NTPC ಗ್ರೀನ್ ಎನರ್ಜಿ ಕಂಪನಿಯ ಆರಂಭಿಕ ಸಾರ್ವಜನಿಕ ಕೊಡುಗೆ (IPO) ಬಿಡ್ಡಿಂಗ್ ಶಕ್ರವಾರ (ನವೆಂಬರ್ 22)ದಂದು ಮಕ್ತಾಯವಾಗಿದೆ. 10,000 ಕೋಟಿ ರೂಪಾಯಿಗಳ IPO ಸಬ್ಸ್‌ಕ್ರಿಪ್‌ಶನ್‌ಗೆ ನೀಡಿದ ಕಾಲಾವಕಾಶ ಇಂದು ಕೊನೆಯಾಗಿದೆ. NTPC ಗ್ರೀನ್ ಎನರ್ಜಿ 10,000 ರೂಪಾಯಿಗಳ ಬುಕ್ ಬಿಲ್ಟಿಂಗ್ IPO ಆಗಿದ್ದು, ಇದು 92.59 ಕೋಟಿ ಷೆರುಗಳನ್ನ ಹೊಂದಿದೆ.
ಬಹು ನಿರೀಕ್ಷಿತ NTPC ಗ್ರೀನ್ ಎನರ್ಜಿ IPO ಮಂಗಳವಾರ (ನವೆಂಬರ್ 19) ಬಿಡ್‌ಗೆ ತೆರೆದುಕೊಂಡಿತ್ತು, ಜೊತೆಗೆ ನಾಲ್ಕು ದಿನಗಳ ಕಾಲ ಹೂಡಿಕೆಗೆ ಅವಕಾಶವನ್ನ ನೀಡಲಾಗಿತ್ತು. 10 ರೂಪಾಯಿ ಮುಖಬೆಲೆಯ ಈಕ್ವಿಟಿಗಳಿಗೆ ಪ್ರತಿ ಷೇರಿಗೆ 102 ರಿಂದ 108 ರೂಪಾಯಿ ಪ್ರೈಸ್ ಬ್ಯಾಂಡ್ ನಿಗದಿಯಾಗಿತ್ತು. ಈ ಐಪಿಒ ಮೂಲಕ ಕಂಪನಿಯು 10,000 ಕೋಟಿ ರೂಪಾಯಿ ಸಂಗ್ರಹಿಸಲು ಯೋಜನೆಯನ್ನ ಮಾಡಿದೆ.

NTPC ಗ್ರೀನ್ ಎನರ್ಜಿ IPO ನಾಲ್ಕು ದಿನಗಳಲ್ಲಿ 2.55 ಬಾರಿ ಚಂದಾದಾರಿಕೆಯಾಗಿದೆ. ಅದರಲ್ಲಿ ರಿಟೇಲ್ ವಿಭಾಗದಲ್ಲಿ 3.59 ಬಾರಿ ಸಾರ್ವಜನಿಕ ಸಂಚಿಕೆ ಚಂದಾದಾರಿಕೆಯನ್ನ ಹೊಂದಿದೆ. ಹಾಗೆ QIB ನಲ್ಲಿ 3.51 ಬಾರಿ ಮತ್ತು NII ವಿಭಾಗದಲ್ಲಿ 0.85 ಬಾರಿ ಚಂದಾದಾರಿಕೆಯಾಗಿದೆ.
ಹೂಡಿಕೆದಾರರು ಚಿಲ್ಲರೆ ವೈಯಕ್ತಿಕ ಹೂಡಿಕೆದಾರರು (RII) ವಿಭಾಗದಲ್ಲಿ 2.86 ಪಟ್ಟು ಹೆಚ್ಚು ಚಂದಾದಾರರಾಗಿದ್ದಾರೆ ಮತ್ತು ಇದು ಅತಿಹೆಚ್ಚು ಚಂದಾರರನ್ನ ಹೊಂದಿರುವ ವಿಭಾಗ ಇದಾಗಿದೆ. ಜೊತೆಗೆ NTPC ಷೇರುದಾರರ ಕೋಟಾದಲ್ಲಿ 1.25 ಪಟ್ಟು ಚಂದಾದಾರರಾಗಿದ್ದಾರೆ. ಜೊತೆಗೆ ಅರ್ಹ ಸಾಂಸ್ಥಿಕ ಖರೀದಿದಾರರು (QIBs) ವಿಭಾಗದಲ್ಲಿ 1.21 ಪಟ್ಟು ಚಂದಾದಾರರಾಗಿದ್ದಾರೆ. ಇನ್ನು, ಸಾಂಸ್ಥಿಕವಲ್ಲದ ಹೂಡಿಕೆದಾರರಿಗೆ (NII) ಕಾಯ್ದಿರಿಸಿದ ವಿಭಾಗ ಮತ್ತು ಉದ್ಯೋಗಿಗಳ ಕೋಟಾದಲ್ಲಿ ಶೇಕಡಾ 48ರಷ್ಟು ಮತ್ತು ಶೇಕಡಾ 57 ರಷ್ಟು ಚಂದಾದಾರಿಕೆಯನ್ನು ಪಡೆದುಕೊಂಡಿದೆ, ಈ ಹೂಡಿಕೆದಾರರಿಂದ ಬೇಡಿಕೆ ಮತ್ತಷ್ಟು ಇಳಿಮುಖವಾಗಿದೆ ಎಂದು ಹೇಳಲಾಗ್ತಿದೆ.
