ಹೊಸ ಪ್ಯಾನ್‌ 2.0 ಮೂಲಕ ನೀವು ನಕಲಿ ಪ್ಯಾನ್‌ ಕಾರ್ಡ್‌ಗಳನ್ನು ಕಂಡುಹಿಡಿಯಬಹುದು

ನೀವು ಈಗಾಗಲೇ ಶಾಶ್ವತ ಖಾತೆ ಸಂಖ್ಯೆ (ಪ್ಯಾನ್‌) ಹೊಂದಿದ್ದರೆ ಪ್ಯಾನ್‌ 2.0 ಪಡೆಯಲೇಬೇಕೆಂಬ ನಿಯಮ ಇಲ್ಲ. ಈವು ಬಯಸಿದ್ರೆ ಮಾತ್ರ ಪ್ಯಾನ್‌ 2.0 ಅನ್ನು ಪಡೆಯಬಹುದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಅಲ್ಲದೆ ನೀವೇನಾದ್ರು ನಕಲಿ ಪ್ಯಾನ್‌ ಕಾರ್ಡ್‌ ಹೊಂದಿದ್ದರೆ ಇದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಬಳಿ ಏನಾದ್ರು ನಕಲಿ ಪ್ಯಾನ್‌ ಇದ್ದಲ್ಲಿ ಕಾನೂನಿನ ಪ್ರಕಾರ ಅದನ್ನು ತಕ್ಷಣವೇ ಒಪ್ಪಿಸಿ. ಹಾಗೆ ಅದಕ್ಕೂ ಮೊದಲು ನಿಮ್ಮ ಬಳಿ ಇರುವುದು ನಕಲಿ ಅಥವಾ ಅಸಲಿ ಎಂದು ತಿಳಿಯಲು ಅದನ್ನು ನೀವು ಪರಿಶೀಲನೆ ಮಾಡಿ.

ಏಕೆಂದರೆ, ನಕಲಿ ಪ್ಯಾನ್‌ಗಳನ್ನು ತೆಗೆದುಹಾಕಲು ಮತ್ತು ಅಪರಾಧಿಗಳನ್ನು ಹಿಡಿಯಲು ತಂತ್ರಜ್ಞಾನದ ಬಳಕೆ ಮಾಡಿ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ನೀವೇನಾದ್ರು ನಕಲಿ ಪ್ಯಾನ್‌ ಹೊಂದಿದ್ದರೆ ಅಥವಾ ನಿಮ್ಮ ಹೆಸರಿನಲ್ಲಿ ನಕಲಿ ಪ್ಯಾನ್‌ ಅಸ್ತಿತ್ವದಲ್ಲಿದ್ದರೆ ಏನು ಮಾಡಬೇಕೆಂದು ಪರಿಶೀಲಿಸುವುದು ಹೇಗೆ ಎಂಬುದನ್ನು ಇಲ್ಲಿ ತಿಳಿಯಿರಿ.

ನಿಮ್ಮ ಪ್ಯಾನ್‌ ಕಾರ್ಡ್‌ ನಕಲಿ ಆಗಿದ್ದರೆ ಚಿಂತೆ ಬೇಡ

ಹೊಸ PAN 2.0 ಯೋಜನೆಯಡಿಯಲ್ಲಿ ಸರ್ಕಾರ ನಕಲಿ PAN ಅನ್ನು ಟ್ರ್ಯಾಕ್ ಮಾಡುತ್ತದೆ

ನಕಲಿ ಪ್ಯಾನ್‌ಗಳನ್ನು ಪರಿಶೀಲಿಸಲು ಬೇಕಾದ ತಂತ್ರಜ್ಞಾನವನ್ನ ಸರ್ಕಾರ ಹೊಂದಿದೆ. ಅಲ್ಲದೆ ಆದಾಯ-ತೆರಿಗೆ ಕಾಯಿದೆ, 1961ರ ನಿಬಂಧನೆಗಳ ಪ್ರಕಾರ, ಯಾವುದೇ ವ್ಯಕ್ತಿಯು ಒಂದಕ್ಕಿಂತ ಹೆಚ್ಚು PAN ಕಾರ್ಡ್‌ಗಳನ್ನು ಹೊಂದುವಂತಿಲ್ಲ. ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು PAN ಕಾರ್ಡ್‌ ಹೊಂದಿದ್ದರೆ, ಅವನು ಅಥವಾ ಅವಳು ಅದನ್ನು ನ್ಯಾಯ ವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಯ ಗಮನಕ್ಕೆ ತರಬೇಕಾಗುತ್ತದೆ. ಇಂತಹ ನಕಲಿ ವಿನಂತಿಗಳನ್ನು ಗುರುತಿಸಲು PAN 2.0 ನಲ್ಲಿ ಒಂದಕ್ಕಿಂತ ಹೆಚ್ಚು PAN ಅನ್ನು ಹೊಂದಿದ್ದರೆ ಅದನ್ನು ಡಿ-ಆಕ್ಟಿವೇಟ್ ಮಾಡಲಾಗುತ್ತದೆ. ನಕಲಿ PANಗಳನ್ನು ಕಂಡುಹಿಡಿದು ಅದರ ವಿರುದ್ಧ ಕ್ರಮ ತೆಗೆದುಕೊಳ್ಳುವ ಮೂಲಕ ಒಬ್ಬ ವ್ಯಕ್ತಿ ಒಂದಕ್ಕಿಂತ ಹೆಚ್ಚು PAN ಹೊಂದಿರುವ ನಿದರ್ಶನಗಳನ್ನು ಕಡಿಮೆ ಮಾಡುತ್ತದೆ ಎಂದು ಹಣಕಾಸು ಸಚಿವಾಲಯವು ನವೆಂಬರ್ 26, 2024ರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ಯಾನ್ 2.0 ಡೈನಾಮಿಕ್ ಕ್ಯೂಆರ್ ಕೋಡ್ ಮತ್ತು ಇದೇರೀತಿಯ ಇನ್‌ಬಿಲ್ಟ್‌ ಕ್ರಮಗಳನ್ನ ಹೊಂದಿದ್ದು, ಅವೆಲ್ಲಾ ನಕಲಿ ಪ್ಯಾನ್‌ಗಳನ್ನ ಸ್ವಯಂಚಾಲಿತವಾಗಿ ಪತ್ತೆ ಮಾಡುತ್ತದೆ ಎಂದು ತಜ್ಞರು ತಿಳಿಸಿದ್ದಾರೆ.

HSA ವಕೀಲರಾದ ಫರಾನಾಜ್ ಜಿ ಕಾರಭಾರಿ ಹೇಳುವ ಪರಕಾರ, ಹೊಸ ಪ್ಯಾನ್ 2.0 ಕಾರ್ಯರೂಪಕ್ಕೆ ಬರುವ ಮೂಲಕ,ಅದರಲ್ಲಿ QR ಕೋಡ್ ಇರುವುದರಿಂದ ಒಬ್ಬ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಪ್ಯಾನ್ ಕಾರ್ಡ್ ಹೊಂದಿದ್ದರೆ ಅದನ್ನು ಪತ್ತೆಹಚ್ಚಲು ಸರ್ಕಾರಿ ಇಲಾಖೆಗಳಿಗೆ ಸುಲಭವಾಗಿದೆ. ಹಾಗೇನಾದ್ರು ಒಬ್ಬ ವ್ಯಕ್ತಿಯು ಎರಡು PAN ಗಳನ್ನು ಹೊಂದಿರುವುದು ಕಂಡುಬಂದರೆ ಅದು ಅವನ ಅಥವಾ ಅವಳ ಮೇಲೆ ಕಠಿಣವಾದ ದಂಡವನ್ನು ವಿಧಿಸಲಾಗುವುದು. ಅಲ್ಲದೆ ಅದರಲ್ಲಿರುವ ಕ್ಯೂ ಆರ್‌ ಕೋಡ್‌ ಸಂಪೂರ್ಣ ಸಿಸ್ಟಮ್ ಅನ್ನು ಡಿಜಿಟಲ್ ಮಾಡುತ್ತದೆ ಮತ್ತು ಹೆಚ್ಚಿನ ಸುರಕ್ಷತೆ ಮತ್ತು ಪರಿಣಾಮಕಾರಿತ್ವವನ್ನು ನೀಡುತ್ತದೆ ಎಂದು ಹೇಳಲಾಗುತ್ತದೆ.

"ಹೊಸ ವ್ಯವಸ್ಥೆಯು ಕಡ್ಡಾಯವಾದ ಆಧಾರ್ ಲಿಂಕ್, ನೈಜ-ಸಮಯದ ಮೌಲ್ಯೀಕರಣ ಮತ್ತು ಸುಧಾರಿತ ಡೇಟಾ ಅನಾಲಿಟಿಕ್ಸ್‌ನಂತಹ ವೈಶಿಷ್ಟ್ಯಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ, ಇವೆಲ್ಲವೂ ನಕಲಿ ಪ್ಯಾನ್‌ಗಳನ್ನು ಗುರುತಿಸಲು ಮತ್ತು ತಡೆಯಲು ಸಮರ್ಥವಾಗಿ ಸಹಾಯ ಮಾಡುತ್ತದೆ" ಎಂದು ನಂಗಿಯಾ ಆಂಡರ್ಸನ್ ಎಲ್‌ಎಲ್‌ಪಿ ಪಾಲುದಾರ ಸಂದೀಪ್ ಜುನ್‌ಜುನ್‌ವಾಲಾ ಹೇಳುತ್ತಾರೆ.

ಆದಾಯ ತೆರಿಗೆ ಇಲಾಖೆಯು PAN 2.0 ಯೋಜನೆಯಲ್ಲಿ FAQ ಗಳನ್ನು ನೀಡುತ್ತದೆ: ಹೊಸ PAN ಗೆ ಅರ್ಜಿ ಸಲ್ಲಿಸುವ ಕುರಿತು ವಿವರಗಳನ್ನು ಪರಿಶೀಲಿಸಿ, PAN ಸಂಖ್ಯೆಯನ್ನು ಬದಲಾಯಿಸಿ

ನಿಮ್ಮ ನಕಲಿ PAN ಅನ್ನು ನೀವು ಒಪ್ಪಿಸದಿದ್ದರೆ ಏನಾಗಬಹುದು
ಜುಂಜುನ್‌ವಾಲಾ ಅವರು ನಕಲಿ ಪ್ಯಾನ್ ಹೊಂದಿದ್ದರೆ, ಸಂಭಾವ್ಯ ದಂಡಗಳು, ಕಾನೂನು ತೊಡಕುಗಳು ಮತ್ತು ಹಣಕಾಸಿನ ವಹಿವಾಟುಗಳಲ್ಲಿನ ಅಡಚಣೆಗಳನ್ನು ತಪ್ಪಿಸಲು ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವುದು ಬಹಳ ಮುಖ್ಯ ಎಂದು ಹೇಳುತ್ತಾರೆ.

