ವಾಹನ ಸವಾರರಿಗೆ ರಸ್ತೆ ಸಾರಿಗೆ ಸಚಿವಾಲಯ ಹೊಸ ನಿಯಮವನ್ನ ತರ್ತಿದೆ. ವಾಹನ ಮಾಲೀಕರು ಮತ್ತು ಡಿಎಲ್ ಹೊಂದಿರುವವರು ಇನ್ಮೇಲೆ ತಮ್ಮ ಆಧಾರ್ ಪ್ರಕಾರ ವಿಳಾಸ, ಮೊಬೈಲ್ ಸಂಖ್ಯೆ ಹಾಗೆ ಇತರೆ ಮಾಹಿತಿಗಳನ್ನ ನವೀಕರಿಸುವುದಕ್ಕಾಗಿ ಭಾರತ ಸಾರಿಗೆ ಸಚಿವಾಲಯ ಹೊಸ ನಿಯಮವನ್ನ ತರಲು ಯೋಜಿಸುತ್ತಿದೆ. ಟ್ರಾಫಿಕ್ ಉಲ್ಲಂಘನೆ ಮಾಡಿದವರನ್ನ ದಂಡಿಸಲು ಮತ್ತು ಅಧಿಕಾರಿಗಳಿಗೆ ಸಹಾಯ ಮಾಡಲು ಈ ಹೊಸ ಕ್ರಮವನ್ನ ಸರ್ಕಾರ ತರಲಿದೆ.
ಪ್ರಸ್ತುತ ಕೆಲವರು ಈ ದಂಡಗಳಿಂದ ತಪ್ಪಿಸಿಕೊಳ್ಳಲು, ಹೆಚ್ಚಿನ ಜನರು ಹಳೆಯ ವಿಳಾಸ ತಪ್ಪಾದ ಮಾಹಿತಿಗಳನ್ನ ಬಳಸಿಕೊಳ್ಳುತ್ತಾರೆ. ಹೀಗಾಗಿ ಇಂತಹ ಸಂದಂರ್ಬಗಳನ್ನ ತಪ್ಪಿಸಲು ವಾಹನ ಮಾಲೀಕರು ಮತ್ತು ಡಿಎಲ್ ಹೊಂದಿರುವವರು ತಮ್ಮ ವಿಳಾಸಗಳನ್ನ ಆಧಾರ್‌ನಲ್ಲಿರುವಂತೆ ನವೀಕರಿಸುವುದನ್ನು ಕಡ್ಡಾಯಗೊಳಿಸಲು ಸರ್ಕಾರ ನಿರ್ಧರಿಸಿದೆ. ಇನ್ನು ಈ ಹೊಸ ನಿಯಮದ ಮೂಲಕ ನಿಯಮವನ್ನ ಉಲ್ಲಂಘನೆ ಮಾಡಿದವರನ್ನ ಕೂಡ ಸುಲಭವಾಗಿ ಕಂಡುಹಿಡಿಯಬಹುದಾಗಿದೆ.

ಡಿಎಲ್‌ನಲ್ಲಿ ಆಧಾರ್ ಪ್ರಕಾರ ವಿಳಾಸವನ್ನ ನವೀಕರಿಸುವುದರಿಂದ ನಿಯಮ ಉಲ್ಲಂಘನೆ ಮಾಡಿದವರೆ ಅಧಿಕಾರಿಗಳು ಸುಲಭವಾಗಿ ನಿಖರವಾದ ಮಾಹಿತಿಗಳನ್ನ ಟ್ರ್ಯಾಕ್ ಮಾಡಿ ದಂಡ ಮತ್ತು ಸಮನ್ಸ್‌ಗಳನ್ನ ನೀಡಲು ಸಹಾಯವಾಗುತ್ತದೆ.
