ಬೆಂಗಳೂರಿನಲ್ಲಿ ಮತ್ತೆ ಮಳೆ ಆರ್ಭಟ ಮುಂದುವರೆದಿದೆ. ಅಲ್ಲದೆ ಇನ್ನು ಒಂದು ವಾರದ ವರೆಗೆ ಇದೇ ರೀತಿ ಮಳೆ ಹಾಗು ಮೋಡಕವಿದ ವಾತಾವರಣ ಇರಲಿದೆ ಎಂದು ಹೇಳಲಾಗ್ತಿದೆ. ಹಾಗೆ ಈ ವಾರದ ಆರಂಭದಿಂದ ನಗರದಲ್ಲಿ ಮಳೆಯಾಗುತ್ತಿದ್ದು ಮಳೆಗೆ ಕಾರಣ ಫೆಂಗಲ್ ಚಂಡಮಾರುತ ಎನ್ನುವುದು ತಿಳಿದುಬಂದಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ನಿರಂತರ ಮಳೆ ಜೊತೆಗೆ ತಾಪಮಾನ ಕುಸಿತವನ್ನ ಅನುಭವಿಸುತ್ತಿದೆ. ಇನ್ನು ಭಾರತೀಯ ಹವಾಮಾನ ಇಲಾಖೆ(IMD) ಪ್ರಕಾರ ಇಂದು ನಗರದಲ್ಲಿ ಸಾಮಾನ್ಯ ಮಳೆ ಹಾಗು ಮೋಡ ಕವಿದ ವಾತಾವರಣ ಇರಲಿದೆ ಎಂದು ಹೇಳಲಾಗ್ತಿದೆ.
ಬೆಂಗಳೂರಿನ ಹವಾಮಾನದ ಮೇಲೆ ಫೆಂಗಲ್ ಚಂಡಮಾರುತದ ಪ್ರಭಾವ
ಬೆಂಗಳೂರಿನ ನಗರದಲ್ಲಿ ವ್ಯಾಪಕ ಮಳೆಗೆ ಮುಖ್ಯ ಕಾರಣ ಫೆಂಗಲ್ ಚಂಡಮಾರುತ ಪ್ರಾಥಮಿಕ ಕಾರಣ ಎಂಬುದು ತಿಳಿದುಬಂದಿದೆ. ಬೆಂಗಳೂರು ಅಲ್ಲದೆ ಕರ್ನಾಟಕದ ಹಲವು ಭಾಗಗಳಲ್ಲಿ ಚಂಡಮಾರುತದಿಂದಾಗಿ ಭಾರಿ ಮಳೆ ಸುರಿಯುತ್ತಿದೆ. ಇನ್ನು ಮುಂಬರುವ ದಿನಗಳಲ್ಲಿ ಬೆಂಗಳೂರಿನಲ್ಲಿ ಸಾಧಾರಣ ಮಳೆಯಾಗಲಿದೆ ಎನ್ನಲಾಗ್ತಿದೆ. ನಗರದಲ್ಲಿ ತಾಪಮಾನ 18° C ಮತ್ತು 24° C ನಡುವೆ ಇರಲಿದೆ ಎಂಬ ಮುನ್ಸುಚನೆ ಇದೆ. ಆದ್ರೆ ಡಿಸೆಂಬರ್ 6 ರಂದು ಮಾತ್ರ ತಾಪಮಾನ ಸ್ವಲ್ಪ ಪ್ರಮಾಣದಲ್ಲಿ ಅಂದರೆ 25° Cಗೆ ಏರಿಕೆಯಾಗು ನಿರೀಕ್ಷೆಯಿದೆ. ಹೆಚ್ಚಾಗಿ ನಗರದಲ್ಲಿ ಮೋಡ ಕವಿದ ಆಕಾಶವು ವಾತಾವರಣ ಮುಂದುವರೆಯಲಿದೆ.

ಬೆಂಗಳೂರಿಗೆ ಹವಾಮಾನ ಇಲಾಖೆ ಮುನ್ಸೂಚನೆ
ಭಾರತದ ಹವಾಮಾನ ಇಲಾಖೆಯ (IMD) ಇತ್ತೀಚಿನ ಮುನ್ಸೂಚನೆಯ ಪ್ರಕಾರ, ಮುಂದಿನ ಕೆಲವು ದಿನಗಳವರೆಗೆ ಬೆಂಗಳೂರಿನ ಹವಾಮಾನ ಹೀಗಿರುತ್ತದೆ ಎನ್ನಲಾಗ್ತಿದೆ.
