ಅದಾನಿ ಸಂಸ್ಥೆಯು ಸ್ಟಾಕ್ ಮಾರುಕಟ್ಟೆಯಲ್ಲಿ ವಂಚನೆಯನ್ನು ಮಾಡಿದೆ ಎಂದು ಆರೋಪಿಸಿ ಜನವರಿಯಲ್ಲಿ ಹಿಂಡನ್‌ಬರ್ಗ್ ವರದಿ ಮಾಡಿದ ಬಳಿಕ ಸ್ಟಾಕ್ ಮಾರುಕಟ್ಟೆಯಲ್ಲಿ ಅದಾನಿ ಸಂಸ್ಥೆಯು ಭಾರೀ ನಷ್ಟವನ್ನು ಕಂಡಿದೆ. ಇನ್ನು ಅದಾನಿ ಹಿಂಡನ್‌ಬರ್ಗ್ ಪ್ರಕರಣದಲ್ಲಿ ಭಾರತೀಯ ಬಿಲಿಯನೇರ್ ಗೌತಮ್ ಅದಾನಿಯು ಹೊಸ ತಜ್ಞರ ಸಮಿತಿಯ ತನಿಖೆಯನ್ನು ಎದುರಿಸುವ ಸಾಧ್ಯತೆ ಕಂಡು ಬಂದಿದೆ. ಹೊಸ ತಜ್ಞರ ಸಮಿತಿ ರಚನೆಗೆ ಸುಪ್ರೀಂ ಕೋರ್ಟ್‌ನಲ್ಲಿ ಸರ್ಜಿ ಸಲ್ಲಿಸಲಾಗಿದೆ.
ಈ ವರದಿ ಬೆನ್ನಲ್ಲೇ ಅದಾನಿ ಟೋಟಲ್ ಗ್ಯಾಸ್ ಮತ್ತು ಅದಾನಿ ಟ್ರಾನ್ಸ್‌ಮಿಷನ್ ಹೊರತುಪಡಿಸಿ, ಇತರ ಎಲ್ಲಾ ಅದಾನಿ ಲಿಸ್ಟೆಡ್ ಸ್ಟಾಕ್‌ಗಳು ಭಾರೀ ನಷ್ಟವನ್ನು ಕಂಡಿದೆ. ಅದಾನಿ ಎಂಟರ್‌ಪ್ರೈಸಸ್ 1.5% ರಷ್ಟು ಕುಸಿದು 2501.10 ರೂಪಾಯಿಗೆ ಸ್ಥಿರವಾಗಿದೆ. ಆದರೆ ಅದಾನಿ ಪೋರ್ಟ್ಸ್ 1.7% ನಷ್ಟು ಕುಸಿದು 831 ರೂಪಾಯಿಗೆ ವಹಿವಾಟು ಕೊನೆಮಾಡಿದೆ. ಅಲ್ಲದೆ, ಅದಾನಿ ಪವರ್ ಶೇಕಡ 1.10 ರಷ್ಟು ಕುಸಿದು, 374.80 ರೂಪಾಯಿಗೆ ಸ್ಥಿರವಾಗಿದೆ. ಅದಾನಿ ಗ್ರೀನ್ ಎನರ್ಜಿ ಮತ್ತು ಅದಾನಿ ವಿಲ್ಮರ್ ಕೊಂಚಮಟ್ಟಿಗೆ ಕುಸಿದಿದೆ.

ಇದಲ್ಲದೆ, ಸಿಮೆಂಟ್ ಸ್ಟಾಕ್‌ನಲ್ಲಿ ಅಂಬುಜಾ ಸಿಮೆಂಟ್ಸ್ ಶೇಕಡ 1.5 ರಷ್ಟು ಇಳಿದಿದೆ. ಎಸಿಸಿ ಸ್ಟಾಕ್ ಶೇಕಡ 1 ಕ್ಕಿಂತ ಅಧಿಕ ಕುಸಿದಿದೆ. ಎನ್‌ಡಿಟಿವಿ ಸ್ಟಾಕ್ ಶೇಕಡ 0.8 ರಷ್ಟು ಕುಸಿದಿದೆ. ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇಕಡ 1 ಕ್ಕಿಂತ ಅಧಿಕ ಗಳಿಸಿದೆ. ಆದರೆ ಅದಾನಿ ಟೋಟಲ್ ಗ್ಯಾಸ್ ಕೂಡಾ ಏರಿಕೆಯಾಗಿದೆ.
