For Quick Alerts
ALLOW NOTIFICATIONS  
For Daily Alerts

ಆಫ್‌ಲೈನ್‌ನಲ್ಲಿಯೂ ಆಧಾರ್ ವೆರಿಫಿಕೇಷನ್ ಮಾಡಬಹುದು

|

ನವದೆಹಲಿ, ನವೆಂಬರ್ 10: ಇದೀಗ ಆಫ್‌ಲೈನ್‌ನಲ್ಲಿಯೂ ಆಧಾರ್ ವೆರಿಫಿಕೇಷನ್ ಮಾಡಬಹುದಾಗಿದೆ.

 

ಆಧಾರ್ ಪ್ರಾಧಿಕಾರ ನೀಡುವ ಡಿಜಿಟಲ್ ಸಹಿ ಮಾಡಿರುವ ದಾಖಲೆಗಳನ್ನು ಒದಗಿಸಿ ಇನ್ನು ಆಫ್‌ಲೈನ್‌ನಲ್ಲಿ ಕೂಡ ಬಳಕೆದಾರರು ಆಧಾರ್ ದೃಢೀಕರಣ ಮಾಡಬಹುದಾಗಿದೆ.

ಈ ಕುರಿತಂತೆ ಸರ್ಕಾರ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಇಕೆವೈಸಿ ಪ್ರಕ್ರಿಯೆ ಸಂದರ್ಭದಲ್ಲಿ ಆಫ್‌ಲೈನ್ ವ್ಯವಸ್ಥೆ ಮೂಲಕವೂ ಆಧಾರ್ ದೃಢೀಕರಿಸಲು ಅವಕಾಶ ಕಲ್ಪಿಸಿದೆ.

ಈಗ ಎಲ್ಲಾ ಕೆಲಸಗಳಿಗೂ ಆಧಾರ್ ಕಾರ್ಡ್ ಅತ್ಯಗತ್ಯ ದಾಖಲೆಯಾಗಿದೆ. ಈ ದಾಖಲೆ ಇಲ್ಲದೆ, ಯಾವುದೇ ಸರ್ಕಾರಿ ಕೆಲಸ ಪೂರ್ಣಗೊಳ್ಳುವುದಿಲ್ಲ. ಸರ್ಕಾರಿ ಸೌಲಭ್ಯದ ಲಾಭವನ್ನು ಪಡೆಯುವುದು ಕೂಡಾ ಆಧಾರ್ ಇಲ್ಲದೆ ಸಾಧ್ಯವಾಗುವುದಿಲ್ಲ. ಈಗ ಆಧಾರ್ ಪರಿಶೀಲನೆಯನ್ನು ಆಫ್‌ಲೈನ್‌ನಲ್ಲಿಯೂ ಮಾಡಬಹುದು. ಈ ಅಪ್ಡೇಟ್ ಬಗ್ಗೆ ಸರ್ಕಾರ ಇತ್ತೀಚೆಗೆ ಅಧಿಸೂಚನೆಯನ್ನು ಹೊರಡಿಸಿದೆ.

ಆಫ್‌ಲೈನ್‌ನಲ್ಲಿಯೂ ಆಧಾರ್ ವೆರಿಫಿಕೇಷನ್ ಮಾಡಬಹುದು

ಈ ಹೊಸ ನಿಯಮದೊಂದಿಗೆ, ಆಧಾರ್ ಬಳಕೆದಾರರಿಗೆ ಅದನ್ನು ಡಿಜಿಟಲ್ ಸಹಿಯಾಗಿ ಉಪಯೋಗಿಸಿಕೊಳ್ಳುವ ಆಯ್ಕೆಯನ್ನು ನೀಡುತ್ತದೆ. ಇದರ ಮೂಲಕ ಆಧಾರ್ ಪೇಪರ್‌ಲೆಸ್ ಆಫ್‌ಲೈನ್ ಇ-ಕೆವೈಸಿ ಮಾಡಲು ಸುಲಭವಾಗುತ್ತದೆ.

