ವಿದೇಶಿ ಬ್ಯೂಟಿ ಪ್ರಾಡಕ್ಟ್‌ಗಳ ಬಗ್ಗೆ ಜಾಸ್ತಿ ವ್ಯಾಮೋಹ ಇದ್ದ ಭಾರತೀಯರಿಗೆ ಸ್ವದೇಶಿ ಉತ್ಪನ್ನಗಳನ್ನು ಪೂರೈಸಿ ಮನೆಮಾತಾಗಿದ್ದ ಬಿಲಿಯನ್ ಡಾಲರ್ ಉದ್ಯಮ ಸಂಸ್ಥೆ ನೈಕಾ (Nykaa) ಸಂಸ್ಥೆಯಲ್ಲಿ ಕಳೆದ ಹಲವು ವರ್ಷಗಳಿಂದ ಮುಖ್ಯ ಹುದ್ದೆಯಲ್ಲಿದ್ದ ನಿಹಿರ್ ಪಾರಿಖ್ ಇದೀಗ ಕಂಪೆನಿಗೆ ಆಘಾತ ನೀಡಿದ್ದಾರೆ. ಎಫ್‌ಎಸ್‌ಎನ್ ಇ-ಕಾಮರ್ಸ್ ವೆಂಚರ್ಸ್ ನ ಆಡಳಿತದಡಿಯಲ್ಲಿ ಬರುವ Nykaa ಫ್ಯಾಶನ್ ಸಂಸ್ಥೆಯು ಭಾರತದ ಪ್ರಖ್ಯಾತ ಬ್ಯೂಟಿ ಉತ್ಪನ್ನಗಳ ಕಂಪೆನಿಯಾಗಿದೆ. ಇನ್ನು ನಿಹಿರ್ ಅವರು ಅಚ್ಚರಿಯ ಬೆಳವಣಿಗೆಯೊಂದರಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ Nykaa Fashion.com ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಹಜವಾಗಿಯೇ ಬಹುಕೋಟಿ ಉದ್ಯಮದ ಸಂಸ್ಥೆಗೆ ನಿಹಿರ್ ಹಠಾತ್ ರಾಜೀನಾಮೆಯಿಂದ ಆಘಾತವಾಗಿರುವುದಂತೂ ನಿಜ. ನಿಹಿರ್ ಅವರು ಕಳೆದ ಮೇ 2015 ರಿಂದ ಕಂಪನಿಯೊಂದಿಗೆ ಸಂಬಂಧ ಹೊಂದಿದ್ದರು. ಸದ್ಯ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಕಂಪೆನಿಯು ಪಾರಿಖ್ ಅವರ ರಾಜೀನಾಮೆ ಪತ್ರವನ್ನು ಸ್ವೀಕರಿಸಿದೆ. ನಿಹಿರ್ ಪಾರಿಖ್ ಅವರು ವೈಯಕ್ತಿಕ ಬದ್ಧತೆಗಳ ಕಾರಣದಿಂದಾಗಿ ಡಿಸೆಂಬರ್ 05ರಂದು ರಾಜೀನಾಮೆ ನೀಡಿದ್ದಾರೆ. ಇನ್ನು ನಿಹಿರ್ ರಾಜೀನಾಮೆಯ ಬಗ್ಗೆ ಪ್ರತಿಕ್ರಿಯೆ ನೀಡಿರುವ FSN ಇ-ಕಾಮರ್ಸ್ ವೆಂಚರ್ಸ್ ʻಡಿಸೆಂಬರ್ 05ರ ವ್ಯವಹಾರ ಅವಧಿಗೆ ಮುಕ್ತಾಯದೊಂದಿಗೆ ಅವರನ್ನು W.E.F ಸೇವೆಗಳಿಂದ ಬಿಡುಗಡೆ ಮಾಡಲಾಗಿದೆʼ ಎಂದು ಫೈಲಿಂಗ್‌ನಲ್ಲಿ ತಿಳಿಸಿದೆ.
ಏನಿದು ನೈಕಾ ಸಂಸ್ಥೆ?
ಜಗತ್ತಿನಲ್ಲಿ ಹಲವಾರು ಲೆಕ್ಕವಿಲ್ಲದಷ್ಟು ಬ್ಯೂಟಿ ಬ್ರ್ಯಾಂಡ್‌ಗಳು ಅಸ್ತಿತ್ವದಲ್ಲಿದೆ. ಅದರಲ್ಲೂ ಸೌಂದರ್ಯ ಪ್ರಿಯರಾದ ಭಾರತೀಯರು ಜಗತ್ತಿನ ಹಲವಾರು ಕಂಪೆನಿಗಳು ಬ್ಯೂಟಿ ಉತ್ಪನ್ನಗಳನ್ನು ಬಳಸುತ್ತಾರೆ. ಅದರಲ್ಲೂ ವರ್ಷಕ್ಕೆ ಕೇವಲ ಇವುಗಳ ಉತ್ಪನ್ನಗಳ ಖರೀದಿಯಿಂದಲೇ ಬಿಲಿಯನ್ ಡಾಲರ್ ಮೊತ್ತದ ವ್ಯವಹಾರ ಆಗುತ್ತಿರುತ್ತದೆ. ಸದ್ಯ ಈ ವಿಚಾರವ್ನನು ಮನಗಂಡ ಮಾಜಿ ಹೂಡಿಕೆ ಬ್ಯಾಂಕರ್ ಆಗಿದ್ದ ಫಲ್ಗುಣಿ ನಾಯರ್ ಅವರು 2012 ರಲ್ಲಿ Nykaa ಹೆಸರಿನ ಫ್ಯಾಶನ್ ಉತ್ಪನ್ನಗಳ ಕಂಪೆನಿಯನ್ನು ಆರಂಭಿಸಿದರು. ಭಾರತೀಯ ಉತ್ಪನ್ನಗಳನ್ನು ಭಾರತೀಯಳೇ ಆರಂಭಿಸಿದ ಹಿನ್ನೆಲೆಯಲ್ಲಿ ಕಂಪೆನಿಯು ಕಡಿಮೆ ಅವಧಿಯಲ್ಲೇ ಹೆಚ್ಚಿನ ಯಶಸ್ಸನ್ನು ಪಡೆದುಕೊಂಡಿತ್ತು. ಹೀಗೆ ಹಂತ ಹಂತವಾಗಿ ಕಂಪೆನಿಯನ್ನು ತೆಗೆದುಕೊಂಡು ಹೋಗುವಲ್ಲಿ ಫಲ್ಗುಣಿ ಅವರು ಹೆಚ್ಚಿನ ಶ್ರಮ ವಹಿಸಿದರು. ಹೀಗೆ ಯಶಸ್ಸನ್ನು ಸಾಧಿಸುತ್ತಲೇ ಹೋದ ಕಂಪೆನಿ ಸದ್ಯ 47,879 ಕೋಟಿ ರೂ. ಮೌಲ್ಯದ ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ.

