ಓಲಾ ಎಲೆಕ್ಟ್ರಿಕ್ ಮೊಬಿಲಿಟಿಯು ತನ್ನ ಮಾರಾಟ ಮತ್ತು ಸೇವೆಯನ್ನ ರಾಷ್ಟ್ರವ್ಯಾಪಿ ಗಮನಾರ್ಹವಾಗಿ ವಿಸ್ತರಿಸುವ ಹೊಸ ಯೋಜನೆಯನ್ನು ಬಹಿರಂಗಪಡಿಸಿದೆ. ಕ್ರಿಸ್ಮಸ್, ಡಿಸೆಂಬರ್ 25 ರ ವೇಳೆಗೆ 4,000 ಸ್ಥಳಗಳಲ್ಲಿ ತನ್ನ ಮಳಿಗೆಗಳನ್ನ ವಿಸ್ತರಿಸುವ ಗುರಿಯನ್ನ ಇದು ಹೊಂದಿದೆ. ಈ ವಿಸ್ತರಣೆ ಅದರ #SavingsWalaScooter ಅಭಿಯಾನದ ಭಾಗವಾಗಿದೆ. ಇದು ತನ್ನ ಕೈಗೆಟುಕುವ ವಿದ್ಯುತ್ ವಾಹನಗಳನ್ನು (EV ಗಳು) ಉತ್ತೇಜಿಸಲು ಮುಂದಾಗಿದೆ.
ಕಂಪನಿಯು ತನ್ನ ವಾಹನಗಳನ್ನ ಉತ್ತಮ-ಗುಣಮಟ್ಟದ ಮತ್ತು ಇದರ ವೆಚ್ಚ ಪರಿಣಾಮಕಾರಿಗಿದೆ ಎಂದು ಗುರಿಯನ್ನು ಇದು ಹೊಂದಿದೆ. ಪ್ರಮುಖ ಮೆಟ್ರೋಪಾಲಿಟನ್ ಪ್ರದೇಶಗಳ ಜೊತೆಗೆ ಸಣ್ಣ, ಶ್ರೇಣಿ-1 ಮತ್ತು ಶ್ರೇಣಿ-2 ಸೇರಿದಂತೆ ಭಾರತದ ವಿವಿಧ ಪ್ರದೇಶಗಳಲ್ಲಿ ಗ್ರಾಹಕರನ್ನು ತಲುಪುವ ಗುರಿಯನ್ನ ಹೊಂದಿದೆ. ಗ್ರಾಹಕರು ತಮ್ಮ ಸ್ಕೂಟರ್‌ಗಳನ್ನು ಖರೀದಿಸುವ, ಸೇವೆ ಸಲ್ಲಿಸುವ ಮತ್ತು ನಿರ್ವಹಿಸುವ ಸ್ಥಳಗಳ ಸಂಖ್ಯೆಯನ್ನು ಹೆಚ್ಚಿಸುವ ಮೂಲಕ, ಓಲಾ ಎಲೆಕ್ಟ್ರಿಕ್ ಸಂಭಾವ್ಯ ಖರೀದಿದಾರರಿಗೆ ಅನುಕೂಲವನ್ನು ಹೆಚ್ಚಿಸಲು ಮತ್ತು ವೇಗವಾಗಿ ಬೆಳೆಯುತ್ತಿರುವ EV ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸುವ ಪ್ರಯತ್ನಕ್ಕೆ ಮುಂದಾಗಿದೆ.

ಓಲಾ ಎಲೆಕ್ಟ್ರಿಕ್ ತನ್ನ ನೆಟ್‌ವರ್ಕ್ಅನ್ನು ಡಿಸೆಂಬರ್ 25 ರಂದು 4,000 ಸ್ಟೋರ್‌ಗಳಿಗೆ ವಿಸ್ತರಿಸಲಿದೆ ಎಂದು ಕಂಪನಿ ತಿಳಿಸಿದೆ. ಹಾಗೆ ಜಾಗತಿಕವಾಗಿ EV ವಿತರಣೆಯನ್ನ ಹೆಚ್ಚಿಸುವ ಗುರಿಯನ್ನ ಇದು ಹೊಂದಿದೆ. ಈಗಾಗಲೇ ಅಸ್ತಿತ್ವದಲ್ಲಿರುವ ಔಟ್‌ಲೆಟ್‌ಗಳ ಜೊತೆಗೆ 3,200 ಹೊಸ ಮಳಿಗೆಗಳ ಸೇರ್ಪಡೆ ಗೊಳಿಸುವ ಗುರಿಯನ್ನ ಇದು ಹೊಂದಿದೆ.
