ಪ್ಯಾನ್ 2.0: ಹೊಸ ಸ್ಕ್ಯಾಮ್ ಬಗ್ಗೆ ಇರಲಿ ಎಚ್ಚರ! ವಂಚಕರ ಬಲೆಗೆ ಬೀಳದಿರಿ

ಸರ್ಕಾರಗಳು ಆರಂಭದಲ್ಲ ತರುವ ಹೊಸ ಯೋಜನೆಗಳ ಬಗ್ಗೆ ಆರಂಭದಲ್ಲಿ ಜನತೆ ಗೊಂದಲ ಹೊಂದುವುದು ಸಾಮಾನ್ಯ ಸಂಗತಿ. ಆದರೆ ದಿನ ಕಳೆದಂತೆ ಯೋಜನೆಗಳಲ್ಲಿನ ಗೊಂದಲಗಳು ನಿಧಾನವಾಗಿ ನಿವಾರಣೆಯಾಗುತ್ತದೆ. ಆದರೆ ಈ ಅವಧಿಯಲ್ಲಿ ಸ್ಕ್ಯಾಮರ್‌ಗಳು ಯೋಜನೆಗಳ ಬಗ್ಗೆ ತಪ್ಪು ಸಂದೇಶ ಹರಡುತ್ತಾ, ಅವುಗಳನ್ನು ತಮ್ಮ ಲಾಭಕ್ಕೆ ಬಳಸಿಕೊಂಡು ಹಣ ಮಾಡುವ ದಂಧೆಗಳು ಕೂಡ ನಡೆಯುತ್ತಿರುತ್ತದೆ. ಸದ್ಯ ಕೇಂದ್ರ ಸರ್ಕಾರ ಹೊಸದಾಗಿ ತಂದಿರುವ PAN 2.0 ನಲ್ಲೂ ಬೆಳಕಿಗೆ ಬಂದಿವೆ. ಹಾಗಾಗಿ ಸ್ಕ್ಯಾಮರ್‌ಗಳಿಗೆ ಪಾರಾಗಲು ಜನತೆ ಸುಲಭ ವಿಧಾನದ ಮೂಲಕ ಪಾರಾಗಬಹುದು.

PAN 2.0 ಏನು ನೀಡುತ್ತದೆ?

ಕಳೆದ ತಿಂಗಳು ಸರ್ಕಾರವು PAN (ಶಾಶ್ವತ ಖಾತೆ ಸಂಖ್ಯೆ) 2.0 ಯೋಜನೆ ಘೋಷಿಸಿತ್ತು. ಅದರಂತೆ ಪ್ಯಾನ್‌ ಕಾರ್ಡ್‌ ನಲ್ಲಿ ಹೊಸ ರೀತಿಯ ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ. ಇದರಲ್ಲಿ ಖಾತೆದಾರರ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತ PAN ಡೇಟಾ ವಾಲ್ಟ್‌ನಲ್ಲಿ ಸಂಗ್ರಹಿಸುವ ವೈಶಿಷ್ಟ್ಯ ಕೂಡ ಇದೆ. ಇನ್ನು ಒಂದೇ ಪೋರ್ಟಲ್‌ನಲ್ಲಿ ಎಲ್ಲಾ PAN/TAN-ಸಂಬಂಧಿತ ಸೇವೆಗಳ ಸುಲಭ ಮಾಹಿತಿ ಪ್ರವೇಶ ಮತ್ತು ಏಕೀಕರಣಕ್ಕಾಗಿ QR ಕೋಡ್ ಏಕೀಕರಣ ಕೂಡ ಈ ವೈಶಿಷ್ಟ್ಯದಲ್ಲಿ ಒಳಗೊಂಡಿದೆ. ಆದರೂ ವಂಚಕರು ಹೊಸ ಪ್ಯಾನ್ ಕಾರ್ಡ್ ನೀಡುವುದಾಗಿ ಸುಳ್ಳು ಭರವಸೆ ನೀಡಿ ನಾಗರಿಕರನ್ನು ವಂಚಿಸುತ್ತಿರುವ ಪ್ರಕರಣಗಳು ಕೂಡ ಇದೀಗ ನಡೆಯಲು ಆರಂಭಿಸಿರುವುದು ಸರ್ಕಾರದ ತಲೆಬಿಸಿಗೆ ಕಾರಣವಾಗಿದೆ. ಸದ್ಯ ಇಂಥ ವಂಚಕರಿಂದ ಹೇಗೆ ಪಾರಾಗಬಹುದು ಎಂಬುದು ಈ ಲೇಖನದ ವಿಷಯವಾಗಿದೆ.