ಹಿಂಡನ್‌ಬರ್ಗ್ ವರದಿಯಲ್ಲಿ ಅದಾನಿ ಗ್ರೂಪ್ ವಿರುದ್ಧ ಮಾಡಿರುವ ಆರೋಪಗಳ ತನಿಖೆಗೆ ಹೊಸ ತಜ್ಞರ ಸಮಿತಿಯನ್ನು ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ಗೆ ಹೊಸ ಅರ್ಜಿಯನ್ನು ಸಲ್ಲಿಸಲಾಗಿದೆ. ಅದಾನಿ ಗ್ರೂಪ್ ಮೇಲೆ ಹಿಂಡನ್‌ಬರ್ಗ್ ಮಾಡಿದ ಆರೋಪಗಳನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಮಾರ್ಚ್‌ನಲ್ಲಿ ಮೂವರು ಸದಸ್ಯರ ತಜ್ಞರ ಸಮಿತಿಯನ್ನು ರಚಿಸಿತ್ತು.
ಇನ್ನು ಅರ್ಜಿಯಲ್ಲಿ ಎಸ್‌ಬಿಐನ ಮಾಜಿ ಅಧ್ಯಕ್ಷ ಒಪಿ ಭಟ್ ಪ್ರಸ್ತುತ ಗ್ರೀನ್‌ಕೊ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಾರ್ಚ್ 2022 ರಿಂದ ದೇಶದಲ್ಲಿ ಇಂಧನ ಸೌಲಭ್ಯಗಳನ್ನು ಒದಗಿಸಲು ಅದಾನಿ ಗ್ರೂಪ್‌ಗಳೊಂದಿಗೆ ನಿಕಟ ಪಾಲುದಾರಿಕೆಯನ್ನು ಹೊಂದಿದ್ದಾರೆ ಕೂಡಾ ವರದಿ ಹೇಳಿದೆ. ಆದ್ದರಿಂದಾಗಿ ಈ ನಂಟಿನ ಬಗ್ಗೆ ತನಿಖೆಗೆ ಒತ್ತಾಯಿಸಲಾಗಿದೆ.
ಅಷ್ಟೇ ಅಲ್ಲ, 2018ರಲ್ಲಿ 'ಲಿಕ್ಕರ್ ಕಿಂಗ್' ವಿಜಯ್ ಮಲ್ಯ ಅವರಿಗೆ ಸಾಲ ನೀಡುವ ವಿಚಾರದಲ್ಲಿ ಭಟ್ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಕಣ್ಣಿಗೆ ಗುರಿಯಾಗಿದ್ದರು. 2006 ರಿಂದ 2011 ರವರೆಗೆ ಒಪಿ ಭಟ್ ಎಸ್‌ಬಿಐ ಅಧ್ಯಕ್ಷ ಸ್ಥಾನವನ್ನು ಹೊಂದಿದ್ದರು. ಸಾಲಗಳು ಅಧಿಕವಾಗಿ ಪರಾರಿಯಾದ ಮಲ್ಯರ ಕಂಪನಿಗಳಿಗೆ ಜಮೆ ಆಗಿದ್ದವು ಎಂದು ಅರ್ಜಿದಾರರು ಉಲ್ಲೇಖಿಸಿದ್ದಾರೆ.
ಇನ್ನು ಅದಾನಿ ಗ್ರೂಪ್ ವಿರುದ್ಧ ಈ ಹಿಂದೆಯೂ ತನಿಖೆ ನಡೆದಿದ್ದು, ಸೆಬಿ ವರದಿಯನ್ನು ಸಲ್ಲಿಸಿದೆ. ಇನ್ನು ಕೂಡಾ ತನಿಖೆ ಬಾಕಿ ಇದೆ ಎಂದು ಹೇಳಿದೆ. ಈ ತನಿಖೆ ಆಧಾರದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಇನ್ನಷ್ಟೇ ಬರಬೇಕಾಗಿದೆ.


Click it and Unblock the Notifications