PM Internship: 2ನೇ ಸುತ್ತಿನಲ್ಲಿ1 ಲಕ್ಷ ಇಂಟರ್ನಿಗಳಿಗೆ ಅವಕಾಶ, ಪ್ರತಿಷ್ಠಿತ ಕಂಪನಿಗಳಲ್ಲಿ ತರಬೇತಿ

ಭಾರತದ ಯುವಕರಿಗೆ ಅಮೂಲ್ಯವಾದ ಇಂಟರ್ನ್‌ಶಿಪ್ ಅವಕಾಶಗಳನ್ನು ಒದಗಿಸಲು ವಿನ್ಯಾಸಗೊಳಿಸಲಾದ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಯ 2 ನೇ ಸುತ್ತಿನ ಅರ್ಜಿಗಳು ಪ್ರಾರಂಭವಾಗಿದೆ. ದೇಶಾದ್ಯಂತದ ಯುವಕರಿಗೆ ತಾಂತ್ರಿಕ ತರಬೇತಿ ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು ಈ ಯೋಜನೆಯ ಉದ್ದೇಶವಾಗಿದ್ದು, 2 ನೇ ಸುತ್ತಿನಲ್ಲಿ ಭಾರತದ 730 ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಉನ್ನತ ಕಂಪನಿಗಳಲ್ಲಿ 1 ಲಕ್ಷಕ್ಕೂ ಹೆಚ್ಚು ಇಂಟರ್ನ್‌ಶಿಪ್ ಅವಕಾಶಗಳಿವೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ (ಎಂಸಿಎ) ಈ ಬಗ್ಗೆ ಮಾಹಿತಿ ನೀಡಿದ್ದು, ಮೊದಲ ಸುತ್ತಿನಲ್ಲಿ 6 ಲಕ್ಷಕ್ಕೂ ಹೆಚ್ಚು ಅರ್ಜಿಗಳನ್ನು ನೀಡಲಾಗಿದೆ. ಹೀಗಾಗಿ ಆಸಕ್ತರು ಅದಷ್ಟು ಬೇಗ ಪ್ರಧಾನ ಮಂತ್ರಿ ಇಂಟರ್ನ್‌ಶಿಪ್ ಯೋಜನೆಗೆ ಅರ್ಜಿ ಸಲ್ಲಿಸಿ ಅವಕಾಶವನ್ನು ಉಪಯೋಗಿಸಿಕೊಳ್ಳುವುದು ಒಳಿತು. ಇಂಟರ್ನ್‌ಗಳಿಗೆ ತಮ್ಮ ಕ್ಷೇತ್ರಗಳಲ್ಲಿ ಪ್ರಾಯೋಗಿಕ ಅನುಭವವನ್ನು ನೀಡುವುದಲ್ಲದೆ, ಸಾರ್ವಜನಿಕ ವಲಯದಲ್ಲಿ ಯಶಸ್ವಿ ವೃತ್ತಿಜೀವನವನ್ನು ನಿರ್ಮಿಸಲು ಅಗತ್ಯವಾದ ಕೌಶಲ್ಯ ಮತ್ತು ಒಳನೋಟಗಳನ್ನು ಒದಗಿಸುತ್ತದೆ.

