Success Story: ಅಂದು ಪಿಯುಸಿನಲ್ಲಿ ಫೇಲ್ , ಇಂದು 58100 ಕೋಟಿ ರೂ. ಆಸ್ತಿ ಒಡೆಯ.!

ಹೈದರಬಾದ್, ಸೆಪ್ಟೆಂಬರ್ 22: ಸವಾಲು, ಸೋಲುಗಳನ್ನು ಮೆಟ್ಟಿ ನಿಂತು ಸಾಧನೆಯ ಕಡೆ ಪರಿಶ್ರಮ ಪಡಬೇಕು ಎನ್ನುವುದಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ ಈ ಯಶಸ್ವಿನ ಕಥೆ. ಶಾಲಾ ದಿನಗಳಲ್ಲಿ ಶೈಕ್ಷಣಿಕ ಸಾಧನೆ ಉತ್ತಮವಾಗಿರಲಿಲ್ಲ. ಪಿಯುಸಿಯಲ್ಲಿ ಎರಡು ಬಾರಿ ವಿಫಲರಾಗಿದ್ದರು. ಹಾಗೆಂದು ಇಟ್ಟ ಹೆಜ್ಜೆ ಹಿಂದಡಿ ಇಟ್ಟಿರಲಿಲ್ಲ. ಜೀವನದಲ್ಲಿ ಬಂದಂತೆ ಎದುರಿಸೋಣ ಎನ್ನುತ್ತಾ ಸಾಗಿದವರು ಕಟ್ಟಿ ಬೆಳೆಸಿದ್ದು, ಒಂದೆರಡಲ್ಲ, ಪ್ರಸ್ತುತ ಬರೋಬ್ಬರಿ 119000 ಕೋಟಿ ರೂ. ಮಾರುಕಟ್ಟೆ ಮೌಲ್ಯವಿರುವ ಕಂಪನಿಯನ್ನು. 12 ನೇ ತರಗತಿಯಲ್ಲಿ ಅನುತ್ತೀರ್ಣರಾದ ಇವರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಫೇಲ್ ಎನ್ನುವ ಪದ ಅಡ್ಡಿಯಾಗಿಲ್ಲ. ಇವರೇ ದೇಶದ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಡಿವಿಸ್ ಲ್ಯಾಬೋರೇಟರೀಸ್ ಲಿಮಿಟೆಡ್‌ನ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಡಾ ಮುರಳಿ ಕೆ ಡಿವಿ.

ಡಾ.ಮುರಳಿ ಕೃಷ್ಣ ಪ್ರಸಾದ್ ದಿವಿ ಅವರು ಇಂದು 58100 ಕೋಟಿ ರೂ.ಗಳ ಸಂಪತ್ತು ಹೊಂದಿರುವ ಹೈದರಾಬಾದ್‌ನ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಅವರು 33 ವರ್ಷಗಳ ಹಿಂದೆ ಜೆನೆರಿಕ್ಸ್ ತಯಾರಕ ಔಷಧ ಸಂಶೋಧನಾ ಸಂಸ್ಥೆ ಡಿವಿಸ್ ಲ್ಯಾಬ್ ಅನ್ನು ಸ್ಥಾಪಿಸಿದ್ದರು. ಇವರು ಯುಎಸ್-ತರಬೇತಿ ಪಡೆದ ವಿಜ್ಞಾನಿಯೂ ಆಗಿದ್ದಾರೆ. ಇಂದು ಡಿವಿಸ್ ಲ್ಯಾಬ್ ಸಕ್ರಿಯ ಔಷಧೀಯ ಪದಾರ್ಥಗಳ (API) ವಿಶ್ವದ ಅಗ್ರ ಪೂರೈಕೆದಾರರಲ್ಲಿ ಒಂದಾಗಿದೆ.

 ಅಂದು ಪಿಯುಸಿ ಫೇಲ್, ಇಂದು ಹೈದರಬಾದ್'ನ ಸಿರಿವಂತ ವ್ಯಕ್ತಿ.!

