ಬೆಂಗಳೂರು: ನಮ್ಮ ಮೆಟ್ರೋ (Namma Metro) ಇಂದು ಪ್ರಯಾಣಿಕರ ಬಹಳ ಇಷ್ಟದ ಸಾರಿಗೆ ವ್ಯವಸ್ಥೆಯಾಗಿದೆ. ಯಾವುದೇ ತುರ್ತು ಸಂದರ್ಭದಲ್ಲಿ, ವೇಗದ ಪ್ರಯಾಣ, ಅತ್ಯುತ್ತಮ ಸೇವೆ ಮೂಲಕ ಬಹಳಷ್ಟು ಅನುಕೂಲಕ್ಕೆ ಬಂದಿದೆ. ಪ್ರತಿನಿತ್ಯ ಲಕ್ಷಾಂತರ ಜನರು ಪ್ರಯಾಣಿಸುವ ಮೆಟ್ರೋ, ಈಗಾಗಲೇ ಗ್ರೀನ್, ಪರ್ಪಲ್, ಯೆಲ್ಲೋ ಲೈನ್ ಮೂಲಕ ಸೇವೆ ಸಲ್ಲಿಸುತ್ತಿದೆ. ಬೆಲೆ ಏರಿಕೆಯಾದರೂ, ಪ್ರಯಾಣಿಕರ ಓಡಾಟ ಮಾತ್ರ ಕಮ್ಮಿಯಾಗಿಲ್ಲ. ಈ ಎಲ್ಲಾ ಬೇಡಿಕೆಗಳನ್ನು ಗಮನಿಸಿದ ಬಿಎಂಆರ್‌ಸಿಎಲ್ (BMRCL) ಇದೀಗ ತನ್ನ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದೆ.

ಹೌದು, ಈಗಾಗಲೇ ನಮ್ಮ ಮೆಟ್ರೋ ವಿಸ್ತರಿಸಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ. 2025ರ ಆಗಸ್ಟ್‌ನಲ್ಲಿ ಹಳದಿ ಮಾರ್ಗದ ಮೆಟ್ರೋವನ್ನು ಆರಂಭಿಸಿತ್ತು. ಇದೀಗ 2026ರಲ್ಲಿ ಪಿಂಕ್ ಲೈನ್ ಮೆಟ್ರೋ ಮಾರ್ಗವನ್ನು ಆರಂಭಿಸಲು ಬಿಎಂಆರ್‌ಸಿಎಲ್ ಸಿದ್ಧವಾಗಿದೆ. ಆ ಪ್ರಕಾರ ಈ ವರ್ಷದ ಮೇನಲ್ಲಿ ಆರಂಭವಾಗುವ ನಿರೀಕ್ಷೆಯಿದೆ.
ಭರ್ಜರಿ ಸಿದ್ಧತೆಯಲ್ಲಿ ಬಿಎಂಆರ್‌ಸಿಎಲ್!
2026ರಲ್ಲಿ ನಮ್ಮ ಮೆಟ್ರೋನಲ್ಲಿ ಪಿಂಕ್ ಲೈನ್ ಮೆಟ್ರೋ ಸೇವೆ ಕಾರ್ಯಾಚರಣೆ ಆರಂಭವಾಗಲಿದೆ ಎಂದು ಮೊದಲೇ ಹೇಳಲಾಗಿತ್ತು. ಅದೇ ರೀತಿ ಇದೀಗ ಮೇ ತಿಂಗಳಲ್ಲಿ ಆರಂಭಿಸಲು ಬಿಎಂಆರ್‌ಸಿಎಲ್ ಭರ್ಜರಿ ಸಿದ್ಧತೆ ನಡೆಸುತ್ತಿದೆ. ಪಿಂಕ್ ಲೈನ್‌ಗಾಗಿ ಈಗಾಗಲೇ 3 ಮೆಟ್ರೋಗಳು ಬಂದಿದ್ದು, ಇದೀಗ ನಾಲ್ಕನೇ ಮೆಟ್ರೋ ರೈಲಿನ ಆಗಮನವಾಗಿದೆ. ಭಾನುವಾರ 6 ಕೋಚ್‌ಗಳಿರುವ ನಾಲ್ಕನೇ ಹೊಸ ರೈಲು, ಬಿಇಎಂಎಲ್ ಸಂಸ್ಥೆಯ ನ್ಯೂ ತಿಪ್ಪಸಂದ್ರ ಘಟಕದಿಂದ ಬನ್ನೇರುಘಟ್ಟ ರಸ್ತೆಯಲ್ಲಿರುವ ಕೊತ್ತನೂರು ಡಿಪೋಗೆ ಇಳಿಸಲಾಗಿದೆ ಎಂದು ಮೆಟ್ರೋ ಅಧಿಕಾರಿಗಳು ಹೇಳಿದ್ದಾರೆ.
