ಮಧ್ಯಮ ವರ್ಗ ನಂಬಿರುವ 'ಗೆಲುವಿನ ಸೂತ್ರ'ವೇ ಸಾಲದ ಹೊನ್ನ ಶೂಲ: ಸತ್ಯ ಬಿಚ್ಚಿಟ್ಟ ನಿತಿನ್ ಕಾಮತ್

ಜೆರೋಧಾ ಸಹ-ಸಂಸ್ಥಾಪಕರಾಗಿರುವ ನಿತಿನ್ ಕಾಮತ್ ಯಾರಿಗೆ ತಿಳಿದಿಲ್ಲ ಹೇಳಿ..ಸಾಮಾನ್ಯವಾಗಿ ಇವರ ಬಳಿ ಹೆಚ್ಚಾಗಿ , ಸ್ಟಾಕ್ ಗೆ ಸಂಬಂಧಿಸಿದ ಸಲಹೆಗಳನ್ನು ಕೇಳಲಾಗುತ್ತದೆ. ಆದರೆ ಅವರು ವೈಯಕ್ತಿಕ ಸ್ಟಾಕ್ ಸಲಹೆಗಳನ್ನು ನೀಡುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

ಸಾಮಾನ್ಯವಾಗಿ ಹೂಡಿಕೆಯ ಬಗ್ಗೆ ತಮ್ಮ ಅಭಿಪ್ರಾಯಗಳು ಮತ್ತು ಮಾರುಕಟ್ಟೆಯ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತಾರೆ, ಆದರೆ ನಿರ್ದಿಷ್ಟ ಸ್ಟಾಕ್‌ಗಳನ್ನು ಶಿಫಾರಸು ಮಾಡುವುದಿಲ್ಲ. ಹೂಡಿಕೆದಾರರು ತಮ್ಮದೇ ಆದ ಸಂಶೋಧನೆ ಮತ್ತು ವಿಶ್ಲೇಷಣೆಯ ಆಧಾರದ ಮೇಲೆ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಆಗ್ಗಾಗ್ಗೆ ಹೇಳುತ್ತಿರುತ್ತಾರೆ.

ಗೆಲುವಿನ ಸೂತ್ರವಲ್ಲ ಇದು ಸಾಲದ ಜಾಲ:ನಿತಿನ್ ಕಾಮತ್

ನಿತಿನ್ ಕಾಮತ್ ಅವರು ಸಾಮಾಜಿಕ ಮಾದ್ಯಮಗಳಲ್ಲಿಯೂ ಆಕ್ಟ್ವಿವ್ ಆಗಿ ಇರುವಂತಹ ಯುವ ಉದ್ಯಮಿ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕ ಫಾಲೋವರ್ಸ್ ಅವರ ಬಳಿ ಸಂಪತ್ತನ್ನು ನಿರ್ಮಿಸಲು ಬೇಕಾಗಿರುವ ಹಾಗೂ ಸ್ಟಾಕ್ ಟಿಪ್ಸ್ ಗಳ ನೀಡುವಂತೆ ಒತ್ತಾಯಿಸುತ್ತಾರೆ. ಅದಕ್ಕೆ ಅರ್ಥಪೂರ್ಣವಾದ ಉತ್ತರವನ್ನು ಕೊಟ್ಟಿರುವುದಲ್ಲದೇ, ಸಾಮಾನ್ಯವಾಗಿ ಮಧ್ಯಮ ವರ್ಗದ ಜನ ಹೆಚ್ಚು ಗಳಿಸುತ್ತಿದ್ದರೂ ಶ್ರೀಮಂತ ವರ್ಗವಾಗಿ ಮೇಲ್ದರ್ಜೆಗೆ ಏಕೆ ಏರೋದಿಲ್ಲ ಎನ್ನುವುದನ್ನು ಸರಳವಾಗಿ ವಿವರಿಸುತ್ತಾರೆ.

