ನವದೆಹಲಿ, ಮಾರ್ಚ್ 25: Paytm ಬ್ರ್ಯಾಂಡ್ ನ ಮಾಲೀಕತ್ವ ಹೊಂದಿರುವ ಮತ್ತು ಅದನ್ನು ನಿರ್ವಹಿಸುತ್ತಿರುವ One97 ಕಮ್ಯುನಿಕೇಷನ್ಸ್ ಲಿಮಿಟೆಡ್ (OCL), ಶನಿವಾರದ ಎಕ್ಸ್‌ಚೇಂಜ್ ಫೈಲಿಂಗ್‌ನಲ್ಲಿ, ವ್ಯವಹಾರ ಹಿರಿಯ ಉಪಾಧ್ಯಕ್ಷ ಪ್ರವೀಣ್ ಶರ್ಮಾ ಅವರು ಮಾರ್ಚ್ 23 ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಔಪಚಾರಿಕವಾಗಿ ಘೋಷಿಸಿದ್ದಾರೆ. ಪ್ರವೀಣ್ ಶರ್ಮಾ ಅವರನ್ನು ಮಾರ್ಚ್ 31 ರಂದು ಅವರನ್ನು ಸೇವೆಯಿಂದ ಮುಕ್ತಗೊಳಿಸಲಾಗುತ್ತದೆ.
ಶರ್ಮಾ ತಮ್ಮ ವೃತ್ತಿಪರ ಜೀವನದಲ್ಲಿ ಉನ್ನತ ಅವಕಾಶಗಳನ್ನು ಪಡೆಯುವ ದೃಷ್ಟಿಯಿಂದ ಹುದ್ದೆ ತ್ಯಜಿಸುತ್ತಿದ್ದಾರೆ. Paytm ಗೆ ಸೇರುವ ಮೊದಲು, ಶರ್ಮಾ ಅವರು ಭಾರತ ಮತ್ತು ಏಷ್ಯಾ-ಪೆಸಿಫಿಕ್ ವಿಭಾಗವನ್ನು ಒಳಗೊಂಡ ಗೂಗಲ್‌ನಲ್ಲಿ ಒಂಬತ್ತು ವರ್ಷಗಳ ನಾಯಕತ್ವದ ಪಾತ್ರಗಳನ್ನು ನಿರ್ವಹಿಸಿದ್ದರು. ತಮ್ಮ ರಾಜೀನಾಮೆ ಪತ್ರದಲ್ಲಿ, ಶರ್ಮಾ ಅವರು " ವೃತ್ತಿ ಜೀವನದ ಇತರ ಅವಕಾಶಗಳನ್ನು ಮುಂದುವರಿಸುವ ಆಸಕ್ತಿಯನ್ನು ತಮ್ಮ ಹುದ್ದೆ ತ್ಯಜಿಸುತ್ತಿದ್ದೇನೆ. ನಾನು ಇಲ್ಲಿ ಅದ್ಭುತವಾದ ಸಮಯವನ್ನು ಹೊಂದಿದ್ದೇನೆ. ಭವಿಷ್ಯಕ್ಕಾಗಿ ನಿಮಗೆ ಶುಭ ಹಾರೈಸುತ್ತೇನೆ," ಎಂದು ಬರೆದುಕೊಂಡಿದ್ದಾರೆ.

ಇದಕ್ಕೂ ಮೊದಲು, ಫೆಬ್ರವರಿ 26 ರಂದು, ವಿಜಯ್ ಶೇಖರ್ ಶರ್ಮಾ ಅವರು ಮಂಡಳಿಯ ಮರುಸಂಘಟನೆಯನ್ನು ಸಕ್ರಿಯಗೊಳಿಸಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ (ಪಿಪಿಬಿಎಲ್) ಮಂಡಳಿಗೆ ರಾಜೀನಾಮೆ ನೀಡಿದ್ದರು. Paytm ನ ವ್ಯವಹಾರದ ವಿಭಾಗಗಳಲ್ಲಿ 25-50 ಪ್ರತಿಶತ ಉದ್ಯೋಗ ಕಡಿತ ಮಾಡಲಾಗುತ್ತದೆ ಎಂಬ ಊಹಾಪೋಹಗಳ ವರದಿಗಳನ್ನು Paytm ನಿರಾಕರಿಸಿದೆ ಇದೊಂದು "ಆಧಾರರಹಿತ" ವರದಿ ಎಂದು ಹೇಳಿದೆ.
"ನಮ್ಮ ಉದ್ಯೋಗಿಗಳ ಮೇಲೆ ಪರಿಣಾಮ ಬೀರುವ ಉದ್ಯೋಗ ವಜಾ ವರದಿ ಆಧಾರರಹಿತ ಮತ್ತು ತಪ್ಪುದಾರಿಗೆಳೆಯುವಂತಿವೆ. ನಾವು ನಮ್ಮ ಗಮನವನ್ನು ಸುಸ್ಥಿರ ಬೆಳವಣಿಗೆ, ನಾವೀನ್ಯತೆ ಮತ್ತು ನಮ್ಮ ಗ್ರಾಹಕರಿಗೆ ಅಸಾಧಾರಣ ಸೇವೆಯನ್ನು ಒದಗಿಸುವುದರ ಮೇಲೆ ಕೇಂದ್ರೀಕರಿಸಿದ್ದೇವೆ. ಅಧಿಕೃತ ಮೂಲಗಳಿಂದ ವಾಸ್ತವಿಕ ಮತ್ತು ಪರಿಶೀಲಿಸಿದ ಮಾಹಿತಿಯನ್ನು ಮಾತ್ರ ಪ್ರಕಟಿಸಿವಂತೆ ಹಾಗೂ ಊಹಾತ್ಮಕ ನಿರೂಪಣೆಗಳನ್ನು ಸಾರ್ವಜನಿಕರು ಕಡೆಗಣಿಸುವಂತೆ " Paytm ನ ವಕ್ತಾರರು ಹೇಳಿದ್ದಾರೆ.
ಜನವರಿ 31 ರಂದು, ಆರ್‌ಬಿಐPaytm Payments Bank Ltd (PPBL)ಗೆ ಪ್ರಮುಖ ವ್ಯಾಪಾರ ನಿರ್ಬಂಧಗಳನ್ನು ವಿಧಿಸಿತ್ತು. ಆರ್ಬಿಐ ನಿರ್ದೇಶನದಂತೆ ಮಾರ್ಚ್ 15 ರಿಂದ ಡೆಪಾಸಿಟ್, ಕ್ರೆಡಿಟ್ ವಹಿವಾಟು ಸೇವೆಗಳನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಸ್ಥಗಿತಗೊಳಿಸಲಿದೆ.


Click it and Unblock the Notifications