ಇಂದು ಬೆಂಗಳೂರಿನ ಬಹು ನಿರೀಕ್ಷಿತ ನಮ್ಮ ಮೆಟ್ರೋ ಹಳದಿ ಮಾರ್ಗ ಅಧಿಕೃತವಾಗಿ ಉದ್ಘಾಟನೆಯಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಹಳದಿ ಮಾರ್ಗದ ಮೆಟ್ರೋಗೆ ಶುಭಾರಂಭ ನೀಡಿದ್ದಾರೆ. ಚಾಲಕ ರಹಿತ ಮೆಟ್ರೋ ಇದಾಗಿದ್ದು, ಆರಂಭದಲ್ಲಿ ಮಾತ್ರ ಚಾಲಕರು ಈ ಹಳದಿ ಲೈನ್ ಮೆಟ್ರೋನ ಚಲಿಸುತ್ತಾರೆ. ಆರ್.ವಿ ರಸ್ತೆದಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಈ ಹೊಸ ಮಾರ್ಗವು ದಕ್ಷಿಣ ಭಾಗದ ಸಾವಿರಾರು ಪ್ರಯಾಣಿಕರಿಗೆ ದೊಡ್ಡ ಅನುಕೂಲ ತಂದಿದೆ. ನಾಳೆಯಿಂದಲೇ ಯೆಲ್ಲೋ ಲೈನ್ ಮೆಟ್ರೋ ಕಾರ್ಯಾಚರಣೆ ಬೆಂಗಳೂರು ಜನರಿಗೆ ಒದಗಲಿದೆ.

