ನವದೆಹಲಿ, ಜುಲೈ 25: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಿದ ನಂತರ ತೆರಿಗೆ ಪದ್ಧತಿಯಲ್ಲಿ ಮಹತ್ವದ ಬದಲಾವಣೆಯನ್ನು ಮಾಡಿದ್ದಾರೆ. ಇದರ ಜತೆ ಕಾರ್ಪೋರೇಟ್ ತೆರಿಗೆ ವಿಚಾರದಲ್ಲಿಯೂ ಬದಲಾವಣೆ ಮಾಡಲಾಗಿದ್ದು ಸ್ಟಾರ್ಟ್ ಅಪ್‌ಗಳಿಗೆ ಉತ್ತೇಜನ ಸಿಗಲಿದೆ ಎಂದೇ ಭಾವಿಸಲಾಗಿದೆ.
ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಯನ್ನು ಶೇಕಡಾ 5 ರಷ್ಟು ಕಡಿಮೆ ಮಾಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ತಿಳಿಸಿದ್ದಾರೆ. ಕಾರ್ಪೊರೇಟ್ ತೆರಿಗೆಯನ್ನು ಶೇ. 40ರಿಂದ ಶೇ. 35ಕ್ಕೆ ಇಳಿಸಲಾಗಿದೆ. ಇಡೀ ಭಾರತೀಯ ಸ್ಟಾರ್ಟಪ್ ಸಮುದಾಯಕ್ಕೆ ದುಸ್ವಪ್ನವಾಗಿದ್ದ ಏಂಜೆಲ್ ತೆರಿಗೆಯನ್ನು ರದ್ದುಪಡಿಸಲಾಗುತ್ತಿದೆ. ಕಂಪನಿ ಆಫ್ ಮಾರ್ಕೆಟ್ ವಹಿವಾಟುಗಳು ಮತ್ತು ಷೇರುಗಳ ವಿತರಣೆಯ ಮೂಲಕ ಸಂಗ್ರಹಿಸಿದ ಬಂಡವಾಳದ ಮೇಲೆ ಪಾವತಿಸಬೇಕಾದ ಈ ತೆರಿಗೆಯನ್ನು ಸ್ಟಾರ್ಟಪ್ ಅಂದರೆ ನವೋದ್ಯಮ ಉತ್ತೇಜಿಸಲು ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಹಾಗಿದ್ದರೆ ಏಂಜೆಲ್ಸ್ ತೆರಿಗೆ ಎಂದರೇನು ಎನ್ನುವುದನ್ನು ತಿಳಿದುಕೊಳ್ಳಬೇಕು. ಇಲ್ಲಿ ಏಂಜೆಲ್ ತೆರಿಗೆ ಎಂದರೆ, ಲಿಸ್ಟ್ ಆಗಿಲ್ಲದ ಷೇರುಗಳನ್ನು ನ್ಯಾಯಯುತ ಮೌಲ್ಯಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಗಳಿಸಿದ ಲಾಭಕ್ಕೆ ವಿಧಿಸಲಾಗುವ ತೆರಿಗೆ ಎಂದು ಹೇಳಬಹುದು. ನವೋದ್ಯಮಗಳಲ್ಲಿ ಹೂಡಿಕೆ ಮಾಡುವವರಿಗೆ ಈ ತೆರಿಗೆ ವಿಧಿಸಲಾಗುತ್ತಿದ್ದು ಈಗ ಇದನ್ನು ರದ್ದು ಮಾಡಿರುವುದರಿಂದ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮತ್ತಷ್ಟು ಹೆಚ್ಚಲಿದೆ ಎನ್ನುವ ನಿರೀಕ್ಷೆ ಇಟ್ಟುಕೊಳ್ಳಬಹುದು.
ಕಾರ್ಪೊರೇಟ್ ತೆರಿಗೆ ಕಡಿತ:
ಹೂಡಿಕೆ ಮತ್ತು ಉದ್ಯೋಗವನ್ನು ಮುಕ್ತವಾಗಿ ಬೆಂಬಲಿಸಲು ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆಗಳನ್ನು ಕಡಿತಗೊಳಿಸಲಾಗಿದೆ. ಅಭಿವೃದ್ಧಿ ಅಗತ್ಯಗಳಿಗಾಗಿ ವಿದೇಶಿ ಬಂಡವಾಳವನ್ನು ಆಕರ್ಷಿಸುವ ಸಲುವಾಗಿ, ವಿದೇಶಿ ಕಂಪನಿಗಳ ಮೇಲಿನ ಕಾರ್ಪೊರೇಟ್ ತೆರಿಗೆ ದರವನ್ನು ಶೇಕಡಾ 40 ರಿಂದ 35 ಕ್ಕೆ ಇಳಿಸುವುದಾಗಿ ಸೀತಾರಾಮನ್ ಪ್ರಸ್ತಾಪಿಸಿದ್ದಾರೆ. ಇದು ಆದಾಯ ತೆರಿಗೆಗೆ ಸಂಬಂಧಿಸಿದಂತೆ ಸರ್ಕಾರದ ಬಹು ದೊಡ್ಡ ಘೋಷಣೆಯಾಗಿದೆ.
