ಪ್ಯಾನ್‌ 2.0ಗೆ ಆನ್‌ಲೈನ್‌ ಮೂಲಕ ಉಚಿತವಾಗಿ ಅರ್ಜಿ ಸಲ್ಲಿಸಬಹುದು; ಹೇಗೆ? ಇಲ್ಲಿ ತಿಳಿಯಿರಿ

ಆನ್‌ಲೈನ್‌ ಮೂಲಕ ಪ್ಯಾನ್‌ 2.0ಗೆ ಅರ್ಜಿ ಸಲ್ಲಿಸಲು ನೀವು ಯವುದೇ ಶುಲ್ಕವನ್ನ ಪಾವತಿಸುವ ಅಗತ್ಯ ಇಲ್ಲ. ಈ ಉಚಿತವಾಗಿ ನೀವು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಸಬಹುದು. ನಮ್ಮ ಭಾರತ ಸರ್ಕಾರ ಪ್ಯಾನ್‌ 2.0 ಯೋಜನೆಯ ಮೂಲಕ ಡಿಜಿಟಲ್‌ ಕ್ಷೇತ್ರದ ಕಡೆಗೆ ಒಲವನ್ನ ತೋರುತ್ತಿದೆ. ಪ್ರಧಾನ ನರೇಂದ್ರ ಕೇಂದ್ರ ಸಂಪುಟದ ಅಡಿಯಲ್ಲಿ, ಮೋದಿ ನೇತೃತ್ವದಲ್ಲಿ ಈ ಉಪಕ್ರಮವನ್ನ ಜಾರಿ ತರಲಾಗಿದ್ದು, ಇದು ಪರಿಸರ ಸ್ನೇಹಿ ಹಾಗೆ ಆಧುನಿಕ ತಂತ್ರಜ್ಞಾನವನ್ನ ಒಳಗೊಂಡದೆ. ಇದರಿಂದಾಗಿ ತೆರಿಗೆದಾರರ ವ್ಯವಹಾರಗಳನ್ನ ಸುರಕ್ಷಿತ ರೀತಿಯಲ್ಲಿ ನಿರ್ವಹಿಸಲಾಗುತ್ತದೆ. ಈ ಪ್ಯಾನ್‌ 2.0 ಯೋಜನೆಯನ್ನ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಘೋಷಿಸಿದ್ದು, ಈ ಪ್ಯಾನ್ 2.0 ಪ್ಯಾನ್ ಕಾರ್ಡ್‌ಗಳಲ್ಲಿ ಕ್ಯೂಆರ್ ಕೋಡ್‌ಗಳನ್ನು ಅಳವಡಿಸಲಾಗಿದೆ. ಈ ಮೂಲಕ ತೆರಿಗೆದಾರರು ಹೆಚ್ಚಿನ ಕಾರ್ಯಗಳನ್ನ ಮಾಡಿಕೊಳ್ಳಬಹುದು. 1,435 ಕೋಟಿ ಬಜೆಟ್‌ನೊಂದಿಗೆ, ಈ ಯೋಜನೆಯ ಮೂಲಕ ಆದಾಯ ತೆರಿಗೆ ಇಲಾಖೆಯ ಕಾರ್ಯಾಚರಣೆಗಳನ್ನು ಸುವ್ಯವಸ್ಥಿತಗೊಳಿಸುವ ನಿರೀಕ್ಷೆಯಿದೆ. ಹಾಗೆ ಡಿಜಿಟಲ್ ಸಶಕ್ತ ಭಾರತದ ದೃಷ್ಟಿಗೆ ಇದು ಅನುಗುಣವಾಗಿರುತ್ತದೆ.

ಪ್ಯಾನ್ 2.0 ಯೋಜನೆ ಎಂದರೇನು?

PAN 2.0 ಉಪಕ್ರಮವು ತೆರಿಗೆದಾರರ ನೋಂದಣಿ ಸೇವೆಗಳನ್ನು ಪರಿವರ್ತಿಸುವ ಮರು-ಇ-ಆಡಳಿತ ಯೋಜನೆಯಾಗಿದೆ. PAN (ಶಾಶ್ವತ ಖಾತೆ ಸಂಖ್ಯೆ) ಮತ್ತು TAN (ತೆರಿಗೆ ಕಡಿತ ಮತ್ತು ಸಂಗ್ರಹ ಖಾತೆ ಸಂಖ್ಯೆ) ವ್ಯವಸ್ಥೆಗಳನ್ನು ಒಂದೇ ವೇದಿಕೆಗೆ ಸಂಯೋಜಿಸುವ ಮೂಲಕ, ಡೇಟಾ ಸುರಕ್ಷತೆಯನ್ನು ಖಾತ್ರಿಪಡಿಸುವ ಮೂಲಕ ಯೋಜನೆಯು ಪ್ರಕ್ರಿಯೆಗಳನ್ನು ಸರಳಗೊಳಿಸುತ್ತದೆ.

ಪ್ಯಾನ್‌ 2.0 ಅರ್ಜಿ ಸಲ್ಲಿಕೆಗೆ ಯಾವುದೇ ಶುಲ್ಕವಿಲ್ಲ!