ಈಗ ಹೆಚ್ಚುತ್ತಿರುವ ಪೆಟ್ರೋಲ್ ಬೆಲೆಗಳ ನಡುವೆ ಗ್ರಾಹಕರಿಗೆ ಗ್ರಾಹಕರಿಗೆ ಹಣವನ್ನ ಉಳಿಸಲು ಸಹಾಯ ಮಾಡುವ ಗುರಿಯನ್ನ ಹೊಂದಿದೆ. ಇಂಟರ್‌ನಲ್ ಕಂಬ್ಯುಷನ್ ಇಂಜಿನ್ ((ICE) ವಾಹನಗಳಿಂದ ಎಲೆಕ್ಟ್ರಿಕ್ ವಾಹನಗಳಿಗೆ ಭಾರತದ ವೇಗವಾಗಿ ಪರಿವರ್ತನೆಗೊಳ್ಳುವ ಗುರಿಯನ್ನ ಓಲಾ ಎಲೆಕ್ಟ್ರಿಕ್ ಹೊಂದಿದೆ.
ಓಲಾ ಅಭಿಯಾನದ ಮೂಲಕ ಭಾರತದ ಮೂಲೆಮೂಲೆಗಳಲ್ಲಿ ತನ್ನ ಸೇವೆಯನ್ನ ಜನರೊಗೆ ತಲಿಪಿಸುವ ಗುರಿಯನ್ನ ಹೊಂದಿದೆ. ಹಾಗೆ ICE ವಾಹನಗಳಿಗೆ ವ್ಯಯಿಸಬಾಕಾಗುವ ಹೆಚ್ಚಿನ ವೆಚ್ಚವನ್ನ ಕಡಿಮೆ ಮಾಡುವ ಮೂಲಕ ಎಲ್ಲೆಡೆ ಕಡಿಮೆ ವೆಚ್ಚದ EV ವಾಹನಗಳನ್ನ ಜನರಿಗೆ ತಲುಪಿಸಲು ಇದು ಮುಂದಾಗಿದೆ.
ಇನ್ನು ಈ ಕುರಿತಾಗಿ Ola CEO ಭವಿಶ್ ಅಗರ್ವಾಲ್ ಅವರು ತಮ್ಮ X ಖಾತೆಯಲ್ಲಿ ಈ ಬಗ್ಗೆ ವಿಡಿಯೋ ಒಂದನ್ನ ಹಂಚಿಕೊಂಡಿದ್ದು, ನಾವು ಪ್ರತಿ ಪಟ್ಟಣ, ನಗರ ಮತ್ತು ತಾಲೂಕುಗಳಲ್ಲಿ ಮಳಿಗೆಗಳನ್ನು ತೆರೆಯುವ ಮೂಲಕ ಎಲ್ಲರಿಗೂ EV ಗಳು ದೊರೆಯುವಂತೆ ಮಾಡುತ್ತಿದ್ದೇವೆ. ಇದು ಕೈಗೆಟುಕುವ ಬೆಲೆಯಲ್ಲಿದ್ದು ಕಡಿಮೆ ವೆಚ್ಚದ್ದಾಗಿದೆ ಹೀಗಾಗಿ ನಿಮ್ಮ ಭವಿಷ್ಯಕ್ಕಾಗಿ ಯಾರಾದರೂ ಇವಿ ಖರೀದಿಸಬಹುದು ಎಂದು ಅವರು ಹೇಳಿದ್ದಾರೆ.
ಅಲ್ಲದೆ ನೀವು EV ಗಳನ್ನ ಬಳಸುವುದರಿಂದ ಆಗುವ ಆರ್ಥಿಕ ಪ್ರಯೋಜನಗಳ ಬಗ್ಗೆ ಅಗರ್ವಾಲ್ ಅವರು ಹೇಳಿದ್ರು. EV ಯೊಂದಿಗೆ, ನೀವು ಪ್ರತಿ ತಿಂಗಳು ಸುಮಾರು 4,000 ರೂಪಾಯಿಗಳನ್ನ ಉಳಿಸಬಹುದು. ಈ ಉಳಿತಾಯಗಳು EV ಗಳನ್ನು ಹೆಚ್ಚು ಆರ್ಥಿಕ ಆಯ್ಕೆಯನ್ನಾಗಿ ಮಾಡುತ್ತದೆ ಎಂದು ಅವರು ಹೇಳಿದರು.