ನನಗೂ ಸಹ ಅನೇಕ ಬಾರಿ "ಯಾವ ಷೇರು ಶ್ರೀಮಂತರನ್ನಾಗಿಸುತ್ತದೆ?" ಎಂದು ಕೇಳಲಾಗುತ್ತದೆ. ದುರದೃಷ್ಟವಶಾತ್, ಶ್ರೀಮಂತರಾಗಲು ಯಾವುದೇ ಸುಲಭ ಮಾರ್ಗಗಳಿಲ್ಲ. ಅದಕ್ಕೆ ಉತ್ತಮ ಅಭ್ಯಾಸಗಳು ಮತ್ತು ತಾಳ್ಮೆಯಿಂದ ಇದನ್ನು ಸಾಧ್ಯವಾಗಿಸಬಹುದು. ನಿಮಗೆ ಅಗತ್ಯವಿಲ್ಲದ ವಸ್ತುಗಳನ್ನು ಖರೀದಿಸುವುದು, ಅಥವಾ ಅದಕ್ಕಿಂತ ಕೆಟ್ಟದಾಗಿ, ಅವುಗಳನ್ನು ಖರೀದಿಸಲು ಸಾಲ ಮಾಡುವುದು - ಇಂತಹ ವಿಷಯಗಳು ನಮ್ಮ ಬೆಳವಣಿಗೆಗೆ ತಡೆಯುಂಟು ಮಾಡುವುದಲ್ಲದೇ, ನಮ್ಮನ್ನು ನಿಜವಾಗಿಯೂ ಹಿಂದಕ್ಕೆ ತಳ್ಳಿಬಿಡುತ್ತದೆ. ಇನ್ನೊಂದು ದೊಡ್ಡ ವಿಷಯವೆಂದರೆ ಆರೋಗ್ಯ ವಿಮೆ ಇಲ್ಲದಿರುವುದು. ಮಧ್ಯಮ ವರ್ಗದ ಜನಕ್ಕೆ ಇದು ಅನಗತ್ಯವೆಂದು ಬಹಳಷ್ಟು ಬಾರಿ ಕಾಣಿಸುತ್ತದೆ. ಆದರೆ ಇಂತಹ ವಿಚಾರಗಲೇ ನಿಮ್ಮ ಆರ್ಥಿಕ ಬೆಳವಣಿಗೆಗೆ ಅಡ್ಡಿಯುಂಟು ಮಾಡುತ್ತದೆ ಎಂದು ಮಧ್ಯಮ ವರ್ಗದವರ ಆರ್ಥಿಕ ಸಂಕಷ್ಟದ ಬಗ್ಗೆ ಅದ್ಭುತವಾಗಿ ನಿತಿನ್ ಕಾಮತ್ ವಿವರಿಸುತ್ತಾರೆ.

ಈ ವಿಷಯವನ್ನು ಮತ್ತಷ್ಟು ಜನರಿಗೆ ಅರ್ಥವಾಗಿಸಲು , ಕಾಮತ್ ಅವರು ಭಾರತದ ಮಧ್ಯಮ ವರ್ಗವು ಹೆಚ್ಚು ಗಳಿಸುತ್ತಿದ್ದರೂ ಸಹ ಬಡತನ ಏಕೆ ಮುಂದುವರಿಯುತ್ತಿದೆ ಎಂಬುದನ್ನು ವಿವರಿಸುವ ಒಂದು ಅರ್ಥಪೂರ್ಣವಾದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಯಶಸ್ಸಿನ ಸೂತ್ರವಲ್ಲ ಸಾಲದ ಜಾಲಗಳು

ಮಿಡ್ಲ್ ಕ್ಲಾಸ್ ಮೈಂಡ್ ಸೆಟ್ ಹೇಗಿರುತ್ತೆ ಅಂದರೆ ಕಷ್ಟಪಟ್ಟು ಓದು, ಉದ್ಯೋಗ ಪಡೆದುಕೊಳ್ಳು, ಸಾಲ ಮಾಡಿಯಾದ್ರೂ ಸರಿ ಸ್ವಂತ ಮನೆ ಮಾಡಿ, ಸಮಾಜಿಕವಾಗಿ ಪ್ರಭಾವ ಬೀರಲಾದ್ರೂ ಸರಿ ಟಿಪ್ - ಟಾಪ್ ಉಡುಗೆ -ತೊಡುಗೆ ಧರಿಸು. ಆದರೆ ಈ ವಿಡಿಯೋದಲ್ಲಿ ಇದು ಯಶಸ್ಸಿನ ಸೂತ್ರ ಎಂದು ಕರೆಯಲ್ಪಡುವ ಇದನ್ನು ಹರಿದು ಹಾಕುವ ಮೂಲಕ ಪ್ರಾರಂಭವಾಗುತ್ತದೆ. ಯಾಕೆಂದರೆ ಮಧ್ಯಮ ವರ್ಗ ಯಾವುದನ್ನು ಯಶಸ್ಸಿನ ಸೂತ್ರ ಅಂದುಕೊಂಡಿದೆಯೇ ನಿಜವಾಗಿಯೂ ಅದೇ ವೈಭವೀಕರಿಸಿದ ಸಾಲದ ಬಲೆ. ಇಲ್ಲಿ ಮಾಸಿಕ ಸಂಬಳಗಳು ನಿಜವಾಗಿ ಜೀವನ ಭದ್ರತೆಯಾಗಿರದೆ, ತಿಂಗಳ ಆರಂಭಕ್ಕೆ ಬಂದ ಕೆಲವೇ ದಿನದಲ್ಲಿ ಮಾಯವಾಗುವ ಅತಿಥಿಯಂತೆ ಇರುತ್ತದೆ.