ಒಬ್ಬರು ನಕಲಿ PAN ಹೊಂದಿದ್ದಲ್ಲಿ, ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 272B ಅಡಿಯಲ್ಲಿ 10,000 ರೂಗಳ ವರೆಗೆ ವಿತ್ತೀಯ ದಂಡವನ್ನು ವಿಧಿಸಬಹುದು. ಇನ್ನು ಇಂತಹ ಸಮಸ್ಯೆಯನ್ನು ಪರಿಹರಿಸಲು, NSDLನಂತಹ PAN ಸೇವಾ ಪೂರೈಕೆದಾರರಿಗೆ ಅಗತ್ಯ ನಮೂನೆಗಳನ್ನು ಸಲ್ಲಿಕೆ ಮಾಡಬಹುದು. UTIITSL ನಕಲು PAN ಅನ್ನು ಸರೆಂಡರ್ ಮಾಡುವುದರ ಜೊತೆಗೆ, ನಿಮ್ಮ ಪ್ಯಾನ್‌ ಕಾರ್ಡ್ ನಿಮ್ಮ ಆದಾರ್‌ಕಾರ್ಡ್‌ಗೆ ಲಿಂಕ್‌ ಆಗಿದೆಯಾ ಎನ್ನುವುದನ್ನ ನೀವು ಖಚಿತಪಡಿಸಿಕೊಳ್ಳಿ. ಹಾಗೆ ನಿಮ್ಮ ಬ್ಯಾಂಕ್ ಖಾತೆಗಳು, ಹೂಡಿಕೆಗಳು ಮತ್ತು ತೆರಿಗೆ ಫೈಲಿಂಗ್‌ಗಳಂತಹ ಎಲ್ಲಾ ಹಣಕಾಸು ದಾಖಲೆಗಳಲ್ಲಿ ಇದನ್ನು ನವೀಕರಿಸಲಾಗಿದೆಯೇ ಎಂದು ಪರಿಶೀಲಿಸಿ ಎಂದು ಸಂದೀಪ್‌ ಜುಂಜುನ್‌ವಾಲಾ ಹೇಳುತ್ತಾರೆ.

ಆದಾಯ ತೆರಿಗೆ ಕಾಯಿದೆಯ ಪ್ರಕಾರ ನೀವು ಉದ್ದೇಶಪೂರ್ವಕವಾಗಿ ಅಥವಾ ಅಕಸ್ಮಾತಾಗಿ ನೀವು ಒಂದಕ್ಕಿಂತ ಹೆಚ್ಚು ಪ್ಯಾನ್‌ ಹೊಂದಿದ್ದರೆ ಅದನ್ನ ನಿಷೇದಿಸಲಾಗುತ್ತದೆ. ಹಾಗೇನಾದ್ರು ಹೆಚ್ಚುವರಿ ಪ್ಯಾನ್ ಅನ್ನು ಹೊಂದಿದ್ದರೆ, ತಕ್ಷಣವೇ ಅದನ್ನು ಸಲ್ಲಿಸಿ. ಇಲ್ಲವಾದಲ್ಲಿ ನೀವು 10,000 ರೂ.ವರೆಗೆ ದಂಡವನ್ನು ಕಟ್ಟಬೇಕಾಗುತ್ತದೆ. ಅಲ್ಲದೆ ಈ ಹಿಂದೆ ಆಧಾರ್ ಡೇಟಾವನ್ನು ವೈಯಕ್ತಿಕವಾಗಿ ಲಿಂಕ್ ಮಾಡುವುದನ್ನು ತೆರಿಗೆ ಇಲಾಖೆ ಕಡ್ಡಾಯಗೊಳಿಸಿದೆ. ತೆರಿಗೆ ಪಾವತಿದಾರರ ಐಡಿಗಳು eKYC ಇವುಗಳಿಂದ ನಕಲಿ ಪ್ಯಾನ್‌ಗಳನ್ನ ಪತ್ತೆ ಮಾಡಲು ಸಹಾಯ ಮಾಡುತ್ತದೆ ಎಂದು ಡೆಲಾಯ್ಟ್ ಇಂಡಿಯಾದ ಪಾಲುದಾರ ರೋಹಿಂಟನ್ ಸಿಧ್ವಾ ಹೇಳುತ್ತಾರೆ.

ನಕಲಿ PANನ ಸಮಸ್ಯೆಯನ್ನು ಪರಿಹರಿಸುವುದು ಹೇಗೆ?