ಡಿಸೆಂಬರ್ 5 : ಸಾಮಾನ್ಯವಾಗಿ ಮೋಡ ಕವಿದ ವಾತಾವರಣ, ಲಘು ಮಳೆಯೊಂದಿಗೆ ತಾಪಮಾನವು 18° C ಮತ್ತು 24° C ನಡುವೆ ಇರುತ್ತದೆ.
ಡಿಸೆಂಬರ್ 6 : ಭಾಗಶಃ ಮೋಡ ಕವಿದ ವಾತಾವರಣ, ತಾಪಮಾನವು ಹಗಲಿನಲ್ಲಿ ಸುಮಾರು 25° C ಗೆ ಏರುತ್ತದೆ ಮತ್ತು ರಾತ್ರಿಯಲ್ಲಿ 18° C ಗೆ ಇಳಿಯುತ್ತದೆ.
ಡಿಸೆಂಬರ್ 7-9: 18°C ನಿಂದ 25°C ವರೆಗಿನ ತಾಪಮಾನದೊಂದಿಗೆ ಭಾಗಶಃ ಮೋಡ ಕವಿದ ವಾತಾವರಣವನ್ನು ನಿರೀಕ್ಷಿಸಬಹುದು.
ಬೆಂಗಳೂರಿನಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥವಾಗಿದ್ದು, ಅದರಲ್ಲೂ ವಿಶೇಷವಾಗಿ ಶಾಲೆಗಳ ಬಗ್ಗೆ ಹೆಚ್ಚಿನ ಕಳವಳ ಉಂಟಾಗಿದೆ. ಸದ್ಯಕ್ಕೆ ಬೆಂಗಳೂರಿನಲ್ಲಿ ಶಾಲೆ ಮುಚ್ಚುವ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಆದರೆ, ಹವಾಮಾನ ವೈಪರೀತ್ಯದಿಂದಾಗಿ ದಕ್ಷಿಣ ಕನ್ನಡದಲ್ಲಿ ಈಗಾಗಲೇ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ನಗರದ ಜನರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಅಧಿಕಾರಿಗಳು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಕರಾವಳಿ ಸೇರಿದಂತೆ ದಕಷಿಣ ಒಳನಾಡಿನ ಭಾಗಗಳ ಮೇಲೆ ಫೆಂಗಲ್ ಚಂಡಮಾರು ಭಾರಿ ಪರಿಣಾಮ ಬೀರುತ್ತಿದ್ದು, ಅದರಲ್ಲೂ ಬೆಂಗಳೂರಿನಲ್ಲಿ ಮಳೆಯಾಗುತ್ತಿರುವುದಕ್ಕೆ ಇದೇ ನೇರ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ (IMD) ಖಚಿತ ಪಡಿಸಿದೆ. ಬೆಂಗಳೂರಿನಲ್ಲಿ ಇಂದು ಲಘು ಮಳೆಯಾಗಿದ್ದರೆ, ಇತರ ಕರಾವಳಿ ಪ್ರದೇಶಗಳಲ್ಲಿ ಭಾರಿ ಮಳೆಯ ಮುನ್ಸೂಚನೆ ಇದೆ. ಐಎಂಡಿ ಬೆಂಗಳೂರು ನಿರ್ದೇಶಕ ಸಿಎಸ್ ಪಾಟೀಲ್, ಡಿಸೆಂಬರ್ 6ರ ವೇಳೆಗೆ ಪರಿಸ್ಥಿತಿ ಸ್ಥಿರಗೊಳ್ಳಲಿದ್ದು, ನಂತರ ಮಳೆಯ ಆರ್ಭಟ ತಿಳಿಯಾಗಲಿದ್ದು, ಒಣ ಹವಾಮಾನ ನಿರೀಕ್ಷಿಸಲಾಗಿದೆ ಎಂದು ಹೇಳಿದ್ದಾರೆ.