ಇದರಿಂದ ಬಿಡುಗಡೆ ಹೇಗೆ?

ಮಿಡ್ಲ್ ಕ್ಲಾಸ್ ಮಂದಿ ನಂಬುವ ಯಶಸ್ಸಿನ ಸೂತ್ರ ಸಾಲದ ಜಾಲವಾಗಿದ್ದು ಅದರಿಂದ ಸಿಲುಕಿಕೊಳ್ಳಬಾರದೆಂದರೆ ಮೊದಲ ಹೆಜ್ಜೆ ಅಂದ್ರೆ ಪ್ರತಿಯೊಂದು ಖರ್ಚನ್ನು ಬರೆದಿಡುವ್ದು. ₹10 ನಾಣ್ಯದಿಂದ ₹1,000 ಭೋಜನದವರೆಗೆ - ಪ್ರತಿಯೊಂದನ್ನು ಟ್ರ್ಯಾಕ್ ಮಾಡಿ. ನಂತರ ನಿಮ್ಮ ಖರ್ಚಿನಲ್ಲಿ ಕೇವಲ 1% ಕಡಿತಗೊಳಿಸಿ. ಉದಾಹರಣೆಗೆ ತಿಂಗಳಲ್ಲಿ ನೀವು ಮಾಡುವ ಒಂದು ಫುಡ್ ಆರ್ಡರ್ ₹500 ಅನ್ನು ಉಳಿಸಿ ಹೂಡಿಕೆ ಮಾಡಬಹುದು. ಹಣಕ್ಕಾಗಿ ಅಲ್ಲ, ಆದರೆ ಅಭ್ಯಾಸಕ್ಕಾಗಿ.

ಎರಡನೇ ಹಂತವು ಎಲ್ಲಾ ಜನಪ್ರಿಯ ಹೂಡಿಕೆ ಸಲಹೆಗಳಿಗೆ ತದ್ವಿರುದ್ದವಾಗಿ ಅಂದ್ರೆ ನೀವು ಹಣ ಗಳಿಸುವ ಬಗ್ಗೆ ಯೋಚಿಸುವ ಮೊದಲು, ನೀವು ಹಣ ಇಲ್ಲದೆ ಬದುಕಬಲ್ಲಿರಿ ಎಂದು ಖಚಿತಪಡಿಸಿಕೊಳ್ಳಬೇಕು. ಒಂದು ಮಾತು ನೆನೆಪಿನಲ್ಲಿಟ್ಟುಕೊಳ್ಳಿ , ಯಾರೇ ಆಗಲಿ ಕಡಿಮೆ ಹಣ ಸಂಪಾದನೆ ಮಾಡುವ ಕಾರಣಕ್ಕೆ ಯಾರೇ ಆಗಲಿ ದಿವಾಳಿಯಾಗುವುದಿಲ್ಲ. ದಿವಾಳಿಯಾಗುವುದು ಉದ್ಯೋಗ ನಷ್ಟ ಅಥವಾ ಆರೋಗ್ಯ ತುರ್ತುಸ್ಥಿತಿಯಂತಹ ಒಂದು ಕೆಟ್ಟ ಘಟನೆಗಳು ನಡೆದು, ಐದು ವರ್ಷಗಳಷ್ಟು ಹಿಂದಕ್ಕೆ ತಳ್ಳುವುದರಿಂದ ನೀವು ದಿವಾಳಿಯಾಗುತ್ತೀರಿ. ಹೀಗಾಗೊ ನಿಮ್ಮ ತಿಂಗಳ ಖರ್ಚುಗಳು ಎಷ್ಟು ಇವೆಯೋ ಅದರ 6 ಪಟ್ಟು ಅಂದರೆ ಆರು ತಿಂಗಳು ವೇತನವಿಲ್ಲದೇ ಬದುಕಲು ಬೇಕಾಗಿರುವಷ್ಟು ತುರ್ತು ನಿಧಿ ನಿಮ್ಮಲ್ಲಿ ಇರಬೇಕು. ಇದರೊಂದಿಗೆ ಮತ್ತೊಂದು ಅಗತ್ಯ ಅಂದ್ರೆ ಆರೋಗ್ಯ ವಿಮೆ. ಏಕೆಂದರೆ ಭಾರತದಲ್ಲಿ ಅನಾರೋಗ್ಯದ ಚಿಕಿತ್ಸಾ ವೆಚ್ಚ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ ಎಂಬುವುದನ್ನು ಅರ್ಥಮಾಡಿಕೊಳ್ಳಬೇಕು.

