Dhanteras Gold Rate: ಧನ್ತೇರಸ್‌ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್‌! ಕೊನೆಗೂ ಇಳಿಕೆಯಾಯ್ತು ಗೋಲ್ಡ್‌ ರೇಟ್

ಧನ್ತೇರಸ್‌ ಹಬ್ಬದ (Dhanteras Festival) ಸಂಭ್ರಮದಲ್ಲೂ ಚಿನ್ನ ಪ್ರಿಯರಿಗೆ ನಿರಾಸೆಯೇ ಅಂತಾನೇ ಹೇಳಬಹುದು. ಚಿನ್ನದ ಮೇಲೆ ಹೂಡಿಕೆ (Gold Investment) ಮಾಡಬೇಕು, ಚಿನ್ನ ಖರೀದಿಸಬೇಕು ಎಂದುಕೊಂಡಿದ್ದವರಿಗೆಲ್ಲಾ ಬೆಲೆ ಮಾತ್ರ ಕಡಿಮೆಯಾಗುತ್ತಲೇ ಇಲ್ಲ ಅನ್ನೋ ಬೇಸರ ಇತ್ತು. ದಿನ ಹೋದಂತೆ ಚಿನ್ನದ ಬೆಲೆ ಏರಿಕೆಯನ್ನೇ ಕಾಣುತ್ತಿತ್ತು. ಈ ಮಧ್ಯೆ ಧನ್ತೇರಸ್‌ ಮುನ್ನಾ ದಿನವೇ ಗ್ರಾಂಗೆ ಮುನ್ನೂರಕ್ಕೂ ಅಧಿಕ ಬೆಲೆ ಏರಿಕೆಯಾಗಿತ್ತು. ಆದ್ರೆ ಇದೀಗ ಧನ್ತೇರಸ್‌ ಹಬ್ಬದಂದು ಭಾರತದಲ್ಲಿ ಚಿನ್ನ ಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದ್ದು (Today Gold Rate), ಚಿನ್ನದ ಮೇಲೆ ಹೂಡಿಕೆ, ಚಿನ್ನ ಖರೀದಿ ಮಾಡಬೇಕೆಂದುಕೊಂಡವರಿಗೆ ಇದೇ ಬೆಸ್ಟ್‌ ಟೈಮ್‌. ಹಾಗಿದ್ರೆ ಚಿನ್ನದ ಬೆಲೆ ಎಷ್ಟು ಇಳಿಕೆಯಾಗಿದೆ ಗೊತ್ತಾ?

ಧನ್ತೇರಸ್‌ ಹಬ್ಬಕ್ಕೆ ಚಿನ್ನ ಖರೀದಿಸುವವರಿಗೆ ಗುಡ್‌ ನ್ಯೂಸ್‌!

ಭಾರತದಲ್ಲಿ ಇಂದಿನ 24K ಚಿನ್ನದ ಬೆಲೆ:

24K ಚಿನ್ನದ ಬೆಲೆ ದಿನೇ ದಿನೇ ದಾಖಲೆ ಮಟ್ಟದಲ್ಲಿ ಏರಿಕೆಯಾಗುತ್ತಿತ್ತು. ಆದ್ರೆ ಧನ್ತೇರಸ್‌ ಹಬ್ಬದಂದೇ ಚಿನ್ನ ಪ್ರಿಯರು ನಿಟ್ಟುಸಿರು ಬಿಡುವಂತಾಗಿದೆ. ಏಕೆಂದರೆ ಚಿನ್ನದ ಬೆಲೆ ಇಂದು ದಿಢೀರ್‌ ಇಳಿಕೆ ಕಂಡಿದೆ. ಊಹೆಯೂ ಮಾಡದಷ್ಟು ಚಿನ್ನದ ಬೆಲೆ ಇಳಿಕೆಯಾಗಿದೆ. ಇದೀಗ 24 ಕ್ಯಾರೆಟ್‌ ಚಿನ್ನದ ಒಂದು ಗ್ರಾಂ ಬೆಲೆ ನಿನ್ನೆಗಿಂತ ಇಂದು ₹191 ರೂ. ಇಳಿಕೆಯಾಗಿದೆ. ಅಂದರೆ ಪ್ರತೀ ಗ್ರಾಂ ಬೆಲೆ 13,086 ರೂ. ಆಗಿದೆ. ಇನ್ನು 8 ಗ್ರಾಂ ಚಿನ್ನದ ಬೆಲೆ 1,04,688 ರೂ. ಆಗಿದ್ದು, ನಿನ್ನೆ 1,06,216 ರೂ ಇತ್ತು. ಈ ಮೂಲಕ ಒಂದೇ ದಿನದಲ್ಲಿ 1,528 ರೂ.ನಷ್ಟು ಏರಿಕೆಯಾಗಿದೆ. ಅದೇ ರೀತಿ 10 ಚಿನ್ನದ ಬೆಲೆ 1,30,860 ರೂಪಾಯಿ ಆಗಿದ್ದು, 1,910 ರೂ.ನಷ್ಟು ದಿಢೀರ್‌ ಇಳಿಕೆಯಾಗಿದೆ. 100 ಚಿನ್ನದ ಬೆಲೆಯಲ್ಲೂ ಇಳಿಕೆಯಾಗಿದ್ದು, ಇಂದು 13,08,600 ರೂ. ಆಗಿದ್ದು, ನಿನ್ನೆ 13,27,700 ರೂ. ಇತ್ತು. ಒಟ್ಟು 19,100 ರೂ. ಇಳಿಕೆಯಾಗಿದೆ.

ಭಾರತದಲ್ಲಿ 22K ಚಿನ್ನದ ಬೆಲೆ ಹೇಗಿದೆ?
24K ಚಿನ್ನಕ್ಕೆ ಹೋಲಿಸಿದ್ರೆ ಪ್ಯೂರಿಟಿಯಲ್ಲಿ 22K ಚಿನ್ನ ಸ್ವಲ್ಪ ಜಾಸ್ತಿ ಮಿಶ್ರಣವನ್ನು ಹೊಂದಿರುತ್ತದೆ. 22K ಚಿನ್ನದ 1 ಗ್ರಾಂ ಬೆಲೆ ಇಂದು 11,995 ರೂ. ಆಗಿದ್ದು, ನಿನ್ನೆ 12,170 ರೂ. ಇತ್ತು. ಒಂದೇ ದಿನದಲ್ಲಿ ಪ್ರತೀ ಗ್ರಾಂ ಬೆಲೆಯಲ್ಲಿ ದಿಢೀರ್‌ ಅಂತ 175 ರೂ. ಇಳಿಕೆಯಾಗಿದೆ. ಹಾಗೆಯೇ 8 ಗ್ರಾಂ ಚಿನ್ನದ ಬೆಲೆ 95,960 ರೂಪಾಯಿ ಆಗಿದ್ದು, ನಿನ್ನೆ 97,360 ರೂ. ಇತ್ತು. ನಿನ್ನೆಗಿಂತ ಇಂದು 1,400 ರೂ. ಇಳಿಕೆ ಕಂಡಿದೆ. 10 ಗ್ರಾಂ ಚಿನ್ನದ ಬೆಲೆ ಇಂದು 1,19,950 ರೂ. ಇದ್ದು, ನಿನ್ನೆ 1,21,700 ರೂ ಇತ್ತು. ಅದೇ ರೀತಿ 100 ಗ್ರಾಂ ಚಿನ್ನದ ಬೆಲೆಯಲ್ಲೂ ಒಟ್ಟು 17,500 ರೂ.ನಷ್ಟು ಇಳಿಕೆ ಕಂಡಿದ್ದು, ಒಟ್ಟು ಬೆಲೆ 11,99,500 ರೂ. ಆಗಿದೆ.

ಭಾರತದಲ್ಲಿ 18K ಚಿನ್ನದ ಬೆಲೆ:
18K ಚಿನ್ನದ ಬೆಲೆಯಲ್ಲೂ ಗ್ರಾಂನಲ್ಲಿ ಭಾರೀ ಇಳಿಕೆಯಾಗಿದೆ. 18 ಕ್ಯಾರೆಟ್‌ ಚಿನ್ನದ 1 ಗ್ರಾಂ ಬೆಲೆ ಇಂದು 9,814 ರೂಪಾಯಿ ಆಗಿದ್ದು, ನಿನ್ನೆ 9,958 ರೂ. ಇತ್ತು. ಅಂದರೆ ಒಂದೇ ದಿನದಲ್ಲಿ 144 ರೂ.ನಷ್ಟು ಇಳಿಕೆಯಾಗಿದೆ. 8 ಗ್ರಾಂ ಚಿನ್ನದ ಬೆಲೆ ಕೂಡಾ ಇಂದು 78,512 ರೂ. ಆಗಿದ್ದು, ನಿನ್ನೆ 79,664 ರೂ. ಆಗಿದೆ. ಈ ಮೂಲಕ ಒಟ್ಟು 1,152 ರೂ. ಇಳಿಕೆಯಾಗಿದೆ. 10 ಚಿನ್ನದ ಬೆಲೆಯೂ ಇಂದು ಇಳಿಕೆಯಾಗಿ 98,140 ರೂ. ಆಗಿದ್ದು, 100 ಚಿನ್ನದ ಬೆಲೆ ಇಂದು 9,81,400 ರೂ. ಆಗಿದೆ.

ಭಾರತದ ವಿವಿಧ ನಗರಗಳ ಚಿನ್ನದ ಬೆಲೆ ಇಂದು ಹೇಗಿದೆ?
ಚೆನ್ನೈ: 24K ರೂ. 13,037, 22K ರೂ. 11,950, 18K ರೂ. 9,860
ಮುಂಬೈ: 24K ರೂ. 13,086, 22K ರೂ. 11,995, 18K ರೂ. 9,814
ದೆಹಲಿ: 24K ರೂ. 13,101, 22K ರೂ. 12,010, 18K ರೂ. 9,829
ಕೋಲ್ಕತ್ತಾ: 24K ರೂ. 13,086, 22K ರೂ. 11,995, 18K ರೂ. 9,814
ಬೆಂಗಳೂರು: 24K ರೂ. 13,086, 22K ರೂ. 11,995, 18K ರೂ. 9,814
ಹೈದರಾಬಾದ್: 24K ರೂ. 13,086, 22K ರೂ. 11,995, 18K ರೂ. 9,814
ಕೇರಳ: 24K ರೂ. 13,086, 22K ರೂ. 11,995, 18K ರೂ. 9,814
ಪುಣೆ: 24K ರೂ. 13,086, 22K ರೂ. 11,995, 18K ರೂ. 9,814
ವಡೋದರಾ: 24K ರೂ. 13,091, 22K ರೂ. 12,000, 18K ರೂ. 9,819
ಅಹಮದಾಬಾದ್: 24K ರೂ. 13,091, 22K ರೂ. 12,000, 18K ರೂ. 9,819

