ಸ್ವಿಗ್ಗಿ, ಜೊಮ್ಯಾಟೋ, ಫ್ಲಿಪ್‌ಕಾರ್ಟ್, ಜೆಪ್ಟೋ(Zepto) ಹೀಗೆ ಅನೇಕ ಇಕಾಮರ್ಸ್ ಕಂಪನಿಗಳು ತನ್ನ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುವ ನಿಟ್ಟಿನಲ್ಲಿ ಡೆಲಿವರಿ ಬಾಯ್ಸ್‌ಗಳನ್ನು ಹೊಂದಿರುತ್ತದೆ. ಝೆಪ್ಟೋ ತನ್ನ ವೇಗದ ವಿತರಣಾ ವ್ಯವಸ್ಥೆಯಿಂದಾಗಿ ಭಾರೀ ಜನಪ್ರಿಯತೆಯನ್ನು, ಲಕ್ಷಗಟ್ಟಲೆ ಗ್ರಾಹಕರನ್ನು ಹೊಂದಿದೆ. ಹಾಗಿದ್ರೆ ಈ ಜನಪ್ರಿಯ ಇಕಾಮರ್ಸ್ ಪ್ಲಾಟ್‌ಫಾರ್ಮ್ (E-commerce Platform) ಆಗಿರುವ ಜೆಪ್ಟೋದಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್ಸ್ (Delivery Boys) ಎಷ್ಟು ಹಣ ಸಂಪಾದಿಸುತ್ತಾರೆ ಗೊತ್ತಾ? ಸದ್ಯ ಈ ಕುರಿತು ಸೋಷಿಯಲ್ ಮೀಡಿಯಾಗಳಲ್ಲೂ ಭಾರೀ ಚರ್ಚೆಯಾಗುತ್ತಿದೆ.

ಹೌದು, ಝೆಪ್ಟೋ ಡೆಲಿವರಿ ಬಾಯ್ಸ್‌ಗಳ ಸಂಬಳದ ಬಗ್ಗೆ ಭಾರೀ ಚರ್ಚೆ ನಡೆಯುತ್ತಿದ್ದು, ಅವರ ಸಂಬಳ ಕೇಳಿ ಕೆಲವರು ಬೆಚ್ಚಿಬಿದ್ದಿದ್ದಾರೆ. ಹಾಗಿದ್ರೆ ಅಷ್ಟಕ್ಕೂ ಝೆಪ್ಟೋ ಡೆಲಿವರಿ ಬಾಯ್ಸ್‌ಗಳು ಎಷ್ಟು ಸಂಪಾದನೆ ಮಾಡುತ್ತಾರೆ ಗೊತ್ತಾ?
ಬೆಂಗಳೂರಿನ ಜೆಪ್ಟೋ ಡೆಲಿವರಿ ಬಾಯ್ ಒಬ್ಬರು ತಮ್ಮ ಗಳಿಕೆಯ ಬಗ್ಗೆ ಮಾಹಿತಿ ಶೇರ್ ಮಾಡಿಕೊಂಡ ನಂತರ ಈ ಚರ್ಚೆ ಆರಂಭವಾಯಿತು. ಕೇವಲ ಶ್ರಮ ಮಾತ್ರವಲ್ಲದೆ, ಸರಿಯಾದ ಅವಕಾಶಗಳನ್ನು ಬಳಸಿಕೊಂಡರೆ ಯಶಸ್ಸು ಖಂಡಿತ ಸಿಗುತ್ತೆ ಎಂಬುದಕ್ಕೆ ಇವರ ಮಾತುಗಳೇ ಸಾಕ್ಷಿ.
ಡೆಲಿವರಿ ಬಾಯ್ಸ್ ಸಂಪಾದನೆ ಸೀಕ್ರೆಟ್ ರಿವೀಲ್:
ಡೆಲಿವರಿ ಬಾಯ್ ರೆಡ್ಡಿಟ್‌ನಲ್ಲಿ ತಮ್ಮ ಗಳಿಕೆಯ ಕುರಿತು ಪೋಸ್ಟ್ ಮಾಡಿದ್ದು, ಬೆಳಿಗ್ಗೆ 10 ರಿಂದ ರಾತ್ರಿ 10 ರವರೆಗೆ 12 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ ಎಂದು ತಿಳಿಸಿದ್ದಾರೆ. ಒಂದು ವಾರದಲ್ಲಿ, ಅವರು 387 ಆರ್ಡರ್‌ಗಳನ್ನು ತಲುಪಿಸಿದ್ದಾರೆ ಮತ್ತು ಇಂಧನ ವೆಚ್ಚಗಳನ್ನು ಹೊರತುಪಡಿಸಿ, ವಾರಕ್ಕೆ 18,906 ರೂ.ಗಳನ್ನು ಸಂಪಾದಿಸಿದ್ದಾರೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಅವರ ಗಳಿಕೆಯನ್ನು ಹೆಚ್ಚಿಸಲು ಮುಖ್ಯ ಕಾರಣ ಮಳೆ ಎಂದು ಹೇಳಿದ್ದಾರೆ. "ಮಳೆಯ ಸಮಯದಲ್ಲಿ ಜನರು ಹೆಚ್ಚು ಆರ್ಡರ್‌ಗಳನ್ನು ನೀಡಿದ್ದಾರೆ, ಏಕೆಂದರೆ ಈ ಸಂದರ್ಭದಲ್ಲಿ ಹೊರಗೆ ಹೋಗುವುದು ಕಷ್ಟ" ಎಂದು ಅವರು ಹೇಳಿಕೊಂಡಿದ್ದಾರೆ. ಅಂತರ ವಾರದಲ್ಲಿ 21,000 ರೂ.ಗಳನ್ನು ಗಳಿಸುವುದಾಗಿಯೂ ಅವರು ಹೇಳಿದ್ದಾರೆ.
ಕೇವಲ ಮೂರು ದಿನಗಳಲ್ಲೂ 12,000 ರೂ.ಗಳನ್ನು ಗಳಿಸಿದ್ದೀನಿ ಎಂದು ಹೇಳಿರುವ ಅವರು, ಆ ವಾರದಲ್ಲಿ ಸತತ ಎರಡು ದಿನಗಳ ಕಾಲ ಸಂಜೆ 6 ರಿಂದ ರಾತ್ರಿ 11 ರವರೆಗೆ ಮಳೆ ಬಂದ ಕಾರಣ ಇಷ್ಟು ಸಂಪಾದಿಸಿದ್ದೇನೆ ಎಂದು ಹೇಳಿದ್ದಾರೆ. ಮಳೆ ಬಂದರೆ ಅವಕಾಶಗಳು ಜಾಸ್ತಿ ಸಿಗುತ್ತದೆ, ಮತ್ತು ಅದರಿಂದಲೇ ಹೆಚ್ಚು ಹಣ ಗಳಿಸಲು ಸಾಧ್ಯವಾಯ್ತು ಎಂದು ಹೇಳಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್!
ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಅನೇಕರು ಜೆಪ್ಟೋ ವಿತರಣಾ ಸಿಬ್ಬಂದಿಯ ಇಂತಹ ಆದಾಯದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ. "ಇಷ್ಟು ಗಳಿಸುತ್ತೀರಾ? ಜೆಪ್ಟೋ ನಿಜವಾಗಿಯೂ ಇಷ್ಟು ಪೇಮೆಂಟ್ ಕೊಡುತ್ತಾ?" ಎಂದು ಬಳಕೆದಾರರೊಬ್ಬರು ಆಶ್ಚರ್ಯದಿಂದ ಕೇಳಿದ್ದಾರೆ.
ಹಲವರಿಗೆ ಸ್ಪೂರ್ತಿ!
ಇನ್ನು ಡೆಲಿವರಿ ಮಾಡುವ ಕೆಲಸದಿಂದ, ಶ್ರಮ ಮತ್ತು ಸರಿಯಾದ ಅವಕಾಶವನ್ನು ಬಳಸಿಕೊಂಡರೆ ಉತ್ತಮ ಆದಾಯವನ್ನು ತರಬಹುದು ಎಂದು ಈ ಕಥೆ ಸೂಚಿಸುತ್ತದೆ. ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ, ಹೆಚ್ಚಿನ ಬೇಡಿಕೆಯಿರುವ ಸ್ಥಳಗಳಲ್ಲಿ, ಮಳೆಯಂತಹ ಹವಾಮಾನ ಪರಿಸ್ಥಿತಿಗಳಲ್ಲಿ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರೆ ಉತ್ತಮ ಆದಾಯ ಗಳಿಸಬಹುದು.
ಜೆಪ್ಟೋದಂತಹ ಅನೇಕ ಇಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಡೆಲಿವರಿ ಬಾಯ್ಸ್‌ಗಳಿಗೆ ಬೋನಸ್‌ಗಳು ಸಹ ಸಿಗುತ್ತವೆ, ಇದು ಅವರ ಸಂಪಾದನೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.


Click it and Unblock the Notifications