ಭಾರತದಲ್ಲಿ ರೈತರ ಜೀವನದಲ್ಲಿ ಸುಧಾರಣೆ ತರುವ ನಿಟ್ಟಿಯಲ್ಲಿ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯ ಯೋಜನೆ ಹೊರತಂದಿರುವುದು ಎಲ್ಲರಿಗೂ ತಿಳಿದ ವಿಚಾರ. ರೈತರಿಗೆ ನಿಶ್ಚಿತ ಆದಾಯವನ್ನು ಕಲ್ಪಿಸುವ ಯೋಜನೆ. ಈ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ಅರ್ಹ ರೈತರು ರೂ 2 ಸಾವಿರ ರೂ. ಪಡೆಯುತ್ತಾರೆ. ಅದರಂತೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 18ನೇ ಕಂತನ್ನು ಈ ವರ್ಷದ ಅಕ್ಟೋಬರ್ 5ರಂದು ಬಿಡುಗಡೆ ಮಾಡುಗಡೆ ಮಾಡಲಾಗಿದೆ. ಆದರೆ ಒಂದು ವೇಳೆ ಯೋಜನೆಗೆ ಅರ್ಜಿ ಸಲ್ಲಿಸಿದ್ದರೂ ಹಣಕಾಸಿನ ನೆರವು ಲಭಿಸದಿದ್ದರೆ ಚಿಂತಿಸುವ ಯಾವುದೇ ಅಗತ್ಯವಿಲ್ಲ. ವಿವಿಧ ಕಾರಣಗಳಿಂದಾಗಿ ಈ ವಿಳಂಭ ನಡೆದಿರುವ ಸಾಧ್ಯತೆಗಳಿರುತ್ತದೆ. ಸಮಸ್ಯೆ ಪರಿಹರಿಸಲು ಹಾಗೂ ಯೋಜನೆಯ ರೂಪವಾಗಿ ಹಣಕಾಸಿನ ನೆರವು ಪಡೆಯಲು ಅನೇಕ ಕ್ರಮಗಳಿವೆ.
ಪಿಎಂ ಕಿಸಾನ್ ಕಂತು ಪಡೆದಿಲ್ಲವೇ? ಏನು ಮಾಡಬೇಕು?
ಸದ್ಯ ಪಿಎಂ ಕಿಸಾನ್ ಯೋಜನೆಯ 18ನೇ ಕಂತು ಕೆವೈಸಿ (ಪಿಎಂ ಕಿಸಾನ್ ಕೆವೈಸಿ) ಮಾಡಿದ ರೈತರಿಗೆ ಮಾತ್ರ ಲಭ್ಯವಾಗಲಿದೆ. ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸರ್ಕಾರವು ಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಿದೆ. ಈ ಯೋಜನೆಯಲ್ಲಿ ವಂಚನೆಯನ್ನು ತಡೆಗಟ್ಟಲು ಇದನ್ನು ಮಾಡಲಾಗಿದೆ. ಒಟಿಪಿ ಮೂಲಕ ಮತ್ತು ಸಾಮಾನ್ಯ ಸೇವಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ರೈತರು ಈ ಪ್ರಮುಖ ಕಾರ್ಯಗಳನ್ನು ಮನೆಯಲ್ಲಿಯೇ ಪೂರ್ಣಗೊಳಿಸಬಹುದು. ಹಾಗಾಗಿ ಭವಿಷ್ಯದಲ್ಲಿ ಈ ಕಂತಿನ ಹಣದಿಂದ ವಂಚಿತರಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ʻಇ ಕೆವೈಸಿʼ ಮಾಹಿತಿ ನವೀಕೃತವಾಗಿರಿಸುವುದು ಅತ್ಯಗತ್ಯವಾಗಿದೆ. ಹಾಗಾಗಿ ಒಂದು ವೇಳೆ ನೀವು ಪಿಎಂ ಕಿಸಾನ್ ಯೋಜನೆಯಡಿ ರೂ. 2,000 ಕಂತು ಪಡೆಯದ ರೈತರಾಗಿದ್ದರೆ ದೂರು ಸಲ್ಲಿಸಬಹುದು.