ತಮ್ಮ ಇ-ಕೆವೈಸಿ (e-KYC) ಡೇಟಾವನ್ನು ಯಾವುದೇ ಸಮಯದಲ್ಲಿ ಸಂಗ್ರಹಿಸಲು, ಪರಿಶೀಲನಾ ಏಜೆನ್ಸಿಗೆ ನೀಡಿದ ಸಮ್ಮತಿಯನ್ನು ಹಿಂಪಡೆಯುವ ಅವಕಾಶವನ್ನು ಆಧಾರ್ ಸಂಖ್ಯೆ ಹೊಂದಿರುವವರಿಗೆ ಹೊಸ ನಿಯಮ ನೀಡುತ್ತದೆ

ಆಫ್‌ಲೈನ್‌ನಲ್ಲಿಯೂ ಆಧಾರ್ ಪರಿಶೀಲನೆ :
ಯುಐಡಿಎಐ ರಚಿಸಿದ ಡಿಜಿಟಲ್ ಸಹಿ ಮಾಡಿದ ದಾಖಲೆಯನ್ನು ಹಂಚಿಕೊಳ್ಳುವ ಮೂಲಕ, ಜನರು ತಮ್ಮ ಆಧಾರ್ ಅನ್ನು ಆಫ್‌ಲೈನ್‌ನಲ್ಲಿ ಪರಿಶೀಲಿಸಬಹುದು. ಇದಕ್ಕಾಗಿ ಆಧಾರ್ ಸಂಖ್ಯೆಯ ಕೊನೆಯ 4 ಅಂಕಿಗಳನ್ನು ಮಾತ್ರ ಬಳಸಬೇಕಾಗುತ್ತದೆ.
ಆಧಾರ್ ನಿಯಮಗಳು ನವೆಂಬರ್ 8 ರಂದು ತಿಳಿಸಲಾಗಿದ್ದು, ಇದನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಇದರಲ್ಲಿ ಆಧಾರ್‌ನ ಆಫ್‌ಲೈನ್ ಪರಿಶೀಲನೆ ಹೇಗೆ ಮಾಡುವುದು ಎನ್ನುವುದನ್ನು ವಿವರವಾಗಿ ವಿವರಿಸಲಾಗಿದೆ.

ಆಧಾರ್ ಅನ್ನು ಹೀಗೆ ಪರಿಶೀಲಿಸಬಹುದು : UIADI ಆನ್‌ಲೈನ್ ಪರಿಶೀಲನೆಯಲ್ಲಿ ಅಸ್ತಿತ್ವದಲ್ಲಿರುವ ಪ್ರಕ್ರಿಯೆಯ ಜೊತೆಗೆ QR ಕೋಡ್ ಪರಿಶೀಲನೆ (QR Code Verification), ಆಧಾರ್ ಪೇಪರ್‌ಲೆಸ್ ಆಫ್‌ಲೈನ್ ಇ-ಕೆವೈಸಿ ಪರಿಶೀಲನೆ (Aadhaar Paperless Offline e-KYC Verification), ಇ-ಆಧಾರ್ ಪರಿಶೀಲನೆಯನ್ನು (e-Aadhaar Verification) ಪರಿಚಯಿಸಿದೆ. ಆಫ್‌ಲೈನ್ ಪೇಪರ್ ಆಧಾರಿತ ಪರಿಶೀಲನೆ (Offilne paper based verification) ಮತ್ತು ಇತರ ಆಫ್‌ಲೈನ್ ಪರಿಶೀಲನೆಯ ಪ್ರಕಾರವನ್ನು ಕೂಡಾ ಸೇರಿಸಲಾಗಿದೆ.

 

ಈ ವಿಧಾನಗಳಲ್ಲಿ ಪರಿಶೀಲನೆಯನ್ನು ಮಾಡಬಹುದು : ಒನ್ ಟೈಮ್ ಪಿನ್ ಮತ್ತು ಬಯೋಮೆಟ್ರಿಕ್ ಆಧಾರಿತ ದೃಢೀಕರಣದಂತಹ ಪರಿಶೀಲನೆಯ ಇತರ ವಿಧಾನಗಳು, ಆಫ್‌ಲೈನ್ ಆಯ್ಕೆಯೊಂದಿಗೆ ಮುಂದುವರಿಯುತ್ತದೆ. ಆಧಾರ್ ಡೇಟಾವನ್ನು ಪರಿಶೀಲಿಸುವ ಅಧಿಕೃತ ಏಜೆನ್ಸಿಗಳು ದೃಢೀಕರಣದ ಯಾವುದೇ ವಿಧಾನವನ್ನು ಆಯ್ಕೆ ಮಾಡಬಹುದು.

English summary

Now Get Aadhaar Verification Done Offline

The new rules allow Aadhaar number holders to revoke consent given to any verification agency for storing his e-KYC data at any time.
Story first published: Wednesday, November 10, 2021, 16:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X