ನಾರಾಯಣಮೂರ್ತಿ ಮೊಮ್ಮಗ ಮಾತ್ರವಲ್ಲ ಇನ್ಫೋಸಿಸ್‌ನ ಸಹ ಸಂಸ್ಥಾಪಕರ ಮೊಮ್ಮಕ್ಕಳು ಕೂಡಾ ಬಿಲಿನೇಯರ್‌ಗಳೇ

ಬೆಂಗಳೂರು, ಮಾರ್ಚ್‌ 20: ಬಿಲಿಯನೇರ್‌ ಹಾಗೂ ಇನ್ಫೋಸಿಸ್‌ನ ಸಂಸ್ಥಾಪಕರಾಗಿರುವ ಎನ್‌ಆರ್‌ ನಾರಾಯಣಮೂರ್ತಿ ಅವರು ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ.

77 ವರ್ಷದ ನಾರಾಯಣಮೂರ್ತಿ ಅವರು ಈ ಬಾರಿ ಮುನ್ನೆಲೆಗೆ ಬಂದಿರುವುದು ಬೇರೆ ಯಾವುದೇ ವಿಷಯಗಳಿಗೆ ಅಲ್ಲ; ಬದಲಿಗೆ ತಮ್ಮ ಮೊಮ್ಮಗನಿಗೆ ಬಹುದೊಡ್ಡ ಗಿಫ್ಟ್‌ ಒಂದನ್ನು ನೀಡಿರುವುದಕ್ಕೆ ಹಾಗಾದರೆ ನಾರಾಯಣಮೂರ್ತಿ ಅವರು ತಮ್ಮ ಅಕ್ಕರೆಯ ಕೇವಲ ನಾಲ್ಕು ತಿಂಗಳ ಮೊಮ್ಮಗನಿಗೆ ಕೊಟ್ಟಿರುವ ಅಷ್ಟೊಂದು ದೊಡ್ಡ ಗಿಫ್ಟ್‌ ಏನಿರಬಹುದು ಎನ್ನುವ ಕುತೂಹಲ ಎಲ್ಲರಿಗೂ ಇರುವುದು ಸಹಜ. ಏಕೆಂದರೆ, ನಾರಾಯಣಮೂರ್ತಿ ಅಂಥಹ ಬಿಲಿಯನೇರ್‌ಗಳು ಗಿಫ್ಟ್‌ ಕೊಡಬೇಕಾದರೆ ಅದರ ಮೌಲ್ಯ ಕೂಡ ಅಷ್ಟೊಂದು ದೊಡ್ಡದಿರಬೇಕು.

ಇನ್ಫೋಸಿಸ್‌ನ ಸಹ ಸಂಸ್ಥಾಪಕರ ಮೊಮ್ಮಕ್ಕಳು  ಕೂಡಾ ಬಿಲಿನೇಯರ್‌ಗಳೇ

ಹೌದು ನಾರಾಯಣಮೂರ್ತಿ ಅವರು ತಮ್ಮ ಮುಂದಿನ ಕುಡಿಗೆ ಇನ್ಫೋಸಿಸ್‌ನ 15 ಲಕ್ಷದಷ್ಟು ಅಂದರೆ ಶೇ.0.04ರಷ್ಟು ಷೇರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ನಾರಾಯಣಮೂರ್ತಿ ಹಾಗೂ ಸುಧಾಮೂರ್ತಿ ದಂಪತಿ ಮೊಮ್ಮಗನ ಹೆಸರು ಏಕಾಗ್ರಹ್‌. ತಮ್ಮ ಮಗ ರೋಹನ್‌ ಮೂರ್ತಿ ಹಾಗೂ ಅಪರ್ಣ ಕೃಷ್ಣನ್‌ ದಂಪತಿಗೆ ಏಕಾಗ್ರಹ್‌ ಕಳೆದ ವರ್ಷ ನವೆಂಬರ್‌ನಲ್ಲಿ ಹುಟ್ಟಿದ್ದ.

ನಾರಾಯಣಮೂರ್ತಿ ಅವರು ಕೊಟ್ಟಿರುವ ಶೇ.0.04ರಷ್ಟು ಷೇರುಗಳ ಮೌಲ್ಯ 240 ಕೋಟಿ ರೂ. ಎನ್ನಲಾಗುತ್ತಿದೆ. ಆ ಮೂಲಕ ಏಕಾಗ್ರಹ್‌ ಈಗ ಭಾರತದ ಅತಿ ಕಿರಿ ವಯಸ್ಸಿನ ಬಿಲಿಯನೇರ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಟಾಕ್‌ ಎಕ್ಸೇಂಜ್‌ಗೆ ಸಲ್ಲಿಸಿದ ಫೈಲಿಂಗ್‌ನಲ್ಲಿ ಈ ಅಂಶಗಳನ್ನು ಉಲ್ಲೇಖಿಸಲಾಗಿದೆ.

ಇನ್ನೊಂದೆಡೆ ನಾರಾಯಣಮೂರ್ತಿ ಅವರ ಮಗಳು ಅಕ್ಷತಾ ಮೂರ್ತಿ ಅವರು ಕೂಡ ಬ್ರಿಟನ್‌ ದೇಶದ ಪ್ರಥಮ ಪ್ರಜೆಯಾಗಿದ್ದಾರೆ. ಅವರಿಗೆ ಕೃಷ್ಣ ಹಾಗೂ ಅನೌಷಕ ಎಂಬ ಇಬ್ಬರು ಪುತ್ರಿಯರಿದ್ದಾರೆ. ತಮ್ಮ ಕುಟುಂಬದೊಳಗೆ ಮಗಳು ಅಕ್ಷತಾ ಅವರು ಇನ್ಫೋಸಿಸ್‌ನಲ್ಲಿ ಶೇ.1.05ರಷ್ಟು ಷೇರುಗಳನ್ನು ಹೊಂದಿದ್ದಾರೆ. ಅದೇರೀತಿ ಸಹೋದರ ರೋಹನ್‌ ಶೇ.1.64ರಷ್ಟು ಷೇರು ಹೊಂದಿದ್ದಾರೆ. ಇನ್ನುಸುಧಾಮೂರ್ತಿ ಅವರು ಶೇ.0.93ರಷ್ಟು ಷೇರು ಪಾಲು ಹೊಂದಿದ್ದಾರೆ.

