ಬೆಂಗಳೂರು: ಅತ್ಯುತ್ತಮ ಸೇವೆಯ ಮೂಲಕ ಜನಪ್ರಿಯವಾಗಿದ್ದ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ (Bengaluru Kempegowda Airport) ನಿಲ್ದಾಣ ಇದೀಗ ಪ್ರಯಾಣಿಕರ ಕೆಂಗಣ್ಣಿಗೆ ಗುರಿಯಾಗಿದೆ. ಲಕ್ಷ ಲಕ್ಷ ಪ್ರಯಾಣಿಕರು ದಿನಂಪ್ರತಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿರುತ್ತಾರೆ. ಅದರಲ್ಲೂ ದೀರ್ಘ ವಿಮಾನ ಪ್ರಯಾಣದ ನಂತರ ವಿಮಾನದೊಳಗೆ ಕುಳಿತುಕೊಳ್ಳುವುದು ಕಷ್ಟಸಾಧ್ಯ. ಅದೇ ರೀತಿ ಲಗೇಜ್ ಜೊತೆ ನಡೆಯೋದು ಕೂಡಾ ಕಷ್ಟ. ಆದರೆ ಸದ್ಯ ಕ್ಯಾಬ್ ಸಮಸ್ಯೆಯಿಂದ ಪ್ರಯಾಣಿಕರು (Passengers) ಲಗೇಜ್ ಹೊತ್ತುಕೊಂಡು ನಡೆಯುವ ಪರಿಸ್ಥಿತಿ ಎದುರಾಗಿದೆ.

ಬೆಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ (BIAL) ಟರ್ಮಿನಲ್ 1 (T1) ಮತ್ತು ಟರ್ಮಿನಲ್ 2 (T2) ನಲ್ಲಿ ಜಾರಿಗೆ ತಂದಿರುವ ಹೊಸ ಸಂಚಾರ ನಿರ್ವಹಣೆ ಮತ್ತು ಕರ್ಬ್‌ಸೈಡ್ ಪಿಕಪ್ ನೀತಿಯು ಪ್ರಯಾಣಿಕರು ಮತ್ತು ಕ್ಯಾಬ್ ನಿರ್ವಾಹಕರ ನಡುವೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನಧಿಕೃತ ಪಾರ್ಕಿಂಗ್, ದಲ್ಲಾಳಿ ಪದ್ಧತಿ ಮತ್ತು ಆಗಮನ ಟರ್ಮಿನಲ್‌ಗಳಲ್ಲಾಗುತ್ತಿದ್ದ ದಟ್ಟಣೆಯನ್ನು ನಿರ್ವಹಿಸುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗಿತ್ತು. ಆದ್ರೆ ಇಂದು ಇದೇ ದೊಡ್ಡ ಸಮಸ್ಯೆಯಾಗಿದೆ.
ಹೊಸ ನಿಯಮ, ಪ್ರಯಾಣಿಕರು ಸಮಸ್ಯೆಯಲ್ಲಿ!
ಹೊಸ ನೀತಿಯ ಪ್ರಕಾರ, ವಿಮಾನ ನಿಲ್ದಾಣದಿಂದ ಅನುಮೋದಿತ ಅಗ್ರಿಗೇಟರ್ ಟ್ಯಾಕ್ಸಿಗಳಿಗೆ (ಓಲಾ,ಊಬರ್) ಮಾತ್ರ ನೇರವಾಗಿ ಕರ್ಬ್‌ಸೈಡ್‌ನಿಂದ ಪ್ರಯಾಣಿಕರನ್ನು ಕರೆದೊಯ್ಯಲು ಅನುಮತಿ ನೀಡಲಾಗಿದೆ. ಆದರೆ, ಇತರ ಎಲ್ಲಾ ಖಾಸಗಿಯಾಗಿ ಪ್ರೀಬುಕ್ ಮಾಡಿದ ಕ್ಯಾಬ್‌ಗಳು, ದೂರದ ಪ್ರಯಾಣ ಮತ್ತು ಹೊರರಾಜ್ಯದ ಟ್ಯಾಕ್ಸಿಗಳನ್ನು ಟಿ1 ನಿಂದ ಸುಮಾರು 800 ಮೀಟರ್ ದೂರದಲ್ಲಿರುವ ಪಾರ್ಕಿಂಗ್ ಸ್ಥಳ ಅಂದರೆ P3 ಮತ್ತು P4 ನಲ್ಲಿ ಅವಕಾಶ ನೀಡಲಾಗಿದೆ. ಇದೇ ಕಾರಣದಿಂದ ಸದ್ಯ ಪ್ರಯಾಣಿಕರು 800 ಮೀಟರ್ ನಡೆಯುವಂತಾಗಿದೆ, ಇದರಿಂದಲೇ ಪ್ರಯಾಣಿಕರು ಆಕ್ರೋಶಗೊಂಡಿದ್ದಾರೆ.
