ನ್ಯಾಷನಲ್ ಪೆನ್ಷನ್ ಸಿಸ್ಟಮ್ ಒಂದು ಮಹತ್ವದ ಯೋಜನೆಯಾಗಿದೆ. ಭಾರತ ಸರ್ಕಾರದಿಂದ ಪ್ರಾಯೋಜಿತವಾದ ಈ ಯೋಜನೆ, ನಿವೃತ್ತಿ ಹೂಡಿಕೆಯನ್ನು ಪ್ರತಿನಿಧಿಸುತ್ತದೆ. ನಿವೃತ್ತಿ ನಂತರದ ಬದುಕಿಗೆ ಇದೊಂದು ಉಪಯೋಗಕರ ಯೋಜನೆಯಾಗಿದ್ದು, ಇದರ ಮುಖ್ಯ ಉದ್ದೇಶ ನಿವೃತ್ತಿ ಬಳಿಕ ಹಣಕಾಸು ಭದ್ರತೆ ಒದಗಿಸುವುದಾಗಿದೆ. ಅಲ್ಲದೇ ಇದೊಂದು ಕಾಂಟ್ರಿಬ್ಯೂಷನ್ ಆಧಾತಿತ ಯೋಜನೆಯಾಗಿದೆ. ಈಗ ಇಂತಿಷ್ಟು ಮೊತ್ತವನ್ನು ಹೂಡಿಕೆ ಮಾಡಿದರೆ, ಈ ಹೂಡಿಕೆಗೆ ಲಭ್ಯವಾಗುವ ಲಾಭದ ಆಧಾರದಲ್ಲಿ ನಿವೃತ್ತಿ ವೇಳೆಗೆ ಪೆನ್ಷನ್ ಲಭಿಸುವ ಒಂದು ಯೋಜನೆಯಾಗಿದೆ.

