ಬೆಂಗಳೂರು, ಜೂನ್ 12: ಸಾಫ್ಟ್ ಬ್ಯಾಂಕ್ ಬೆಂಬಲಿತ ಭಾರತೀಯ ಎಲೆಕ್ಟ್ರಿಕ್ ವಾಹನ ತಯಾರಕ ಓಲಾ ಎಲೆಕ್ಟ್ರಿಕ್ ಗೆ ತನ್ನ ಆರಂಭಿಕ ಸಾರ್ವಜನಿಕ ಹೂಡಿಕೆ (IPO) ಸಂಗ್ರಹಿಸಲು ಸೆಕ್ಯುರಿಟೀಸ್ ಆಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಒಪ್ಪಿಗೆ ನೀಡಿದೆ. ಹೀಗಾಗಿ ಸಂಸ್ಥೆಯು ರೂ 7,250 ಕೋಟಿ ಸಂಗ್ರಹಿಸಲು ಎದುರು ನೋಡುತ್ತಿದೆ ಎಂದು ಮೂಲಗಳು ಮನಿ ಕಂಟ್ರೋಲ್‌ಗೆ ತಿಳಿಸಿವೆ.
ಓಲಾ ಎಲೆಕ್ಟ್ರಿಕ್ IPO ಗಾಗಿ ಸಲ್ಲಿಸಿದ ಮೊದಲ ಭಾರತೀಯ EV ದ್ವಿಚಕ್ರ ವಾಹನ ತಯಾರಕ ಸಂಸ್ಥೆಯಾಗಿದೆ. ಇದು ತನ್ನ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟಸ್ (DRHP) ಅನ್ನು ಡಿಸೆಂಬರ್ 22, 2023 ರಂದು ಮಾರುಕಟ್ಟೆ ನಿಯಂತ್ರಕಕ್ಕೆ ಸಲ್ಲಿಸಿತ್ತು. Ola ಎಲೆಕ್ಟ್ರಿಕ್‌ನ IPO 5,500 ಕೋಟಿ ರೂಪಾಯಿಗಳ ಹೊಸ ವಿತರಣೆ ಮತ್ತು 1,750 ಕೋಟಿ ರೂಪಾಯಿಗಳ ಆಫರ್ ಸೇಲ್ (OFS) ಸೇರಿ ಒಟ್ಟು 7,250 ಕೋಟಿ ರೂಪಾಯಿಗಳನ್ನು ಒಳಗೊಂಡಿದೆ. ಸಂಸ್ಥೆಯ DRHP ಪ್ರಕಾರ ಅಸ್ತಿತ್ವದಲ್ಲಿರುವ ಷೇರುದಾರರು 95.19 ಮಿಲಿಯನ್ ಷೇರುಗಳನ್ನು ಆಫರ್ ಸೇಲ್ ನಲ್ಲಿ ಮಾರಾಟ ಮಾಡುತ್ತಾರೆ ಎಂದು ಹೇಳಲಾಗಿದೆ.

ಓಲಾ ಎಲೆಕ್ಟ್ರಿಕ್‌ನ ಸಂಸ್ಥಾಪಕ ಭವಿಶ್ ಅಗರ್ವಾಲ್ 47.3 ಮಿಲಿಯನ್ ಷೇರುಗಳನ್ನು ಮಾರಾಟ ಮಾಡಲಿದ್ದಾರೆ. ಸಂಸ್ಥೆಯ ಆರಂಭಿಕ ಹೂಡಿಕೆದಾರರಾಗಿರುವ ಆಲ್ಫಾವೇವ್, ಆಲ್ಪೈನ್, ಡಿಐಜಿ ಇನ್ವೆಸ್ಟ್‌ಮೆಂಟ್, ಮ್ಯಾಟ್ರಿಕ್ಸ್ ಮತ್ತು ಇತರರು ಸಹ 47.89 ಮಿಲಿಯನ್ ಷೇರುಗಳನ್ನು OFS ಮೂಲಕ ಮಾರಾಟ ಮಾಡಲಿದ್ದಾರೆ ಎಂದು ವರದಿಯಾಗಿದೆ. ಸಂಸ್ಥೆಯು ರೂ 1,100 ಕೋಟಿ ಮೌಲ್ಯದ ಷೇರುಗಳ ಮರು-ಐಪಿಒ ನಿಯೋಜನೆಯನ್ನು ಸಹ ನೋಡುತ್ತಿದೆ. ಅಂದುಕೊಂತೆ ಆದರೆ ಹೊಸ ವಿತರಣೆ ಗಾತ್ರವು ತಗ್ಗಲಿದೆ.
DRHP ಪ್ರಕಾರ, Ola ಎಲೆಕ್ಟ್ರಿಕ್ ಕ್ಯಾಪೆಕ್ಸ್, ಸಾಲ ಮರುಪಾವತಿ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ (R&D) ಗಾಗಿ ಹಣವನ್ನು ಬಳಸಿಕೊಳ್ಳುತ್ತದೆ. ಸಂಸ್ಥೆಯು ಸುಮಾರು 1,226 ಕೋಟಿ ರೂಪಾಯಿಗಳನ್ನು ಕ್ಯಾಪೆಕ್ಸ್‌ಗಾಗಿ ಮತ್ತು 800 ಕೋಟಿ ರೂಪಾಯಿಗಳನ್ನು ಸಾಲವನ್ನು ಮರುಪಾವತಿಸಲು ಬಳಸುತ್ತದೆ. ಇದು ಹೆಚ್ಚು ಅಂದರೆ ಸುಮಾರು 1,600 ಕೋಟಿ ರೂ.ಗಳನ್ನು ಆರ್ & ಡಿ ಮತ್ತು 350 ಕೋಟಿ ರೂ.ಗಳನ್ನು ಇನ್ ಒರ್ಗಾನಿಕ್ ಗ್ರೋಥ್ ಗಾಗಿ ಖರ್ಚು ಮಾಡುತ್ತದೆ.
ಓಲಾ ಎಲೆಕ್ಟ್ರಿಕ್ 2017 ರಲ್ಲಿ ಭಾರತದ ಟೆಕ್ ಹಬ್ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು. ಓಲಾ ಎಲೆಕ್ಟ್ರಿಕ್ ಭಾರತದ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ವಿಭಾಗದಲ್ಲಿ ಸೇ.32 ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದ್ದು ಟಿವಿಎಸ್ ಮೋಟಾರ್, ಬಜಾಜ್ ಆಟೋ , ಮತ್ತು ಅಥೆರ್ ಎರ್ನರ್ಜಿಯೊಂದಿಗೆ ಸ್ಪರ್ಧಿಸುತ್ತಿದೆ


Click it and Unblock the Notifications