ಡಿಜಿಟಲ್ ಹಾಗೂ ಭೌತಿಕ ಚಿನ್ನದ ನಡುವಿನ ಹೂಡಿಕೆಯಲ್ಲಿ ಯಾವುದು ಉತ್ತಮ?

ಚಿನ್ನ ಹಾಗೂ ಭೂಮಿಯ ಮೇಲಿನ ಹೂಡಿಕೆಗಳು ಎಂದಿಗೂ ನಿರಾಶೆ ತರುವುದಿಲ್ಲ ಎಂಬ ಮಾತು ಆರ್ಥಿಕ ವಲಯದಲ್ಲಿ ಚಾಲ್ತಿಯಲ್ಲಿರುವುದು ಸಾಮಾನ್ಯ ಸಂಗತಿ. ಅದರಲ್ಲೂ ಚಿನ್ನದ ವಿಚಾರಕ್ಕೆ ಬಂದರೆ ಅದರ ಮೇಲಿನ ಹೂಡಿಕೆಗಳು ಸಮಯ ಕಳೆದಂತೆಲ್ಲಾ ಹೆಚ್ಚು ಲಾಭ ತಂದುಕೊಡುತ್ತದೆ. ಇನ್ನು ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವುದು ಇಂದು ಹೆಚ್ಚು ಚಾಲ್ತಿಯಲ್ಲಿದೆ. ಅದೂ ಅಲ್ಲದೆ ಸಾಂಪ್ರದಾಯಿಕವಾದ ವಸ್ತು ರೂಪದಲ್ಲಿ ಸಂಗ್ರಹ ವಿಧಾನವನ್ನು ಕೂಡ ಜನತೆ ಮುಂದುವರೆಸುತ್ತಿದ್ದಾರೆ. ಇನ್ನು ಸದ್ಯ ಚಿನ್ನವನ್ನು ಡಿಜಿಟಲ್ ರೂಪದಲ್ಲಿ ಸಂಗ್ರಹಿಸಿಡುವುದರಲ್ಲಿ ಹೂಡಿಕೆ ಮಾಡುವುದು ಉತ್ತಮವೋ ಅಥವಾ ಸಾಂಪ್ರದಾಯಿಕ ರೀತಿಯಲ್ಲಿ ಸಂಗ್ರಹಿಸಿ ಹೂಡಿಕೆಗೆ ಇಡುವುದು ಒಳಿತೋ ಎಂಬ ಪ್ರಶ್ನೆ ಮೂಡುವುದು ಸಹಜವೇ ಆಗಿದೆ. ನೇರ ಉತ್ತರ ಹೇಳುವುದಾದರೆ ಎರಡೂ ಕೂಡ ಉತ್ತಮ ಲಾಭ ತಂದು ಕೊಡಲಿದ್ದು, ಅಂಥ ಹೇಳಿಕೊಳ್ಳುವಂಥ ಯಾವುದೇ ವಿಶೇಷವಿಲ್ಲ ಎನ್ನಬಹುದು. ಆದರೆ ಭೌತಿಕ ರೂಪದಲ್ಲಿ ಚಿನ್ನವನ್ನು ಹೂಡಿಕೆ ಮಾಡುವುದು ತುಸು ದುಬಾರಿಯಾಗಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಅಲ್ಪ ಪ್ರಮಾಣದ ಮೂಲಕ ಆರಂಭಿಸಬಹುದು ಎಂಬುದು ತಜ್ಞರು ನೀಡುವ ಸಲಹೆಯಾಗಿದೆ. ದೀರ್ಘಕಾಲೀನ ಮೌಲ್ಯದ ಸ್ಥಿರತೆಯೊಂದಿಗೆ ಹೂಡಿಕೆಯ ಅವಕಾಶವನ್ನು ಹುಡುಕುತ್ತಿರುವ ಹೂಡಿಕೆದಾರರು ನಿಜವಾದ ಚಿನ್ನವನ್ನು ಸಾರ್ವತ್ರಿಕ ಆಸ್ತಿಯಾಗಿ ಮುಂದುವರಿಸುವುದರಿಂದ ಆಕರ್ಷಕವಾಗಿ ಕಾಣುತ್ತದೆ.

ಭೌತಿಕ ಚಿನ್ನವು ಶ್ರೇಷ್ಠ ಹೂಡಿಕೆಯೇ?

ಇಂದಿನ ಡಿಜಿಟಲ್ ಕಾಲಘಟ್ಟದಲ್ಲೂ ಭೌತಿಕ ಚಿನ್ನವು ಅನೇಕ ಜನರು ಪ್ರಿಯವಾಗಿರುವ ಒಂದು ಶ್ರೇಷ್ಠ ಹೂಡಿಕೆಯಾಗಿ ಉಳಿದಿದೆ. ಈ ಶಾಶ್ವತವಾದ ಆಕರ್ಷಣೆಯು ಗಣನೀಯ ಪ್ರಮಾಣದ ಹಿಡುವಳಿಗಳ ಬೆಂಬಲ ಹೊಂದಿದೆ. ಇನ್ನು ಭಾರತವು ಅತಿ ಹೆಚ್ಚು ಚಿನ್ನವನ್ನು ಹೊಂದಿರುವ ಮೊದಲ ಹತ್ತು ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರಸ್ತುತ ನವೆಂಬರ್ 2024 ರ ಹೊತ್ತಿಗೆ ಭಾರತದ ಬಳಿ ಬರೊಬ್ಬರಿ 854 ಟನ್‌ಗಳಷ್ಟು ಚಿನ್ನವಿದೆ. ಇನ್ನು ಟ್ರೇಡೆಜಿನಿಯ ಸಿಒಒ ತ್ರಿವೇಶ್ ಡಿ. ಅವರ ಪ್ರಕಾರ, ಅನೇಕ ವ್ಯಕ್ತಿಗಳು ವಿವಿಧ ಉದ್ದೇಶಗಳಿಗಾಗಿ ಭೌತಿಕ ಚಿನ್ನವನ್ನು ಬಯಸುತ್ತಾರೆ. ಉದಾಹರಣೆಗೆ ಆಭರಣಗಳನ್ನು ತಯಾರಿಸುವುದು, ಉಡುಗೊರೆ ನೀಡುವುದು, ಸಾಲಗಳಿಗೆ ಸಂದರ್ಭದಲ್ಲಿ, ಹಣದುಬ್ಬರದ ಸಮಯದಲ್ಲಿ ಮುಂತಾದ ಸವಾಲಿನ ಸಮಯದಲ್ಲಿ ಚಿನ್ನವನ್ನು ಭೌತಿಕ ರೂಪದಲ್ಲಿ ಹೊಂದಲು ಬಯಸುತ್ತಾರೆ. ಭೌತಿಕ ಚಿನ್ನವನ್ನು ಖರೀದಿಸಲು ಖರೀದಿ ಬೆಲೆಯನ್ನು ಹೆಚ್ಚಿಸುವ GST ಜೊತೆಗೆ 24% ವರೆಗೆ ತಲುಪಬಹುದಾದ ಶುಲ್ಕಗಳು ಸೇರಿದಂತೆ ಸಂಬಂಧಿಸಿದ ವೆಚ್ಚಗಳು ಹೆಚ್ಚಾಗಿರಬಹುದು. ಈ ಮುಂತಾದ ನ್ಯೂನತೆಗಳ ಹೊರತಾಗಿಯೂ ನಿಮ್ಮ ಹೂಡಿಕೆಯನ್ನು ರಕ್ಷಿಸಲು ಸುರಕ್ಷಿತ ಲಾಕರ್‌ಗಳು ಅಥವಾ ವಿಮೆಯ ಅಗತ್ಯವಿದೆ. ಹಾಗಾಗಿ ಭೌತಿಕ ಚಿನ್ನದ ಸಾಂಸ್ಕೃತಿಕ ಮತ್ತು ಸೌಂದರ್ಯದ ಮೌಲ್ಯವು ಅನೇಕರಿಗೆ ಅದನ್ನು ಭರಿಸಲಾಗದಂತೆ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಡಿಜಿಟಲ್ vs ಭೌತಿಕ ಚಿನ್ನ: ಹೂಡಿಕೆಯಲ್ಲಿ ಯಾವುದು ಉತ್ತಮ?

ಡಿಜಿಟಲ್ ಚಿನ್ನ ಮತ್ತು ಅದರ ಪ್ರಯೋಜನಗಳು

ಇನ್ನು ಡಿಜಿಟಲ್ ರೂಪದ ಚಿನ್ನ ಹಾಗೂ ಅವುಗಳ ಪ್ರಯೋಜನಗಳ ಬಗ್ಗೆ ಮಾಹಿತಿ ನೀಡಿರುವ ತ್ರಿವೇಶ್ ಅವರು, ಡಿಜಿಟಲ್ ಚಿನ್ನದ ಪ್ರಾಥಮಿಕ ಪ್ರಯೋಜನವೆಂದರೆ ಅದು ಶೇಖರಣಾ ಸಂದರ್ಭದಲ್ಲಿ ನಮ್ಮ ಆತಂಕವನ್ನು ಸಂಪೂರ್ಣವಾಗಿ ನಿವಾರಿಸುತ್ತದೆ. ಅಂದರೆ ಡಿಜಿಟಲ್ ರೂಪದ ಚಿನ್ನದಲ್ಲಿ ಚಿನ್ನಗಳು ಕಳವಾಗುವ ಯಾವುದೇ ಭಯ ಇರುವುದಿಲ್ಲ. ಅಲ್ಲದೆ ಮೆಚ್ಯೂರಿಟಿ ತನಕ SGB ಗಳು 2.5% ರಷ್ಟು ವಾರ್ಷಿಕ ಬಡ್ಡಿ ದರವನ್ನು ನೀಡುತ್ತವೆ. ಅಲ್ಲದೆ ಸಂಸ್ಥೆಗಳು ತೆರಿಗೆ-ಮುಕ್ತ ಬಂಡವಾಳ ಲಾಭವನ್ನು ಒದಗಿಸುತ್ತಾರೆ. ಆದರೆ ಇವುಗಳಲ್ಲಿ ಹಿನ್ನಡೆ ಕೂಡ ಇವೆ. ಎಸ್‌ಜಿಬಿಗಳು ಲಾಕ್-ಇನ್ ಅವಧಿಯೊಂದಿಗೆ ಬರುತ್ತವೆ ಮತ್ತು ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆಯ ಅಗತ್ಯವಿದ್ದು, ಅದು ಎಲ್ಲರಿಗೂ ಸರಿಹೊಂದುವುದಿಲ್ಲ ಎಂದು ಅವರು ತಿಳಿಸುತ್ತಾರೆ.

ಡಿಜಿಟಲ್ ಚಿನ್ನದ ಕ್ರಾಂತಿಕಾರಕ ಬದಲಾವಣೆ

ಡಿಜಿಟಲ್ ಚಿನ್ನದ ಹೂಡಿಕೆಯು ಇಂದಿನ ಕ್ರಾಂತಿಕಾರಕ ಬದಲಾವಣೆಯಾಗಿದ್ದು, ಸಂಗ್ರಹ ವೇಳೆ ಯಾವುದೇ ಚಿಂತಿಸುವ ಅಗತ್ಯವಿಲ್ಲ. ಅಂದರೆ ಸುರಕ್ಷಿತ ಸಂಗ್ರಹಣೆಯಾಗಿದೆ. ಸಣ್ಣ ಪ್ರಮಾಣದ ಹೂಡಿಕೆಯಿಂದ ಆರಂಭಿಸುವವರಿಗೆ ಇದೊಂದು ಉತ್ತಮ ಆಯ್ಕೆಯಾಗಿದೆ. ಅಲ್ಲದೆ ಭೌತಿಕ ಚಿನ್ನದ ಹೆಚ್ಚಿನ ಮುಂಗಡ ವೆಚ್ಚಕ್ಕೆ ಹೋಲಿಸಿದರೆ ಹೂಡಿಕೆದಾರರು ಅವರಿಗೆ ಆರಾಮದಾಯಕವಾದ ಸಣ್ಣ ಮೊತ್ತಗಳೊಂದಿಗೆ ಇದನ್ನು ಪ್ರಾರಂಭಿಸಬಹುದು. ಹಾಗಾಗಿ ಭಾರತದಲ್ಲಿ ಡಿಜಿಟಲ್ ಚಿನ್ನದ ಮಾರುಕಟ್ಟೆಯು ಮುಂಬರುವ ವರ್ಷಗಳಲ್ಲಿ 15% ಕ್ಕಿಂತ ಹೆಚ್ಚು CAGR ನಲ್ಲಿ ಬೆಳೆಯುವ ನಿರೀಕ್ಷೆಯಿದೆ ಎಂದು ರೇಡಿಯನ್ ಫಿನ್‌ಸರ್ವ್ ಸಂಸ್ಥಾಪಕ ಸುಮಿತ್ ಶರ್ಮಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+