For Quick Alerts
ALLOW NOTIFICATIONS  
For Daily Alerts

ಖಾಸಗಿ ಆಸ್ಪತ್ರೆಯ ಕೋವಿಡ್ ವಾರಿಯರ್ಸ್‌ಗೆ ವಿಮೆ ಏಕೆ ಇಲ್ಲ?; NHRC

|

ನವದೆಹಲಿ, ಜೂನ್ 13: ಕೋವಿಡ್ ವಾರಿಯರ್ಸ್‌ಗೆ ಗುಂಪು ವಿಮೆ ಜಾರಿಗೊಳಿಸುವ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಶುಕ್ರವಾರ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (IRDA) ಹಾಗೂ ಕೇಂದ್ರ ಹಣಕಾಸು ಸಚಿವಾಲಯಕ್ಕೆ ನೋಟಿಸ್ ಜಾರಿಗೊಳಿಸಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೋವಿಡ್ ವಾರಿಯರ್ಸ್‌ಗೆ ಕೇಂದ್ರ ರಾಜ್ಯ ಸರ್ಕಾರಗಳು ಜಂಟಿಯಾಗಿ 50 ಲಕ್ಷ ರುಪಾಯಿ ಗುಂಪು ಆರೋಗ್ಯ ವಿಮೆ ಜಾರಿಗೊಳಿಸಿವೆ. ಈ ಕುರಿತು ವಿಚಾರಣೆ ನಡೆಸಿದ NHRC, ಖಾಸಗಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಕೋವಿಡ್ ವಾರಿಯರ್ಸ್‌ಗೆ ಗುಂಪು ಆರೋಗ್ಯ ವಿಮೆ ಏಕೆ ಇಲ್ಲ? ಎಂದು ನೋಟಿಸ್ ಜಾರಿಗೊಳಿಸಿದೆ.

2020ರಿಂದ LIC ವಿಮಾ ಯೋಜನೆಗಳಲ್ಲಿ ಆಗುವ 5 ಬದಲಾವಣೆ ಗಮನಿಸಿ 2020ರಿಂದ LIC ವಿಮಾ ಯೋಜನೆಗಳಲ್ಲಿ ಆಗುವ 5 ಬದಲಾವಣೆ ಗಮನಿಸಿ

ಅಲ್ಲದೇ ಈ ವಿಮಾ ವಿಚಾರದಲ್ಲಿ ಕೋವಿಡ್ ಅಲ್ಲದ ಕೆಲಸ ಮಾಡುವ ವೈದ್ಯಕೀಯ ಸಿಬ್ಬಂದಿಯೂ ಸೇರಿದ್ದಾರೆಯೇ ಎಂಬ ಗೊಂದಲವೂ ಇದೆ ಎಂದು NHRC ಹೇಳಿದೆ.

ಖಾಸಗಿ ಆಸ್ಪತ್ರೆಯ ಕೋವಿಡ್ ವಾರಿಯರ್ಸ್‌ಗೆ ವಿಮೆ ಏಕೆ ಇಲ್ಲ?; NHRC

ಈ ವಿಷಯದಲ್ಲಿ ನಾಲ್ಕು ವಾರಗಳಲ್ಲಿ ವಿವರವಾದ ವರದಿಯನ್ನು ಸಲ್ಲಿಸುವಂತೆ NHRC ಐಆರ್‌ಡಿಎ ಮತ್ತು ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆಯ (ಡಿಎಫ್‌ಎಸ್) ಕಾರ್ಯದರ್ಶಿಯನ್ನು ಕೇಳಿದೆ.

English summary

NHRC Issues Notices To IRDA Over Insurance To Health Workers

NHRC Issues Notices To IRDA Over Insurance To Health Workers
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X