ಪ್ಯಾನ್ 2.0: ಹೊಸ ಸ್ಕ್ಯಾಮ್ ಬಗ್ಗೆ ಇರಲಿ ಎಚ್ಚರ

ಪ್ಯಾನ್ 2.0 ಯಾರಿಗೆ ಬೇಕು? ಹೊಸ ಪ್ಯಾನ್ ಅಗತ್ಯವೇ?

ಹೊಸ PAN 2.0 ಬಂದ ಬಳಿಕ ಹಳೆಯ ಪ್ಯಾನ್‌ ಕಾರ್ಡ್‌ಗಳು ಅಸ್ತಿತ್ವದಲ್ಲಿ ಇರಲಿವೆಯೇ ಎಂಬ ಬಗ್ಗೆ ಜನರಲ್ಲಿ ಗೊಂದಲಗಳಿವೆ. ಆದರೆ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದಂತೆ ಹೊಸ ಪ್ಯಾನ್‌ ಕಾರ್ಡ್‌ ಬಂದರೂ ಹಳೆಯದು ಕೂಡ ಸರಿಯಾದ ರೀತಿಯಲ್ಲೇ ಕಾರ್ಯನಿರ್ವಹಿಸಲಿದ್ದು, ಹಾಗಾಗಿ ಈ ವಿಚಾರದಲ್ಲಿ ಜನರು ಗೊಂದಲಗಳಿಗೆ ಸಿಲುಕಬೇಕಾದ ಅಗತ್ಯವಿಲ್ಲ ಎಂದು ತಿಳಿಸಿದೆ.

ಪ್ರಸ್ತುತ ಪ್ಯಾನ್‌ನಲ್ಲಿ ನಿಮ್ಮ ಹೆಸರು ಅಥವಾ ಹುಟ್ಟಿದ ದಿನಾಂಕದಂತಹ ಕೆಲವು ಮಾಹಿತಿಯನ್ನು ನವೀಕರಿಸಲು ಅಥವಾ ಸರಿಪಡಿಸಲು ನೀವು ನಿಮ್ಮ PAN ಕಾರ್ಡ್‌ನ ಮರುಮುದ್ರಣವನ್ನು ಅಥವಾ ಹೊಸ PAN ಕಾರ್ಡ್ ಪಡೆದುಕೊಳ್ಳಬೇಕು. ಅದರಂತೆ ನಿಮ್ಮ ವಿಳಾಸವು ಭಾರತದೊಳಗೆ ಇದ್ದರೆ ರೂ 50 ಪಾವತಿಸುವ ಮೂಲಕ ನಿಮ್ಮ ಹೊಸ ಪ್ಯಾನ್ ಕಾರ್ಡ್‌ನ ಭೌತಿಕ ನಕಲನ್ನು ನೀವು ಪಡೆಯಬಹುದು. ಇನ್ನು PAN ಕಾರ್ಡ್ ಅನ್ನು ಭಾರತದ ಹೊರಗೆ ತಲುಪಿಸಬೇಕಾದರೆ, 15 ರೂ. ಹೆಚ್ಚುವರಿ ಅಂಚೆ ಶುಲ್ಕ ಅನ್ವಯವಾಗುತ್ತವೆ.

ಅಪ್‌ಗ್ರೇಡ್ ವೇಳೆ ವಂಚಕರಿಂದ ಪಾರಾಗುವುದು ಹೇಗೆ?

ಪ್ಯಾನ್ 2.0 ಅಡಿಯಲ್ಲಿ ನೀವು ಹೊಸ ಪ್ಯಾನ್ ಕಾರ್ಡ್‌ಗೆ ಅರ್ಜಿ ಸಲ್ಲಿಸುವುದು ಕಡ್ಡಾಯವಲ್ಲ ಎಂಬುದನ್ನು ನೆನಪಿನಲ್ಲಿ ಇಡಬೇಕಿದೆ. ನಿಮ್ಮ ಪ್ಯಾನ್ ಕಾರ್ಡ್ ಅನ್ನು ಅಪ್‌ಗ್ರೇಡ್ ಮಾಡಲು ವಂಚಕರು ನಿಮಗೆ ಹಣ ಪಾವತಿಸಲು ಹೇಳಿ ಕರೆ ಅಥವಾ ಸಂದೇಶ ಕಳುಹಿಸಿದರೆ ಈ ವೇಳೆ ಜಾಗರೂಕತೆಯಿಂದ ವ್ಯವಹರಿಸುವುದ ಅಗತ್ಯ. ಈ ಅವಧಿಯಲ್ಲಿ ನೀವು ಪ್ಯಾನ್‌ ಅಪ್‌ಡೇಟ್‌ ಹೆಸರಲ್ಲಿ ಸ್ಕ್ಯಾಮರ್‌ಗಳು ವಂಚಿಸಲು ಯೋಜನೆ ಹಾಕಿರಬಹುದು.

