ಬೆಂಗಳೂರು: ಬೆಂಗಳೂರಿನಂತಹ (Bengaluru) ಮಹಾನಗರಗಳಲ್ಲಿ ಯಾವುದಾದರೂ ಕೆಲಸಗಳಿದ್ದಾಗ ಸಂಚಾರ ದಟ್ಟಣೆ, ವಿದ್ಯುತ್ ವ್ಯತ್ಯಯಗಳಾಗೋದು ಸಾಮಾನ್ಯ. ಜನರ ರಕ್ಷಣೆಯ ದೃಷ್ಟಿಯಿಂದ, ಎಚ್ಚರಿಕೆಯ ದೃಷ್ಟಿಯಿಂದ ಬೆಸ್ಕಾಂ ಇಲಾಖೆ ಕೂಡಾ ಪವರ್ ಕಟ್ (Power Cut) ಮಾಡುತ್ತದೆ. ನವೆಂಬರ್ ತಿಂಗಳಾಂತ್ಯದವರೆಗೂ ಬೆಂಗಳೂರಿನ ಹಲವು ಕಡೆಗಳಲ್ಲಿ ವಿದ್ಯುತ್ ವ್ಯತ್ಯಯಗಳಾಗಿತ್ತು. ಇದೀಗ ಮತ್ತೆ ಡಿಸೆಂಬರ್ ಮೊದಲ ವಾರಾಂತ್ಯದಲ್ಲಿ ಬೆಂಗಳೂರಿನ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ. ಹಾಗಿದ್ರೆ ಇಂದು (ಡಿಸೆಂಬರ್ 7) ಬೆಂಗಳೂರಿನ ಎಲ್ಲೆಲ್ಲಾ ಕರೆಂಟ್ ಇರಲ್ಲ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಈ ವಾರಾಂತ್ಯದಲ್ಲಿ ವೈಟ್‌ಫೀಲ್ಡ್, ಕಾಡುಗೋಡಿ ಮತ್ತು ಹೇಸರಘಟ್ಟದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಡಿಸೆಂಬರ್ 6 ಮತ್ತು 7 ರಂದು ವಿದ್ಯುತ್ ವ್ಯತ್ಯಯವಾಗಲಿದೆ ಎಂದು ವರದಿಯಾಗಿದೆ. ಬೆಸ್ಕಾಂ, ಕೆಪಿಟಿಸಿಎಲ್ ಸಹಯೋಗದೊಂದಿಗೆ ದಿನವಿಡೀ ನಿರ್ವಹಣಾ ಕಾರ್ಯಗಳನ್ನು ಕೈಗೊಂಡಿರುವ ಹಿನ್ನೆಲೆ ಈ ಪ್ರದೇಶಗಳಲ್ಲಿ ಪವರ್ ಕಟ್ ಇರಲಿದೆ.. ಸುಮಾರು ಎಂಟು ಗಂಟೆಗಳ ಕಾಲ ಈ ವಿದ್ಯುತ್ ವ್ಯತ್ಯಯವಾಗಲಿದ್ದು, 66/11KV ಕಾಡುಗೋಡಿ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ತುರ್ತು ನವೀಕರಣ ಕಾರ್ಯದ ಭಾಗವಾಗಿದೆ.
ಡಿಸೆಂಬರ್ 7 ರಂದು ಇರಲ್ಲ ಕರೆಂಟ್!
ಬೆಸ್ಕಾಂ ಮಾಹಿತಿ ಪ್ರಕಾರ, ಕಾಡುಗೋಡಿ ಉಪಕೇಂದ್ರದಲ್ಲಿ ಕಾಮಗಾರಿ ಹಿನ್ನೆಲೆ ಶನಿವಾರ (ಡಿ. 6) ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ವಿದ್ಯುತ್ ವ್ಯತ್ಯಯವಾಗಿತ್ತು. ಹಾಗೆಯೇ, ಸೋಲದೇವನಹಳ್ಳಿ ಬಳಿಯೂ ಡಿಸೆಂಬರ್ 6 ಮತ್ತು 7 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೂಚನೆ ನೀಡಿದೆ. ಆದ್ದರಿಂದ ಜನರೂ ಕೂಡಾ ಈ ಪ್ರದೇಶಗಳಲ್ಲಿ ಪರ್ಯಾಯ ಕ್ರಮ ಕೈಗೊಳ್ಳಬೇಕಾಗಿ ಕೋರಲಾಗಿದೆ.
ಡಿಸೆಂಬರ್ 6 ಮತ್ತು 7 (ಶನಿವಾರ ಮತ್ತು ಭಾನುವಾರ) ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ಸೋಲದೇವನಹಳ್ಳಿ-ಹೇಸರಘಟ್ಟ ಭಾಗದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಹೇಸರಘಟ್ಟ, ತರಬನಹಳ್ಳಿ, ಹುರುಳಿಚಿಕ್ಕನಹಳ್ಳಿ, ಟಿಬಿ ಕ್ರಾಸ್, ಬಿಳಿಜಾಜಿ, ದ್ವಾರಕನಗರ, ಚಿಕ್ಕಬಾಣಾವರ, ಮಾರುತಿ ನಗರ, ಗಣಪತಿ ನಗರ, ಶಾಂತಿ ನಗರ, ಕೃಷ್ಣಾ ಕಾಲೇಜು ರಸ್ತೆ, ರಾಘವೇಂದ್ರ ಲೇಔಟ್, ಬಜ್ಜಪ್ಪ ಲೇಔಟ್, ಶಿವಕುಮಾರಸ್ವಾಮಿ ಲೇಔಟ್, ಗುಡ್ಡದಹಳ್ಳಿ, ದಾಸೇನಹಳ್ಳಿ, ಹೊಸಹಳ್ಳಿ ಪಾಳ್ಯ, ಡ್ಯಾನಿಶ್ ಫಾರ್ಮ್‌ಹೌಸ್, KMF, ಗುಣಿಯಗ್ರಾಹಾರ, ಮೇಡಿಗ್ರಾಹಾರ, ಸೋಮಶೆಟ್ಟಿಹಳ್ಳಿ, ಗಾಣಿಗಾರಹಳ್ಳಿ, ಪೈಪ್‌ಲೈನ್ ರಸ್ತೆ, ಕೆರೆಗುಡ್ಡದಹಳ್ಳಿ, ಕೆ.