ಬೆಂಗಳೂರು, ಆಗಸ್ಟ್ 5: ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಹೋಟೆಲ್‌ಗಳಿಂದ ಹಿಡಿದು ಸಣ್ಣ ಗೂಡಂಗಡಿವರೆಗೆ ಎಲ್ಲೆಡೆಯೂ ಡಿಜಿಟಲ್ ಪಾವತಿ ಗ್ರಾಹಕರ ಸುಲಭ ಹಾಗೂ ಅನುಕೂಲಕರ ಪಾವತಿ ವ್ಯವಸ್ಥೆಯಾಗಿ ಬದಲಾಗಿದೆ. ಈ ಹಿನ್ನಲೆಯಲ್ಲಿ ಆನ್‌ಲೈನ್ ಪಾವತಿ ವ್ಯವಸ್ಥೆ ಕೂಡ ಮುನ್ನೆಲೆಗೆ ಬರುತ್ತಿದ್ದು, ಸರ್ಕಾರದಿಂದಲೂ ಈ ಮಾದರಿಯ ವ್ಯವಹಾರಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿರುವುದು ಗಮನಾರ್ಹ.
ಹೀಗಿರುವಾಗ, ಐಟಿ-ಬಿಟಿ ಕಂಪೆನಿಗಳಿಂದ ಸಾಕಷ್ಟು ತಂತ್ರಜ್ಞಾನ ಆಧಾರಿತ ಆವಿಷ್ಕಾರಗಳಿಗೆ ನೆಲೆ ನೀಡಿರುವ ಬೆಂಗಳೂರು ನಗರದಲ್ಲಿ ಪೇಟಿಎಂ ಎನ್‌ಎಫ್‌ಸಿ ಕಾರ್ಡ್ ಸೌಂಡ್‌ಬಾಕ್ಸ್ ಲಾಂಚ್ ಆಗಿದೆ. ಆ ಮೂಲಕ ಪೇಟಿಎಂನ ಎನ್‌ಎಫ್‌ಸಿ ಕಾರ್ಡ್ ಸೌಂಡ್‌ಬಾಕ್ಸ್ ಟ್ರೆಂಡಿಂಗ್‌ನಲ್ಲಿದೆ.

ಬೆಂಗಳೂರಿನಲ್ಲಿ ನಡೆದ ಪೇಟಿಎಂ ಎನ್‌ಎಫ್‌ಸಿ ಕಾರ್ಡ್ ಸೌಂಡ್‌ಬಾಕ್ಸ್ ಸಂಸ್ಥಾಪಕ ಹಾಗೂ ಸಿಇಒ ವಿಜಯ್ ಶೇಖರ್ ಶರ್ಮಾ, ರಾಮೇಶ್ವರಂ ಕೆಫೆಯ ಗೌರವ್ ಹಾಗೂ ಸ್ಥಳೀಯ ವ್ಯಾಪಾರಸ್ಥರು ಪಾಲ್ಗೊಂಡಿದ್ದು, ಎನ್‌ಎಫ್‌ಸಿ ಕಾರ್ಡ್ ಸೌಂಡ್‌ಬಾಕ್ಸ್ ಅನುಕೂಲತೆಗಳ ಬಗ್ಗೆ ಮಾಹಿತಿ ನೀಡಲಾಗಿದೆ.
ಪೇಟಿಎಂನ ಈ ವಿನೂತನ ಎನ್‌ಎಫ್‌ಸಿ ಕಾರ್ಡ್ ಸೌಂಡ್‌ಬಾಕ್ಸ್‌ನ ವೈಶಿಷ್ಟ್ಯತೆಗಳ ಬಗ್ಗೆ ವಿವರಣೆ ನೀಡಿರುವ ಗೌರವ್ ತಮ್ಮ ವ್ಯಾಪಾರ ಉದ್ಯಮದಲ್ಲಿಯೂ ಪಾವತಿ ವ್ಯವಸ್ಥೆಯನ್ನು ಹೇಗೆ ಸರಳೀಕರಿಸಿದೆ ಎಂದು ವಿವರಿಸಿದ್ದಾರೆ. ಈ ವಿನೂತನ ವ್ಯವಸ್ಥೆಯು ಪೇಮೆಂಟ್ ರಿಸೀವ್ ಆಗಿದೆಯೇ ಅಥವಾ ಫೈಲ್ಯೂರ್ ಆಗಿದೆಯೇ ಎಂಬುದನ್ನು ಖಚಿತಪಡಿಸುತ್ತದೆ. ಜತೆಗೆ ಪೇಮೆಂಟ್ ಟ್ರಾಕಿಂಗ್ ಹಾಗೂ ಅಕೌಂಟ್ ಸೆಟಲ್‌ಮೆಂಟ್‌ನ್ನು ಸುಲಭವಾಗಿ ನಿಭಾಯಿಸುತ್ತದೆ. ಇದನ್ನು ಇನ್ನುಮುಂದೆ ಮ್ಯಾನ್ಯುವಲಿ ಮಾಡುವ ಅಗತ್ಯವಿಲ್ಲ ಎಂದಿದ್ದಾರೆ ಗೌರವ್.
