ಅನ್ನದಾತರಿಗೆ ಗುಡ್‌ನ್ಯೂಸ್ ಸಿಕ್ಕಿದೆ...ಪ್ರಧಾನಿ ಮೋದಿ ಅವರ ಮಹತ್ವದ ಯೋಜನೆಯಲ್ಲಿ ಒಂದಾದ, ಪಿಎಂ ಕಿಸಾನ್ ಯೋಜನೆಯ 19ನೇ ಕಂತಿನ ಹಣ ಇಂದು ಬಿಡುಗಡೆಯಾಗಲಿದೆ. ಇದರ ಅಡಿಯಲ್ಲಿ ರೈತರ ಖಾತೆಗೆ ಇಂದು 2000 ರೂ. ಹಣ ಜಮೆಯಾಗಲಿದೆ. ಅಂದರೆ ಸುಮಾರು 10 ಕೋಟಿ ಜನ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ವಿಶ್ವದಲ್ಲೇ ಅತಿದೊಡ್ಡ ಡಿಬಿಟಿ ಸ್ಕೀಮ್ ಆದ ಇದರಲ್ಲಿ ವರ್ಷಕ್ಕೆ 6,000 ರೂ ನೀಡಲಾಗುತ್ತದೆ. ಪ್ರತೀ ನಾಲ್ಕು ತಿಂಗಳಿಗೊಮ್ಮೆ 2,000 ರೂ ನೀಡಲಾಗುತ್ತದೆ. ಇಂದು ಅದರ ಒಂದು ಕಂತಿನ ಹಣ ಬಿಡುಗಡೆ ಆಗುತ್ತಿದೆ. 2018-19ರಿಂದ ಆರಂಭವಾಗಿ ಇಲ್ಲಿಯವರೆಗೆ 8-11 ಕೋಟಿ ರೈತರು 18 ಕಂತುಗಳ ಹಣ ಪಡೆದಿದ್ದಾರೆ. ಈ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 19ನೇ ಕಂತಿನಲ್ಲಿ, ಒಟ್ಟು ₹22,000 ಕೋಟಿ ಹಣವನ್ನು 10 ಕೋಟಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ.

ಆದರೆ ಎಲ್ಲಾ ರೈತರಿಗೂ ಇ-ಕೆವೈಸಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಅಂದರೆ ತಮ್ಮ ಭೂಮಿ ದಾಖಲೆಗಳು, ಬ್ಯಾಂಕ್ ಖಾತೆ ವಿವರ ಹಾಗೂ ಆಧಾರ್ ಸಂಖ್ಯೆ ಸರಿಯಾಗಿ ಸಲ್ಲಿಸಿರುವ ರೈತರು ಈ ಯೋಜನೆಯ ಫಲಾನುಭವಿಗಳಾಗಿದ್ದಾರೆ. ಇನ್ನು ಇದುವರೆಗೂ ಈ ಯೋಜನೆಯ ಅಡಿ 18 ಕಂತುಗಳ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ. ಅಂದರೆ ಒಟ್ಟು 11 ಕೋಟಿಗೂ ಹೆಚ್ಚು ರೈತರಿಗೆ ಕೇಂದ್ರ ಸರ್ಕಾರ ಈ ಯೋಜನೆಯ ಪ್ರಯೋಜನವನ್ನು ನೀಡಿದೆ. ಹಿಂದಿನ ಕಂತಿನಲ್ಲಿ ಒಟ್ಟು 9.58 ಕೋಟಿ ರೈತರು ಪ್ರಯೋಜನಗಳನ್ನು ಪಡೆದಿದ್ದಾರೆ.
ಏನಿದು ಪಿಎಂ ಕಿಸಾನ್ ಸಮ್ಮಾನ್ ಯೋಜನೆ..?
ಇನ್ನು ಈ ಪಿಎಂ ಕಿಸಾನ್ ಯೋಜನೆಯಡಿ ರೈತರು ವರ್ಷಕ್ಕೆ 6,000 ರೂ. ಹಣವನ್ನು ಸಹಾಯಧನವನ್ನಾಗಿ ಪಡೆಯುತ್ತಾರೆ. ಅಂದರೆ ಈ 6,000 ರೂ. ಮೂರು ಕಂತುಗಳಲ್ಲಿ ರೈತರ ಖಾತೆಗೆ ಜಮೆಯಾಗುತ್ತದೆ. ಪ್ರತಿ 4 ತಿಂಗಳಿಗೊಮ್ಮೆ ಒಂದೊಂದು ಕಂತಿನಂತೆ, ಮೂರು ಕಂತುಗಳ ಹಣವನ್ನು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಹಣ ಜಮೆ ಮಾಡಲಾಗುತ್ತದೆ.
ಯಾರ್‍ಯಾರು ಈ ಯೋಜನೆಗೆ ಅರ್ಹರಲ್ಲ..?
