಿಂಗ್ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳನ್ನು ಘೋಷಿಸಿದ್ದು, ಅವುಗಳಲ್ಲಿ ಪ್ರಮುಖವಾಗಿ ಎಂಎಫ್ ಎ ದೃಢಿಕರಣವು ಒಂದಾಗಿದೆ. GST ತೆರಿಗೆದಾರರಿಗೆ ಬಹು-ಅಂಶದ ದೃಢೀಕರಣದ (MFA) ಕಡ್ದಾಯವಾಗಿದೆ. ಅದರಂತೆ ಇನ್ನು GST ಪೋರ್ಟ್ಲ್ ಗೆ ಪ್ರವೇಶ ಪಡೆಯಬೇಕಾದರೆ ಒನ್ ಟೈಂ ಪಾಸ್ ವರ್ಷ್ ನೀಡಬೇಕಾಗುತ್ತದೆ.
ಕೀಪ್ಯಾಡ್ ಸಣ್ಣ ಪೋನ್ ಪಾವತಿ ಮಿತಿ ಹೆಚ್ಚಳ
ಫೀಚರ್ ಫೋನ್‌ಗಳಲ್ಲಿ UPI 123Pay ಬಳಸಿಕೊಂಡು ಇಂದಿನಿಂದ 10,000 ರೂ.ವರೆಗಿನ UPI ಪಾವತಿಗಳನ್ನು ಮಾಡಬಹುದು. ಭಾರತೀಯ ರಿಸರ್ವ್ ಬ್ಯಾಂಕ್ (RBI) ಹೊಸ ಬದಲಾವಣೆ ತಂದಿದ್ದು ವಹಿವಾಟುಗಳಿಗೆ ಹಿಂದಿನ ಮಿತಿ 5,000 ರೂ.ಗಳಿಗಿಂತ 10,000ರೂ.ಗಳಿಗೆ ಏರಿಕೆ ಮಾಡಿದೆ. UPI 123Pay ಎನ್ನುವುದು ತಮ್ಮ ಮೊಬೈಲ್ ಫೋನ್‌ಗಳಲ್ಲಿ ಇಂಟರ್ನೆಟ್ ಪ್ರವೇಶವನ್ನು ಹೊಂದಿರದ ಜನರಿಗಾಗಿ ವಿನ್ಯಾಸಗೊಳಿಸಲಾದ ಸೇವೆಯಾಗಿದೆ.
ಎಲ್ ಪಿಜಿ ದರ ಪರಿಷ್ಕರಣೆ
ಸಾಮಾನ್ಯವಾಗಿ ಪ್ರತಿ ತಿಂಗಳ ಆರಂಭದಲ್ಲಿ ಎಲ್ಪಿಜಿ ದರ ಪರಿಷ್ಕರಣೆಯಾಗುತ್ತದೆ. ಹೀಗಾಗಿ ತೈಲಕಂಪನಿಗಳು ಅನಿಲ ಮತ್ತು ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯನ್ನು ಪ್ರತಿ ತಿಂಗಳಂತೆ ಪರಿಷ್ಕರಿಸಿದೆ. ಎಲ್‌ಪಿಜಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 14.50ರೂ. ಇಳಿಕೆಯಾಗಿದೆ. ಆದರೆ ಗೃಹ ಬಳಕೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬೆಲೆ ಇಳಿಕೆಯಾಗಿಲ್ಲ. ಈ ಹಿನ್ನಲೆಯಲ್ಲಿ 18ಕೆಜಿ. ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯು 1818.50 ರೂ.ವಿನಿಂದ ಇದೀಗ 1804 ರೂ.ಗೆ ಇಳಿಕೆಯಾಗಿದೆ. ತೈಲ ಕಂಪೆನಿಗಳು ಪ್ರತಿ ತಿಂಗಳ ಮೊದಲ ದಿನ ಗ್ಯಾಸ್ ಸಿಲಿಂಡರ್‌ಗಳ ಬೆಲೆಯಲ್ಲಿ ಪರಿಷ್ಕರಣೆ ಮಾಡುತ್ತದೆ.
More From GoodReturns

ಚಿನ್ನದ ಬೆಲೆ ಸ್ಥಿರ: ಆರ್‌ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್‌ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್‌ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್‌ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್‌ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್‌ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್‌ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್‌ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್‌ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications