ಮುಂಬೈ: ಇಂಧನ ಬೇಡಿಕೆಯಲ್ಲಿ ನಿರಂತರ ಕುಸಿತದ ಪರಿಣಾಮ ಅಕ್ಟೋಬರ್ 2011 ರ ನಂತರ ಇದೇ ಮೊದಲ ಬಾರಿಗೆ ಭಾರತದ ತೈಲ ಆಮದು ಅತ್ಯಂತ ಕಡಿಮೆ ಮಟ್ಟವನ್ನು ತಲುಪಿದೆ ಎಂಬುದು ಬಹಿರಂಗಗೊಂಡಿದೆ.
ಮೇ ತಿಂಗಳಲ್ಲಿ, ಭಾರತವು ದಿನಕ್ಕೆ 3.18 ಮಿಲಿಯನ್ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಂಡಿದೆ. ಇದು ಒಂದು ವರ್ಷದ ಹಿಂದಿನ ಪ್ರಮಾಣಕ್ಕಿಂತ 26% ನಷ್ಟು ಕಡಿಮೆಯಾಗಿದೆ. ೨೦೧೧ ರಲ್ಲಿ ಈ ಪ್ರಮಾಣದ ತೈಲ ಆಮದಾಗಿರುವ ದಾಖಲೆಗಳಿವೆ. ಕೊರೊನಾವೈರಸ್ ಲಾಕ್‌ಡೌನ್ ಪರಿಣಾಮ ತೈಲ ಬೇಡಿಕೆಯಲ್ಲಿ ಕುಸಿತ ಕಂಡು ಬಂದಿದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಮಾರ್ಚ್‌ನಲ್ಲಿ ಲಾಕ್‌ಡೌನ್ ತರುವಾಯ ಇಂಧನ ಬೇಡಿಕೆ ಕುಸಿತ ನಿರಂತರವಾಗಿ ಕುಸಿಯುತ್ತಾ ಬಂದಿತ್ತು. ಭಾರತವು ದಿನಕ್ಕೆ ಸರಾಸರಿ 3.18 ಮಿಲಿಯನ್ ಬ್ಯಾರೆಲ್ ತೈಲವನ್ನು ಮೇನಲ್ಲಿ ಆಮದು ಮಾಡಿಕೊಂಡಿದೆ. ೨೦೧೧ ರಲ್ಲಿ ಅಕ್ಟೋಬರ್‌ನಲ್ಲಿ ಈ ಪ್ರಮಾಣದ ಇಂಧನ ಭಾರತಕ್ಕೆ ಆಮದಾಗಿತ್ತು.
ಸೌದಿ ಅರೇಬಿಯಾದಿಂದ 28% ರಷ್ಟು ಕಡಿಮೆಯಾಗಿದೆ
ಮೇ ತಿಂಗಳಲ್ಲಿ, ಸೌದಿ ಅರೇಬಿಯಾ ಸತತ ಎರಡನೇ ತಿಂಗಳು ಭಾರತಕ್ಕೆ ತೈಲ ಪೂರೈಕೆದಾರರಲ್ಲಿ ಅಗ್ರಸ್ಥಾನದಲ್ಲಿದೆ, ಆದರೂ ದೊಡ್ಡ ರಾಷ್ಟ್ರದಿಂದ ತೈಲ ಸರಬರಾಜು ಏಪ್ರಿಲ್‌ನಿಂದ ಸುಮಾರು 28% ರಷ್ಟು ಕಡಿಮೆಯಾಗಿದೆ.
ಇರಾಕ್‌ನಿಂದ ಭಾರತದ ತೈಲ ಆಮದು 43% ರಷ್ಟು ಇಳಿದಿದೆ
ಮೇ ನಲ್ಲಿ ಇರಾಕ್‌ನಿಂದ ಭಾರತದ ತೈಲ ಆಮದು 43% ರಷ್ಟು ಇಳಿದಿದೆ. ಸುಮಾರು ದಿನಕ್ಕೆ 5,54,000 ಬ್ಯಾರೆಲ್ ತಲುಪಿದೆ ಇದು ಅಕ್ಟೋಬರ್ 2016 ರ ನಂತರದ ಅತಿ ಕಡಿಮೆ ಎಂದು ಹಿಂದೂಸ್ತಾನ್ ಟೈಮ್ಸ್ ಸಂಗ್ರಹಿಸಿದ ಅಂಕಿ ಅಂಶಗಳು ತಿಳಿಸಿವೆ.
ವೆನೆಜುವೆಲಾದ ತೈಲ ಆಮದು
ಮೇ ತಿಂಗಳಲ್ಲಿ ವೆನೆಜುವೆಲಾದ ತೈಲದ ಆಮದು ಮೇ ತಿಂಗಳಲ್ಲಿ ಅತ್ಯಂತ ಕಡಿಮೆಯಾಗಿದೆ. ವಿಶ್ವದ ಅತಿದೊಡ್ಡ ಸಂಸ್ಕರಣಾ ಸಂಕೀರ್ಣದ ಆಪರೇಟರ್ ರಿಲಯನ್ಸ್ ಇಂಡಸ್ಟ್ರೀಸ್ ವೆನಿಜುವೆಲಾದಿಂದ 2 ಮಿಲಿಯನ್ ಬ್ಯಾರೆಲ್ ತೈಲವನ್ನು ಮಾತ್ರ ಪಡೆದಿದೆ.
ಬೇಡಿಕೆ ಪುನಾರಂಭವಾಗಿದೆ
ರಿಫೈನರ್‌ಗಳು ಕಚ್ಚಾ ಸಂಸ್ಕರಣೆಯನ್ನು ಹೆಚ್ಚಿಸಿವೆ. ಇತ್ತ ಸಾರಿಗೆ ಮತ್ತು ಕೈಗಾರಿಕಾ ಚಟುವಟಿಕೆಗಳನ್ನು ಕ್ರಮೇಣ ಪುನರಾರಂಭಿಸುವುದರೊಂದಿಗೆ ಬೇಡಿಕೆ ಚೇತರಿಸಿಕೊಳ್ಳುತ್ತಿದೆ. ಜೂನ್‌ನಲ್ಲಿ ಭಾರತದ ತೈಲ ಆಮದು ಮತ್ತೆ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.


Click it and Unblock the Notifications