PM Internship: 2ನೇ ಸುತ್ತಿನಲ್ಲಿ 1 ಲಕ್ಷ ಇಂಟರ್ನಿಗಳಿಗೆ ಸುವರ್ಣಾವಕ

ತೈಲ, ಅನಿಲ ಮತ್ತು ಇಂಧನ, ಬ್ಯಾಂಕಿಂಗ್ ಮತ್ತು ಹಣಕಾಸು ಸೇವೆಗಳು, ಟ್ರಾವೆಲ್ ಮತ್ತು ಹಾಸ್ಪಿಟಾಲಿಟಿ, ಆಟೋಮೋಟಿವ್, ಮೆಟಲ್ಸ್ & ಮೈನಿಂಗ್ಸ್ , ಉತ್ಪಾದನೆ ಮತ್ತು ಕೈಗಾರಿಕೆ, ವೇಗವಾಗಿ ಚಲಿಸುವ ಗ್ರಾಹಕ ಸರಕುಗಳು (Fast-Moving Consumer Goods FMCG) ಮತ್ತು ಇನ್ನೂ ಅನೇಕ ವಲಯಗಳಲ್ಲಿ 300 ಕ್ಕೂ ಹೆಚ್ಚು ಉನ್ನತ ಕಂಪನಿಗಳು ಭಾರತೀಯ ಯುವಕರಿಗೆ ನೈಜ ಕಲಸದ ಪ್ರಪಂಚದ ಅನುಭವವನ್ನು ಪಡೆಯಲು, ವೃತ್ತಿಪರರೊಂದಿಗೆ ನೆಟ್‌ವರ್ಕ್ ಮಾಡಲು ಮತ್ತು ಅವರ ಉದ್ಯೋಗಾವಕಾಶವನ್ನು ಹೆಚ್ಚಿಸಲು ಇಂಟರ್ನ್‌ಶಿಪ್ ಅವಕಾಶಗಳನ್ನು ನೀಡಿವೆ.

ಅರ್ಹ ಯುವಕರು ತಮ್ಮ ಆದ್ಯತೆಯ ಜಿಲ್ಲೆ, ರಾಜ್ಯ, ವಲಯ, ಪ್ರದೇಶ ಮತ್ತು ಅವರ ನಿರ್ದಿಷ್ಟಪಡಿಸಿದ ಪ್ರಸ್ತುತ ವಿಳಾಸದ ವ್ಯಾಪ್ತಿಯೊಳಗೆ ಇಂಟರ್ನ್‌ಶಿಪ್‌ಗಳನ್ನು ಅನ್ವೇಷಿಸಬಹುದು ಮತ್ತು ಆಯ್ಕೆ ಮಾಡಬಹುದು.

ಏನಿದು ಇಂಟರ್ನ್‌ಶಿಪ್ ಯೋಜನೆ:

ದೇಶದ ಯುವಕರಿಗೆ ದೇಶದ ಅಗ್ರ 300 ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಕೆಲಸದ ವಾತಾವರಣಕ್ಕೆ ಯುವಕರು ಹೊಂದಿಕೊಳ್ಳಲು, ಕೆಲಸದ ಅನುಭವ ಹಾಗೂ ಕೌಶಲ್ಯಗಳನ್ನು ಅಳವಡಿಸಿಕೊಳ್ಳು ಈ ಯೋಜನೆ ನೆರವಾಗಲಿದೆ. 2024ರ ಅಕ್ಟೋಬರ್‌ನಲ್ಲಿ ಪ್ರಧಾನಮಂತ್ರಿ ಇಂಟರ್ನ್‌ಶಿಪ್‌ ಯೋಜನೆಯನ್ನು ಅಧಿಕೃತವಾಗಿ ಜಾರಿಗೊಳಿಸಲಾಗಿದೆ. ಕೇವಲ ಇಂಟರ್ನ್‌ಶಿಪ್‌ ಮಾತ್ರವಲ್ಲ ಪ್ರತಿಯೊಬ್ಬ ಯುವಕರು ಭವಿಷ್ಯದಲ್ಲಿ ಯಶಸ್ಸು ಗಳಿಸಲು ಅವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಇಂಟರ್ನ್‌ಶಿಪ್‌ ಯೋಜನೆಗೆ ಯಾರು ಅರ್ಹರು?