ನಿವೃತ್ತಿ ನಂತರದ ಬದುಕಿಗೆ ಆರ್ಥಿಕ ಭದ್ರತೆ ಒದಗಿಸುವ ಈ ಯೋಜನೆಯನ್ನು ಕ್ಯಾಲ್ಕುಲೇಟ್ ಮಾಡುವುದು ಉತ್ತಮ..ಅಂದರೆ ಎನ್‌ಪಿಎಸ್ ಕ್ಯಾಲ್ಕುಲೇಟರ್ ಮೂಲಕ ನಿಮ್ಮ ನಿವೃತ್ತಿ ನಂತರದ ಪೆನ್ಷನ್ ಲೆಕ್ಕಹಾಕುವುದು. ನೀವು ನಿವೃತ್ತಿ ಸಮಯದಲ್ಲಿ ಸಂಗ್ರಹಿಸಿಕೊಳ್ಳುವ ಒಟ್ಟು ಮೊತ್ತ, ಹಾಗೂ ಪ್ರ್‍ತಿ ಪ್ರತಿ ತಿಂಗಳ ಪೆನ್ಷನ್ ಎಷ್ಟು ಸಿಗಬಹುದು ಎಂಬುದರ ಅಂದಾಜು ಲಭಿಸುತ್ತದೆ. ನಿಮ್ಮ ನಿವೃತ್ತಿಯ ವೇಳೆಗೆ ಸಂಗ್ರಹಿಸಲಾದ ಮೊತ್ತವು ನಿಮ್ಮ ಹೂಡಿಕೆಯ ಮೊತ್ತ, ನಿಮ್ಮ ಹೂಡಿಕೆಯ ಅವಧಿ, ಯೋಜನೆಯಿಂದ ಲಭ್ಯವಿರುವ ವಾರ್ಷಿಕ ಲಾಭದ ಶೇಕಡ ಪ್ರಮಾಣದ ಮೇಲೆ ಅವಲಂಬಿತವಾಗಿರುತ್ತದೆ.
NPS ಕ್ಯಾಲ್ಕುಲೇಟರ್ ಹೇಗೆ ಕಾರ್ಯನಿರ್ವಹಿಸುತ್ತದೆ?
NPS ಕ್ಯಾಲ್ಕುಲೇಟರ್ ಚಕ್ರಬಡ್ಡಿ ಲೆಕ್ಕಾಚಾರದ ಆಧಾರದಲ್ಲಿ ನಿಮ್ಮ ಹೂಡಿಕೆ ಮೊತ್ತವನ್ನು ಲೆಕ್ಕ ಹಾಕುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿಯ ವಯಸ್ಸು 30 ವರ್ಷ ಆಗಿದ್ದರೆ, ನಿವೃತ್ತಿ ವಯಸ್ಸು 60 ವರ್ಷಕ್ಕೆ ಲೆಕ್ಕ ಹಾಕಬೇಕಾಗುತ್ತದೆ. ಆ ವ್ಯಕ್ತಿಯ ಮಾಸಿಕ ಹೂಡಿಕೆ ₹5,000 ಎಂದರೆ, ನಿರೀಕ್ಷಿತ ಲಾಭದ ಶೇಕಡ ಪ್ರಮಾಣ ವರ್ಷಕ್ಕೆ 10% ಆಗಿರುತ್ತದೆ. ಹಾಗೆಯೇ ಪೆನ್ಷನ್ ಪ್ಲಾನ್‌ಗೆ ಹೂಡಿಕೆ ಮಾಡಬೇಕಾದ ಶೇಕಡ ಪ್ರಮಾಣ 40% ಆಗಿರುತ್ತದೆ. ನಿರೀಕ್ಷಿತ ಆನುಯಿಟಿ ಲಾಭದ ಶೇಕಡ ಪ್ರಮಾಣ 6% ಆಗಿರುತ್ತದೆ. ನಿವೃತ್ತಿ ಸಮಯದಲ್ಲಿ ಸಿಗುವ ಒಟ್ಟು ಮೊತ್ತ ಸುಮಾರು ₹1.14 ಕೋಟಿಗಳಾಗಿದ್ದರೆ, ಪ್ರತಿ ತಿಂಗಳ ನಿರೀಕ್ಷಿತ ಪೆನ್ಷನ್ ಮೊತ್ತ ಸುಮಾರು ₹22,800 ಆಗಿರಬಹುದು ಎಂದು ಅಂದಾಜಿಸಬಹುದಾಗಿದೆ.
NPS ಕ್ಯಾಲ್ಕುಲೇಟರ್ ಬಳಸಲು ಏನು ಅರ್ಹತೆ ಇರಬೇಕು..?
ಎನ್‌ಪಿಎಸ್ ಕ್ಯಾಲ್ಕುಲೇಟರ್‍ನ ಯಾರು ಬೇಕಾದರೂ ಬಳಸಬಹುದು. ಆದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡಬೇಕೆಂದರೆ ಒಂದಷ್ಟು ಅರ್ಹತೆಗಳಿರಬೇಕು. ಅಂದರೆ ಇಲ್ಲಿ ಹೂಡಿಕೆ ಮಾಡುವ ವ್ಯಕ್ತಿಯು ಭಾರತೀಯ ನಾಗರಿಕರಾಗಿರಬೇಕು. ಆ ವ್ಯಕ್ತಿಗೆ 18 ರಿಂದ 60 ವರ್ಷಗಳ ನಡುವೆ ವಯಸ್ಸು ಇರಬೇಕು. KYC ದಾಖಲೆಗಳ ಮಾನ್ಯತೆ ಇರಬೇಕು.