ಮೊಟಾರು ವಾಹನ ಕಾಯ್ದೆಯ ತಿದ್ದುಪಡಿಯ ಭಾಗವಾಗಿ ಈ ನಿಯಮವನ್ನ ಮಾಡಲು ಸಚಿವಾಲಯ ಮುಂದಾಗಿದೆ. ಈ ಹೊಸ ನಿಯಮದ ಮೂಲಕ ಪದೇಪದೇ ನಿಯಮ ಉಲ್ಲಂಘನೆ ಮಾಡುವವರನ್ನ ಸುಲಭವಾಗಿ ಪತ್ತೆಹಚ್ಚಬಹುದು. ಅಲ್ಲದೆ ಪ್ರತೀ ಭಾರಿ ನಿಯಮ ಉಲ್ಲಂಘನೆ ಮಾಡುವವು ರಸ್ತೆಯಲ್ಲಿ ಬೇರೆಯವರಿಗೂ ಕೂಡ ತೊಂದರೆಯಾಗುವಂತೆ ಮಾಡುತ್ತಿದ್ದಾರೆ. ಹಾಗೆ ಅವರೆಲ್ಲ ಮೊಬೈಲ್ ಸಂಖ್ಯೆ ಬದಲಾಯಿಸುವುದು, ಹೊಸ ಡಿಎಲ್‌ಗಾಗಿ ಅರ್ಜಿ ಸಲ್ಲಿಸುವ ಮೂಲಕ ದಂಡದಿಂದ ತಪ್ಪಿಸಿಕೊಳ್ಳುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಕೇಂದ್ರ ರಸ್ತೆ ಸಾರಿಗೆ ಕಾರ್ಯದರ್ಶಿ ವಿ. ಉಮಾಶಂಕರ್ ರಸ್ತೆ ಸುರಕ್ಷತೆ ಕುರಿತು ಸಮಾವೇಶವೊಂದರಲ್ಲಿ ಮಾತನಾಡುವಾಗ ಈ ನಿಯಮದ ಕುರಿತು ಮಾತನಾಡಿದ್ರು. ಈಗಾಗಲೇ 12,000 ಕೋಟಿಗೂ ಹೆಚ್ಚು ಮೌಲ್ಯದ ಇ-ಚಲನ್‌ಗಳು (ಎಲೆಕ್ಟ್ರಾನಿಕ್ ಟ್ರಾಫಿಕ್ ದಂಡ) ಪಾವತಿಯಾಗದೆ ಉಳಿದಿವೆ ಎಂದು ಅವರು ಗಮನ ಸೆಳೆದರು. ಇದಕ್ಕೆ ಮುಖ್ಯ ಕಾರಣವೆಂದರೆ ಈ ದಂಡಗಳನ್ನು ಜಾರಿಗೊಳಿಸಲು ಬಳಸುವ ಡೇಟಾಬೇಸ್‌ನ ಅಸಮರ್ಥತೆ. ಅಧಿಕಾರಿಗಳು ಇ-ಚಲನ್ ಅನ್ನು ತಲುಪಿಸಲು ಸಾಧ್ಯವಾಗುವುದಿಲ್ಲ, ಆದರೆ ಇದು ನಿಯಮವನ್ನ ಉಲ್ಲಂಘಿಸುವವರಿಗೆ ದಂಡವನ್ನು ಪಾವತಿಸುವುದನ್ನು ಅನುವು ಮಾಡಿಕೊಡುತ್ತದೆ.