ನವೆಂಬರ್ 22 ರಂದು ಸಂಜೆ 5:30ಕ್ಕೆ ಮಾರುಕಟ್ಟೆಯ ನಂತರ ಬಿಡ್ಡಿಂಗ್ ಅವಕಾಶ ಮುಚ್ಚಿದೆ.
NTPC ಗ್ರೀನ್ ಎನರ್ಜಿ IPO ವಿವರಗಳು:
IPO 10,000 ಕೋಟಿ ರೂಪಾಯಿ ಮೌಲ್ಯದ ಸಂಪೂರ್ಣ ಹೊಸ ಸಂಚಿಕೆಯಾಗಿದೆ ಮತ್ತು ನವೆಂಬರ್ 19, 2024 ಮಂಗಳವಾರದಂದು ತೆರೆಯಲಾಗಿತ್ತು. ಹಾಗೆ ಇದರ ಚಂದಾದಾರಿಕೆಗೆ ನೀಡಿದ ಕಾಲಾವಕಾಶ ನವೆಂಬರ್ 22, 2024 ರಂದು ಮುಕ್ತಾಯಗೊಂಡಿದೆ. ಪ್ರತಿ ಈಕ್ವಿಟಿ ಷೇರಿಗೆ ರೂ 102 - ರೂ 108 ಕ್ಕೆ ಆಫರ್‌ನ ಬೆಲೆ ಪಟ್ಟಿಯನ್ನ ನಿರ್ಧರಿಸಲಾಗಿದೆ . IPO ಬೆಲೆ ಬ್ಯಾಂಡ್‌ನ ಮೇಲಿನ ತುದಿಯಲ್ಲಿ 10,000 ಕೋಟಿ ರೂ. ಆಗಿದ್ದು, ಹೂಡಿಕೆದಾರರು ಕನಿಷ್ಠ 138 ಈಕ್ವಿಟಿ ಷೇರುಗಳಿಗೆ ಮತ್ತು 138 ಈಕ್ವಿಟಿ ಷೇರುಗಳ ಅಂತರದಲ್ಲಿ ಬಿಡ್ ಮಾಡಬಹುದು.
NTPC ಗ್ರೀನ್ ಎನರ್ಜಿ ಲಿಮಿಟೆಡ್ ಬಗ್ಗೆ ಮಾಹಿತಿ
NTPC ಗ್ರೀನ್ ಎನರ್ಜಿ ಲಿಮಿಟೆಡ್ NTPC ಲಿಮಿಟೆಡ್‌ನ ಅಂಗಸಂಸ್ಥೆಯಾಗಿದೆ. ಏಪ್ರಿಲ್ 7, 2022 ರಂದು ಸಾರ್ವಜನಿಕ ಲಿಮಿಟೆಡ್ ಕಂಪನಿಯಾಗಿ ಇದು ಆರಂಭವಾಗಿದೆ, NTPC ಗ್ರೀನ್ ಒಂದು ನವೀಕರಿಸಬಹುದಾದ ಇಂಧನ ಕಂಪನಿಯಾಗಿದ್ದು, ಸಾವಯವ ಮತ್ತು ಅಜೈವಿಕ ಮಾರ್ಗಗಳ ಮೂಲಕ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಗಮನಹರಿಸುತ್ತದೆ.
