ಪೈ ನೆಟ್‌ವರ್ಕ್ ಕಾಯಿನ್...ಎಷ್ಟು ಜನಕ್ಕೆ ಈ ಪೈ ನೆಟ್‌ವರ್ಕ್ ನಾಣ್ಯದ ಬಗ್ಗೆ ಗೊತ್ತಿದೆ...? ಇದೊಂದು ಟಾಪ್ ಟ್ರೇಡಿಂಗ್ ಕ್ರಿಪ್ಟೋಪರೆನ್ಸಿ. ಈ ನಾಣ್ಯ ಹೊಸದಾಗಿ ಬಿಡುಗಡೆಯಾಗಿದ್ದಲ್ಲದೇ, ತಾನು ಬಿಡುಗಡೆಯಾದ ಮೊದಲ ದಿನವೇ ರೋಲರ್ ಕೋಸ್ಟರ್‍ನ ಸವಾರಿ ಮಾಡಿದೆ. ಅಂದರೆ ಕುಸಿತ ಕಂಡಿದೆ. ಮೊದಲ ದಿನವೇ 2 ಡಾಲರ್‍ವರೆಗೆ ಏರಿಕೆ ಕಂಡ ಪೈ ನೆಟ್‌ವರ್ಕ್ ಇನ್ನು ಹೆಚ್ಚು ಹಂತಕ್ಕೆ ತಲುಪುವ ಮುನ್ನವೇ ಕೆಳಕಿಳಿಯಿಕತು. ಒಂದಲ್ಲ, ಎರಡಲ್ಲ ಸರಾಸರಿ 71% ರಷ್ಟು ಕುಸಿತ ಕಂಡಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತರಾವರಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಕಳೆದ 24 ಗಂಟೆಗಳ ಅವಧಿಯಲ್ಲಿ ಈ ಪೈ ನಾಣ್ಯವು 58.6% ರಷ್ಟು ಕುಸಿದು $0.7029 ಕ್ಕೆ ವಹಿವಾಟು ನಡೆಸಿತು. ಆಗ ಇದರ ಮಾರುಕಟ್ಟೆ ಹೂಡಿಕೆ ಸುಮಾರು 4.25 ಡಾಲರ್ ಬಿಲಿಯನ್ ಆಗಿತ್ತು. ಅಂದರೆ ಭಾರತೀಯ ಕರೆನ್ಸಿ ಲೆಕ್ಕದಲ್ಲಿ 368 ಬಿಲಿಯನ್ ಎನ್ನಬಹುದು. ಪ್ರಸ್ತುತ ಪೈನ ಒಟ್ಟು ಪೂರೈಕೆ 9.71 ಬಿಲಿಯನ್ ಆಗಿದ್ದು, ಗರಿಷ್ಠ ಪೂರೈಕೆ 100 ಬಿಲಿಯನ್ ಆಗಬಹುದು. ಇನ್ನು ಕಾಯಿನ್ ಮಾರ್ಕೆಟ್ ಕ್ಯಾಪ್ ಡೇಟಾ ಪ್ರಕಾರ, ಪೈ ಮಾಡಿದ ಗಳಿಕೆ 6.31 ಬಿಲಿಯನ್ ಆಗಿದೆ.

ನಿನ್ನೆ (ಫೆಬ್ರವರಿ 20) ಬಿಡುಗಡೆಯಾದ ಪೈ ನಾಣ್ಯ $2.10ರಷ್ಟು ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿತು. ಆದ್ರೆ ದುರಾದೃಷ್ಟವಶಾತ್ ಈ ಪೈ ನಾಣ್ಯ ಅದೇ ದಿನವೇ ಕುಸಿತ ಕಂಡಿದೆ. ಅದು 70.7% ರಷ್ಟು ಕುಸಿದು $0.6152 ರಷ್ಟು ಕುಸಿದಿದೆ. ಸದ್ಯ ಇದು $0.6 ರಿಂದ $0.7 ಮಟ್ಟಗಳ ನಡುವೆ ವಹಿವಾಟು ನಡೆಸುತ್ತಿದೆ ಎನ್ನಲಾಗಿದೆ.