ಪೇಟಿಎಂನ ವಿನೂತನ ವ್ಯವಸ್ಥೆಯು ವ್ಯಾಪಾರ ಸ್ಥಳಗಳಲ್ಲಿ ಗ್ರಾಹಕರ ಹೆಚ್ಚಿನ ದಟ್ಟನೆ ಇರುವ ವೇಳೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಜತೆಗೆ ರೀಫಂಡ್ ವ್ಯವಸ್ಥೆಯು ಅತ್ಯುತ್ತಮವಾಗಿದೆ ಎಂದಿದ್ದಾರೆ. ಒಂದುವೇಳೆ ಗ್ರಾಹಕರು ನೆಟ್‌ವರ್ಕ್ ಸಮಸ್ಯೆ ಎದುರಿಸಿದರೆ ಕಾರ್ಡ್ ಪೇಮೆಂಟ್ ವ್ಯವಸ್ಥೆಯನ್ನೂ ಸರಳೀಕರಣಗೊಳಿಸಲಾಗಿದೆ ಎಂದು ಗೌರವ್ ಹೇಳಿದ್ದಾರೆ.
ಬೆಂಗಳೂರಿನ ಈ ರೀತಿ ಆವಿಷ್ಕಾರದ ಸ್ಫೂರ್ತಿಯನ್ನು ಅವರು ಶ್ಲಾಘಿಸಿದ್ದಾರೆ. ಯಾವುದೇ ತಂತ್ರಜ್ಞಾನ ವ್ಯವಸ್ಥೆ ಇರಲಿ; ಬೆಂಗಳೂರು ಹೇಗೆ ಅದನ್ನು ಮುಂಚೂಣಿಯಲ್ಲಿ ಕೊಂಡೊಯ್ಯುತ್ತಿರುವ ರೀತಿಗೆ ಅಭಿನಂದನೆ ಸಲ್ಲಿಸುತ್ತೇನೆ. ಇದರಿಂದ ಭವಿಷ್ಯದಲ್ಲಿ ದೇಶದ ಶೇ.90ರಷ್ಟು ವ್ಯಾಪಾರಸ್ಥರು ತಮ್ಮ ವ್ಯವಹಾರಗಳನ್ನು ಮೊಬೈಲ್ ಹಾಗೂ ಡಿಜಿಟಲ್ ಪೇಮೆಂಟ್ ಮೂಲಕ ಮಾಡಬಹುದು ಎನ್ನುವ ವಿಶ್ವಾಸವಿದೆ ಎನ್ನುತ್ತಾರೆ ಗೌರವ್.
ಎನ್‌ಎಫ್‌ಸಿ ಕಾರ್ಡ್ ಸೌಂಡ್‌ಬಾಕ್ಸ್ ತಂತ್ರಜ್ಞಾನ ವ್ಯವಸ್ಥೆಯು ವಿನೂತನ ಫೀಚರ್‌ಗಳೊಂದಿಗೆ ಗ್ರಾಹಕರಿಗೆ ಹಾಗೂ ವ್ಯಪಾರಸ್ಥರಿಗೆ ವಿನೂತನ ಅನುಭವವನ್ನು ನೀಡಲಿದೆ. ಇದು ಸಣ್ಣ ವ್ಯಾಪಾರಸ್ಥರಿಗೂ ಕ್ರೆಡಿಟ್/ಡೆಬಿಟ್ ಹಾಗೂ ಯುಪಿಐ ಮೂಲಕ ಪಾವತಿ ಸ್ವೀಕರಿಸುವುದಕ್ಕೆ ಅನುಕೂಲ ಕಲ್ಪಿಸಲಿದೆ. ಗ್ರಾಹಕರು ಬಹಳ ಸುಲಭವಾಗಿ ಕಾರ್ಡ್ ಟ್ಯಾಪ್ ಮಾಡುವ ಮೂಲಕ ಅಥವಾ ಕ್ಯೂಆರ್ ಕೋಡಿ ಅನ್ನು ಬಳಸಿಕೊಂಡು ಪಾವತಿಗಳನ್ನು ಮಾಡಬಹುದಾಗಿದೆ. ಈ ಹೊಸ ಸಾಧನವು ಬೆಂಗಳೂರಿನ ಡಿಜಿಟಲ್ ಆರ್ಥಿಕತೆಗೆ ದೊಡ್ಡ ಮಟ್ಟಿನ ಉತ್ತೇಜನ ನೀಡುವುದರಲ್ಲಿ ಅನುಮಾನವಿಲ್ಲ. ಆ ಮೂಲಕ ಗ್ರಾಹಕರು ಹಾಗೂ ವ್ಯಾಪಾರಸ್ಥರ ನಡುವಿನ ವ್ಯಾಪಾರ-ವಹಿವಾಟು ಹಾಗೂ ಪಾವತಿ ವ್ಯವಸ್ಥೆಯನ್ನು ಮತ್ತಷ್ಟು ಸರಳೀಕರಿಸಲಿದೆ.


Click it and Unblock the Notifications