ಇದರ ಪ್ರಮುಖ ಲಕ್ಷಣಗಳು ಇಲ್ಲಿವೆ:

QR ಕೋಡ್ ಏಕೀಕರಣ: ಕ್ಯೂಆರ್‌ ಕೋಡ್‌ಗಳ ಮೂಲಕ ತ್ವರಿತ ಪ್ರವೇಶ ಮತ್ತು ಡೇಟಾ ದೃಢೀಕರಣ ಮಾಡಿಕೊಳ್ಳಬಹುದು.

ಏಕೀಕೃತ ಪೋರ್ಟಲ್: PAN ಮತ್ತು TAN ಸೇವೆಗಳಗಾಗಿ ಒಂದೇ ವೇದಿಕೆಯ ಮೂಲಕ ಪ್ರವೇಶಿಸಬಹುದು.

ಕೇಂದ್ರೀಕೃತ PAN ಡೇಟಾ ವಾಲ್ಟ್: ಎಲ್ಲಾ PAN ಡೇಟಾವನ್ನು ಸುರಕ್ಷಿತವಾಗಿ ಸಂಗ್ರಹಿಸಿ ನಿರ್ವಹಿಸಲಾಗುತ್ತದೆ.

ಪರಿಸರ ಸ್ನೇಹಿ ವಿಧಾನ: ಕಾಗದರಹಿತ ಪ್ರಕ್ರಿಯೆಗಳನ್ನ ಕಡಿಮೆ ಮಾಡಲು ಹಾಗೆ ಆ ವೇಳೆ ಆಗುವಂತಹ ದೋಷಗಳನ್ನ ತಪ್ಪಿಸಲು ಇದು ಬೆಂಬಲಿಸುತ್ತದೆ.

PAN 2.0 ಅಪ್‌ಗ್ರೇಡ್‌ ಮಾಡುವುದರ ಪ್ರಯೋಜನಗಳು

ವೇಗವಾದ ಸೇವೆಗಳು: ಪ್ರಕ್ರಿಯೆಗಳನ್ನ ಸುಲಭಗೊಳಿಸುವ ಮೂಲಕ ವೇಗವಾಗಿ ಸೇವೆಗಳನ್ನ ನೀಡುತ್ತದೆ.

ವರ್ಧಿತ ಭದ್ರತೆ: ಬಳಕೆದಾರರ ಮಾಹಿತಿಯನ್ನು ಪ್ಯಾನ್ ಡೇಟಾ ವಾಲ್ಟ್ ರಕ್ಷಿಸುತ್ತದೆ.

ವೆಚ್ಚ ಆಪ್ಟಿಮೈಸೇಶನ್: ಪ್ರತಿ ಕಾರ್ಯಾಗಳನ್ನ ಡಿಜಿಟೈಸ್ ಮಾಡುವುದರಿಂದ, ನಮ್ಮ ವೆಚ್ಚಗಳು ಕಡಿಮೆಯಾಗುತ್ತವೆ.

ಸುಧಾರಿತ ಕುಂದುಕೊರತೆ ಪರಿಹಾರ: ಕೇಂದ್ರೀಕೃತ ವ್ಯವಸ್ಥೆಯ ಮೂಲಕ ಸಮಸ್ಯೆಗಳಿಗೆ ಸಕಾಲಿಕ ಪರಿಹಾರವನ್ನು ಪಡೆಯಬಹುದು.

ಈ ಉಪಕ್ರಮವು ನರೇಂದ್ರ ಮೋದಿಯವರ ಸುಸ್ಥಿರ, ತಂತ್ರಜ್ಞಾನ-ಚಾಲಿತ ಆರ್ಥಿಕತೆಯ ದೃಷ್ಟಿಕೋನವನ್ನು ಒಳಗೊಂಡಿದೆ. ಇದು ಡಿಜಿಟಲ್ ತೆರಿಗೆ ಹಾಗೂ ಪರಿಸರ ವ್ಯವಸ್ಥೆಯತ್ತ ಮಹತ್ವದ ಹೆಜ್ಜೆಯಿದಾಗಿದೆ.

PAN 2.0ಗೆ ಯಾರಲ್ಲಾ ಅರ್ಹರು?

PAN ಕಾರ್ಡ್‌ ಹೊಂದಿರುವವರು ಎಲ್ಲರೂ ಕೂಡ PAN 2.0 ಅಪ್‌ಗ್ರೇಡ್‌ಗೆ ಅರ್ಹರಾಗಿರುತ್ತಾರೆ . ನೀವು ಈಗಾಗಲೇ PAN ಹೊಂದಿದ್ದರೆ, ಮರು ಅರ್ಜಿ ಸಲ್ಲಿಸುವ ಅಗತ್ಯವಿಲ್ಲ. ಆದ್ರೆ ನೀವು ಹೊಸ QR-ಕೋಡ್‌ಗಾಗಿ ವಿನಂತಿಸಬಹುದು. ಹಾಗೆ ಹೊಸದಾಗಿ ಅರ್ಜಿ ಸಲ್ಲಿಸುವವರು, ಮಾನ್ಯವಾದ ಗುರುತು ಮತ್ತು ವಿಳಾಸದ ಪುರಾವೆಗಳನ್ನು ಸಲ್ಲಿಸುವ ಮೂಲಕ ಪ್ರಮಾಣಿತ ಅರ್ಹತಾ ಮಾನದಂಡಗಳನ್ನು ನೀಡಬೇಕಾಗುತ್ತದೆ. ಪ್ಯಾನ್ 2.0 ಅನ್ನು ಎಲ್ಲಾ ತೆರಿಗೆದಾರರು ಉಚಿತವಾಗಿ ಬಳಕೆ ಮಾಡಿಕೊಳ್ಳಬಹುದು.