ಟಿ.ಪುರ, IIHR, ಲಿಂಗನಹಳ್ಳಿ, ಮಾದಪ್ಪನಹಳ್ಳಿ, ಕಾಳೆನಹಳ್ಳಿ, ಮಾವಳ್ಳಿಪುರ, ಕೊಂಡಶೆಟ್ಟಿಹಳ್ಳಿ, ಮಧುಗಿರಿಹಳ್ಳಿ, ಹುರುಳಿಚಿಕ್ಕನಹಳ್ಳಿ, ಕುರುಬರಹಳ್ಳಿ, ಕುಂಬಾರಹಳ್ಳಿ, ಸಿಲ್ವೆಪುರ, ಪಾಕೇಗೌಡನಪಾಳ್ಯ, ರಾಘವೇಂದ್ರ ಧಾಮ ಮತ್ತು ಬೈಲಕೆರೆ, ಅಚ್ಚುತ್ ನಗರಗಳಲ್ಲಿ ಪವರ್ ಕಟ್ ಇರಲಿದೆ ಎಂದು ಸೂಚನೆ ಹೊರಡಿಸಿದೆ.
ಶನಿವಾರವೂ ಇರಲಿಲ್ಲ ಕರೆಂಟ್
ಡಿಸೆಂಬರ್ 6 ರಂದು (ಶನಿವಾರ) ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ಕಾಡುಗೋಡಿ-ವೈಟ್‌ಫೀಲ್ಡ್ ವ್ಯಾಪ್ತಿಯ ಬೆಳ್ಳಂದೂರು, ಕುಂಬೇನ ಅಗ್ರಹಾರ, ಪಾಟಲಮ್ಮ ಲೇಔಟ್, ವಿಎಸ್‌ಆರ್ ಲೇಔಟ್, ಕಡಗೋಡಿ, ಚೆನ್ನಸಂದ್ರ, ಸಿದ್ದಾರ್ಥ ಲೇಔಟ್, ಸಾಯಿ ಆಶ್ರಮ, ಕೈತೋಟ, ದಿನ್ನೂರು, ಜಿಕೆ ಲೇಔಟ್, ಮೈತ್ರಿ ಲೇಔಟ್, ಅಲೆಂಬಿಕ್ ಅಪಾರ್ಟ್‌ಮೆಂಟ್, ಮಾರ್ವೆಲ್ ಅಪಾರ್ಟ್‌ಮೆಂಟ್, ನಾಗೊಂಡನಹಳ್ಳಿ, ನಾಗರಾಜ್ ಲೇಔಟ್, ಪ್ರಶಾಂತ್ ಲೇಔಟ್, ಉಪಕಾರ್ ಲೇಔಟ್, ಪೃಥ್ವಿ ಲೇಔಟ್, ಸ್ವಾಮಿ ವಿವೇಕಾನಂದ ರಸ್ತೆ, ವೈಟ್‌ಫೀಲ್ಡ್ ಮುಖ್ಯ ರಸ್ತೆ, ಇಸಿಸಿ ರಸ್ತೆ, ನಾಯ್ಡು ಲೇಔಟ್, ಕರುಮಾರಿಯಪ್ಪ ದೇವಸ್ಥಾನದ ಬೀದಿ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರಸ್ಟಮ್‌ಜಿ ಲೇಔಟ್, ಪ್ರೆಸ್ಟೀಜ್ ಮೇಬೆರಿ ಅಪಾರ್ಟ್‌ಮೆಂಟ್, ಆದರ್ಶ್ ಪಾಮ್ ಮೆಡೋಸ್, ಬೋರ್‌ವೆಲ್ ರಸ್ತೆ, ಹಗಡೂರು, ಬ್ರಿಗೇಡ್ ಕಾಸ್ಮೋಪೋಲಿಸ್, ಗೋಯಲ್ ಆರ್ಕಿಡ್ ಲೇಕ್‌ವ್ಯೂ, ವಿಜಯನಗರ, ಗಾಂಧೀಪುರಂ, ದೊಮ್ಮರಪಾಳ್ಯ, ಸುಮಧುರ ಅಪಾರ್ಟ್‌ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇದೀಗ ಇಂದೂ ಕೂಡಾ ಹಲವು ಕಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸೂಚನೆ ಹೊರಡಿಸಲಾಗಿದೆ.
ಕರ್ನಾಟಕದ 8 ಜಿಲ್ಲೆಗಳಲ್ಲಿ ವಿದ್ಯುತ್ ವಿತರಣೆಯನ್ನು ಬೆಸ್ಕಾಂ ನಿರ್ವಹಿಸುತ್ತದೆ. ಇನ್ನು ಬೆಸ್ಕಾಂನ ನಿರಂತ ಅಪ್ಡೇಟ್‌ಗಾಗಿ ಸಾರ್ವಜನಿಕರು bescom.karnataka.gov.in ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವಂತೆ ಸೂಚಿಸಿದೆ. ಸಹಾಯ ಬೇಕಾದಲ್ಲಿ ಗ್ರಾಹಕರು 1912 ಸಹಾಯವಾಣಿಗೆ ಕರೆ ಮಾಡಬಹುದು.
More From GoodReturns