ದೇಶದಲ್ಲಿ ಸದ್ಯಕ್ಕೆ 1.17 ಲಕ್ಷ ಸ್ಟಾರ್ಟ್ ಅಪ್ ಗಳು ನೋಂದಣಿಯಾಗಿವೆ. ಸರ್ಕಾರದ ನಿಯಮಗಳಿಗೆ ಅನುಗುಣವಾಗಿ ಇವುಗಳಿಗೆ ಪ್ರೋತ್ಸಾಹಧನ ದೊರೆಯುತ್ತದೆ. ಈಗ ಏಂಜಲ್ಸ್ ಟ್ಯಾಕ್ಸ್ ರದ್ದಾಗಿರುವುದರಿಂದ ಹೂಡಿಕೆಗೂ ಮತ್ತಷ್ಟು ಉತ್ತೇಜನ ಸಿಗಲಿದ್ದು ಸ್ಟಾರ್ಟ್ ಅಪ್ ವಲಯ ವೇಗ ಪಡೆದುಕೊಳ್ಳಲಿದೆ.
ತೆರಿಗೆ ನಿಯಮ ಬದಲಾವಣೆ:
ತೆರಿಗೆ ನಿಯಮದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಹಳೆ ತೆರಿಗೆ ಪದ್ಧತಿ ಹಾಗೆ ಇದೆ ಅಲ್ಲಿ ಯಾವ ಬದಲಾವಣೆಯನ್ನು ಮಾಡಲಾಗಿಲ್ಲ. ಆದಾಯ ತೆರಿಗೆ ಮಿತಿ 2.5 ಲಕ್ಷ ರೂ. ಇದೆ. 2.5 ಲಕ್ಷದಿಂದ 5 ಲಕ್ಷದವರೆಗೆ ಶೇ. 5 ರಷ್ಟು ತೆರಿಗೆ, 5 ರಿಂದ 10 ಲಕ್ಷ ಕ್ಕೆ ಶೇ. 20 ರಷ್ಟು ತೆರಿಗೆ ನಿಮ್ಮ ಆದಾಯ 10 ಲಕ್ಷ ಮೇಲ್ಪಟ್ಟಿದ್ದರೆ ಶೇ. 30 ರಷ್ಟು ತೆರಿಗೆ.. ಈ ಪೊದ್ಧತಿಯಲ್ಲಿ ನೀವು ಎಚ್‌ಆರ್ ಎ, ಹೂಡಿಕೆಗೆ ಸಮಬಂಧಿಸಿ ತೆರಿಗೆ ವಿನಾಯಿತಿ ಪಡೆದುಕೊಳ್ಳಲು ಈಗಲೂ ಸಾಧ್ಯವಿದೆ.
ಬಜೆಟ್‌ನಲ್ಲಿ ಹೊಸ ತೆರಿಗೆ ಪದ್ಧತಿಯಲ್ಲಿ ಕೆಲವು ಸಣ್ಣ ಬದಲಾವಣೆ ಮಾಡಿದ್ದಾರೆ. ವೈಯಕ್ತಿಕ ಆದಾಯ ತೆರಿಗೆ ಪಾವತಿದಾರರಿಗೆ ತೆರಿಗೆ ಆಡಳಿತವನ್ನು ಸರಳಗೊಳಿಸುವ ಭರವಸೆ ಸಹ ನಿರ್ಮಲಾ ನೀಡಿದ್ದಾರೆ. 3 ರಿಂದ 6 ಲಕ್ಷಕ್ಕೆ ಇದ್ದ ಶೇ. 5 ರ ತೆರಿಗೆಯನ್ನು 3 ರಿಂದ 7 ಲಕ್ಷಕ್ಕೆ ಅಂದರೆ ಒಂದು ಲಕ್ಷಕ್ಕೆ ಏರಿಕೆ ಮಾಡಲಾಗಿದೆ. ಇದರ ಜತೆಗೆ 6 ರಿಂದ 9 ಲಕ್ಷಕ್ಕೆ ಇದ್ದ ಶೇ. 10 ರಷ್ಟು ತೆರಿಗೆಯನ್ನು 7 ರಿಂದ 10 ಲಕ್ಷಕ್ಕೆ ಏರಿಕೆ ಮಾಡಲಾಗಿದೆ. 9 ರಿಂದ 12 ಲಕ್ಷಕ್ಕೆ ಇದ್ದ ಏ. 15 ರಷ್ಟು ತೆರಿಗೆಯನ್ನು 10 ರಿಂದ 12 ಲಕ್ಷಕ್ಕೆ ಸೀಮಿತ ಮಾಡಲಾಗಿದೆ.
ಕೇಂದ್ರ ಸರ್ಕಾರ ತೆರಿಗೆ ಪದ್ಧತಿಯಲ್ಲಿ ದೊಡ್ಡ ರಿಲೀಫ್ ನೀಡುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಸಣ್ಣ ಪುಟ್ಟ ಬದಲಾವಣೆ ಮಾಡಿದೆ. ಇನ್ನು ಮ್ಯೂಚುವಲ್ ಫಂಡ ಮಾರಾಟಕ್ಕೆ ಸಂಬಂಧಿಸಿ, ಶಾರ್ಟ್ ಟರ್ಮ್ ಕ್ಯಾಪಿಟಲ್ ಗೇನ್ ಮತ್ತು ಲಾಂಗ್ ಟರ್ಮ್ ಕ್ಯಾಪಿಟಲ್ ಗೇನ್ ಗಳಿಗೂ ತೆರಿಗೆ ಹೆಚ್ಚಾಗಿದೆ.


Click it and Unblock the Notifications