ಈ ವಿಡಿಯೋದಲ್ಲಿ ಇರುವ ಇನ್ನೊಂದು ವಿಚಾರ ಅಂದ್ರೆ ಸಾಲದ ಬಗ್ಗೆ ನಮ್ಮ ಯೋಚನೆಯನ್ನು ಬದಲಾಯಿಸುತ್ತದೆ. ನಾವು ಫೋನು, ಕಾರು, ಬಟ್ಟೆಗಳಂತಹ ವಸ್ತುಗಳನ್ನು EMI ಗಳನ್ನು ಬಳಸಿ ನಮ್ಮ ದೊಡ್ಡಸ್ತಿಕೆಯನ್ನು ತೋರಿಸಲು ಪ್ರಯತ್ನಿಸುತ್ತೇವೆ. ಆದರೆ ಈ ಸುಲಭ ಸಾಲಗಳಿಗೆ ಒಂದು ರಹಸ್ಯವಾದ ಬೆಲೆ ಇದೆ: ನಿಮ್ಮ ಸಮಯ. ನೀವು ಆ ವಸ್ತುವಿನ ನಿಜವಾದ ಮಾಲೀಕರಲ್ಲ. ಬ್ಯಾಂಕ್ ಅದರ ಮಾಲೀಕರಾಗಿರುತ್ತದೆ.

ಕೊನೆಯದಾಗಿ ಸಾಲ ಮತ್ತು ನಿಮ್ಮ ಆದಾಯದ ಲೆಕ್ಕಾಚಾರ ಮಾಡುವುದರಿಂದ ನೀವು ಎಷ್ಟರ ಮಟ್ಟಿಗೆ ಸಾಲದಲ್ಲಿ ಸಿಲುಕಿದ್ದೀರಿ ಎಂದು ತಿಳಿಯುತ್ತದೆ. ನಿಮ್ಮ ಆದಾಯದ 36% ಕ್ಕಿಂತ ಹೆಚ್ಚು ಸಾಲವಿದ್ದರೆ, ನೀವು ತೊಂದರೆಯಲ್ಲಿದ್ದೀರಿ ಎಂದರ್ಥ. 20% ಕ್ಕಿಂತ ಹೆಚ್ಚಿದ್ದರೆ, ನೀವು ಇನ್ನೂ ಆರ್ಥಿಕವಾಗಿ ಕಷ್ಟಪಡುತ್ತಿದ್ದೀರಿ ಎಂದರ್ಥ. ಹೀಗಾಗಿ ನೀವು ಯಾವ ಸ್ಥಾನದಲ್ಲಿದ್ದೀರಿ, ನೀವು ನಿಮ್ಮ ಆರ್ಥಿಕ ಸ್ಥಿತಿಗತಿ ಉತ್ತಮಪಡಿಸಿಕೊಳ್ಳಲು ಯಾಕೆ ಸಾಧ್ಯವಾಗುತ್ತಿಲ್ಲ ಎಂಬುವುದನ್ನು ಅರ್ಥಮಾಡಿಕೊಳ್ಳಿ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+