ಪಾರಿಖ್ ಅವರ ಬಗ್ಗೆ ಒಂದಿಷ್ಟು...
ಇನ್ನು ತಂತ್ರಜ್ಞಾನ ಮತ್ತು ಇ-ಕಾಮರ್ಸ್ ಕ್ಷೇತ್ರಗಳಲ್ಲಿ 17 ವರ್ಷಗಳ ಅಗಾಧ ಅನುಭವವನ್ನು ಹೊಂದಿರುವ ಪಾರಿಖ್ ಅವರು ಅಮೆರಿಕಾದ Genentec Inc. ಹಾಗೂ GE ಹೆಲ್ತ್‌ಕೇರ್ Pte ಕಂಪೆನಿಯಲ್ಲೂ ಕೆಲಸ ನಿರ್ವಹಿಸಿದ ಅನುಭವ ಹೊಂದಿದ್ದರು. ಮುಂಬೈ ವಿಶ್ವವಿದ್ಯಾನಿಲಯದಿಂದ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಮತ್ತು INSEAD ನಿಂದ ವ್ಯವಹಾರ ಆಡಳಿತದಲ್ಲಿ (MBA) ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಅಲ್ಲದೆ ಅವರು ಅಮೆರಿಕಾದ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಎಸ್ ಪದವಿಯನ್ನೂ ಕೂಡ ಪಡೆದುಕೊಂಡಿದ್ದಾರೆ. ಇನ್ನು 2015ರ ಮೇ ನಿಂದ ನೈಕಾ ಕಂಪೆನಿಯನ್ನು ಸೇರಿದ್ದ ಪಾರಿಖ್ ಅವರು ಸಿಇಒ ಹುದ್ದೆಯನ್ನು ಕೂಡ ಅಲಂಕರಿಸಿದ್ದರು. ತನ್ನ ಆಡಳಿತಾವಧಿಯಲ್ಲಿ ಪಾರಿಖ್ ಅವರು ತೆಗೆದುಕೊಂಡ ಹಲವು ನಿರ್ಧಾರಗಳು ಕೂಡ ಕಂಪೆನಿಗೆ ಒಳಿತು ಮಾಡಿದೆ ಎನ್ನಲಾಗಿದೆ.
ಕಂಪೆನಿ ಹಾದಿ ಹೇಗಿದೆ?
ಇನ್ನು ನೈಕಾ ಕಂಪೆನಿಯ ಸೌಂದರ್ಯ ವಿಭಾಗಕ್ಕೆ ಸಂಬಂಧಿಸಿದ ಉತ್ಪನ್ನಗಳು ಹೆಚ್ಚಿನ ಮಟ್ಟದಲ್ಲಿ ಮಾರಾಟವಾಗುತ್ತಿದ್ದು, ವಿಭಾಗವು ಉತ್ತಮ ಲಾಭದಾಯಕವಾಗಿದ್ದರೂ ನೈಕಾ ಫ್ಯಾಷನ್ ಮಾತ್ರ ನಷ್ಟ ಹೊಂದುತ್ತಿದೆ ಎನ್ನಲಾಗಿದೆ. ಕಂಪನಿಯು ಸೆಪ್ಟೆಂಬರ್ 2024 ರ ತ್ರೈಮಾಸಿಕದಲ್ಲಿ ರೂ 12.97 ಕೋಟಿಗಳ ಏಕೀಕೃತ ನಿವ್ವಳ ಲಾಭ ಮತ್ತು ರೂ 1,874 ಕೋಟಿ ಆದಾಯವನ್ನು ಪ್ರಕಟಿಸಿದೆ. ಸದ್ಯ ಇದರ ನಡುವಲ್ಲೇ ಅನುಭವಿ ಆಡಳಿತಗಾರನಾಗಿದ್ದ ಪಾರಿಖ್ ಅವರು ಸಂಸ್ಥೆಗೆ ರಾಜೀನಾಮೆ ನೀಡಿರುವುದು ಹಲವು ಗೊಂದಲಗಳನ್ನು ನಿರ್ಮಿಸಿದೆ. ಹಾಗಾಗಿ ಹೊಸದಾಗಿ ನೇಮಕಗೊಳ್ಳುವ ಸಿಇಒ ಮೇಲೆ ಹೆಚ್ಚಿನ ಜವಾಬ್ದಾರಿಯೊಂದಿಗೆ ಸಂಸ್ಥೆಯನ್ನು ಮತ್ತಷ್ಟು ಲಾಭದ ಹಾದಿಗೆ ತೆಗೆದುಕೊಂಡು ಹೋಗುವ ಮಹತ್ತರ ಜವಾಬ್ದಾರಿ ಇದೆ.
More From GoodReturns