ಬೆಂಗಳೂರು ನಿವಾಸಿಗಳು ಇನ್ನು ಕೆಲವು ದಿನ ನಿರಂತರ ಮಳೆ ಮತ್ತು ತಂಪಾದ ತಾಪಮಾನವನ್ನು ಎದುರಿಸಬೇಕಾಗುತ್ತದೆ, ಬಾತರದ ಹವಾಮಾನ ಇಲಾಖೆ ಪ್ರಕಾರ ಡಿಸೆಂಬರ್ 6ರ ವೇಳೆಗೆ ಮಳೆ ಕಡಿಮೆಯಾಗಿ, ಶುಷ್ಕ ಹವಾಮಾನಕ್ಕೆ ಕ್ರಮೇಣ ಮರಳುತ್ತದೆ ಎಂದು ಊಹಿಸಲಾಗಿದೆ. ಆದ್ರೆ ಫೆಂಗಲ್ ಚಂಡಮಾರುತವು ಕರ್ನಾಟಕದ ಹಲವು ಪ್ರದೇಶಗಳ ಮೇಲೆ ಪರಿಣಾಮ ಬೀರುವುದನ್ನು ಮುಂದುವರೆಸಿದೆ. ಹೀಗಾಗಿ ಸ್ಥಳೀಯ ಅಧಿಕಾರಿಗಳು ಹವಾಮಾನ ಇಲಾಖೆ ವರದಿಯನ್ನ ಅನುಸರಿಸಿ ಮುಂಬರುವ ದಿನಗಳಲ್ಲಿ ಶಾಲೆಯ ಮಕ್ಕಳ ಕುರಿತು ಹೆಚ್ಚಿನ ಸುರಕ್ಷತಾ ಕ್ರಮಗಳನ್ನ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಈಗಾಗಲೇ ಮಳೆ ಅಬ್ಬರ ಹೆಚ್ಚುತ್ತಿರುವ ಹಿನ್ನೆಲೆ ಬಸ್, ಆಟೋ, ಬೈಕ್‌ಗಳ ಮೇಲೆ ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಮಕ್ಕಳ ಸುರಕ್ಷತೆಯ ಬಗ್ಗೆ ಪೋಷಕರು ಆತಂಕ ವ್ಯಕ್ತವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ರಜೆ ನೀಡುವಂತೆ ಒತ್ತಾಯಿಸಿದ್ದಾರೆ. ಇನ್ನು ವಿದ್ಯಾರ್ಥಿಗಳಿಗೆ ರಜೆ ನೀಡುವಂತೆ ಬೇಡಿಕೆಗಳು ಹೆಚ್ಚುತ್ತಿದ್ದು, ಈ ಹೊರತಾಗಿಯೂ ಕೂಡ ಬೆಂಗಳೂರಿನಲ್ಲಿ ಶಿಕ್ಷಣ ಸಂಸ್ಥೆಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆಗಾಗ ಪರಿಸ್ಥಿತಿಯನ್ನು ಅವಲೋಕಿಸಿ ಅಗತ್ಯ ಬಿದ್ದರೆ ಹವಾಮಾನದ ಆಧಾರದ ಮೇಲೆ ರಜೆ ಘೋಷಣೆ ಮಾಡುವಂತಹ ನಿರ್ಧಾರ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.
ಅಲ್ಲದೆ ರಜೆಯನ್ನು ಘೋಷಿಸುವಲ್ಲಿನ ವಿಳಂಬವು ಕೂಡ ಮಕ್ಕಳನ್ನು ಅನಗತ್ಯ ಅಪಾಯಕ್ಕೆ ಸಿಲುಕಿಸುತ್ತದೆ ಎಂದು ಕೆಲವರು ವಾದಿಸಿದ್ದಾರೆ, ಅಲ್ಲದೆ ನಿರಂತರ ಮಳೆಯಾಗಲಿದೆ ಎಂದು IMD ಮುನ್ಸೂಚನೆ ನೀಡಿದ ನಂತರ ಪೋಷಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಸರ್ಕಾರ ಈಗ ಭಾರಿ ಮಳೆಯಾಗುತ್ತಿರುವ ಕೆಲವು ಜಿಲ್ಲೆಗಳಲ್ಲಿ ರಜೆ ಘೋಷಣೆ ಮಾಡಿದ್ದಾರೆ. ಆದ್ರೆ ಸಿಲಿಕಾನ್ ಸಿಟಿ ಬೆಂಗಳೂರಿನ ಶಾಲೆ ಕಾಲೇಜುಗಳ ಬಗ್ಗೆ ಸಧ್ಯಕ್ಕೆ ಯಾವುದೆ ಚರ್ಚೆಯಾಗಿಲ್ಲ ಎನ್ನುವುದು ತಿಳಿದುಬಂದಿದೆ. ಆದ್ರೆ ಮುಂದಿನ ದಿನಗಳಲ್ಲಿ ಮಳೆ ಅಬ್ಬರ ಹೆಚ್ಚಾದ್ರೆ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


Click it and Unblock the Notifications