ಕನಿಷ್ಠ ಪ್ರೌಢಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ 21 ರಿಂದ 24 ವರ್ಷದೊಳಗಿನ ಭಾರತೀಯ ಉದ್ಯೋಗಕ್ಕೆ ಸೇರ್ಪಡೆಗೊಳ್ಳದ ಯುವಕರಿಗೆ ಈ ಯೋಜನೆಯು ಮುಕ್ತವಾಗಿದೆ. 10ನೇ ತರಗತಿ, 12ನೇ ತರಗತಿ, ಐಟಿಐ, ಪಾಲಿಟೆಕ್ನಿಕ್‌ನಿಂದ ಡಿಪ್ಲೊಮಾ, ಬಿಎ, ಬಿಎಸ್ಸಿ, ಬಿಕಾಂ, ಬಿಸಿಎ, ಬಿಬಿಎ ಮತ್ತು ಬಿಫಾರ್ಮಾದಂತಹ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ನಿರ್ದಿಷ್ಟವಾಗಿ ಪೂರ್ಣಾವಧಿಯ ಉದ್ಯೋಗವಿಲ್ಲದ ಅಥವಾ ಪೂರ್ಣಾವಧಿಯ ಶಿಕ್ಷಣದಲ್ಲಿ ತೊಡಗಿರುವ ಅಭ್ಯರ್ಥಿಗಳು ಇಂಟರ್ನ್‌ಶಿಪ್‌ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಇದರೊಂದಿಗೆ ಆನ್ಲೈನ್ ಅಥವಾ ದೂರ ಶಿಕ್ಷಣ ಕಾರ್ಯಕ್ರಮಗಳಲ್ಲಿ ದಾಖಲಾದವರು ಕೂಡ ಅರ್ಜಿ ಸಲ್ಲಿಸಬಹುದು. ಹೈಸ್ಕೂಲ್, ಐಟಿಐ, ಡಿಪ್ಲೊಮಾ ಮತ್ತು ಬ್ಯಾಚುಲರ್ ಪದವಿ ಇತಾದಿ ಅರ್ಹತೆಗಳನ್ನು ಹೊಂದಿರುವ ವಿದ್ಯಾರ್ಥಿಗಳು ಅರ್ಹ ಅರ್ಜಿದಾರರಾಗಿದ್ದಾರೆ. ಕುಟುಂಬದ ಯಾವುದೇ ಸದಸ್ಯರು ವರ್ಷಕ್ಕೆ ₹8 ಲಕ್ಷಕ್ಕಿಂತ ಹೆಚ್ಚು ಗಳಿಸಿದರೆ, ಅಂತಹ ಅಭ್ಯರ್ಥಿಯೂ ಅನರ್ಹರಾಗಿರುತ್ತಾರೆ.ಇದಲ್ಲದೆ, ಐಐಟಿ, ಐಐಎಂ, ಅಥವಾ ಐಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳಿಂದ ಅಧ್ಯಯನ ಮಾಡಿದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಲು ಅರ್ಹರಲ್ಲ.

ಸಚಿವಾಲಯದ ಪ್ರಕಾರ, ಎರಡನೇ ಸುತ್ತಿನಲ್ಲಿ, ಭಾರತದಾದ್ಯಂತ ಗರಿಷ್ಠ ಸಂಖ್ಯೆಯ ಇಂಟರ್ನ್‌ಶಿಪ್ ಅವಕಾಶಗಳಿರುವ ಜಿಲ್ಲೆಗಳಲ್ಲಿ, ಕಾಲೇಜುಗಳು, ವಿಶ್ವವಿದ್ಯಾನಿಲಯಗಳು, ಐಟಿಐಗಳು ಮತ್ತು ರೋಜಗಾರ್ ಮೇಳಗಳಲ್ಲಿ 70ಕ್ಕೂ ಹೆಚ್ಚು ಐಇಸಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಈ ಇಂಟರ್ನ್‌ಶಿಪ್‌ಗಳಿಗೆ ಬೇಕಾದ ಅರ್ಹತೆಗಳನ್ನು ಆಧರಿಸಿ ಈ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

12 ತಿಂಗಳ ಇಂಟರ್ನ್‌ಶಿಪ್ ಮಾಡುತ್ತಿರುವ ಯುವಕರಿಗೆ ಪ್ರತಿ ತಿಂಗಳು 5,000 ರೂ. ನೀಡಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರ 4,500 ರೂ.ಗಳನ್ನು ನೀಡುತ್ತದೆ. ಆದರೆ ಕಂಪನಿಯು ತನ್ನ ಸಿಎಸ್ಆರ್ ನಿಧಿಯಿಂದ 500 ರೂ.ಗಳನ್ನು ನೀಡುತ್ತದೆ. ಇದಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಬಾರಿ 6,000 ರೂ.ಗಳನ್ನು ನೀಡಲಾಗುವುದು.

ಇಂಟರ್ನ್‌ಶಿಪ್‌ ಯುವಕರಿಗೆ ಹಣಕಾಸಿನ ಸೌಲಭ್ಯ

12 ತಿಂಗಳ ಇಂಟರ್ನ್‌ಶಿಪ್ ಮಾಡುತ್ತಿರುವ ಯುವಕರಿಗೆ ಪ್ರತಿ ತಿಂಗಳು 5,000 ರೂ. ನೀಡಲಾಗುವುದು. ಇದರಲ್ಲಿ ಕೇಂದ್ರ ಸರ್ಕಾರ 4,500 ರೂ.ಗಳನ್ನು ನೀಡುತ್ತದೆ. ಬಾಕಿ ಉಳಿದಿರುವ ₹500 ಕಾರ್ಯಕ್ಷಮತೆ ಮತ್ತು ಹಾಜರಾತಿಯ ಆಧಾರದ ಮೇಲೆ ಪಾಲುದಾರ ಕಂಪನಿಗಳು ಸಿಎಸ್ಆರ್ ನಿಧಿಯಿಂದ ನೀಡುತ್ತದೆ.

₹4,500 ಅನ್ನು ಸರ್ಕಾರವು ನೇರ ನಗರದು ವರ್ಗಾವಣೆ (DBT) ಮೂಲಕ ಇಂಟರ್ನಿಗಳ ಬ್ಯಾಂಕ್ ಖಾತೆಗೆ ಒದಗಿಸುತ್ತದೆ. ಇದಲ್ಲದೆ, ಆಯ್ಕೆಯಾದ ಅಭ್ಯರ್ಥಿಗಳಿಗೆ ಒಂದು ಬಾರಿ 6,000 ರೂ.ಗಳನ್ನು ಆರ್ಥಿಕ ಸಹಾಯದ ರೂಪದಲ್ಲಿ ನೀಡಲಾಗುವುದು.

ನೋಂದಾಯಿಸುವುದು ಹೇಗೆ?

ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಲು ಆಸಕ್ತಿ ಹೊಂದಿರುವ ಯುವಕರು ಅಧಿಕೃತ ವೆಬ್‌ಸೈಟ್ https://pminternship.mca.gov.in/login/ ನಲ್ಲಿ ಭೇಟಿ ನೀಡಿ ಮಾಹಿತಿ, ನೋಂದಣಿ ವಿವರ, ಕೆವೈಸಿಗಳನ್ನು ಭರ್ತಿ ಮಾಡಿ ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮತ್ತು OTP ಮೂಲಕ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ. ಇದರ ನಂತರ, ನಿಮ್ಮ ಶೈಕ್ಷಣಿಕ ಅರ್ಹತೆ, ಇಂಟರ್ನ್‌ಶಿಪ್ ಪ್ರದೇಶ ಮತ್ತು ಇತರ ಅಗತ್ಯ ಮಾಹಿತಿಯನ್ನು ಭರ್ತಿ ಮಾಡುವ ಮೂಲಕ ನೀವು ಅರ್ಜಿಯನ್ನು ಸಲ್ಲಿಸಬಹುದು.

ಎರಡನೇ ಸುತ್ತಿನಲ್ಲಿ, ಪ್ರತಿ ಅರ್ಜಿದಾರರು ಅರ್ಜಿ ಸಲ್ಲಿಸುವ ಕೊನೆಯ ದಿನಾಂಕದವರೆಗೆ ಮೂರು ಇಂಟರ್ನ್‌ಶಿಪ್‌ಗಳಿಗೆ ಅರ್ಜಿ ಸಲ್ಲಿಸಬಹುದು.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+