ವಿ ಉಮಾಶಂಕರ್ ಪ್ರಸ್ತುತ ವಾಹನ ಮತ್ತು ಚಾಲಕ ಡೇಟಾಬೇಸ್‌ಗಳೊಂದಿಗೆ ಪ್ರಮುಖ ಸವಾಲನ್ನು ಎದುರಿಸುತ್ತಿದ್ದಾರೆ ಎಂದು ಹೇಳಿದ್ರು. ನಿರ್ದಿಷ್ಟವಾಗಿ ಸಾರಥಿ ಮತ್ತು ವಾಹನ್ ವ್ಯವಸ್ಥೆಗಳು. ಈ ಡೇಟಾಬೇಸ್‌ಗಳಲ್ಲಿನ ಕೆಲವು ದಾಖಲೆಗಳು ಡಿಎಲ್‌ಗಳಿಗಾಗಿ 1960 ಮತ್ತು 70 ರ ದಶಕದಿಂದ ಮತ್ತು ವಾಹನ ನೋಂದಣಿಗಾಗಿ 1980 ಮತ್ತು 90 ರ ದಶಕದಲ್ಲಿ ಹಲವಾರು ದಶಕಗಳ ಹಿಂದಿನವು ಎನ್ನುವುದು ತಿಳಿದುಬಂದಿದೆ. ಈ ಹಳೆಯ ದಾಖಲೆಗಳು ಮೊಬೈಲ್ ಫೋನ್ ಸಂಖ್ಯೆಗಳು ಮತ್ತು ಆಧಾರ್ ಸಂಖ್ಯೆಗಳಂತಹ ಆಧುನಿಕ ವಿವರಗಳನ್ನು ಹೊಂದಿಲ್ಲ. ಹೀಗಾಗಿ ವಾಹನ ಮಾಲೀಕರು ಮತ್ತು ಪರವಾನಗಿ ಹೊಂದಿರುವವರು ಮೊಬೈಲ್ ಸಂಖ್ಯೆಗಳು ಅಥವಾ ಆಧಾರ್-ಸಂಯೋಜಿತ ವಿಳಾಸಗಳಂತಹ ತಮ್ಮ ಮಾಹಿತಿಯನ್ನು ನವೀಕರಿಸಲು ಅಗತ್ಯವಿದೆ ಎಂದು ಉಮಾಶಂಕರ್ ತಿಳಿಸಿದರು. ಟ್ರಾಫಿಕ್ ದಂಡಗಳ ಜಾರಿಯನ್ನು ಸುಧಾರಿಸುವ ಮೂಲಕ ಅಧಿಕಾರಿಗಳು ಸರಿಯಾದ ಮಾಹಿತಿಯನ್ನು ಸರಿಯಾದ ವ್ಯಕ್ತಿಯನ್ನು ತಲುಪಬಹುದು ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
ಇದಲ್ಲದೆ, ಜನರು ತಮ್ಮ ವಿವರಗಳನ್ನು ನವೀಕರಿಸಲು ಮತ್ತು ಸಮಯಕ್ಕೆ ದಂಡವನ್ನು ಪಾವತಿಸಲು ಪ್ರೋತ್ಸಾಹಿಸಲು, ಉಮಾಶಂಕರ್ ದಂಡವನ್ನು ಪಾವತಿಸದಿರುವ ಪರಿಣಾಮಗಳ ಬಗ್ಗೆ ಕೂಡ ತಿಳಿಸಿದ್ರು. ಅಂದರೆ ಯಾರಾದರೂ ತಮ್ಮ ಇ-ಚಲನ್ ಅನ್ನು ನಿರ್ದಿಷ್ಟ ಅವಧಿಯೊಳಗೆ ಪಾವತಿಸಲು ವಿಫಲರಾದರೆ, ಅವರ ವಾಹನ ನೋಂದಣಿ (RC) ಅಥವಾ ಡ್ರೈವಿಂಗ್ ಲೈಸೆನ್ಸ್ (DL) ಅನ್ನು ಅಮಾನತುಗೊಳಿಸಬಹುದು ಅಥವಾ ಅಮಾನ್ಯಗೊಳಿಸಬಹುದು, ಇದು ಅವರ ವಿಮೆಯನ್ನು ನವೀಕರಿಸುವಂತಹ ಇತರ ಸೇವೆಗಳನ್ನು ಬಳಸುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು. ಇದು ಜನರು ಅನುಸರಣೆಯಲ್ಲಿ ಉಳಿಯಲು ಬಲವಾದ ಪ್ರೋತ್ಸಾಹವನ್ನು ಸೃಷ್ಟಿಸುತ್ತದೆ ಮತ್ತು ಇ-ಚಲನ್ ವ್ಯವಸ್ಥೆಯು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂದು ಖಚಿತಪಡಿಸುತ್ತದೆ.


Click it and Unblock the Notifications