ಪ್ರಯಾಣಿಕರ ಆಕ್ರೋಶ
ಇನ್ನು ಈ ಹೊಸ ವ್ಯವಸ್ಥೆಯಿಂದಾಗಿ ಪ್ರಯಾಣಿಕರು ವಿಮಾನ ಇಳಿದು, 15-17 ನಿಮಿಷಗಳ ಕಾಲ ನಡೆಯುವಂತಾಗಿದೆ. ಅಲ್ಲದೇ ಜೊತೆಗೆ, ಅವರು ಭಾರವಾದ ಸೂಟ್‌ಕೇಸ್‌ಗಳೊಂದಿಗೆ ಎತ್ತರದ ಫುಟ್‌ಪಾತ್‌ಗಳು, ಇಳಿಜಾರುಗಳು, ಕಾರಿಡಾರ್‌ಗಳು ಮತ್ತು ಅನೇಕ ಎಲಿವೇಟರ್‌ಗಳೊಂದಿಗೆ ಸಾಗಬೇಕಾಗಿದೆ. ಹಿರಿಯ ನಾಗರಿಕರು, ಚಿಕ್ಕ ಮಕ್ಕಳಿರುವ ಪೋಷಕರು ಮತ್ತು ಕುಟುಂಬಗಳು ಈ ಬದಲಾವಣೆಯಿಂದ ಹೆಚ್ಚು ತೊಂದರೆಗೀಡಾಗಿದ್ದು, ನಿಯಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಮಾನ ನಿಲ್ದಾಣದ ಟ್ಯಾಕ್ಸಿಗಳನ್ನು ಆಯ್ಕೆ ಮಾಡುವ ಪ್ರಯಾಣಿಕರು ತಮ್ಮ ವಾಹನಗಳಿಗೆ ನೇರವಾಗಿ ಪ್ರವೇಶಿಸಬಹುದಾದರೆ, ಖಾಸಗಿ ಕ್ಯಾಬ್‌ಗಳನ್ನು ಬುಕ್ ಮಾಡಿದವರು ತಮ್ಮ ಚಾಲಕರನ್ನು ತಲುಪಲು 800 ಮೀಟರ್‌ಗಳಷ್ಟು ನಡೆಯುವಂತಾಗಿದೆ. ಇನ್ನು ಟಿ2 ನಲ್ಲಿ, ಈ ಸಮಸ್ಯೆಯು ಬೇರೆ ಸ್ವರೂಪ ಪಡೆದುಕೊಂಡಿದ್ದು, ಇಲ್ಲಿ ನಿಗದಿತ ಸಮಯದ ಮಿತಿ ನಿಗದಿಪಡಿಸಲಾಗಿದ್ದು, ಇದನ್ನು ಅನುಸರಿಸುವುದು ಅಸಾಧ್ಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೋಮವಾರ ಬೆಳಗ್ಗೆ ಎರಡೂ ಟರ್ಮಿನಲ್‌ಗಳಲ್ಲಿ ಗೊಂದಲ ಉಂಟಾಗಿದ್ದು, ಗೊಂದಲಗೊಂಡ ಪ್ರಯಾಣಿಕರು, ಭದ್ರತಾ ಸಿಬ್ಬಂದಿಯೊಂದಿಗೆ ಆಕ್ರೋಶದ ನಡೆ ತೋರಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
ಜೈಪುರದಿಂದ ಬೆಂಗಳೂರಿಗೆ ಮೊದಲ ಬಾರಿಗೆ ಭೇಟಿ ನೀಡಿದ್ದ ರಾಕೇಶ್ ಶರ್ಮಾ, ಖಾಸಗಿ ಕ್ಯಾಬ್ ಬುಕ್ ಮಾಡಿದ್ದರು. "ನಾವು ಮಧ್ಯಾಹ್ನ ಸುಮಾರು ಊಟದ ಸಮಯದಲ್ಲಿ ವಿಮಾನ ಇಳಿದಾಗ, ನಮ್ಮ ಕ್ಯಾಬ್ ಟರ್ಮಿನಲ್ ಬಳಿ ಬರಲು ಸಾಧ್ಯವಿಲ್ಲ ಎಂದು ಸೂಚನೆ ನೀಡಲಾಯಿತು. ನನ್ನ ಪೋಷಕರು ಹಿರಿಯರು ಮತ್ತು ನನ್ನ ತಾಯಿಗೆ ಮೊಣಕಾಲು ನೋವಿದೆ. ಸುಮಾರು ಒಂದು ಕಿಲೋಮೀಟರ್ ನಡೆಯುವಂತೆ ಮಾಡಿದ್ದು ಅತ್ಯಂತ ಒತ್ತಡವನ್ನುಂಟು ಮಾಡಿತು" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಕ್ಯಾಬ್ ನಿರ್ವಾಹಕರು, ವಿಶೇಷವಾಗಿ ಖಾಸಗಿ ಮತ್ತು ಹೊರರಾಜ್ಯ ಚಾಲಕರು, ಈ ನೀತಿಯು ತಮ್ಮ ಜೀವನೋಪಾಯದ ಮೇಲೆ ನೇರವಾಗಿ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಅನೇಕ ಪ್ರಯಾಣಿಕರು ಮಧ್ಯದಲ್ಲಿಯೇ ಬುಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಇದರಿಂದ ಭಾರೀ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಹೋಮ್ ಲೋನ್ ಇಎಂಐ ಉಳಿಸಲು ಈ ಟ್ರಿಕ್ ಬಳಸಿ ನೋಡಿ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications