ಫೆಬ್ರವರಿ ಅಂತ್ಯದ ವೇಳೆ ಅಮೆರಿಕ, ಇಸ್ರೇಲ್ ಜಂಟಿಯಾಗಿ ಇರಾನ್ (America-Israel-Iran War) ಮೇಲೆ ನಡೆಸಿದ ದಾಳಿ, ಇದೀಗ ಯುದ್ಧದ ಭೀತಿಯನ್ನು ಸೃಷ್ಟಿಸಿದೆ. ಅದರಲ್ಲೂ ಇರಾನ್ ಸುಪ್ರೀಂ ನಾಯಕ ಆಯತೊಲ್ಲಾ ಖಮೇನಿ ಅವರ ಹತ್ಯೆಯ ನಂತರ, ರೊಚ್ಚಿಗೆದ್ದ ಇರಾನ್, ಇಸ್ರೇಲ್ ಮತ್ತು ಅಮೆರಿಕ ಹಲವು ಪ್ರದೇಶಗಳ ಮೇಲೆ ಪ್ರತೀಕಾರವಾಗಿ ಮಿಸೈಲ್, ಡ್ರೋನ್ ಮೂಲಕ ದಾಳಿ ನಡೆಸುತ್ತಲೇ ಇದೆ. ಇದೀಗ ದಿನ ಕಳೆದಂತೆ ಮಧ್ಯಪ್ರಾಚ್ಯದಲ್ಲಿ ಸಂಘರ್ಷ ತೀವ್ರಗೊಂಡಿದ್ದು, ಪರ್ಷಿಯನ್ ಗಲ್ಫ್ ಪ್ರದೇಶದಲ್ಲಿ ತೀವ್ರ ಆತಂಕ ಮನೆ ಮಾಡಿದೆ. ಈಗಾಗಲೇ ಇರಾನ್ ಪ್ರಮುಖ ಹಾರ್ಮುಜ್ ಜಲಸಂಧಿಯನ್ನು (Strait Of Hormuz) ಮುಚ್ಚಿದ್ದು, ಜಾಗತಿಕ ತೈಲ ಆಮದು, ಬೆಲೆಯಲ್ಲಿ ಭಾರೀ ಪರಿಣಾಮ ಬೀರಿದೆ.

ಅತ್ತ ಕಚ್ಚಾ ತೈಲ ಸಾಗಣೆಯಲ್ಲಿ ಉಂಟಾಗಿರುವ ಅಡಚಣೆಯಿಂದಾಗಿ ಕ್ರೂಡ್ ಆಯಿಲ್ ಬೆಲೆಗಳು ಭಾರೀ ಹೆಚ್ಚಳ ಕಂಡಿದೆ. ಬ್ರೆಂಟ್ ಕ್ರೂಡ್ ಬೆಲೆ $110 ಮೀರಿದ್ದು, WTI ಕ್ರೂಡ್ ಆಯಿಲ್ ಸಹ $100-110 ರ ಶ್ರೇಣಿಯಲ್ಲಿ ವ್ಯಾಪಾರ ನಡೆಸುತ್ತಿದೆ. 2022 ರ ನಂತರ ಅತಿದೊಡ್ಡ ಏರಿಕೆ ಇದಾಗಿದ್ದು, ಸದ್ಯ ಹಲವು ದೇಶಗಳ ಆರ್ಥಿಕತೆ ಮೇಲೆ ಭಾರೀ ಪ್ರಭಾವ ಬೀರುತ್ತಿದೆ.
ಕಚ್ಚಾ ತೈಲದ ಬೆಲೆ ಏರಿಕೆಗೆ ಕಾರಣವೇನು?
ಅಮೆರಿಕ ಮತ್ತು ಇಸ್ರೇಲ್‌ನ ದಾಳಿಗಳಿಗೆ ಪ್ರತೀಕಾರವಾಗಿ ಇರಾನ್ ನಿರಂತರ ದಾಳಿ ನಡೆಸುತ್ತಲೇ ಇದೆ. ಈ ಬೆನ್ನಲ್ಲೇ ಇರಾನ್ ಸ್ಟ್ರೇಟ್ ಆಫ್ ಹಾರ್ಮುಜ್ ಮೂಲಕ ಸಾಗುತ್ತಿದ್ದ ಜಾಗತಿಕ ಕಚ್ಚಾ ತೈಲದ ಸುಮಾರು 20% ಸರಬರಾಜು ನಿಲ್ಲಿಸಲಾಗಿದೆ. ಇದರಿಂದ ಗಲ್ಫ್ ದೇಶದ ಉತ್ಪಾದನೆಯ ಮೇಲೆ ಪ್ರಭಾವ ಬೀರಿದ್ದು, ಹಲವು ದೇಶಗಳು ಉತ್ಪಾದನೆಯನ್ನು ಕಡಿಮೆ ಮಾಡಿದೆ. ಈ ಮಧ್ಯೆ ಕತಾರ್ ಕೂಡಾ, ಯುದ್ಧ ಇದೇ ರೀತಿ ಮುಂದುವರೆದರೆ ಕಚ್ಚಾ ತೈಲದ ಬೆಲೆ $150 ಕ್ಕೆ ತಲುಪಬಹುದು ಎಂದು ಎಚ್ಚರಿಕೆ ನೀಡಿದೆ.
ಮಧ್ಯಪ್ರಾಚ್ಯದ ಸಂಘರ್ಷ, ಭಾರತದ ಮೇಲೆ ಪರಿಣಾಮ:
ಜಾಗತಿಕ ಮಾರುಕಟ್ಟೆಯಲ್ಲಿ ಭಾರತವು ಎರಡನೇ ಅತಿದೊಡ್ಡ ಕಚ್ಚಾ ತೈಲ ಆಮದುದಾರ ದೇಶವೆಂದು ಗುರುತಿಸಿಕೊಂಡಿದೆ. ದೇಶದ ಆರ್ಥಿಕ ಪ್ರಗತಿ, ಜನಸಂಖ್ಯಾ ಹೆಚ್ಚಳ ಮತ್ತು ಇಂಧನ ಬೇಡಿಕೆಯಿಂದಾಗಿ ಕಚ್ಚಾ ತೈಲದ ಆಮದು ಪ್ರಮಾಣ ವರ್ಷ ವರ್ಷ ಹೆಚ್ಚುತ್ತಲೇ ಇದೆ. ಅದರಲ್ಲೂ ಭಾರತಕ್ಕೆ ಬರುವ ಕಚ್ಚಾ ತೈಲದಲ್ಲಿ 40-50% ಆಮದು ಹಾರ್ಮುಜ್ ಜಲಸಂಧಿಯಿಂದಲೇ ಬರುತ್ತದೆ. ಅದರಲ್ಲೂ ಮುಖ್ಯವಾಗಿ ಇರಾಕ್, ಸೌದಿ ಅರೇಬಿಯಾ, ಯುಎಇ ಮತ್ತು ಕುವೈತ್ ದೇಶಗಳಿಂದ ಹೆಚ್ಚು ಕಚ್ಚಾ ತೈಲ ಆಮದು ಆಗುತ್ತದೆ. ಆದ್ರೆ ಇದೀಗ ಹಾರ್ಮುಜ್ ಜಲಸಂಧಿಯ ಮುಚ್ಚುವಿಕೆಯಿಂದ ಕಚ್ಚಾ ತೈಲದ ಸಾಗಾಟ ಭಾರೀ ಕಮ್ಮಿಯಾಗಿದೆ. ಈ ಹಿನ್ನೆಲೆ ಭಾರತಕ್ಕೂ ಸಂಕಷ್ಟ ಎದುರಾಗಿದೆ.
ಸದ್ಯ ದೇಶದಲ್ಲಿ ಇಂಧನ, ಕಚ್ಚಾ ತೈಲದಲ್ಲಿ ಕೊರತೆಯಿಲ್ಲ ಎಂದು ಸರ್ಕಾರ ಹೇಳಿದ್ದರೂ, ಅತ್ತ ಸರ್ಕಾರ ಪರ್ಯಾಯ ಮೂಲಗಳನ್ನು ಕಂಡುಕೊಂಡಿದ್ದರೂ, ಕಚ್ಚಾ ತೈಲದ ಬೆಲೆ ಇದೇ ರೀತಿ ಏರಿಕೆ ಕಂಡರೆ, ಗ್ರಾಹಕರ ಮೇಲೆಯೂ ಪರಿಣಾಮ ಬೀರಬಹುದು ಎಂದು ವಿಶ್ಲೇಷಕರು ಎಚ್ಚರಿಕೆ ನೀಡಿದ್ದಾರೆ. ಅದರಲ್ಲೂ ಪೆಟ್ರೋಲ್, ಡೀಸೆಲ್ ಬೆಲೆಗಳಿಂದ ಹಿಡಿದು ವಿಮಾನ ದರಗಳು ಮತ್ತು ಹಣದುಬ್ಬರದವರೆಗೆ ಎಲ್ಲವೂ ದುಬಾರಿಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.
ಏರಿಕೆಯಾಗುತ್ತಾ ಪೆಟ್ರೋಲ್-ಡೀಸೆಲ್ ಬೆಲೆ?
ಭಾರತ ಸುಮಾರು 85% ದಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳೂತ್ತದೆ. ಆದ್ದರಿಂದ ದೇಶೀಯ ಇಂಧನ ಬೆಲೆಗಳು, ಜಾಗತಿಕ ತೈಲ ಮಾರುಕಟ್ಟೆ ಮೇಲೆ ಅವಲಂಬಿಸಿರುತ್ತದೆ. ಪ್ರಸ್ತುತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿದೆ. ಆದರೆ ಸಂಘರ್ಷ ಇದೇ ರೀತಿ ದಿನ ಹೋದಂತೆ ತೀವ್ರವಾದರೆ 5-15 ರೂ.ನಷ್ಟು ಏರಿಕೆಯಾಗಬಹುದು ಎಂದು ವರದಿಯಾಗಿದೆ.
ವಿಮಾನ ಟಿಕೆಟ್ ದರ ಏರಿಕೆಯಾಗುತ್ತಾ?
ತೈಲ ಬೆಲೆ ಏರಿಕೆಯ ಪರಿಣಾಮ ವಿಮಾನಯಾನದ ಮೇಲೂ ಪ್ರಭಾವ ಬೀರುವ ಸಾಧ್ಯತೆ ಇದೆ ಎನ್ನಲಾಗಿದೆ. ಏವಿಯೇಷನ್ ಟರ್ಬೈನ್ ಫ್ಯೂಯಲ್ (ATF) ಬೆಲೆ ಏರಿಕೆಯಾಗುವುದರಿಂದ ವಿಮಾನ ದರಗಳು ಸಹ ಏರಿಕೆಯಾಗುವ ಸಾಧ್ಯತೆ ಇದೆ. ಈಗಾಗಲೇ ದೇಶೀಯ ಮತ್ತು ಅಂತರರಾಷ್ಟ್ರೀಯ ಫ್ಲೈಟ್‌ಗಳಲ್ಲಿ ದರ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಆದರೆ ಸರ್ಕಾರ ಸದ್ಯಕ್ಕೆ ಕ್ರೂಡ್ ಆಯಿಲ್ ಮತ್ತು ಪೆಟ್ರೋಲಿಯಂ ಉತ್ಪನ್ನಗಳು ಸಾಕಷ್ಟು ಸಂಗ್ರಹವಿದೆ ಎನ್ನಲಾಗಿದೆ. ಆದ್ರೆ ಯುದ್ಧದ ಭೀತಿ ಹೆಚ್ಚಾದರೆ, ಏರಿಕೆ ಅನಿವಾರ್ಯ ಎಂಬ ಎಚ್ಚರಿಕೆಯನ್ನೂ ನೀಡಿದೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಮಿಂತ್ರಾ ಫ್ಯಾಶನ್ ಕಾರ್ನಿವಲ್: ಇಂದೇ ಕೊನೆಯ ಅವಕಾಶ, ತಪ್ಪಿಸಿಕೊಳ್ಳಬೇಡಿ!

NSE ಆಯಿಲ್ ಫ್ಯೂಚರ್ಸ್ ಆರಂಭ: ಹೂಡಿಕೆದಾರರಿಗೆ ಸಿಗಲಿದೆ ಭಾರಿ ಲಾಭ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಸಗಟು ಬೆಲೆ ಸೂಚ್ಯಂಕ: ನಿಮ್ಮ ಜೇಬಿಗೆ ಕಾದಿದೆಯಾ ಶಾಕ್?

ಚಿನ್ನದ ಬೆಲೆ ಏರಿಕೆ: ಅಕ್ಷಯ ತೃತೀಯಕ್ಕೆ ಹೂಡಿಕೆ ಮಾಡುವುದು ಹೇಗೆ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಅಂಬೇಡ್ಕರ್ ಜಯಂತಿ ರಜೆ: ನಿಮ್ಮ ಎಸ್ಐಪಿ ಹಣಕ್ಕೆ ಕಾದಿದೆಯಾ ಸಂಕಷ್ಟ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಚಿನ್ನದ ಬೆಲೆ ಸ್ಥಿರ: ಖರೀದಿಗೆ ಇದೇ ಸುವರ್ಣಾವಕಾಶವೇ?



Click it and Unblock the Notifications