ಆದರೆ ಇಲ್ಲಿ ಗಮನಾರ್ಹ ವಿಷಯವೆಂದರೆ, ನಾರಾಯಣಮೂರ್ತಿ ಅವರ ಮೊಮ್ಮಗ ಮಾತ್ರವಲ್ಲ ಭಾರತದ ಅತ್ಯಂತ ಕಿರಿಯ ಬಿಲಿಯನೇರ್‌. ಇನ್ನೊಬ್ಬರು ಕೂಡ ಇದ್ದಾರೆ. ಹಾಗಾದರೆ, ಅವರು ಯಾರು ಎನ್ನುವ ಕುತೂಹಲ ಇದೆಯೇ?

ಇನ್ಫೋಸಿಸ್‌ನಲ್ಲೇ ಇದ್ದ ನಂದನ್‌ ನೀಲೆಕಣಿ ಅವರು ಅವರ ಮೊಮ್ಮಮ ತನುಷ್‌ ನೀಲೆಕಣಿ ಚಂದ್ರ ಅವರು ಕೂಡ ಇದ್ದಾರೆ. ತನುಷ್‌ ಹೆಸರಿಗೆ ನಂದನ್‌ ನೀಲೆಕಣಿ ಅವರು ಮಗಳು ಜಾನ್ವಿ 7.7 ಲಕ್ಷ ಷೇರುಗಳನ್ನು ವರ್ಗಾವಣೆ ಮಾಡಿದ್ದಾರೆ. ಆರಂಭದಲ್ಲಿ ಈ ಷೇರುಗಳ ಮೊತ್ತ 124 ಕೋಟಿ ರೂ. ಆಗಿತ್ತು. ಈಗ ಇದರ ಮೌಲ್ಯ 124 ಕೋಟಿ ರೂ. ಪ್ರಸ್ತುತ ತನುಷ್‌ ಇನ್ಫೋಸಿಸ್‌ನಲ್ಲಿ 33.5 ಲಕ್ಷ ಷೇರುಗಳನ್ನು ಹೊಂದಿದ್ದಾರೆ. ಅಂದರ ಅದರ ಮೌಲ್ಯ 530 ಕೋಟಿ ರೂ. ಆಗಿದ್ದು, ಕಂಪನಿಯ ಸುಮಾರು ಶೇ.0.09 ಷೇರುಗಳು ಅವರ ಬಳಿಯಿವೆ.

ಇನ್ನೊಂದೆಡೆ, ಇನ್ಫೋಸಿಸ್‌ನ ಸಹ ಸಂಸ್ಥಾಪಕರಾದ ಎಸ್‌ಡಿ ಶಿಬುಲಾಲ್‌ ಹಾಗೂ ಅವರ ಮಗಳು ಶ್ರುತಿ ಶಿಬಿಲಾಲ್‌ ಅವರು ಈ ಹಿಂದೆ 2327 ಕೋಟಿ ರೂ. ಮೊತ್ತದ ಷೇರುಗಳನ್ನು ತಮ್ಮ ಮೊಮ್ಮಗ ಮಿಲನ್‌ ಶಿಬುಲಾಲ್‌ ಮಾನ್‌ಚಂದನ್‌ ಹಾಗೂ ಇತರೆ ಕುಟುಂಬದ ಸದಸ್ಯರ ಹೆಸರಿಗೆ ವರ್ಗಾಯಿಸಿದ್ದರು.

ಹಾಗೆಯೇ ಶಿಬುಲಾಲ್‌ ಮಗಳು ಶ್ರುತಿ ಶಿಬುಲಾಲ್‌ ಮಾನ್‌ಚಂದನ್‌ ಅವರು 69 ಲಕ್ಷ ಷೇರುಗಳನ್ನು ಹೊಂದಿದ್ದು, ಅದು ಇನ್ಪೋಸಿಸ್‌ ಕಂಪನಿಯ ಶೇ. 0.19ರಷ್ಟು ಷೇರು ಆಗಿದೆ. ಪ್ರಸ್ತುತ ಕಂಪನಿಯ ಪ್ರಮೋಟರ್ಸ್‌ ಇನ್ಫೋಸಿಸ್‌ನಲ್ಲಿ ಒಟ್ಟು ಶೇ.14.78ರಷ್ಟು ಷೇರುಗಳನ್ನು ಹೊಂದಿದ್ದಾರೆ. 1981ರಲ್ಲಿ ಕೇವಲ 10 ಸಾವಿರ ಹೂಡಿಕೆಯೊಂದಿಗೆ ಪ್ರಾರಂಭವಾಗಿದ್ದ ಇನ್ಫೋಸಿಸ್‌ ಈಗ ಯಾವ ಮಟ್ಟಕ್ಕೆ ಬೆಳೆದು ನಿಂತಿದೆ ಎಂಬುದನ್ನು ಯಾರು ಕೂಡ ಊಹಿಸುವುದಕ್ಕೂ ಸಾಧ್ಯವಿಲ್ಲ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+