ಪ್ಯಾನ್ 2.0 ಆನ್‌ಲೈನ್‌ಗಗಿ ಹೇಗೆ ಅರ್ಜಿ ಸಲ್ಲಿಸಬೇಕು?

ಪ್ಯಾನ್‌ 2.0ಗಾಗಿ ನೀವು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಇದಕ್ಕಾಗಿ ಇಲಾಖೆಗಳಿಗೆ ಅಲಯುವ ಅವಶ್ಯಕತೆಯಿಲ್ಲ. ಹಾಗೆ ಇಂದು ಸಂಪೂರ್ಣ ಆನ್‌ಲೈನ್‌ ಪ್ರಕ್ರಿಯಗಾಗಿದ್ದು ಸಂಪೂರ್ಣ ಪರಿಸರ ಸ್ನೇಹಿಯಾಗಿದೆ. ಇನ್ನು ಯಾವ ರೀತಿ ಅರ್ಜಿ ಸಲ್ಲಿಸಬೇಕ ಎನ್ನುವ ಸಂಪೂರ್ಣ ಮಾಹತಿ ಇಲ್ಲಿದೆ ತಿಳಿಯಿರಿ:

1. ಏಕೀಕೃತ ಪೋರ್ಟಲ್‌ಗೆ ಭೇಟಿ ನೀಡಿ: ಪ್ಯಾನ್‌ 2.0ಗಾಗಿ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ, ಹಾಗೆ ನಿಮ್ಮ ಅರ್ಜಿ ಪ್ರಕ್ರಿಯೆಯನ್ನ ಆರಂಭಿಸಿ.
2. ವೈಯಕ್ತಿಕ ವಿವರಗಳನ್ನು ನಮೂದಿಸಿ: ನಿಮ್ಮ ವೈಯಕ್ತಿಕ ಮಾಹಿತಿಯನ್ನ ನೀಡಿ, ಅಗತ್ಯವಿರುವ ಕ್ಷೇತ್ರಗಳನ್ನು ಭರ್ತಿ ಮಾಡಿ.
3. ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ: ಗುರುತಿನ ಪುರಾವೆ, ವಿಳಾಸ ಮತ್ತು ಜನ್ಮ ದಿನಾಂಕದ ಪುರಾವೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಲ್ಲಿಕೆ ಮಾಡಿ.
4. ಅರ್ಜಿಯನ್ನು ಸಲ್ಲಿಸಿ: ಸಲ್ಲಿಕೆ ಮಾಡಿದ ವಿವರಗಳನ್ನು ಪರಿಶೀಲಿಸಿ ಮತ್ತು ದಾಖಲೆಗಳನ್ನ ಸುರಕ್ಷಿತವಾಗಿ ಸಲ್ಲಿಸಿ.

PAN 2.0ಗೆ ಅಗತ್ಯವಿರುವ ದಾಖಲೆಗಳು

ಪರಿಶೀಲನೆಗಾಗಿ ಅರ್ಜಿದಾರರು ನಿರ್ದಿಷ್ಟ ದಾಖಲೆಗಳನ್ನು ಒದಗಿಸಬೇಕು:

1. ಗುರುತಿನ ಪುರಾವೆ: ಆಧಾರ್ ಕಾರ್ಡ್, ವೋಟರ್ ಐಡಿ, ಪಾಸ್‌ಪೋರ್ಟ್ ಅಥವಾ ಡ್ರೈವಿಂಗ್ ಲೈಸೆನ್ಸ್.
2. ವಿಳಾಸದ ಪುರಾವೆ: ಯುಟಿಲಿಟಿ ಬಿಲ್‌ಗಳು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಅಥವಾ ಬಾಡಿಗೆ ಒಪ್ಪಂದಗಳು.
3. ಹುಟ್ಟಿದ ದಿನಾಂಕದ ಪುರಾವೆ: ಜನನ ಪ್ರಮಾಣಪತ್ರ, ಶಾಲೆ ಬಿಡುವ ಪ್ರಮಾಣಪತ್ರ, ಅಥವಾ ಪಾಸ್‌ಪೋರ್ಟ್.
4. ಪ್ರಕ್ರಿಯೆಯಲ್ಲಿನ ವಿಳಂಬವನ್ನು ತಪ್ಪಿಸಲು ಈ ದಾಖಲೆಗಳು ನಿಖರ ಮತ್ತು ನವೀಕೃತವಾಗಿವೆ ಎಂದು ಖಚಿತಪಡಿಸಿಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+