ಒಟ್ಟು 19.15 ಕಿಲೋ ಮೀಟರ್ ಉದ್ದದ ಈ ಮಾರ್ಗದಲ್ಲಿ 16 ನಿಲ್ದಾಣಗಳಿದ್ದು, ಪ್ರಾರಂಭದಲ್ಲಿ ಮೂರು ಮೆಟ್ರೋ ರೈಲುಗಳು ಸಂಚಾರ ಪ್ರಾರಂಭಿಸಿವೆ. ತಿಂಗಳ ಕೊನೆಯಲ್ಲಿ ನಾಲ್ಕನೇ ರೈಲೂ ಸೇರಲಿದೆ. 2014ರಲ್ಲಿ ಆರಂಭವಾದ ಈ ಕಾಮಗಾರಿ ಮೂಲ ಯೋಜನೆ ಪ್ರಕಾರ 2021ರೊಳಗೆ ಮುಗಿಯಬೇಕಾಗಿತ್ತು, ಆದರೆ ಹಲವು ಕಾರಣಗಳಿಂದ ವಿಳಂಬವಾಗಿ ಇದೀಗ ಉದ್ಘಾಟನೆ ಕಂಡಿದೆ. ಯೋಜನೆಗೆ 7,616 ಕೋಟಿ ರೂ. ವೆಚ್ಚವಾಗಿದೆ.
ಹಳದಿ ಮಾರ್ಗದ ಪ್ರಮುಖ ಪ್ರಯಾಣ ದರಗಳು:
- ಆರ್.ವಿ ರಸ್ತೆ → ರಾಗಿಗುಡ್ಡ - 10 ರೂ.
- ಆರ್.ವಿ ರಸ್ತೆ → ಜಯದೇವ - 10 ರೂ.
- ಆರ್.ವಿ ರಸ್ತೆ → BTM ಲೇಔಟ್ - 20 ರೂ.
- ಆರ್.ವಿ ರಸ್ತೆ → ಬೊಮ್ಮನಹಳ್ಳಿ - 30 ರೂ.
- ಆರ್.ವಿ ರಸ್ತೆ → ಕೂಡ್ಲೂಗೇಟ್ - 40 ರೂ.
- ಆರ್.ವಿ ರಸ್ತೆ → ಸಿಂಗಸಂದ್ರ - 50 ರೂ.
- ಆರ್.ವಿ ರಸ್ತೆ → ಎಲೆಕ್ಟ್ರಾನಿಕ್ ಸಿಟಿ - 60 ರೂ.
- ಆರ್.ವಿ ರಸ್ತೆ → ಬೊಮ್ಮಸಂದ್ರ - 60 ರೂ.
- ಸಿಲ್ಕ್ ಬೋರ್ಡ್ → ಬೊಮ್ಮಸಂದ್ರ - 60 ರೂ.
ಹಳದಿ ಮಾರ್ಗ ಉದ್ಘಾಟನೆಯಿಂದ ಆರ್.ವಿ ರಸ್ತೆ, ಸಿಲ್ಕ್ ಬೋರ್ಡ್, ಎಲೆಕ್ಟ್ರಾನಿಕ್ ಸಿಟಿ ಮತ್ತು ಬೊಮ್ಮಸಂದ್ರ ಭಾಗದ ಜನರಿಗೆ ಸಂಚಾರ ವೇಗವಾಗಿ ಹಾಗೂ ಸುಗಮವಾಗಿ ನಡೆಯಲಿದೆ. ಇದರಿಂದ ಟ್ರಾಫಿಕ್ ಒತ್ತಡ ಕಡಿಮೆಯಾಗುವ ನಿರೀಕ್ಷೆಯೂ ಇದೆ.
ಇಂದು ಬೆಂಗಳೂರಿನ ದಕ್ಷಿಣ ಭಾಗದ ಸಾವಿರಾರು ಜನರು ಬಹು ನಿರೀಕ್ಷೆಯಿಂದ ಕಾಯುತ್ತಿದ್ದ ನಮ್ಮ ಮೆಟ್ರೋ ಹಳದಿ ಮಾರ್ಗ ಅಧಿಕೃತವಾಗಿ ಚಾಲನೆ ಕಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ವತಃ ಈ ಮಾರ್ಗಕ್ಕೆ ಹಸಿರು ನಿಶಾನೆ ತೋರಿಸಿ ಪ್ರಯಾಣಕ್ಕೆ ಚಾಲನೆ ನೀಡಿದರು. ಚಾಲಕ ರಹಿತ ತಂತ್ರಜ್ಞಾನದ ಈ ಮೆಟ್ರೋ ರೈಲು, ಆರಂಭಿಕ ಹಂತದಲ್ಲಿ ಮಾತ್ರ ಚಾಲಕರಿಂದಲೇ ಸಂಚರಿಸಲಿದ್ದು, ಬಳಿಕ ಸಂಪೂರ್ಣ ಸ್ವಯಂಚಾಲಿತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸಲಿದೆ. ಆರ್.ವಿ ರಸ್ತೆದಿಂದ ಬೊಮ್ಮಸಂದ್ರದವರೆಗೆ ಸಂಪರ್ಕ ಕಲ್ಪಿಸುವ ಈ ಮಾರ್ಗವು, ಉದ್ಯೋಗ ಮತ್ತು ವ್ಯವಹಾರ ಕೇಂದ್ರಗಳಾದ ಸಿಲ್ಕ್ ಬೋರ್ಡ್ ಹಾಗೂ ಎಲೆಕ್ಟ್ರಾನಿಕ್ ಸಿಟಿ ಭಾಗಕ್ಕೆ ತಲುಪುವವರಿಗೆ ದೊಡ್ಡ ಅನುಕೂಲವಾಗಲಿದೆ.
More From GoodReturns

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ

ಚಿನ್ನದ ಬೆಲೆ ಇಳಿಕೆ: ಖರೀದಿಗೆ ಇದೇ ಸುವರ್ಣಾವಕಾಶವೇ?

ಆರ್ಬಿಐ ಪಾಲಿಸಿ: ಇಂದಿನ ನಿರ್ಧಾರ ನಿಮ್ಮ ಹೂಡಿಕೆಯನ್ನು ಬದಲಿಸುತ್ತಾ?

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಚಿನ್ನದ ಬೆಲೆ ಏರಿಕೆ: ಹೂಡಿಕೆದಾರರೇ ಎಚ್ಚರ, ಈ ತಪ್ಪು ಮಾಡಬೇಡಿ!



Click it and Unblock the Notifications