ಇನ್ನು ಈ ಯೋಜನೆಯಡಿ ಹಣ ಪಡೆದುಕೊಳ್ಳುವ ಅರ್ಹತೆ ಹೊಂದಿರುವುದು, ಕೃಷಿ ಜಮೀನು ಹೊಂದಿರುವ ರೈತರು ಮಾತ್ರ. ತೆರಿಗೆ ಪಾವತಿ ಮಾಡುವ ವೈದ್ಯ, ವಕೀಲ, ಎಂಜಿನಿಯರ್, ಸರ್ಕಾರಿ ಉದ್ಯೋಗಿಗಳು, ಜನಪ್ರತಿನಿಧಿಗಳು ಯಾರೇ ಕೃಷಿ ಜಮೀನು ಹೊಂದಿದ್ದರು ಈ ಯೋಜನೆಯ ಫಲ ಅವರಿಗೆ ಸಿಗುವುದಿಲ್ಲ. ಹಾಗೆಯೇ 10,000 ರೂ. ಅಥವಾ ಅದಕ್ಕಿಂತ ಹೆಚ್ಚಿನ ಮಾಸಿಕ ಪಿಂಚಣಿ ಪಡೆಯುವವರು ಕೂಡ ಈ ಯೋಜನೆಯ ಫಲಾನುಭವಿಗಳಾಗಲು ಅನರ್ಹರು. ಕೃಷಿಯನ್ನೇ ನಂಬಿ ವ್ಯವಸಾಯ ಮಾಡುತ್ತಿರುವ ರೈತರಿಗೆ ಮಾತ್ರ ಈ ಯೋಜನೆಯಾಗಿದ್ದು, ಅರ್ಹ ಕುಟುಂಬ ಸದಸ್ಯರಲ್ಲಿ ಗಂಡ, ಹೆಂಡತಿ ಮತ್ತು ಅಪ್ರಾಪ್ತ ಮಕ್ಕಳು ಸೇರಿದ್ದಾರೆ.
ಅಲ್ಲದೇ ಸಾಂಸ್ಥಿಕ ಭೂಮಾಲೀಕರಲ್ಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವ, ರೈತ ಕುಟುಂಬಗಳಿಗೂ ಈ ಯೋಜನೆ ಅನ್ವಯಿಸುವುದಿಲ್ಲ. ಹಾಗೆಯೇ ಯಾವುದೇ ಜನಪ್ರತಿನಿಧಿಗಳಿಗೂ ಈ ಯೋಜನೆ ಅನ್ವಯಿಸುವುದಿಲ್ಲ.
ಫಲಾನುಭವಿಗಳ ಸ್ಟೇಟಸ್ ಪರಿಶೀಲಿಸುವುದು ಹೇಗೆ..?
ಇನ್ನು ಅರ್ಹ ಫಲಾನುಭವಿಗಳು ತಮ್ಮ ಸ್ಟೇಟಸ್ ಪರಿಶೀಲಿಸಲು, ಅಧಿಕೃತ ವೆಬ್‌ಸೈಟ್..ಅಂದರೆ, ಪಿಎಂ ಕಿಸಾನ್ ವೆಬ್‌ಸೈಟ್‌ಗೆ ಹೋಗಬೇಕು. ಬಳಿಕ ಫಲಾನುಭವಿ ಸ್ಟೇಟಸ್ ಪುಟವನ್ನು ನಮೂದಿಸಬೇಕು. ಫಲಾನುಭವಿಗಳ ಸ್ಟೇಟಸ್ (beneficiary status) ಮೇಲೆ ಕ್ಲಿಕ್ ಮಾಡಿ ಆಧಾರ್ ಸಂಖ್ಯೆ ಅಥವಾ, ಖಾತೆ ಸಂಖ್ಯೆಯನ್ನು ನಮೂದಿಸಬೇಕು. ಬಳಿಕ ಫಲಾನುಭವಿಗಳ ಸ್ಥಿತಿಯನ್ನು ವೀಕ್ಷಿಸಲಯ ಡೇಟಾ ಪಡೆಯಿರಿ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
eKYC ಮಾಡಿಕೊಳ್ಳುವುದು ಹೇಗೆ..?
ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಎಲ್ಲಾ ನೋಂದಾಯಿತ ರೈತರು, ತಮ್ಮ ಇ-ಕೆವೈಸಿ ಪ್ರಕ್ರಿಯೆ ಮುಗಿಸಿಕೊಳ್ಳಬೇಕು. ಇ-ಕೆವೈಸಿ ಪೈರ್ಣಗೊಳಿಸಲು ರೈತರಿಗಾಗಿ ಮೂರು ವಿಧಾನಗಳಿವೆ. ಅವು ಯಾವುವೆಂದರೆ,
1. ಒಟಿಪಿ ಆಧಾರಿತ ಇ-ಕೆವೈಸಿ (ಪಿಎಂ-ಕಿಸಾನ್ ಪೋರ್ಟಲ್ ಮತ್ತು ಮೊಬೈಲ್ ಅಪ್ಲಿಕೇಶನ್ ಮೂಲಕ ಪ್ರವೇಶಿಸಬಹುದು)
2. ಬಯೋಮೆಟ್ರಿಕ್ ಆಧಾರಿತ ಇ-ಕೆವೈಸಿ (ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿಗಳು)
3. ರಾಜ್ಯ ಸೇವಾ ಕೇಂದ್ರಗಳಲ್ಲಿ (ಎಸ್‌ಎಸ್‌ಕೆಗಳು) ಲಭ್ಯವಿದೆ), ಮತ್ತು ಮುಖ ದೃಢೀಕರಣ ಆಧಾರಿತ ಇ-ಕೆವೈಸಿ
ಹೀಗೆ ರೈತರು ತಮ್ಮ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಾಗಬಹುದು.


Click it and Unblock the Notifications