ಇನ್ನು ಹೀಗೆ ಕರೆ ಮಾಡುವ ಸ್ಕ್ಯಾಮರ್‌ಗಳಿಗೆ ನಿಮ್ಮ ಯಾವುದೇ ಖಾತೆ ಮಾಹಿತಿಯನ್ನು ನೀಡಬಾರದು. ಅಥವಾ OTP ಯನ್ನು ಹಂಚಿಕೊಳ್ಳಬಾರದು. PAN 2.0 ಗೆ ಅಪ್‌ಗ್ರೇಡ್ ಮಾಡುವ ಭರವಸೆ ನೀಡುವ ಯಾವುದೇ ಅಪರಿಚಿತ ಲಿಂಕ್ ಅನ್ನು ಕ್ಲಿಕ್ ಮಾಡಬೇಡಿ ಅಥವಾ ಇದನ್ನು ನೀಡುತ್ತಿರುವ ಯಾವುದೇ ಕರೆಗಳು, ಸಂದೇಶಗಳು ಅಥವಾ ಇಮೇಲ್‌ಗಳಿಗೆ ಉತ್ತರ ನೀಡಲು ಹೋಗಬಾರದು.

ಅಧಿಕೃತ ಮಾಹಿತಿ ಎಲ್ಲಿ ಪಡೆಯಬಹುದು?

ಆದಾಯ ತೆರಿಗೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ಯಾನ್ 2.0 ಗೆ ಸಂಬಂಧಿಸಿದ ಎಲ್ಲಾ ಅಧಿಕೃತ ಮಾಹಿತಿಯನ್ನು ನೀವು ಪಡೆಯಬಹುದು. ನಿಮ್ಮ PAN ಕಾರ್ಡ್‌ನ ಮರುಮುದ್ರಣಕ್ಕಾಗಿ ನೀವು ಅರ್ಜಿ ಸಲ್ಲಿಸಲು ಬಯಸಿದರೆ, ನೀವು Protean (ಹಿಂದೆ NSDL ಎಂದು ಕರೆಯಲಾಗುತ್ತಿತ್ತು) ಅಥವಾ UTIITSL ನ ಅಧಿಕೃತ ವೆಬ್‌ಸೈಟ್‌ಗಳ ಮೂಲಕ ಹಾಗೆ ಮಾಡಬಹುದು. ಈ ಎರಡನ್ನು ಹೊರತುಪಡಿಸಿ ಬೇರೆ ಯಾವುದೇ ಏಜೆನ್ಸಿಗಳು PAN ನ ಭೌತಿಕ ಮರುಮುದ್ರಣಗಳನ್ನು ನೀಡಲು ಆದಾಯ ತೆರಿಗೆ ಇಲಾಖೆಯಿಂದ ಅಧಿಕಾರ ಪಡೆದಿಲ್ಲ. ಹಾಗಾಗಿ ನಾಗರಿಕರು ಎಚ್ಚರಿಕೆಯಿಂದ ಇರಬೇಕಿದೆ.

ವಂಚನೆಯ ದೂರು ಎಲ್ಲಿ ಸಲ್ಲಿಸಬಹುದು?

ಒಂದು ವೇಳೆ ನೀವು ವಂಚಕರಿಂದ ಸ್ಕ್ಯಾಮ್‌ಗೆ ಒಳಗಾಗಿದ್ದರೆ ನ್ಯಾಷನಲ್ ಸೈಬರ್ ಕ್ರೈಮ್ ಹೆಲ್ಪ್‌ಲೈನ್ 1930 ಗೆ ಡಯಲ್ ಮಾಡುವ ಮೂಲಕ ಅಥವಾ ರಾಷ್ಟ್ರೀಯ ಸೈಬರ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್‌ನ ಅಧಿಕೃತ ವೆಬ್‌ಸೈಟ್‌ಗೆ ಲಾಗ್ ಇನ್ ಮಾಡುವ ಮೂಲಕ ದೂರು ಸಲ್ಲಿಸಬಹುದು. ಸ್ಕ್ಯಾಮ್‌ಗೆ ಒಳಗಾದ ಕೂಡಲೇ ದಾಖಲಿಸುವುದು ಅತೀ ಮುಖ್ಯವಾಗಿದೆ. ಪುರಾವೆಯಾಗಿ ಸ್ಕ್ಯಾಮರ್‌ ಜೊತೆಗಿನ ಎಲ್ಲಾ ಕರೆ ಲಾಗ್‌ಗಳು, ಸಂದೇಶಗಳು, ಇಮೇಲ್ ಮತ್ತು ಇತರ ಸಂವಹನವನ್ನು ಸೇವ್‌ ಮಾಡಿಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+