ಆಗಸ್ಟ್ 31, 2024 ರಲ್ಲಿ ಆರು ರಾಜ್ಯಗಳಾದ್ಯಂತ ಕಂಪನಿಯು ಸೌರ ಯೋಜನೆಗಳಿಂದ 3,071 MW ಮತ್ತು ಗಾಳಿ ಯೋಜನೆಗಳಿಂದ 100 MW ಕಾರ್ಯಾಚರಣೆಯ ಸಾಮರ್ಥ್ಯವನ್ನು ಇದು ಹೊಂದಿದೆ. ಹಾಗೆ ಜೂನ್ 30, 2024 ರಂದು, ಕಂಪನಿಯ ಪೋರ್ಟ್‌ಫೋಲಿಯೊ 14,696 MW ಅನ್ನು ಒಳಗೊಂಡಿತ್ತು, ಇದರಲ್ಲಿ 2,925 MW ಆಪರೇಟಿಂಗ್ ಪ್ರಾಜೆಕ್ಟ್‌ಗಳು ಮತ್ತು 11,771 MW ಗುತ್ತಿಗೆ ಮತ್ತು ನೀಡಲಾದ ಯೋಜನೆಗಳನ್ನ ಒಳಗೊಂಡಿದೆ.
ಜೂನ್ 30, 2024 ರಂತೆ, ಕಂಪನಿಯು 37 ಸೌರ ಯೋಜನೆಗಳು ಮತ್ತು 9 ಗಾಳಿ ಯೋಜನೆಗಳಲ್ಲಿ 15 ಆಫ್-ಟೇಕರ್‌ಗಳನ್ನ ಹಾಗೆ, ಜೂನ್ 30, 2024 ರಂತೆ, ಕಂಪನಿಯು 7 ರಾಜ್ಯಗಳಲ್ಲಿ 31 ನವೀಕರಿಸಬಹುದಾದ ಇಂಧನ ಯೋಜನೆಗಳನ್ನು ನಿರ್ಮಿಸುತ್ತಿದೆ.
ಹೆಚ್ಚುವರಿಯಾಗಿ, ಕಂಪನಿಯು ತನ್ನ ಉದ್ಯೋಗಿಗಳಿಗೆ 200 ಕೋಟಿ ಮೌಲ್ಯದ ಷೇರುಗಳನ್ನು ಕಾಯ್ದಿರಿಸಿದೆ. ಅರ್ಹ ಉದ್ಯೋಗಿಗಳು ಈ ಷೇರುಗಳನ್ನು ಅಂತಿಮ ಸಂಚಿಕೆ ಬೆಲೆಗೆ ಪ್ರತಿ ಷೇರಿಗೆ 5 ರೂಪಾಯಿಗಳ ರಿಯಾಯಿತಿಯಲ್ಲಿ ಪಡೆಯುತ್ತಾರೆ. ಇದಲ್ಲದೆ, 1,000 ಕೋಟಿ ಮೌಲ್ಯದ ಷೇರುಗಳನ್ನು ಷೇರುದಾರರಿಗೆ ನಿಗಧಿ ಮಾಡಲಾಗಿದೆ.
IPO ನಂತರ, ಷೇರುಗಳ ಹಂಚಿಕೆಯನ್ನು ನವೆಂಬರ್ 25, 2024 ರಂದು ಪರಿಗಣಿಸಲಾಗುತ್ತದೆ, ಆದರೆ ಮರುಪಾವತಿ ಅಥವಾ ಡಿಮ್ಯಾಟ್ ಖಾತೆಗೆ ಷೇರುಗಳ ಕ್ರೆಡಿಟ್ ಪ್ರಾರಂಭವು ನವೆಂಬರ್ 26 ರಂದು ನಡೆಯುತ್ತದೆ. ಇದು ನವೆಂಬರ್ 27 ರಂದು BSE ಮತ್ತು NSE ನಲ್ಲಿ ಪಟ್ಟಿಯನ್ನು ಅನುಸರಿಸುತ್ತದೆ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Bengaluru 2nd Airport: ಬೆಂಗಳೂರು 2ನೇ ಏರ್ಪೋರ್ಟ್ಗೆ ಇದೇ ಸ್ಥಳ ಬೆಸ್ಟ್; ಉದ್ಯಮಿ ಕೊಟ್ರು ಬಿಗ್ ಟ್ವಿಸ್ಟ್

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Gold Price Bengaluru: ಆಭರಣ ಪ್ರಿಯರಿಗೆ ಗುಡ್ನ್ಯೂಸ್…ಚಿನ್ನದ ಬೆಲೆಯಲ್ಲಿ 19,600 ರೂ. ಕುಸಿತ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!



Click it and Unblock the Notifications