ನವದೆಹಲಿ, ಮಾರ್ಚ್ 15: ಪೇಟಿಎಂ ಬ್ಯಾಂಕ್ ನಿಂದ ಫಾಸ್ಟ್‌ಟ್ಯಾಗ್ ಖರೀದಿಸಿರುವ ಹೆದ್ದಾರಿ ಬಳಕೆದಾರರು ಮಾರ್ಚ್ 15ರ ಮೊದಲು ಮತ್ತೊಂದು ಬ್ಯಾಂಕ್‌ನಿಂದ ಹೊಸ ಫಾಸ್ಟ್‌ಟ್ಯಾಗ್ ಅನ್ನು ಪಡೆದುಕೊಳ್ಳಲು ಒಳಿತು.
ಭಾರತೀಯ ರಾಷ್ಟ್ರೀ ಯ ಹೆದ್ದಾರಿ ಪ್ರಾಧಿಕಾರ(ಎನ್ಎಚ್ಎಐ)ವು ಪೇಟಿಎಂ ಫಾಸ್ಟ್‌ಟ್ಯಾಗ್ ಬಳಕೆದಾರರಿಗೆ ಈ ಬಗ್ಗೆ ಮಹತ್ವದ ಸೂಚನೆಯನ್ನು ನೀಡಿದ್ದು, ಸುಗಮ ಪ್ರಯಾಣದ ಅನುಭವವನ್ನುಖಾತ್ರಿಪಡಿಸಿಕೊಳ್ಳಲು ಮತ್ತು ಟೋಲ್ ಪ್ಲಾಜಾಗಳಲ್ಲಿ ಅನಾನುಕೂಲತೆಯನ್ನು ತಪ್ಪಿಸಲು ಮಾರ್ಚ್ 15 ರ ಮೊದಲು ಮತ್ತೊಂದು ಬ್ಯಾಂಕ್‌ನಿಂದ ಹೊಸ ಫಾಸ್ಟ್‌ಟ್ಯಾಗ್ ಅನ್ನು ಪಡೆದುಕೊಳ್ಳಲು ಸಲಹೆ ನೀಡಿದೆ. ಅಲ್ಲದೇ ಇತರೆ ಬ್ಯಾಂಕ್ ಳಿಂದ ಫಾಸ್ಟ್‌ಟ್ಯಾಗ್ ಖರೀದಿಸಿದರೆ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವೇಳೆ ದಂಡ ಅಥವಾ ಎರಡು ಬಾರಿ ಹಣ ಪಾವತಿಯಂತಹ ಸಮಸ್ಯೆ ಎದುರಾಗುವ ಪ್ರಮೇಯವೇ ಉದ್ಭವಿಸುವುದಿಲ್ಲ ಎಂದು ಹೇಳಿದೆ.

ಮಾರ್ಚ್ 15ರ ಬಳಿಕ ಎಲ್ಲ ಬಗೆಯ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಗೆ (ಪಿಪಿಬಿಎಲ್) ಭಾರತೀಯ ರಿಸರ್ವ್ ಬ್ಯಾಂಕ್ ಸೂಚಿಸಿದೆ. ಈ ಗಡುವಿನ ಬಳಿಕ ಪೇಟಿಎಂ ಬಳಕೆದಾರರ ಖಾತೆಗಳು, ಪ್ರೀ ಪೇಯ್ಡ್ ಪೇಮೆಂಟ್, ವ್ಯಾಲೆಟ್ ಮತ್ತು ಫಾಸ್ಟ್‌ಟ್ಯಾಗ್ ಗಳಿಗೆ ಯಾವುದೇ ಠೇವಣಿ ಅಥವಾ ಟಾಪ್-ಅಪ್ ಮಾಡುವ ಆಯ್ಕೆ ಇರುವುದಿಲ್ಲ ಎಂದು ಸೂಚಿಸಿದೆ. ಆದರೂ ಹೆದ್ದಾರಿ ಬಳಕೆದಾರರು ತಮ್ಮ ಖಾತೆಯಲ್ಲಿ ಉಳಿದಿರುವ ಬಾಕಿ ಹಣವನ್ನು(ಬ್ಯಾಲೆನ್ಸ್) ಟೋಲ್ ಪಾವತಿಗೂ ಬಳಸಬಹುದಾಗಿದೆ ಎಂದು ತಿಳಿಸಿದೆ. ರಾಷ್ಟ್ರೀ ಯ ಸಾಮಾನ್ಯ ಮೊಬಿಲಿಟಿ ಕಾರ್ಡ್ ನಲ್ಲಿಲ್ಲಿ ಇರುವ ಬಾಕಿ ಹಣ ಹಿಂಪಡೆಯಲು ಅಥವಾ ಬಳಸುವುದಕ್ಕೆ ಈ ಗಡುವಿನ ನಂತರವೂ ಪೇಟಿಎಂ ಬ್ಯಾಂ ಕ್ ಬಳಕೆದಾರರಿಗೆ ಅನುಮತಿ ನೀಡಲಾಗಿದೆ ಎಂದು ಆರ್ ಬಿಐ ಸ್ಪಷ್ಟಪಡಿಸಿದೆ.
ನಿಯಮ ಉಲ್ಲಂಘಿಸಿದ ಕಾರಣ ಜನವರಿ 31 ರಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ನಿರ್ಬಂಧ ವಿಧಿಸಿದ್ದು, ಆರ್‌ಬಿಐ ನಿರ್ದೇಶನದಂತೆ ಮಾರ್ಚ್ 15 ರಿಂದ ಡೆಪಾಸಿಟ್, ಕ್ರೆಡಿಟ್ ವಹಿವಾಟು ಸೇವೆಗಳನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸ್ಥಗಿತಗೊಳಿಸಲಿದೆ.
ಪೇಟಿಎಂ ಬ್ಯಾಂಕ್ ಹೊರತುಪಡಿಸಿ ದೇಶಾದ್ಯಂತ 39 ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿ (ಬ್ಯಾಂಕೇತರ ಹಣಕಾಸು ಸಂಸ್ಥೆಗಳು)ಗಳಿಂದ ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ತೆಗೆದುಕೊಳ್ಳಬಹುದು.


Click it and Unblock the Notifications