ಬೆಂಗಳೂರು, ಜುಲೈ 3: ಆರ್ಥಿಕ ಭ್ರಷ್ಟಚಾರ ಪ್ರಕರಣದಲ್ಲಿ ದೇಶ ಬಿಟ್ಟು ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ವಿರುದ್ಧ ಮುಂಬೈನ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ)ಗೆ ಸಂಬಂಧಿಸಿದ 180 ಕೋಟಿ ರೂಪಾಯಿ ಸುಸ್ತಿ ಸಾಲ ಪ್ರಕರಣದಲ್ಲಿ ಜಾಮೀನು ರಹಿತ ವಾರಂಟ್ (ಎನ್ಬಿಡಬ್ಲ್ಯು )ಹೊರಡಿಸಿದೆ.

ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎಸ್ಪಿ ನಾಯಕ್ ನಿಂಬಾಳ್ಕರ್ ಅವರು ಜೂನ್ 29 ರಂದು ಬಂಧನದ ವಾರಂಟ್ ಹೊರಡಿಸಿದ್ದು , ಸೋಮವಾರ ವಿವರವಾದ ಆದೇಶ ಲಭ್ಯವಾಗಿದೆ. ಸಿಬಿಐ ನ್ಯಾಯಾಲಯವು ಮಲ್ಯ ಅವರ ಸ್ಟೇಟಸ್ ಅನ್ನು "ಪರಾರಿ" ಎಂದು ಒತ್ತಿಹೇಳಿದೆ. ಸಿಬಿಐ ಸಲ್ಲಿಸಿರುವ ಆಧಾರದ ಮೇಲೆ ಅವರ ವಿರುದ್ಧ ನೀಡಲಾದ ಹಿಂದಿನ ಜಾಮೀನು ರಹಿತ ವಾರೆಂಟ್ ಗಳನ್ನು ಉಲ್ಲೇಖಿಸಿ, ಮಲ್ಯ ಉಪಸ್ಥಿತಿಯನ್ನು ಭದ್ರ ಪಡಿಸಿಕೊಳ್ಳಲು ಅವರ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲು ಇದು ಸೂಕ್ತ ಪ್ರಕರಣವಾಗಿದೆ ಎಂದು ಕೋರ್ಟ್ ಹೇಳಿದೆ.
ಈಗ ನಿಷ್ಕ್ರೀಯಗೊಂಡಿರುವ ಕಿಂಗ್ ಫಿಷರ್ ಏರ್ ಲೈನ್ಸ್ ಮಾಜಿ ಪ್ರವರ್ತಕ ಮಲ್ಯ ಅವರು ಉದ್ದೇಶಪೂರ್ವಕವಾಗಿ ಸಾಲವನ್ನು ಮರುಪಾವತಿಸದೇ ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (ಐಒಬಿ)ಗೆ 180 ಕೋಟಿ ರೂಪಾಯಿಗಳ ಅಕ್ರಮ ನಷ್ಟವನ್ನು ಉಂಟುಮಾಡಿದ್ದಾರೆ ಎಂದು ಸಿಬಿಐ ನ ವಾರೆಂಟ್ ಆರೋಪಿಸಿದೆ.
ಹೊಸ ವಾರಂಟ್ ಏಕೆ?
ಹೊಸ ವಾರಂಟ್ 2007 ಮತ್ತು 2012 ರ ನಡುವೆ ಕಿಂಕ್ ಫಿಷರ್ ಏರ್ಲೈನ್ಸ್ ಪಡೆದ ಸಾಲಗಳಿಗೆ ಸಂಬಂಧಿಸಿದ ವಂಚನೆ ಪ್ರ ಕರಣಕ್ಕೆ ಸಂಬಂಧಿಸಿದೆ. ಚಾರ್ಜ್ ಶೀಟ್ ನ ಪ್ರಕಾರ, ಒಪ್ಪಂದದ ಆಧಾರದ ಮೇಲೆ ಸಾಲಗಳನ್ನು ನೀಡಲಾಗಿದೆ, ಆದರೆ ಮಲ್ಯ ಮೋಸ ಮಾಡುವ ಉದ್ದೇಶದಿಂದಲೇ ಅಪ್ರಾಮಾಣಿಕವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. "ಮರುಪಾವತಿಯಲ್ಲಿ ಡೀಫಾಲ್ಟ್ ನಿಂದದ 141.91 ಕೋಟಿ ರೂಪಾಯಿಗಳ ತಪ್ಪಾದ ನಷ್ಟ ಉಂಟಾಗಿದೆ, ಸಾಲವನ್ನು ಷೇರುಗಳಾಗಿ ಪರಿವರ್ತಿಸಿದ ಕಾರಣ 38.30 ಕೋಟಿ ಹೆಚ್ಚುವರಿ ನಷ್ಟವಾಗಿದೆ.
ಯುಕೆಯಿಂದ ಹಸ್ತಾಂತರ
ಜಾರಿ ನಿರ್ದೇಶನಾಲಯ (ಇಡಿ) ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ 68 ವರ್ಷದ ಮಲ್ಯ ಅವರನ್ನು ಈಗಾಗಲೇ ಪರಾರಿಯಾಗಿರುವ ಆರ್ಥಿಕ ಅಪರಾಧಿ ಎಂದು
ಘೋಷಿಸಲಾಗಿದೆ. ಭಾರತ ಸರ್ಕಾರವು ಯುಕೆಯಿಂದ ಅವರನ್ನು ಹಸ್ತಾಂ ತರಿಸಲು ಸಕ್ರಿಯವಾಗಿ ಪ್ರಯತ್ನಿಸುತ್ತಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!



Click it and Unblock the Notifications