ಡಿವಿಸ್ ಲ್ಯಾಬ್'ನ ಸ್ಥಾಪಕರು:

73 ವರ್ಷ ವಯಸ್ಸಿನ ಡಾ. ಡಿವಿಯವರು, 1990 ರಲ್ಲಿ ಡಿವಿಸ್ ಲ್ಯಾಬೋರೇಟರೀಸ್ ಅನ್ನು ಸ್ಥಾಪಿಸಿದ್ದು, ಇಂದು ವಿಶ್ವದಾದ್ಯಂತ ಅಗ್ರ ಮೂರು ಸಕ್ರಿಯ ಔಷಧೀಯ ಘಟಕಾಂಶದ (API) ತಯಾರಕರಲ್ಲಿ ಒಂದಾಗಿದೆ. ಅವರ ಕಂಪನಿಯು ಸಂಧಿವಾತ, ಖಿನ್ನತೆ ಮತ್ತು ಅಪಸ್ಮಾರದಂತಹ ವಿವಿಧ ಪರಿಸ್ಥಿತಿಗಳಿಗೆ ಚಿಕಿತ್ಸೆ ನೀಡುವ ಪ್ರಮುಖ ಔಷಧಿಗಳಿಗೆ ಅಗತ್ಯವಾದ ಪದಾರ್ಥಗಳನ್ನು ಒದಗಿಸುತ್ತದೆ.

4,000 ಕೋಟಿ ರೂ. ನಗದು ಮೀಸಲು ಹೊಂದಿರುವ ಸಾಲಮುಕ್ತ ಕಂಪನಿ

ಡಿವಿಸ್ ಲ್ಯಾಬ್ ಪ್ರಮುಖ ಸಾಧನೆಗಳಲ್ಲಿ ಒಂದು ಅದರ ಆರ್ಥಿಕ ಶಿಸ್ತು. ಸಾಲ ಪಡೆದ ಐದು ವರ್ಷಗಳಲ್ಲಿ ಎಲ್ಲಾ ಸಾಲಗಳನ್ನು ಪಾವತಿಸಿ, ಕಂಪನಿಯು ಋಣಮುಕ್ತವಾಗಿರುವುದನ್ನು ಡಾ. ಮುರಳಿ ಡಿವಿ ಖಚಿತಪಡಿಸಿದ್ದರು. ಇಂದು, ಕಂಪನಿಯು 4,000 ಕೋಟಿ ರೂಪಾಯಿ ನಗದು ಮೀಸಲುಗಳೊಂದಿಗೆ ಬಲವಾದ ಆರ್ಥಿಕ ಸ್ಥಿತಿಯನ್ನು ಹೊಂದಿದೆ, ಭವಿಷ್ಯದ ಅವಕಾಶಗಳಿಗಾಗಿ ಅದನ್ನು ಸಿದ್ಧಪಡಿಸುತ್ತದೆ.

ಹಸಿರು ರಸಾಯನಶಾಸ್ತ್ರದ ಪ್ರವರ್ತಕ:

ಡಾ. ಡಿವಿ ಅವರ ನೇತೃತ್ವದಲ್ಲಿ, ಕಂಪನಿಯು ಈಗ ಹಸಿರು ರಸಾಯನಶಾಸ್ತ್ರದಲ್ಲಿ ಉದಯೋನ್ಮುಖ ಅವಕಾಶಗಳನ್ನು ಅನ್ವೇಷಿಸುತ್ತಿದೆ. ಕಂಪನಿಯು GLP-1 (ಗ್ಲುಟೈಡ್ಸ್) ನಂತಹ ಪೆಪ್ಟೈಡ್‌ಗಳ(GLP-1 (ಗ್ಲುಕಾಗೋನ್) ಎನ್ನುವ ಪೆಪ್ಟೈಡ್‌ವು ಶರೀರದಲ್ಲಿ ಇನ್ಸುಲಿನ್ ಉತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಆಹಾರದ ಮೇಲೆ ನಿಯಂತ್ರಣವನ್ನು ಸುಗಮಗೊಳಿಸುತ್ತದೆ) ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುತ್ತಿದೆ. ಇದನ್ನು ಬೊಜ್ಜು ನಿಭಾಯಿಸಲು ಬಳಸಲಾಗುತ್ತಿದೆ, ಜಾಗತಿಕ ಔಷಧೀಯ ಉದ್ಯಮದಲ್ಲಿ ಡಿವಿಸ್ ಲ್ಯಾಬ್‌ ನಿರಂತರ ಯಶಸ್ಸಿನ ದಾರಿಯಲ್ಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+