ದೂರು ಸಲ್ಲಿಸುವುದು ಹೇಗೆ?
ನಿರ್ದಿಷ್ಟ 4 ಮಾಸಿಕ ಅವಧಿಯಲ್ಲಿ ಆಯಾ ರಾಜ್ಯ ಅಥವಾ ಕೇಂದ್ರಾಡಳಿತದ ಮೂಲಕ ಪಿಎಂ ಕಿಸಾನ್ ಪೋರ್ಟಲ್‌ನಲ್ಲಿ ಹೆಸರು ಅಪ್‌ಲೋಡ್ ಮಾಡಿದ ಫಲಾನುಭವಿಗಳು ಆ ಅವಧಿಗೆ ಮತ್ತು ನಂತರದ ಎಲ್ಲಾ ಅವಧಿಗಳಿಗೆ ಮೊತ್ತ ಸ್ವೀಕರಿಸಲು ಅರ್ಹರಾಗಿರುತ್ತಾರೆ. ಯಾವುದೇ ಕಾರಣಕ್ಕಾಗಿ ನಿಮ್ಮ ಕಂತುಗಳನ್ನು ನೀವು ಸ್ವೀಕರಿಸದಿದ್ದರೆ (ಹೊರಗಿಡುವ ಮಾನದಂಡ ಹೊರತುಪಡಿಸಿ), ವಿಳಂಬಕ್ಕೆ ಕಾರಣವಾಗುವ ಸಮಸ್ಯೆಗಳನ್ನು ಒಮ್ಮೆ ಪರಿಹರಿಸಿದ ನಂತರ ನೀವು ಬಾಕಿ ಉಳಿದ ಕಂತುಗಳಿಗೆ ಅರ್ಹರಾಗಿರುತ್ತೀರಿ.
ಉದಾಹರಣೆಗೆ ಹೇಳುವುದಾದರೆ ಒಂದು ವೇಳೆ ನಿಮ್ಮ ಹೆಸರನ್ನು ಡಿಸೆಂಬರ್ 2022ರಿಂದ ಮಾರ್ಚ್ 2023ರ ಅವಧಿಯಲ್ಲಿ ಅಪ್ ಲೋಡ್ ಮಾಡಿದ್ದರೆ ಈ ಅವಧಿಗೆ ಮತ್ತು ಯೋಜನೆಯ ಭವಿಷ್ಯದ ಎಲ್ಲಾ ಕಂತುಗಳಿಗೆ ನೀವು ಅರ್ಹರಾಗಿರುತ್ತೀರಿ. ಅದೇ ರೀತಿ, ನಿಮ್ಮ ಹೆಸರನ್ನು ಏಪ್ರಿಲ್ - ಜುಲೈ 2024 ರ ಅವಧಿಯಲ್ಲಿ ಸೇರಿಸಿದ್ದರೆ, ಆ ಅವಧಿಯ ಪಾವತಿಯನ್ನು ಮತ್ತು ಮುಂಬರುವ ಎಲ್ಲಾ ಕಂತುಗಳನ್ನು ಪಡೆಯಲು ಅರ್ಹರಾಗುತ್ತೀರಿ.
ಹೆಸರು ಇದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ
ಒಂದು ವೇಳೆ ಪಿಎಂ ಕಿಸಾನ್ ಯೋಜನೆಯ ಕಂತು ನೀವು ಸ್ವೀಕರಿಸದಿದ್ದರೆ ದೂರು ನೀಡಬಹುದು. ಆದರೆ ಅದಕ್ಕೂ ಮೊದಲು ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಕಾಣಿಸಿಕೊಂಡಿದೆಯೇ ಎಂಬ ವಿಚಾರವನ್ನು ಮೊದಲು ಖಚಿತಪಡಿಸಿಕೊಳ್ಳಬೇಕಿದೆ.

ದೂರು ಸಲ್ಲಿಸುವ ರೀತಿ ಹೇಗೆ?
ಈ ಯೋಜನೆಯ ಯಾವುದೇ ರೀತಿಯ ದೂರನ್ನು ನೀವು ಪಿಎಂ ಕಿಸಾನ್ ಸಹಾಯವಾಣಿ ಮೂಲಕ ಸಲ್ಲಿಸಬಹುದು. ಅರ್ಹ ರೈತರು ಸೋಮವಾರದಿಂದ ಶುಕ್ರವಾರದವರೆಗೆ ದೂರುಗಳನ್ನು ಸಲ್ಲಿಸಬಹುದು. ನಿಮ್ಮ ಕುಂದುಕೊರತೆಗಳನ್ನು ನೀವು ಅಧಿಕೃತ ತಂಡಕ್ಕೆ ಇಮೇಲ್ ಮೂಲಕ ಕಳುಹಿಸಬಹುದು.
ಪಿಎಂ ಕಿಸಾನ್ ಯೋಜನೆಯ ಪ್ರಯೋಜನವೇನು?
ಪಿಎಂ ಕಿಸಾನ್ ಯೋಜನೆಯಡಿ ಅರ್ಹ ರೈತರು ಪ್ರತಿ ನಾಲ್ಕು ತಿಂಗಳಿಗೊಮ್ಮೆ 2000 ರೂಪಾಯಿಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ವಾರ್ಷಿಕವಾಗಿ ಒಟ್ಟು 6000 ರೂ. ಮೊತ್ತವನ್ನು ಮೂರು ಕಂತುಗಳಲ್ಲಿ ತಲಾ 2000 ರೂ.ನಂತೆ ಪಾವತಿ ಮಾಡಲಾಗುತ್ತದೆ. ಏಪ್ರಿಲ್ ನಿಂದ ಜುಲೈ, ಆಗಸ್ಟ್ ನಿಂದ ನವೆಂಬರ್ ಮತ್ತು ಡಿಸೆಂಬರ್ ನಿಂದ ಮಾರ್ಚ್. ಹಣವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದ್ದರೆ, ನೀವು ಈ ಕೆಳಗಿನ ಮಾರ್ಗಗಳ ಮೂಲಕ ಸಂಪರ್ಕಿಸಬಹುದು:
ಇಮೇಲ್: [email protected],[email protected]
ಸಹಾಯವಾಣಿ ಸಂಖ್ಯೆ:011-24300606, 155261
ಟೋಲ್-ಫ್ರೀ: 1800-115-526


Click it and Unblock the Notifications