ತಾಂತ್ರಿಕ ಪರೀಕ್ಷೆಯಲ್ಲಿ ನಾಲ್ಕನೇ ರೈಲು
ಇನ್ನು ಹೊಸದಾಗಿ ಬಂದಿರುವ ಈ ರೈಲನ್ನು ಸದ್ಯ ಕೊತ್ತನೂರು ಡಿಪೋದಲ್ಲಿ ಇನ್ಸ್‌ಪೆಕ್ಷನ್ ಬೇ ಲೈನ್ (IBL)ಗೆ ಸ್ಥಳಾಂತರಿಸಿ, ತಾಂತ್ರಿಕ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎನ್ಬಲಾಗಿದೆ. ಎಲ್ಲಾ ಪರೀಕ್ಷೆಗಳು ಯಶಸ್ವಿಯಾಗಿ ಪೂರ್ಣಗೊಂಡರೆ, ಬಳಿಕ ಕಾರ್ಯಾಚರಣೆಗೆ ಸಿದ್ಧವಾಗಲಿದೆ ಎಂದು ಹೇಳಲಾಗಿದೆ. ಈ ಎಲ್ಲಾ ಪರೀಕ್ಷೆಗಳ ನಂತರ, ಪಿಂಕ್ ಲೈನ್ ಶೀಘ್ರದಲ್ಲೇ ತನ್ನ ಕಾರ್ಯಾಚರಣೆ ಆರಂಭಿಸುವ ನಿರೀಕ್ಷೆಯಿದೆ.
ಇನ್ನು ಪಿಂಕ್ ಲೂನ್‌ನ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಸುಮಾರು 7.5 ಕಿ.ಮೀ, ಎಲಿವೇಟೆಡ್ ಮಾರ್ಗದಲ್ಲಿ ಪರೀಕ್ಷಾ ಸಂಚಾರ ಈಗಾಗಲೇ ಆರಂಭವಾಗಿದೆ. ಈ ಭಾಗದಲ್ಲಿ ಒಟ್ಟು 6 ನಿಲ್ದಾಣಗಳಿದ್ದು, ಬಿಎಂಅರ್‌ಸಿಎಲ್ ಅಧಿಕಾರಿಗಳ ಪ್ರಕಾರ, ಮೇ 2026 ರೊಳಗೆ ಪಿಂಕ್ ಲೈನ್ ಮೆಟ್ರೋ ಸೇವೆ ಆರಂಭವಾಗುವ ನಿರೀಕ್ಷೆಯಿದೆ. ಅಲ್ಲದೇ ಸಂಪೂರ್ಣವಾಗಿ ಪಿಂಕ್ ಲೈನ್ ಮೆಟ್ರೋ 21.26 ಕಿ.ಮೀ ಉದ್ದ ಇರಲಿದ್ದು, ಇದರಲ್ಲಿ ಹೆಚ್ಚಿನ ಭಾಗ ಅಂಡರ್ ಗ್ರೌಂಡ್ ಇರಲಿದೆ ಎಂದು ವರದಿಯಾಗಿದೆ. ಅಂದರೆ ಈ ಲೈನ್ ಬೆಂಗಳೂರಿನ ಕಾಳೇನ ಅಗ್ರಹಾರದಿಂದ ಉತ್ತರದ ನಾಗವಾರದವರೆಗೆ ಸಂಪರ್ಕಿಸಲಿದೆ ಎಂದು ಹೇಳಲಾಗಿದೆ.
ಪಿಂಕ್ ಲೈನ್ ಒಂದು ವೇಳೆ ಆರಂಭವಾದ್ರೆ, ಬೆಂಗಳೂರು ನಿವಾಸಿಗಳು ಭರ್ಜರಿ ಗುಡ್ ನ್ಯೂಸ್ ಸಿಗಲಿದೆ. ಅಲ್ಲದೇ ಅತ್ತ ಗ್ರೀನ್ ಮತ್ತು ಪರ್ಪಲ್ ಲೈನ್‌ಗಳು ಇತ್ತೀಚೆಗೆ ಎರಡು ರೈಲಿನ ಆಗಮನವಾಗಿದ್ದು, ಇದು ಪ್ರಯಾಣ ಅವಧಿಯನ್ನು ಮತ್ತಷ್ಟು ಇಳಿಸಲಿದೆ.


Click it and Unblock the Notifications