ಮೊದಲೇ ಮಾಹಿತಿ ನೀಡಿದ ಪೈ ನೆಟ್‌ವರ್ಕ್, ನಾವು ಕೊನೆಯ ಟೈಮ್‌ಲೈನ್ ಅಪ್‌ಡೇಟ್‌ನಲ್ಲಿ ಘೋಷಿಸಲಾದ ಅಪ್‌ಗ್ರೇಡ್‌ನಿಂದ 10.14 ಮಿಲಿಯನ್ ಮೇನ್‌ನೆಟ್ ವಲಸೆಗಳನ್ನು ತಲುಪಿದ್ದೇವೆ ಎಂದಿದೆ. ಅಲ್ಲದೇ ಈ ಮೇನ್‌ನೆಟ್ 10 ಮಿಲಿಯನ್ ಗುರಿಯನ್ನು ಮೀರಿದೆ. ಮತ್ತು ಪೈ ತನ್ನ ಉಪಯುಕ್ತತೆ-ಚಾಲಿತ ವ್ಯವಸ್ಥೆಯನ್ನು ತೆರೆಯಲು ಸಜ್ಜಾಗಿದೆ ಎಂದು ತಿಳಿಸಿದೆ.
ಇನ್ನು ಪೂರೈಕೆ ಮಾದರಿ ಮತ್ತು ಗಣಿಗಾರಿಕೆ ಕಾರ್ಯವಿಧಾನ ಕ್ಷೀಣಿಸುತ್ತಿರುವ ಪೈ ನಾಣ್ಯ, ಟೋಕನ್ ನೀಡುವಂತಹ ಮಾದರಿಯನ್ನು ಅನುಸರಿಸುತ್ತಿರುವಂತೆ ಕಾಣುತ್ತಿದೆ. ಅಲ್ಲಿ ಮೈನಿಂಗ್ ದರಗಳು ಹೆಚ್ಚಾದ ಸಮಯ ಮತ್ತು ಬೆಳವಣಿಗೆ ಮತ್ತು ಭಾಗವಹಿಸುವಿಕೆಯ ಆಧಾರದ ಮೇಲೆ ಕಾಲಾನಂತರದಲ್ಲಿ ಕಡಿಮೆಯಾಗುತ್ತವೆ.
ಪೈ ನಾಣ್ಯ ಕುಸಿತಕ್ಕೆ ಕಾರಣ..?
ಉತ್ಸಾಹದಿಂದ ಹೆಜ್ಜೆ ಇಟ್ಟ ಪೈ ನೆಟ್‌ವರ್ಕ್ ಕಾಯಿನ್, $1.97 ರ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಕೇವಲ ಒಂದು ದಿನದಲ್ಲಿ $0.737 ಕ್ಕೆ ಕುಸಿದಿದೆ. ಇದಕ್ಕೆ ಕಾರಣ ಪ್ರವರ್ತಕರು ಮಾರಾಟ ಮಾಡುತ್ತಲೇ ಇರುವುದು ಕೂಡ ಆಗಿರಬಹುದು ಎಂದು, ಡಿಜಿಟಲ್ ಕರೆನ್ಸಿ ವಿಶ್ಲೇಷಕ ಕಿಮ್ ಹೆಚ್ ವಾಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಖರೀದಿಯ ಆದೇಶಗಳು ಚಿಕ್ಕದಾಗಿರುತ್ತವೆ. ಆದರೆ ಯಾವುದೇ ಹೂಡಿಕೆ ದೊಡ್ಡ ಮಟ್ಟದಲ್ಲಿ ಇಲ್ಲದಿರಬಹುದು ಎಂದಿದ್ದಾರೆ. ಇದಲ್ಲದೇ ಪೈ ನಾಣ್ಯ ಕುಸಿತ ಕಂಡ ನಂತರ ಖರೀದಿದಾರರು ಜಿಗಿಯುವ ಸಾಧ್ಯತೆ ಇದೆ. ಆ ಬಳಿಕ ಬೆಲೆ ಮತ್ತೆ ಏರಿಕೆಯಾಗಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


Click it and Unblock the Notifications