A2Z Taxcorp LLP ಸಂಸ್ಥಾಪಕರಾದ ಚಾರ್ಟರ್ಡ್ ಅಕೌಂಟೆಂಟ್ ಬಿಮಲ್ ಜೈನ್ ಅವರು ಈ ಬಗ್ಗೆ ಮಾತನಾಡಿದ್ದು, ಅನೇಕ ಬಾರಿ ಜನರು ತಮ್ಮ ಹೆಸರಿನಲ್ಲಿ ನಕಲಿ ಪ್ಯಾನ್ ಹೊಂದಿರುವ ಬಗ್ಗೆ ತಿಳಿದಿರುವುದಿಲ್ಲ ಎಂದು ಹೇಳಿದರು. ಹಾಗೆ "ಹಲವು ಬಾರಿ, ಜನರು ಬೇರೊಬ್ಬರ ಹೆಸರಿನಲ್ಲಿ PAN ಪಡೆದುಕೊಂಡು ಜೊತೆಗೆ ನಕಲಿ ದಾಖಲೆಗಳನ್ನು ತೆಗೆದುಕೊಂಡು ಕಂಪನಿಗಳನ್ನು ಸ್ಥಾಪಿಸುತ್ತಾರೆ ಎಂದರು. ಈ ಹಿಂದೆ ಈ ನಕಲಿ ದಾಖಲೆಗಳು ಮತ್ತು ಮೋಸದ ಕಂಪನಿಗಳಿಂದ GST ವಂಚನೆ, ಇನ್‌ಪುಟ್ ತೆರಿಗೆ ಕ್ರೆಡಿಟ್ ವಂಚನೆ ಇತ್ಯಾದಿಗಳು ಸಂಭವಿಸಿದ ಅನೇಕ ಉದಾಹಣೆಗಳಿವೆ. ಈ ಮೋಸದ ಕಂಪನಿಗಳಲ್ಲಿ ಹಲವು ನಕಲಿ PANಗಳೊಂದಿಗೆ ಸಿಕ್ಕಿಬಿದ್ದಿವೆ, ಅಲ್ಲಿ ಮೂಲ PAN ಹೊಂದಿರುವವರು ತಮ್ಮ ಹೆಸರು ಮತ್ತು ವಿವರಗಳನ್ನು ದುರುಪಯೋಗಪಡಿಸಿಕೊಳ್ಳುವ ವಂಚಕರ ಬಗ್ಗೆ ತಿಳಿದಿರುವುದಿಲ್ಲ. ಆದ್ದರಿಂದ, ನಿಮ್ಮ ಹೆಸರಿನಲ್ಲಿ ಯಾವುದೇ ನಕಲಿ ಪ್ಯಾನ್ ನೀಡಿದ್ದರೆ ನ್ಯಾಯವ್ಯಾಪ್ತಿಯ ಮೌಲ್ಯಮಾಪಕ ಅಧಿಕಾರಿಯಿಂದ ಪತ್ತೇಹಚ್ಚಿ ಮತ್ತು ನಕಲಿ ಕಾರ್ಡ್‌ ಅನ್ನು ನಿಷ್ಕ್ರಿಯಗೊಳಿಸಲು ನ್ಯಾಯವ್ಯಾಪ್ತಿಯ ಮೌಲ್ಯಮಾಪನ ಅಧಿಕಾರಿಗೆ ಒಮ್ಮೆ ವಿನಂತಿಸುವುದು ಒಳ್ಳೆಯದು ಎಂದರು.

ತೆರಿಗೆದಾರರು ನಕಲಿ ಪ್ಯಾನ್ ಅನ್ನು ನಿಷ್ಕ್ರಿಯಗೊಳಿಸಲು ತಾವೆ ಮುಂದೆ ಬಂದರೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಜೈನ್ ಹೇಳಿದರು. ಹಾಗೆ ತೆರಿಗೆದಾರರು ಸ್ವಯಂಪ್ರೇರಣೆಯಿಂದ ಮುಂದೆ ಬಂದು ಶರಣಾದರೆ ಅಥವಾ ನಕಲಿ PAN ಅನ್ನು ನಿಷ್ಕ್ರಿಯಗೊಳಿಸಲು ಕೇಳಿದರೆ ಯಾವುದೇ ದಂಡವನ್ನು ವಿಧಿಸಲಾಗುವುದಿಲ್ಲ ಎಂದರು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+