Ola Electric ಡಿಸೆಂಬರ್ 2021ರಲ್ಲಿ ತನ್ನ ಮೊದಲ ಸ್ಕೂಟರ್ Ola S1 Proಅನ್ನು ಜನರಿಗೆ ಪರಿಚಯಿಸಿತ್ತು. ಅಲ್ಲದೆ ಕಂಪನಿಯು ಈ ವರ್ಷ ಸ್ವಾತಂತ್ರ್ಯ ದಿನದಂದು ಮೂರು ಎಲೆಕ್ಟ್ರಿಕ್ ಬೈಕ್ ಮಾದರಿಗಳಾದ ರೋಡ್‌ಸ್ಟರ್ ಪ್ರೊ, ರೋಡ್‌ಸ್ಟರ್ ಮತ್ತು ರೋಡ್‌ಸ್ಟರ್ ಎಕ್ಸ್ ಅನ್ನು ಬಿಡುಗಡೆಗೊಳಿಸಿತು. ಮುಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಿಂದ ತನ್ನ ಆಂತರಿಕ ಬ್ಯಾಟರಿಗಳನ್ನು ವಾಹನಗಳಲ್ಲಿ ಸಂಯೋಜಿಸುವ ಯೋಜನೆಯನ್ನು ಇದು ಪ್ರಕಟಿಸಿದೆ.
ಓಲಾ ಎಲೆಕ್ಟ್ರಿಕ್ ಬಗ್ಗೆ ತಿಳಿಯಿರಿ
ಓಲಾ ಎಲೆಕ್ಟ್ರಿಕ್ ಭಾರತೀಯ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಉತ್ಪಾದನಾ ಕಂಪನಿಯಾಗಿದ್ದು, ಓಲಾ ಗ್ರೂಪ್‌ನ ಅಂಗಸಂಸ್ಥೆಯಾಗಿದೆ. ಕಂಪನಿಯು 2017 ರಲ್ಲಿ ಸ್ಥಾಪನೆಯಾಯಿತು ಮತ್ತು ಭಾರತೀಯ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ತ್ವರಿತವಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಓಲಾ ಎಲೆಕ್ಟ್ರಿಕ್ ಸುಸ್ಥಿರ, ಪರಿಸರ ಸ್ನೇಹಿ ಸಾರಿಗೆ ಪರಿಹಾರಗಳನ್ನು ರಚಿಸುವುದರ ಮೇಲೆ ಕೇಂದ್ರೀಕರಿಸಿದೆ. ಓಲಾ ಗ್ರೂಪ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಭವಿಶ್ ಅಗರ್ವಾಲ್ ನೇತೃತ್ವದಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿ ಮುನ್ನಡೆಯುತ್ತಿದೆ. ಓಲಾ ಎಲೆಕ್ಟ್ರಿಕ್ ಅನ್ನು ಭಾರತದ EV ಕ್ರಾಂತಿಯಲ್ಲಿ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡಿದೆ.
ಆಗಸ್ಟ್ 2021 ರಲ್ಲಿ, ಓಲಾ ಎಲೆಕ್ಟ್ರಿಕ್ Ola S1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಬಿಡುಗಡೆ ಮಾಡಿತು, ಇದು ಭಾರತದ ಎಲೆಕ್ಟ್ರಿಕ್ ಮೊಬಿಲಿಟಿ ವಲಯದಲ್ಲಿ ಮಹತ್ವದ ಮೈಲಿಗಲ್ಲು ಎಂದೇ ಹೇಳಬಹುದು. ಇದು ಒಂದೇ ಚಾರ್ಜ್‌ನಲ್ಲಿ 181 ಕಿಮೀ ವ್ಯಾಪ್ತಿಯೊಂದಿಗೆ ಬರುತ್ತದೆ, ಗಂಟೆಗೆ 115 ಕಿಮೀ ನಷ್ಟು ಗರಿಷ್ಠ ವೇಗ, ಮತ್ತು ಟಚ್‌ಸ್ಕ್ರೀನ್ ಡಿಸ್ಪ್ಲೇ, ನ್ಯಾವಿಗೇಷನ್, ಧ್ವನಿ ನಿಯಂತ್ರಣ ಮತ್ತು ಹೆಚ್ಚಿನವುಗಳಂತಹ ಸುಧಾರಿತ ವೈಶಿಷ್ಟ್ಯಗಳನ್ನು ಹೊಂದಿದೆ. ಹಾಗೆ ಓಲಾ ಎಲೆಕ್ಟ್ರಿಕ್‌ನ ಪ್ರಾಥಮಿಕ ಗುರಿಯು ವಿದ್ಯುತ್ ಚಲನಶೀಲತೆಯನ್ನು ಉತ್ತೇಜಿಸುವ ಮೂಲಕ ಕಾರ್ಬನ್ ಡೈಆಕ್ಸಿಡ್‌ಅನ್ನು ಕಡಿಮೆ ಮಾಡುವುದು. ಸುಸ್ಥಿರ ಸಾರಿಗೆ ಪರಿಹಾರಗಳಿಗೆ ಭಾರತದ ಪರಿವರ್ತನೆಗೆ ತನ್ನ ಉತ್ಪನ್ನಗಳ ಮೂಲಕ ಇದು ಕೊಡುಗೆಯನ್ನ ನೀಡ್ತಿದೆ.


Click it and Unblock the Notifications