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Bengaluru: ಬೆಂಗಳೂರು ಮೂಲಸೌಕರ್ಯ ಮತ್ತು ಸ್ಮಾರ್ಟ್ ಸಿಟಿ ಯೋಜನೆಗಳಿಗೆ 7000 ಕೋಟಿ ರೂ. ಹೂಡಿಕೆ!

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Bengaluru-Mangaluru Flight: ಬೆಂಗಳೂರು-ಮಂಗಳೂರು ವಿಮಾನ ಪ್ರಯಾಣಿಕರಿಗೆ ಬಂಪರ್ ಸುದ್ದಿ! ಇನ್ಮೇಲೆ ತಡರಾತ್ರಿಯೂ ವಿಮಾನ ಸೇವೆ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Bengaluru Airport: ಬೆಂಗಳೂರು ಏರ್ಪೋರ್ಟ್ಗೆ 2025ರ ACI ಪ್ರಶಸ್ತಿ... ಪ್ರಯಾಣಿಕರ ಹೃದಯ ಗೆದ್ದ ವಿಮಾನ ನಿಲ್ದಾಣ!

Karnataka Weather: ರಾಜ್ಯದ ಜನರಿಗೆ ಬಿಸಿಲಿನ ಕಂಟಕ! ಹವಾಮಾನ ಇಲಾಖೆಯಿಂದ ಎಚ್ಚರಿಕೆ

Rapido Ownly: ರ್ಯಾಪಿಡೋದಿಂದ ಹೊಸ ಫುಡ್ ಡೆಲಿವರಿ ಆಪ್ ಲಾಂಚ್! ಏನಿದರ ವಿಶೇಷತೆ?

Bengaluru Airport: ಇರಾನ್-ಇಸ್ರೇಲ್ ಯುದ್ಧ ಪರಿಣಾಮ ಬೆಂಗಳೂರು ಏರ್ಪೋರ್ಟ್ನಲ್ಲಿ 37 ವಿಮಾನಗಳು ರದ್ದು!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?



Click it and Unblock the Notifications