Karnataka BPL Card: ಬಿಪಿಎಲ್ ಕಾರ್ಡ್ದಾರರಿಗೆ ಬಿಗ್ ಶಾಕ್! ಸರ್ಕಾರದ ಮಹತ್ವದ ಕ್ರಮ

Gold Rate Bengaluru: ಮಧ್ಯಪ್ರಾಚ್ಯದಲ್ಲಿ ಯುದ್ಧ ನಡುವೆ ಚಿನ್ನದ ಬೆಲೆಯಲ್ಲಿ 43,700 ರೂ. ಏರಿಕೆ! ಇಂದಿನ ಬೆಲೆ ಎಷ್ಟು?

Karnataka Budget 2026: ಬಜೆಟ್ ನಂತರ ಗ್ಯಾರಂಟಿ ಯೋಜನೆಗಳು ಇರುತ್ತಾ? ರಾಜ್ಯದ ಜನರಿಗೆ ಇರುವ ನಿರೀಕ್ಷೆಗಳೇನು? ತಿಳಿಯಿರಿ

High Speed Train: ಬೆಂಗಳೂರಿಗೆ ಮತ್ತೊಂದು ಹೈಸ್ಪೀಡ್ ರೈಲು! ಇನ್ಮೇಲೆ ಹೈದರಾಬಾದ್ಗೆ ಬರೀ 2 ಗಂಟೆ ಜರ್ನಿ

Train Service: ಬೆಂಗಳೂರು-ಕೇರಳ ಪ್ರಯಾಣ ಈಗ ಇನ್ನೂ ಸುಲಭ…ಕೇವಲ 230 ರೂ., ಹೆಚ್ಚು ಸೌಕರ್ಯ!

Karnataka Weather: ರಾಜ್ಯದಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಬಿಸಿಲು! ಹೇಗಿದೆ ಇಂದಿನ ಹವಾಮಾನ?

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Gold Rate Bengaluru: ಇಂದೂ ಚಿನ್ನದ ಬೆಲೆ ಇಳಿಕೆ…24 ಕ್ಯಾರಟ್ನಲ್ಲಿ ಒಂದೇ 4,900 ರೂ. ಕುಸಿತ!

Iran-Israel War: ಇಸ್ರೇಲ್-ಅಮೆರಿಕ ವೈಮಾನಿಕ ದಾಳಿಯಲ್ಲಿ ಇರಾನ್ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಮರಣ!

ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿ: ಭಾರತೀಯ ಷೇರು ಮಾರುಕಟ್ಟೆ, ಚಿನ್ನ-ಬೆಳ್ಳಿ ಮತ್ತು ತೈಲ ಬೆಲೆ ಮೇಲೆ ತೀವ್ರ ಪರ

Vande Bharat: ಸುಂದರ ನೋಟ, ವೇಗದ ಸೇವೆ; ವಂದೇ ಭಾರತ್ ರೈಲಿನ ವಿಶೇಷ ಮಾರ್ಗಗಳಿವು!



Click it and Unblock the Notifications