ಈ ಅರ್ಹತೆಗಳಿದ್ದರೆ ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನಿಮ್ಮ ಭವಿಷ್ಯದ ನಿವೃತ್ತಿ ಭದ್ರತೆಯನ್ನು ಸುಸ್ಥಿರಗೊಳಿಸಬಹುದು. ಹಾಗೂ ಎನ್‌ಪಿಎಸ್ ಉತ್ತಮ ಆಯ್ಕೆಯಾಗಿದ್ದು ಇದು ಉದ್ದೀರ್ಘ ಅವಧಿಯ ವೃದ್ಧಿಗೆ ಸಹಕಾರಿಯಾಗುತ್ತದೆ.
NPS ಕ್ಯಾಲ್ಕುಲೇಟರ್ ಬಳಸುವ ವಿಧಾನ:
ಎನ್‌ಪಿಎಸ್ ಕ್ಯಾಲ್ಕುಲೇಟರ್ ಬಳಸಲು ಒಂದಷ್ಟು ವಿವರಗಳನ್ನು ಒದಗಿಸಬೇಕಾಗುತ್ತದೆ. ಅವುಗಳಲ್ಲಿ ಪ್ರಮುಖವಾಗಿ..
- ನಿಮ್ಮ ಪ್ರಸ್ತುತ ವಯಸ್ಸು ಮತ್ತು ನಿವೃತ್ತಿ ವಯಸ್ಸು
- ನೀವು ಪ್ರತಿ ತಿಂಗಳು ಹೂಡಿಸುವ ಮೊತ್ತ
- NPS ಹೂಡಿಕೆಯಿಂದ ನೀವು ನಿರೀಕ್ಷಿಸುವ ವಾರ್ಷಿಕ ಲಾಭದ ಶೇಕಡ ಪ್ರಮಾಣ
- ನಿವೃತ್ತಿಯ ನಂತರ ನೀವು ಎಷ್ಟು ವರ್ಷ ಪೆನ್ಷನ್ ಪಡೆಯಲು ಬಯಸುತ್ತೀರಿ
- ನಿವೃತ್ತಿಯ ನಂತರ ನೀವು ಪೆನ್ಷನ್ ಯೋಜನೆಗೆ ಮರುಹೂಡಿಕೆ ಮಾಡುವ ಮೊತ್ತ
NPS ಕ್ಯಾಲ್ಕುಲೇಟರ್ ನಿಮಗೆ ಏನು ತೋರಿಸುತ್ತದೆ?
- ನೀವು ಹೂಡಿಕೆ ಮಾಡಿದ ಮೊತ್ತ ಮತ್ತು ಅದರಿಂದ ಬಂದ ಲಾಭ
- ನಿವೃತ್ತಿ ಸಮಯದಲ್ಲಿ ಒಟ್ಟು ಸಂಗ್ರಹಿಸಿದ ಮೊತ್ತ
- ಪೆನ್ಷನ್ ಪಡೆಯಲು ಮರುಹೂಡಿಕೆ ಮಾಡಿದ ಮೊತ್ತ
- ನೀವು ಪ್ರತಿಮಾಸ ಪಡೆಯುವ ಪೆನ್ಷನ್ ಮೊತ್ತ
ಹೀಗೆ ನಿವೃತ್ತಿ ಬಳಿಕ ನಿಮಗೆ ಸಿಗುವ ಮೊತ್ತ ಎಷ್ಟು ಎಂಬುದನ್ನು, ಈಗಿನಿಂದಲೇ ಲೆಕ್ಕ ಹಾಕಿ ಹೂಡಿಕೆ ಮಾಡಿದರೆ ಉತ್ತಮ. ಎಲ್ಲೋ ಹಣ ಪೋಲಾಗುವ ಬದಲು ಮುಂದೊಂದು ದಿನ ಒಟ್ಟು ದೊಡ್ಡ ಮೊತ್ತ ಸಿಗುತ್ತದೆ ಎಂದಾದರೂ, ಸ್ವಲ್ಪ ಹೆಚ್ಚು ಪ್ರಮಾಣದ ಹಣ ಹೂಡಿಕೆ ಮಾಡಬಹುದು. ಇಂದಿನ ಲೆಕ್ಕಾಚಾರ ಮುಂದಿನ ಭದ್ರತೆಯಾಗಿರುತ್ತದೆ.
More From GoodReturns

Hosur Road: ಹೊಸೂರು ರಸ್ತೆ ಪ್ರಯಾಣಿಕರಿಗೆ ಬಿಗ್ ಅಪ್ಡೇಟ್! ಇನ್ಮೇಲೆ ಸಂಚಾರ ಮತ್ತಷ್ಟು ಸುಲಭ

IPL 2026: ಕೊನೆಗೂ ಐಪಿಎಲ್ 2026ರ ಆರಂಭದ ದಿನಾಂಕ ಬಹಿರಂಗ! ಯಾವಾಗ ಗೊತ್ತಾ?

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Bengaluru 2nd Airport: ಬೆಂಗಳೂರು 2ನೇ ವಿಮಾನ ನಿಲ್ದಾಣ ಯೋಜನೆಗೆ ಹೊಸ ಶಕ್ತಿ…ಸಿಎಂ ಸಿದ್ದರಾಮಯ್ಯ ಮಹತ್ವದ ಘೋಷಣೆ!

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ



Click it and Unblock the Notifications