ಬೆಳ್ಳಿ ಬೆಲೆ ಹೇಗಿದೆ?
ಚಿನ್ನದ ಬೆಲೆ ಏರಿಕೆಯಾದಂತೆ ಬೆಳ್ಳಿಯ ಬೇಡಿಕೆ ಹೆಚ್ಚಾಗೋದು ಸಹಜ. ಆದ್ರೆ ಇತ್ತೀಚೆಗೆ ಬೆಳ್ಳಿ ಬೆಲೆಯೂ ಭಾರೀ ಏರಿಕೆ ಕಾಣುತ್ತಿದೆ. ಅಲ್ಲದೇ ಹಲವಾರು ತಜ್ಞರು ಕೂಡಾ ಮುಂದಿನ ವರ್ಷಗಳಲ್ಲಿ ಬೆಳ್ಳಿ ಬೆಲೆಯಲ್ಲೂ ಭಾರೀ ಏರಿಕೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಆದ್ರೆ ಇದೀಗ ಬೆಳ್ಳಿ ಪ್ರಿಯರು ಸ್ವಲ್ಪ ನಿಟ್ಟುಸಿರು ಬಿಡುವಂತಾಗಿದೆ. ಇಂದು ಬೆಳ್ಳಿ ಬೆಲೆ ಸ್ವಲ್ಪ ಇಳಿಕೆಯಾಗಿದ್ದು, ಇಂದು 1 ಗ್ರಾಂ ಬೆಳ್ಳಿ ಬೆಲೆ 172 ರೂ. ಆಗಿದ್ದು, ನಿನ್ನೆ 185 ರೂ. ಇತ್ತು. ಈ ಮೂಲಕ 13 ರೂ.ನಷ್ಟು ಬೆಲೆ ಇಳಿಕೆಯಾಗಿದೆ. ಇನ್ನು 8 ಗ್ರಾಂ ಬೆಳ್ಳಿ ಬೆಲೆ 1,376 ರೂಪಾಯಿಯಾಗಿದ್ದು, ನಿನ್ನೆ 1,480 ರೂ ಇತ್ತು. ಈ ಮೂಲಕ ಒಂದೇ ದಿನ 104 ರೂ.ನಷ್ಟು ಇಳಿಕೆ ಕಂಡಿದೆ. 10 ಗ್ರಾಂ ಬೆಳ್ಳಿ ದರ ಇಂದು 1,720 ರೂ. ಆಗಿದ್ದು, ನಿನ್ನೆ 1,850 ರೂ. ಇತ್ತು. ನಿನ್ನೆಗೆ ಹೋಲಿಸಿದ್ರೆ ಇಂದು 130 ರೂಪಾಯಿ ಇಳಿಕೆಯಾಗಿದೆ. ಅದೇ ರೀತಿ 100 ಗ್ರಾಂ ಬೆಳ್ಳಿಯಲ್ಲೂ 17,200 ರೂ. ಆಗಿದ್ದು, 1000 ಗ್ರಾಂ ಬೆಳ್ಳಿ ಬೆಲೆ 1,72,000 ರೂ. ಆಗಿದೆ.

ಸ್ಪಾಟ್‌ ವಿವರ: ರಾಯಿಟರ್ಸ್ ನೀಡಿರುವ ವರದಿ ಪ್ರಕಾರ ಅಕ್ಟೋಬರ್ 17ರಂದು ಸ್ಪಾಟ್ ಚಿನ್ನದ ಬೆಲೆ ಪ್ರಥಮ ಬಾರಿ ಪ್ರತಿ ಔನ್ಸ್ $4,300 ಅನ್ನು ಮೀರಿತು. ಈ ವಾರದಲ್ಲಿ ಚಿನ್ನದ ಬೆಲೆ 7.6% ಹೆಚ್ಚಳ ಕಂಡಿದ್ದು, ಇದಕ್ಕೆ ಪ್ರಮುಖ ಕಾರಣಗಳಾಗಿರುವುದು ಅಮೆರಿಕಾ-ಚೀನಾ ವಾಣಿಜ್ಯ ಸಂಬಂಧದಲ್ಲಿ ಬಿರುಕು ಮತ್ತು ಅಮೆರಿಕಾದ ಬಡ್ಡಿದರ ಕಡಿತದ ನಿರೀಕ್ಷೆಗಳು. ಈ ಬೆಳವಣಿಗೆ ಹೂಡಿಕೆದಾರರಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿಸುವಂತೆ ಹೆಚ್ಚು ಆಸಕ್ತಿಯನ್ನು ಉಂಟುಮಾಡುತ್ತಿದೆ.

ಚಿನ್ನದ ಮೇಲೆ ಹೂಡಿಕೆ ಮಾಡೋದು ಸುರಕ್ಷಿತ. ಆದ್ರೆ ಯಾವ ಸಮಯದಲ್ಲಿ ಮಾಡುತ್ತೇವೆ ಎಂಬುದು ಮುಖ್ಯ. ಆದ್ದರಿಂದ ಇತ್ತೀಚೆಗೆ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಂಡಿದೆ. ಅಲ್ಲದೇ ಇಂದು ಧನ್ತೇರಸ್‌ ಹಬ್ಬದ ಸಮಯದಲ್ಲೂ ಚಿನ್ನದ ಬೆಲೆ ತಕ್ಕ ಮಟ್ಟಿಗೆ ಏರಿಕೆ ಕಂಡಿದೆ. ಆದ್ರೆ ಬೆಳ್ಳಿ ಪ್ರಿಯರಿಗೆ ಗುಡ್‌ ನ್ಯೂಸ್‌ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+