For Quick Alerts
ALLOW NOTIFICATIONS  
For Daily Alerts

"FASTag ವ್ಯಾಲೆಟ್ ನಲ್ಲಿ ಕನಿಷ್ಠ ಮೊತ್ತ ಇರಬೇಕೆಂಬ ಕಡ್ಡಾಯವಿಲ್ಲ"

By ಅನಿಲ್ ಆಚಾರ್
|

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಬುಧವಾರ ತಿಳಿಸಿರುವ ಪ್ರಕಾರ, FASTag ವ್ಯಾಲೆಟ್ ನಲ್ಲಿ ಕನಿಷ್ಠ ಮೊತ್ತವನ್ನು ಇಡಬೇಕು ಎಂಬ ಅಗತ್ಯವನ್ನು ತೆಗೆಯಲಾಗಿದೆ. ಎಲೆಕ್ಟ್ರಾನಿಕ್ ಟೋಲ್ ಪ್ಲಾಜಾಗಳಲ್ಲಿ ಸಂಚಾರ ಸಲೀಸಾಗಲಿ ಎಂದು ಈ ನಿರ್ಧಾರವನ್ನು ಮಾಡಲಾಗಿದೆ.

FASTag ಬಳಕೆ ಮಾಡುವವರ ಪ್ರಮಾಣ ಹೆಚ್ಚಾಗಬೇಕು ಹಾಗೂ ಸಂಚಾರ ಸಲೀಸಾಗಿ, ಟೋಲ್ ಪ್ಲಾಜಾಗಳಲ್ಲಿ ವಿಳಂಬ ಇಲ್ಲದಂತಾಗಬೇಕು. ಪ್ರಯಾಣಿಕರ ವಾಹನದ ಸೆಗ್ಮೆಂಟ್ ನಲ್ಲಿ (ಕಾರು/ಜೀಪ್/ವ್ಯಾನ್) ಭದ್ರತಾ ಠೇವಣಿ ಹೊರತಾಗಿ FASTag ಖಾತೆ/ವ್ಯಾಲೆಟ್ ನಲ್ಲಿ ಕನಿಷ್ಠ ಇಷ್ಟು ಮೊತ್ತ ಇರಬೇಕು ಎಂದಿದ್ದ ಕಡ್ಡಾಯ ನಿಯಮವನ್ನು ತೆಗೆಯಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಧಾರ ಮಾಡಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

FASTag ಹೈಬ್ರಿಡ್ ಲೇನ್ ಗಳ ಅವಧಿ ಫೆಬ್ರವರಿ 15ರ ತನಕ ವಿಸ್ತರಣೆFASTag ಹೈಬ್ರಿಡ್ ಲೇನ್ ಗಳ ಅವಧಿ ಫೆಬ್ರವರಿ 15ರ ತನಕ ವಿಸ್ತರಣೆ

ಭದ್ರತಾ ಠೇವಣಿಯ ಹೊರತಾಗಿ ವಿತರಣೆ ಬ್ಯಾಂಕ್ ನಿಂದ ಇಂತಿಷ್ಟು ಮೊತ್ತವು FASTag ಖಾತೆ/ವ್ಯಾಲೆಟ್ ನಲ್ಲಿ ಇಟ್ಟಿರಬೇಕು ಎಂದು ಏಕಪಕ್ಷೀಯವಾಗಿ ಕಡ್ಡಾಯ ಮಾಡಲಾಗಿತ್ತು.

ಈ ಕಾರಣದಿಂದ FASTag ಖಾತೆ/ವ್ಯಾಲೆಟ್ ನಲ್ಲಿ ಅಗತ್ಯ ಪ್ರಮಾಣದ ಬ್ಯಾಲೆನ್ಸ್ ಇದ್ದರೂ FASTag ಬಳಕೆ ಮಾಡುವ ಹಲರರಿಗೆ ಟೋಲ್ ಪ್ಲಾಜಾ ಮೂಲಕ ಸಲೀಸಾಗಿ ತೆರಳುವುದಕ್ಕೆ ಅನುವು ಮಾಡಿಕೊಡುತ್ತಿರಲಿಲ್ಲ. ಇದರಿಂದಾಗಿ ಅನಗತ್ಯ ಅಡೆತಡೆಗಳು ಹಾಗೂ ವಿಳಂಬ ಆಗುತ್ತಿತ್ತು.

ಈಗ FASTag ಖಾತೆ/ವ್ಯಾಲೆಟ್ ನಲ್ಲಿ ನಾನ್ ನೆಗೆಟಿವ್ ಬ್ಯಾಲೆನ್ಸ್ ಇದ್ದಲ್ಲಿ ಅವರು ಟೋಲ್ ಪ್ಲಾಜಾ ಮೂಲಕ ತೆರಳುವುದಕ್ಕೆ ಅನುವು ಮಾಡಿಕೊಡುವುದಕ್ಕೆ ನಿರ್ಧರಿಸಲಾಗಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಲಾಗಿದೆ.

ಒಂದು ವೇಳೆ ಟೋಲ್ ಪ್ಲಾಜಾ ದಾಟಿದ ನಂತರ ಬ್ಯಾಲೆನ್ಸ್ ನೆಗೆಟಿವ್ ಆದಲ್ಲಿ ಬ್ಯಾಂಕ್ ಗಳು ಭದ್ರತಾ ಠೇವಣಿಯಿಂದ ಹಣ ಮುರಿದುಕೊಳ್ಳಬಹುದು. ಆ ಮೊತ್ತವನ್ನು ಮುಂದಿನ ರೀಚಾರ್ಜ್ ವೇಳೆಗೆ ಬಳಕೆದಾರರಿಂದ ವಸೂಲಿ ಮಾಡಬಹುದು ಎಂದು ತಿಳಿಸಲಾಗಿದೆ.

2.54 ಕೋಟಿಗೂ ಬಳಕೆದಾರರಿದ್ದು, FASTag ಮೂಲಕ ಶೇಕಡಾ 80ರಷ್ಟು ಸಂಗ್ರಹ ಸುಂಕ ಸಂಗ್ರಹ ಆಗುತ್ತದೆ. FASTag ಮೂಲಕ ದಿನದ ಸಂಗ್ರಹ ರು. 89 ಕೋಟಿ ದಾಟಿದೆ. ಫೆಬ್ರವರಿ 15, 2021ರಿಂದ FASTag ಕಡ್ಡಾಯ ಮಾಡಲಾಗಿದೆ.

English summary

NHAI Removes Mandatory Minimum Balance In Fastag Wallet

NHAI removes minimum amount maintenance in Fastag wallet/account.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X